
13-09-2026, 1:00 PM
ಮೂಡುಬಿದಿರೆ, ಸೆ. 13: ಯುವವಾಹಿನಿ (ರಿ.) ಮೂಡುಬಿದಿರೆ ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆ ಹಾಗೂ ಮಾಸಿಕ ಸಭೆಯು ಸೆಪ್ಟೆಂಬರ್ 13ರಂದು ಮೂಡುಬಿದಿರೆ ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಶೀನಪ್ಪ ಸಭಾಭವನದಲ್ಲಿ ನಡೆಯಿತು. ಘಟಕದ ಅಧ್ಯಕ್ಷ ಗಿರೀಶ್ ಕೋಟ್ಯಾನ್ ಮಾರೂರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಮೇಘನಾ ಘಟಕದ ವರದಿಯನ್ನು ಮಂಡಿಸಿದರು. ಶಿಕ್ಷಕರ ದಿನಾಚರಣೆಯ ಅಂಗವಾಗಿ 17 ಮಂದಿ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ […]
Read More

12-09-2026, 8:00 PM
ಮೂಲ್ಕಿ ಸೆ 12 : ಯುವವಾಹಿನಿ (ರಿ.) ಮೂಲ್ಕಿ ಘಟಕದ ಸದಸ್ಯರ ನಡುವಿನ ಸಂಪರ್ಕದ ಕೊಂಡಿಯನ್ನು ಮತ್ತಷ್ಟು ಗಟ್ಟಿಗೊಳಿಸುವ ಹಾಗೂ ಸದಸ್ಯರ ಕುಟುಂಬದೊಂದಿಗೆ ಆತ್ಮೀಯವಾಗಿ ಬೆರೆಯುವ ಉದ್ದೇಶದಿಂದ ಹಮ್ಮಿಕೊಂಡಿರುವ ಮನೆಮನೆ ಭಜನೆ ಕಾರ್ಯಕ್ರಮವು ಸೆ. 12ರಂದು ಘಟಕದ ಅಧ್ಯಕ್ಷೆ ಚರಿಷ್ಮಾ ಶ್ರೀನಿವಾಸ್ ಅವರ ಮನೆಯಲ್ಲಿ ನಡೆಯಿತು. ಸಂಜೆ 6ರಿಂದ 7 ಗಂಟೆಯವರೆಗೆ ನಡೆದ ಭಜನಾ ಕಾರ್ಯಕ್ರಮದಲ್ಲಿ ಘಟಕದ ಸದಸ್ಯರು ಭಾಗವಹಿಸಿ ಭಜನೆ, ಪ್ರಾರ್ಥನೆ ಹಾಗೂ ಭಕ್ತಿಗೀತೆಗಳ ಮೂಲಕ ಭಕ್ತಿಭಾವ ಮೆರೆದರು. ಬಳಿಕ ಮಹಾಪೂಜೆ ನೆರವೇರಿಸಲಾಯಿತು. ಕಾರ್ಯಕ್ರಮದ ನಂತರ […]
Read More

12-09-2026, 2:00 PM
ಬಜಪೆ ಸೆ 12 : ಯುವವಾಹಿನಿ (ರಿ.) ಬಜಪೆ ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಸೆ. 12ರಂದು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನ, ಬಜಪೆಯಲ್ಲಿ ಆಚರಿಸಲಾಯಿತು. ಬೋಧನಾ ವೃತ್ತಿ ಅತ್ಯಂತ ಶ್ರೇಷ್ಠ ವೃತ್ತಿಗಳಲ್ಲಿ ಒಂದೆಂದು ಪರಿಗಣಿಸಿರುವ ನಮ್ಮ ದೇಶದಲ್ಲಿ, ಶಿಕ್ಷಕರು ಕೇವಲ ಅಕ್ಷರ ಜ್ಞಾನವನ್ನು ನೀಡುವವರಲ್ಲ; ವಿದ್ಯಾರ್ಥಿಗಳ ಬದುಕಿನಲ್ಲಿ ಅಜ್ಞಾನದ ಕತ್ತಲೆಯನ್ನು ದೂರ ಮಾಡಿ ಜ್ಞಾನದ ಬೆಳಕನ್ನು ಬೆಳಗಿಸುವವರು. ಮಕ್ಕಳಲ್ಲಿರುವ ಪ್ರತಿಭೆ ಮತ್ತು ಆಸಕ್ತಿಯನ್ನು ಗುರುತಿಸಿ ಬೆಳೆಸುವುದರ ಜೊತೆಗೆ, ಅವರ ತಪ್ಪುಗಳನ್ನು ತಿದ್ದಿ, ಜೀವನಕ್ಕೆ ಸೂಕ್ತವಾದ ಗುರಿಯನ್ನು […]
Read More

11-09-2026, 8:00 PM
ಕೂಳೂರು ಸೆ 11 : ಯುವವಾಹಿನಿ (ರಿ.) ಕೂಳೂರು ಘಟಕದ ದಶಮಾನೋತ್ಸವದ ಅಂಗವಾಗಿ ಘಟಕದ ಸಭಾಭವನದ ಫಲ್ಗುಣಿ ಸಭಾಂಗಣದಲ್ಲಿ ಗುರುಪೂಜೆ ಹಾಗೂ ಶ್ರೀ ಸತ್ಯನಾರಾಯಣ ಪೂಜೆಯನ್ನು ಸೆ. 11ರಂದು ಶ್ರದ್ಧಾ–ಭಕ್ತಿಯಿಂದ ಹಾಗೂ ಸಂಭ್ರಮದಿಂದ ನೆರವೇರಿಸಲಾಯಿತು. ಸಂಜೆ 5 ಗಂಟೆಗೆ ಭಜನಾ ಸಂಕೀರ್ತನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿದ್ದು, ಘಟಕದ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು ಗುರುಸ್ತುತಿಯನ್ನು ನೆರವೇರಿಸಿದರು. ಸಂಜೆ 6 ಗಂಟೆಗೆ ಘಟಕದ ಅಧ್ಯಕ್ಷರಾದ ಗೀತಾ ವಸಂತ್ ದಂಪತಿ, ಹಿರಿಯರಾದ ಜಾನಕಿ ಅಮ್ಮ ಹಾಗೂ ಮಾರ್ಗದರ್ಶಕರಾದ ಚಂದಪ್ಪ ಸನಿಲ್ ಅವರು ದೀಪ […]
Read More

11-09-2026, 8:00 PM
ಮಾಣಿ, ಸೆ. 11: ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ನಡೆಯುತ್ತಿರುವ ‘ಮನೆ ಮನೆಗೆ ಗುರುತತ್ತ್ವ ಸಂದೇಶ’ ಕಾರ್ಯಕ್ರಮವು ಸೆ. 11ರಂದು ಕೇಶವ ಪೂಜಾರಿ ಬರಿಮಾರು ಅವರ ಮನೆಯಲ್ಲಿ ನಡೆಯಿತು. ಭಜನಾ ಸಂಕೀರ್ತನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಜನಾರ್ದನ ಪೂಜಾರಿ ಕೊಡಂಗೆ ಹಾಗೂ ತಂಡದವರು ಭಜನಾ ಸೇವೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ತ್ರಿವೇಣಿ ರಮೇಶ್, “ಸಂಘಟನೆಯೇ ಸಮಾಜದ ಶಕ್ತಿ, ಸೇವೆಯೇ ಅದರ ಸಾರ್ಥಕತೆ” ಎಂಬ ಸಂದೇಶವನ್ನು ನೀಡಿದರು. ಸಂಘಟನೆಯ ಮೂಲಕ ಕುಟುಂಬಗಳಲ್ಲಿ ಒಗ್ಗಟ್ಟನ್ನು ಬೆಳೆಸಬೇಕು. ಸೇವಾ […]
Read More

10-09-2026, 11:00 PM
ಮಾಣಿ ಸೆ 10 : ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಹಾಗೂ ಅವರ ಅಗತ್ಯಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಸೆಪ್ಟೆಂಬರ್ 10ರಂದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಏಮಾಜೆಯ ಎಲ್‌ಕೆಜಿ ಹಾಗೂ ಯುಕೆಜಿ ವಿದ್ಯಾರ್ಥಿಗಳಿಗೆ ಸಮವಸ್ತ್ರಗಳನ್ನು ವಿತರಿಸಲಾಯಿತು.ವಿದ್ಯಾರ್ಥಿಗಳ ಮೇಲಿನ ಅಭಿಮಾನ ಹಾಗೂ ಕಾಳಜಿಯಿಂದ ಯುವವಾಹಿನಿ (ರಿ.) ಮಾಣಿ ಘಟಕದ ಸಂಘಟನಾ ಕಾರ್ಯದರ್ಶಿ ಸುಚಿತ್ ಅಂಚನ್ ಅವರು ಸಮವಸ್ತ್ರಗಳ ಸಂಪೂರ್ಣ ವೆಚ್ಚವನ್ನು ಭರಿಸುವ ಮೂಲಕ ಈ ಸೇವಾ ಕಾರ್ಯಕ್ಕೆ ಆರ್ಥಿಕ ಸಹಕಾರ ನೀಡಿದರು. […]
Read More

09-09-2026, 8:00 PM
ಕೊಲ್ಯ: ಗುರುಗಳು ದೇವರ ಸಮಾನರು. ಅಜ್ಞಾನದ ಕತ್ತಲನ್ನು ಹೋಗಲಾಡಿಸಿ ಜ್ಞಾನದ ದೀವಿಗೆ ಹಚ್ಚುವ ಗುರುಗಳನ್ನು ಹಾಗೂ ಬದುಕಿನಲ್ಲಿ ಮೊದಲ ಗುರುಗಳಾಗಿ ಮಾರ್ಗದರ್ಶನ ನೀಡಿದ ಮಾತಾ–ಪಿತರನ್ನು ಗೌರವಿಸುವುದು ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರದ ಪ್ರತೀಕವಾಗಿದೆ. ವಿದ್ಯಾರ್ಥಿಗಳು ಬಾಲ್ಯದಿಂದಲೇ ಹಿರಿಯರನ್ನು ಗೌರವಿಸುವ ಹಾಗೂ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ಪರಂಪರೆಯನ್ನು ಮೈಗೂಡಿಸಿಕೊಳ್ಳಬೇಕು. ಈ ಮೂಲಕ ಗುರುನಮನದಂತಹ ಸಾಂಪ್ರದಾಯಿಕ ಆಚರಣೆಗಳಿಗೆ ಯಾವುದೇ ಚ್ಯುತಿ ಬಾರದಂತೆ ಮುಂದುವರಿಸಬೇಕು ಎಂದು ಶ್ರೀ ನಾರಾಯಣ ಗುರು ಧರ್ಮ ಶಿಕ್ಷಣ ಕೇಂದ್ರ, ಕೊಲ್ಯದ ಗುರುಗಳಾದ ಡಾ. ಅರುಣ್ ಉಳ್ಳಾಲ್ […]
Read More

09-09-2026, 8:00 PM
ದಡ್ಡಲಕಾಡು ಸೆ 09 : ನಾರಾಯಣಗುರುಗಳ ಸಂದೇಶಗಳನ್ನು ಮನೆಮನೆಗೆ ತಲುಪಿಸುವ ಮೂಲಕ ಸಮಾಜದಲ್ಲಿ ಗುರುತತ್ವದ ಅರಿವು ಮೂಡಿಸುತ್ತಿರುವ ಯುವವಾಹಿನಿಯ ಕಾರ್ಯ ಶ್ಲಾಘನೀಯವಾಗಿದೆ. ದಾಸ ಪರಂಪರೆಯ ಭಜನಾ ಸಂಕೀರ್ತನೆಯ ಮೂಲಕ ಗುರುತತ್ವವಾಹಿನಿ ಕಾರ್ಯಕ್ರಮವು ಅದ್ಭುತ ಯಶಸ್ಸು ಕಂಡಿದೆ ಎಂದು ಸಜಿಪಮೂಡ ಈಶ್ವರಮಂಗಲ ಸದಾಶಿವ ದೇವಸ್ಥಾನದ ಅಧ್ಯಕ್ಷ ಗಿರೀಶ್ ಪೆರ್ವ ಹೇಳಿದರು.ಅವರು ಸೆಪ್ಟೆಂಬರ್ 9ರಂದು ದಡ್ಡಲಕಾಡು ದೇವೀನಗರದ ಚೈತ್ರಾ ವಿಠ್ಠಲ ಪೂಜಾರಿ ಅವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ ಮಾಲಿಕೆ–77ರಲ್ಲಿ ಗುರುಸಂದೇಶ ನೀಡಿ ಮಾತನಾಡಿದರು. ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ […]
Read More

09-09-2026, 2:00 PM
ಮಂಗಳೂರು ಸೆ 09: ಭವಿಷ್ಯವನ್ನು ಆಯ್ಕೆಮಾಡುವ ಮೊದಲು ನಮ್ಮನ್ನು ನಾವು ಅರಿತುಕೊಳ್ಳುವುದು ಅತ್ಯಂತ ಮುಖ್ಯ. ನಮ್ಮ ಆಸಕ್ತಿ ಮತ್ತು ವೃತ್ತಿಯನ್ನು ಸಮನ್ವಯಗೊಳಿಸಿ ಸಾಗಬೇಕಾದರೆ ಜೀವನದಲ್ಲಿ ತೃಪ್ತಿ ಅಗತ್ಯ. ಇಂದಿನ ದಿನಗಳಲ್ಲಿ ಶಿಕ್ಷಣ ಹಾಗೂ ಬುದ್ಧಿವಂತಿಕೆ ಇದ್ದರೂ ಅನೇಕರು ಅತಿಯಾದ ಚಿಂತನೆಗೆ ಒಳಗಾಗುತ್ತಿದ್ದಾರೆ. ಜನರನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಜೀವನ ಮಾರ್ಗದರ್ಶನದ ಕ್ಷೇತ್ರಕ್ಕೆ ಬಂದಾಗ ಕೈಬರಹ ವಿಶ್ಲೇಷಣೆ ಸಹಾಯಕವಾಯಿತು ಎಂದು ಸಂಪನ್ಮೂಲ ವ್ಯಕ್ತಿ ಅಶ್ವಿನಿ ಜಿ. ಎನ್. ತಿಳಿಸಿದರು. ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ ವತಿಯಿಂದ ಶ್ರೀ ಗೋಕರ್ಣನಾಥೇಶ್ವರ […]
Read More

08-09-2026, 9:00 PM
ಮಾಣಿ ಸೆಪ್ಟೆಂಬರ್ 8 : ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಆಯೋಜಿಸಲಾಗುತ್ತಿರುವ “ಮನೆ ಮನೆಗೆ ಗುರುತತ್ವ ಸಂದೇಶ” ಕಾರ್ಯಕ್ರಮವು ಸೆಪ್ಟೆಂಬರ್ 8ರಂದು ಪೆರಾಜೆ ಗ್ರಾಮದ ರೂಪಶ್ರೀ ದಿನೇಶ್ ಅವರ ಮನೆಯಲ್ಲಿ ನಡೆಯಿತು. ಕಾರ್ಯಕ್ರಮವು ಭಜನಾ ಸಂಕೀರ್ತನೆಯೊಂದಿಗೆ ಭಕ್ತಿಭಾವದಿಂದ ಆರಂಭಗೊಂಡಿತು. ಭಜನಾ ಸಂಕೀರ್ತನೆಯ ಜವಾಬ್ದಾರಿಯನ್ನು ಜನಾರ್ಧನ ಪೂಜಾರಿ ಕೊಡಂಗೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ರೇಣುಕಾ ಕಣಿಯೂರು, ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಮತ್ತು ಸಂದೇಶವು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿರದೆ, ಇಡೀ ಸಮಾಜದ ಉನ್ನತಿ ಹಾಗೂ […]
Read More