ಪದಗ್ರಹಣ 2026 ಹಾಗೂ ವಿದ್ಯಾನಿಧಿ ವಿತರಣಾ ಕಾರ್ಯಕ್ರಮ
16-01-2026, 11:56 AM
14-01-2026, 9:59 AM
ಕಾರ್ಕಳ: ದಿನಾಂಕ 14.01.2025 ರಂದು ಶ್ರೀ ಕೃಷ್ಣ ಕ್ಷೇತ್ರ ಆನೆಕೆರೆ, ಕಾರ್ಕಳದಲ್ಲಿ ಆಯೋಜಿಸಲಾದ ಸಾಮೂಹಿಕ ಸತ್ಯನಾರಾಯಣ ಪೂಜೆಯ ಸಂದರ್ಭದಲ್ಲಿ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಹಿರಿಯರಾದ ಭಾಸ್ಕರ್ ಕೋಟ್ಯಾನ್ ಇರುವತ್ತೂರು ಅವರನ್ನು ಯುವವಾಹಿನಿ (ರಿ.) ಕಾರ್ಕಳ ಘಟಕದ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಈ ಸನ್ಮಾನ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕರಾದ ವಿ. ಸುನಿಲ್ ಕುಮಾರ್, ಯುವವಾಹಿನಿ ಕಾರ್ಕಳ ಘಟಕದ ಅಧ್ಯಕ್ಷರಾದ ಪ್ರಕಾಶ್ ಪೂಜಾರಿ, ಕಾರ್ಯದರ್ಶಿ ರಾಕೇಶ್ ಅಮಿನ್, ಘಟಕದ ಪೂರ್ವಾಧ್ಯಕ್ಷರು, ನಿರ್ದೇಶಕರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ […]
13-01-2026, 7:59 AM
ಕಡಬ : ಪರೀಕ್ಷೆ ಜೀವನದ ಅಂತಿಮ ತೀರ್ಪಲ್ಲ. ಸೋಲು ಎನ್ನುವುದು ನಿಮ್ಮ ಸಾಮರ್ಥ್ಯವನ್ನು ಅಳೆಯುವ ಪ್ರಮಾಣವಲ್ಲ; ಅದು ಇನ್ನಷ್ಟು ಶ್ರಮಿಸುವ ಪಾಠ ಮಾತ್ರ. ತಪ್ಪುಗಳಿಂದ ಕಲಿಯುವ ಮನೋಭಾವವನ್ನು ಬೆಳೆಸಿಕೊಂಡರೆ, ಪ್ರತಿಯೊಂದು ಅಡೆತಡೆಯೂ ಅವಕಾಶವಾಗುತ್ತದೆ ಈ ನಿಟ್ಟಿನಲ್ಲಿ ಯುವವಾಹಿನಿ ಕಡಬ ಘಟಕದ ಮಹತ್ವಾಕಾಂಕ್ಷೆಯ ವಿದ್ಯಾಸ್ಪೂರ್ತಿ ಕಾರ್ಯಾಗಾರವು ವಿದ್ಯಾರ್ಥಿಗಳ ಭವಿಷ್ಯದ ಪಯಣದ ಹೆಬ್ಬಾಗಿಲು ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ತಿಳಿಸಿದರು. ಅವರು ದಿನಾಂಕ 13.01.2026 ರಂದು ಕಡಬ ಸೈಂಟ್ ಜೋಕಿಮ್ಸ್ ಸಭಾಭವನದಲ್ಲಿ ಕಡಬ ತಾಲೂಕಿನ […]
11-01-2026, 10:00 AM
ಕಡಬ : ಕಡಬ ಶ್ರೀ ಮಹಾವಿಷ್ಣು ದೇವಸ್ಥಾನ, ಪಿಜಕ್ಕಳದಲ್ಲಿ ದಿನಾಂಕ 11.01.2026 ನೇ ಬೆಳಿಗ್ಗೆ ಧನುಪೂಜೆ ಪ್ರಯುಕ್ತ ಯುವವಾಹಿನಿ (ರಿ.) ಕಡಬ ಘಟಕದ ಸದಸ್ಯರು ಭಕ್ತಿಭಾವಪೂರ್ಣ ಭಜನಾ ಸೇವೆಯನ್ನು ಸಲ್ಲಿಸಿದರು. ಬೆಳಿಗ್ಗೆ 4.00 ಗಂಟೆಯಿಂದ 5.15 ಗಂಟೆಯವರೆಗೆ ನಡೆದ ಭಜನಾ ಸೇವೆಯಲ್ಲಿ ಭಕ್ತಿಗೀತೆಗಳು ಹಾಗೂ ನಾಮಸಂಕೀರ್ತನೆಯ ಮೂಲಕ ದೇವರ ಸ್ಮರಣೆಯಲ್ಲಿ ತೊಡಗಿಸಿಕೊಂಡರು. ಯುವವಾಹಿನಿ ಕಡಬ ಘಟಕದ ಈ ಸೇವೆಗೆ ದೇವಾಲಯದ ಆಡಳಿತ ಮಂಡಳಿ ಹಾಗೂ ಭಕ್ತಾದಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
11-01-2026, 3:46 AM
ಕಂಕನಾಡಿ : ಯುವವಾಹಿನಿ (ರಿ.) ಕಂಕನಾಡಿ ಘಟಕದ ವತಿಯಿಂದ ಮಂಗಳೂರು ಮೋರ್ಗನ್ಸ್ ಗೇಟ್ನಲ್ಲಿರುವ ಕ್ರೂಸ್ ಆ್ಯಂಡ್ ಡೈನ್ ಕೇಂದ್ರಕ್ಕೆ ಒಂದು ದಿನದ ಕಿರು ಪ್ರವಾಸವನ್ನು ದಿನಾಂಕ 11-01-2026 ರಂದು ಆಯೋಜಿಸಲಾಯಿತು. ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ನಡೆದ ಈ ಪ್ರವಾಸದಲ್ಲಿ ಘಟಕದ ಸದಸ್ಯರು ಹಾಗೂ ಅವರ ಬಂಧು–ಮಿತ್ರರು ಉತ್ಸಾಹಭರಿತವಾಗಿ ಭಾಗವಹಿಸಿ ಸಂತಸದ ಕ್ಷಣಗಳನ್ನು ಕಳೆಯಿದರು. ಬೆಳಿಗ್ಗೆ ಚಹಾ–ತಿಂಡಿಯೊಂದಿಗೆ ಆರಂಭವಾದ ಪ್ರವಾಸ, ಬೋಟಿನಲ್ಲಿ ಸಾಗುವ ಮೂಲಕ ಸುತ್ತಮುತ್ತಲಿನ ಮನೋಹರ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುವ ಅನುಭವವನ್ನು ನೀಡಿತು. […]
10-01-2026, 1:09 PM
ಮಂಗಳೂರು : ಡಿಜಿಟಲ್ ಯುಗದಲ್ಲಿ ಹೆಚ್ಚುತ್ತಿರುವ ಆನ್ಲೈನ್ ವಂಚನೆಗಳು, ಸೈಬರ್ ಅಪರಾಧಗಳ ವಿಧಗಳು ಮತ್ತು ಅವುಗಳಿಂದ ರಕ್ಷಿಸಿಕೊಳ್ಳುವ ಮಾರ್ಗಗಳ ಬಗ್ಗೆ ನಾವು ಜಾಗ್ರತರಾಗಬೇಕಿದೆ. ನಶೆಯ ದುಷ್ಪರಿಣಾಮಗಳು ಹಾಗೂ ನಶಮುಕ್ತ ಸಮಾಜ ನಿರ್ಮಾಣದಲ್ಲಿ ಯುವಜನರ ಪಾತ್ರದ ಮಹತ್ವವನ್ನು ತಿಳಿಯಬೇಕಿದೆ. ಜಾಗೃತಿ, ಜವಾಬ್ದಾರಿ ಮತ್ತು ಸಹಕಾರವೇ ಸುರಕ್ಷಿತ ಹಾಗೂ ಆರೋಗ್ಯಕರ ಸಮಾಜದ ಮೂಲಮಂತ್ರವೆಂದು ಸೈಬರ್ ಕ್ರೈಂ ಪೊಲೀಸ್ ಅಧಿಕಾರಿ ತಿಪ್ಪಾ ರೆಡ್ಡಿ ಇವರು ತಿಳಿಸಿದರು. ಅವರು ದಿನಾಂಕ 10.01.2026 ರಂದು ಮಂಗಳೂರಿನ ಯುವವಾಹಿನಿ ಸಭಾಂಗಣದಲ್ಲಿ ಯುವವಾಹಿನಿ (ರಿ.) ಮಂಗಳೂರು ಮಹಿಳಾ […]
10-01-2026, 7:26 AM
ಪುತ್ತೂರು:ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ದೇವರಮಾರು ಗದ್ದೆಯಲ್ಲಿ, ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯ ಪೀಠಾರೋಹಣ ಮಾಡಲಿರುವ ಶಿರೂರು ಮಠದ ವೇದವರ್ಧನ ಶ್ರೀಪಾದರು ಅವರಿಗೆ ಆಯೋಜಿಸಲಾದ ಪೌರ ಸನ್ಮಾನ ಕಾರ್ಯಕ್ರಮದಲ್ಲಿ, ಯುವವಾಹಿನಿ (ರಿ.) ವಿಟ್ಲ ಘಟಕದ ವತಿಯಿಂದ ಭಕ್ತಿಪೂರ್ವಕವಾಗಿ ಗೌರವ ಸಲ್ಲಿಸಲಾಯಿತು. ಗಣ್ಯರ ಸಮ್ಮುಖದಲ್ಲಿ ನಡೆದ ಈ ಸಮಾರಂಭದಲ್ಲಿ ಯುವವಾಹಿನಿ (ರಿ.) ವಿಟ್ಲ ಘಟಕದ ಅಧ್ಯಕ್ಷ ಕೆ.ಟಿ. ಆನಂದ ಹಾಗೂ ಘಟಕದ ಪದಾಧಿಕಾರಿಗಳು ಭಾಗವಹಿಸಿ, ಶ್ರೀಪಾದರಿಗೆ ಗೌರವ ಸಮರ್ಪಿಸಿ ಆಶೀರ್ವಾದವನ್ನು ಪಡೆದುಕೊಂಡರು. ಈ ಗೌರವ ಸಮರ್ಪಣೆ ಕಾರ್ಯಕ್ರಮವು […]
10-01-2026, 7:10 AM
ಮಂಗಳೂರು: ಯುವವಾಹಿನಿ (ರಿ.) ಕಂಕನಾಡಿ ಘಟಕದ ವತಿಯಿಂದ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ನಡೆದ ವರ್ಷಾವಧಿ ಉತ್ಸವದ ಅಂಗವಾಗಿ ದಿನಾಂಕ 02-01-2026 ಹಾಗೂ 05-01-2026ರಂದು ಸ್ವಯಂಸೇವಾ ಕಾರ್ಯಗಳನ್ನು ನಡೆಸಲಾಯಿತು.ಉತ್ಸವದ ಸಂದರ್ಭದಲ್ಲಿ ಘಟಕದ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು ಸ್ವಯಂಸೇವೆಯಲ್ಲಿ ತೊಡಗಿ ವಿವಿಧ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಅಲ್ಲದೆ, ಘಟಕದ ಸದಸ್ಯರಿಂದ ಸಂಗ್ರಹಿಸಲಾದ ರೂ.12,500 ಮೊತ್ತದ ದೇಣಿಗೆಯನ್ನು ಅನ್ನದಾನ ಸೇವೆಗೆ ಸಮರ್ಪಿಸಲಾಯಿತು.ಈ ಸ್ವಯಂಸೇವಾ ಕಾರ್ಯವು ಯುವವಾಹಿನಿ ಕಂಕನಾಡಿ ಘಟಕದ ಸೇವಾ ಮನೋಭಾವ, ಸಂಘಟನಾ ಶಕ್ತಿ ಹಾಗೂ […]
10-01-2026, 4:43 AM
ವಿಟ್ಲ : ಯುವವಾಹಿನಿ (ರಿ.) ವಿಟ್ಲ ಘಟಕದ ವತಿಯಿಂದ ಜನವರಿ 10, 2026ರ ಶನಿವಾರ ವಿಟ್ಲ ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರಾಮಹೋತ್ಸವದ ಪ್ರಯುಕ್ತ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು. ಯುವವಾಹಿನಿ ವಿಟ್ಲ ಘಟಕದ ಅಧ್ಯಕ್ಷರಾದ ಕೆ.ಟಿ. ಆನಂದ ಪೂಜಾರಿ ಅವರ ನೇತೃತ್ವದಲ್ಲಿ ನಡೆದ ಈ ಸೇವಾ ಕಾರ್ಯದಲ್ಲಿ, ದೇವಸ್ಥಾನ ಪರಿಸರದ ಸ್ವಚ್ಛತೆ, ಆವರಣ ಶುದ್ಧೀಕರಣ ಸೇರಿದಂತೆ ವಿವಿಧ ಸ್ವಚ್ಛತಾ ಕಾರ್ಯಗಳನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದು, ಸೇವೆ ಎಂಬುದನ್ನೇ ಧ್ಯೇಯವಾಗಿಸಿಕೊಂಡು ಧಾರ್ಮಿಕ […]