ಮಂಗಳೂರು:- ದಿನಾಂಕ 27 ಮತ್ತು 28ರ ಆಗಸ್ಟ್ 2022ರಂದು ಚಿಕ್ಕಮಗಳೂರಿಗೆ ಕಿರು ಪ್ರವಾಸವನ್ನು ಮಂಗಳೂರು ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಪ್ರವಾಸಿ ತಾಣಗಳಾದ ಕೊಟ್ಟಿಗೆಹಾರ, ಬಾಬಾಬುಡನಗಿರಿ, ದತ್ತಪೀಠ, ಝರಿ ವಾಟರ್ ಪಾಲ್ಸ್, ಮಾಣಿಕ್ಯಧಾರ, ಮುಳ್ಳಯ್ಯನ ಗಿರಿ ಬೆಟ್ಟ ಹಾಗೂ ಸುಂದರ ಪ್ರಕೃತಿಯ ಮಡಿಲಲ್ಲಿರುವ ಆಶ್ರಯ ತಾಣ ಜಪ್ಪದ್ ಕಲ್ಲು ರೆಸಾರ್ಟಿನಲ್ಲಿ ಕ್ಯಾಂಪ್ ಫ್ಯೆರ್, ರೋಪ್ ವೇ, ಸ್ವಿಮ್ಮಿಂಗ್ ಪೂಲ್, ಕ್ರಿಕೆಟ್ ಮ್ಯಾಚ್, ಮ್ಯೂಸಿಕಲ್ ಡ್ಯಾನ್ಸ್ ಮುಂತಾದ ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. 40 ಜನ ಹಿರಿಯರು ಮತ್ತು ನಾಲ್ಕು ಮಂದಿ ಮಕ್ಕಳನ್ನು ಒಳಗೊಂಡ ಪ್ರವಾಸಿ ತಂಡವು ಆಗಸ್ಟ್ 27ರಂದು ಬೆಳಿಗ್ಗೆ 5:30ಕ್ಕೆ ಹೊರಟು ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಮೂಡಿಗೆರೆ ಯವರ ಆತ್ಮೀಯವಾದ ಉಪಚಾರವನ್ನು ಸ್ವೀಕರಿಸಿ ಮುಂದುವರಿಯಿತು. ಬಸ್ಸಿನಲ್ಲಿ ಘಟಕದ ಗೌರವ ಸದಸ್ಯರಾದ ಪ್ರಕಾಶ್ ಕುಮಾರ್ ರವರು ವಿವಿಧ ಮನೋರಂಜನ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಘಟಕದ ಅಧ್ಯಕ್ಷರಾದ ಗಣೇಶ್ ವಿ. ಕೋಡಿಕಲ್ ಮತ್ತು ಪ್ರವಾಸ ಸಂಚಾಲಕರಾದ ಪ್ರವೀಣ್ ಸಾಲ್ಯಾನ್ ಕಿರೋಡಿಯವರ ಮುಂದಾಳುತ್ವದಲ್ಲಿ ಎರಡು ದಿವಸದ ಪ್ರವಾಸವು ಅತ್ಯಂತ ಯಶಸ್ವಿಯಾಗಿ ನಡೆದು ಆಗಸ್ಟ್ 28 ರಂದು ರಾತ್ರಿ 8.00ಗಂಟೆಗೆ ವಾಪಸು ಬಂದೆವು. ಪ್ರವಾಸದಲ್ಲಿದ್ದ ಎಲ್ಲರಿಗೂ ಘಟಕದ ವತಿಯಿಂದ ಧನ್ಯವಾದ ಸಲ್ಲಿಸಲಾಯಿತು.