
ಯುವವಾಹಿನಿ ಸಿನಿದನಿ : ಕಿರುಚಿತ್ರ ಸ್ಪರ್ಧೆಯಲ್ಲಿ ತೃತೀಯ ಪ್ರಶಸ್ತಿ ಪಡೆದ ಯುವವಾಹಿನಿ ಬೆಳ್ತಂಗಡಿ ಘಟಕ
01-11-2026, 2:05 PM


01-11-2026, 1:00 PM
ಉಡುಪಿ ನ 01 : “ವಿದ್ಯೆ, ಉದ್ಯೋಗ, ಸಂಪರ್ಕ” ಎಂಬ ಧ್ಯೇಯವಾಕ್ಯದೊಂದಿಗೆ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಜನಪರ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಯುವವಾಹಿನಿ (ರಿ.) ಉಡುಪಿ ಘಟಕದ ಆತಿಥ್ಯದಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ 2026ನೇ ಸಾಲಿನ ಪ್ರತಿಷ್ಠಿತ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್ 1ರಂದು ಉಡುಪಿಯ ಯಕ್ಷಗಾನ ಕಲಾರಂಗದಲ್ಲಿ ನಡೆಯಿತು. ಸಾಹಿತಿ ಹಾಗೂ ಲೇಖಕ ಬಿಪಿನ್ ಚಂದ್ರ […]

31-10-2026, 9:00 PM
ಧಾರ್ಮಿಕ ಕ್ಷೇತ್ರಗಳ ಭೇಟಿಯೊಂದಿಗೆ ಸದಸ್ಯರ ಸ್ನೇಹ-ಸಂಪರ್ಕಕ್ಕೆ ಹೊಸ ಕೊಂಡಿ ಬಜಪೆ ಅ 31 : ಅಧ್ಯಾತ್ಮ, ಭಕ್ತಿ, ಪ್ರಕೃತಿ ಸೌಂದರ್ಯ ಹಾಗೂ ಸ್ನೇಹಸಂಬಂಧಗಳ ಸಮ್ಮಿಲನದೊಂದಿಗೆ ಯುವವಾಹಿನಿ (ರಿ.) ಬಜಪೆ ಘಟಕದ ಸದಸ್ಯರು ಅಕ್ಟೋಬರ್ 31ರಂದು ಒಂದು ದಿನದ ಪುಣ್ಯಕ್ಷೇತ್ರಗಳ ಯಾತ್ರೆಯನ್ನು ಕೈಗೊಂಡರು. ಬಜಪೆಯ ಬ್ರಹ್ಮಶ್ರೀ ನಾರಾಯಣಗುರು ಮಂದಿರದಿಂದ ಮುಂಜಾನೆ 4.30ಕ್ಕೆ ಯಾತ್ರೆ ಆರಂಭಗೊಂಡಿತು. ಮೊದಲಿಗೆ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದ ಸದಸ್ಯರು, ಬಳಿಕ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರ […]

29-10-2026, 9:00 PM
ನಗ್ರಿ, ಅ. 29: ಶ್ರೀ ನಾರಾಯಣಗುರುಗಳು ಶಿಕ್ಷಣವನ್ನು ಸಾಮಾಜಿಕ ಪರಿವರ್ತನೆ, ಸ್ವಾಭಿಮಾನ ಮತ್ತು ಸಮಾನತೆಯ ಪ್ರಮುಖ ಸಾಧನವಾಗಿ ಪ್ರತಿಪಾದಿಸಿದರು. ಜಾತಿ-ಧರ್ಮದ ಭೇದಭಾವಗಳನ್ನು ಮೀರಿ ಮನುಷ್ಯರೆಲ್ಲರೂ ಸಮಾನರು ಎಂಬ ಮಾನವೀಯ ಸಂದೇಶವನ್ನು ಸಾರಿದ ಅವರು, ಜ್ಞಾನದ ಮೂಲಕ ಅಜ್ಞಾನ ಮತ್ತು ಸಾಮಾಜಿಕ ಅಸಮಾನತೆಗಳನ್ನು ನಿವಾರಿಸಲು ಕರೆ ನೀಡಿದರು ಎಂದು ನಿರೂಪಕ ರಾಜೇಶ್ ಬಲ್ಯ ತಿಳಿಸಿದರು. ಶಿಕ್ಷಣ ಮತ್ತು ಮಾನವೀಯ ಮೌಲ್ಯಗಳು ಒಂದಕ್ಕೊಂದು ಪೂರಕವಾದಾಗ ಮಾತ್ರ ಸಮಾನತೆ, ಸಹಬಾಳ್ವೆ ಹಾಗೂ ಸಾಮಾಜಿಕ ನ್ಯಾಯ ನೆಲೆಸಲು ಸಾಧ್ಯ. ನಾರಾಯಣಗುರುಗಳ ಚಿಂತನೆಗಳು ಇಂದಿನ […]

29-10-2026, 2:00 PM
ಮಂಗಳೂರು ಅ 29: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ ಉಡುಪಿ ಘಟಕದ ಆತಿಥ್ಯದಲ್ಲಿ ಹಾಗೂ ವಿಶುಕುಮಾರ್ ದತ್ತಿನಿಧಿ ಸಮಿತಿಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಆನ್ಲೈನ್ ‘ವಿಶು ವಿಹಂಗಮ’ ಕೃತಿ ವಿಮರ್ಶೆ ಮತ್ತು ‘ವಿಶು ಕಾವ್ಯಾಮೃತ’ ಕವನ ಸ್ಪರ್ಧೆಗಳ ಫಲಿತಾಂಶ ಪ್ರಕಟಗೊಂಡಿದೆ. ಸಾಹಿತ್ಯ ಲೋಕಕ್ಕೆ ಕರಾವಳಿಯ ಅಮೂಲ್ಯ ಕೊಡುಗೆಯಾಗಿರುವ ಮೇರು ಸಾಹಿತಿ ವಿಶುಕುಮಾರ್ ಅವರ ಸಾಹಿತ್ಯ ಕೃತಿಗಳನ್ನು ಯುವ ಬರಹಗಾರರು ಹಾಗೂ ಸಾಹಿತ್ಯಾಸಕ್ತರಿಗೆ ಪರಿಚಯಿಸುವ ಉದ್ದೇಶದಿಂದ ಈ […]

28-10-2026, 6:00 PM
ಮಂಗಳೂರು ಅ 28 : ಮಹಿಳೆಯರು ಕಲಿತ ಕೌಶಲ್ಯವನ್ನು ಉದ್ಯೋಗವನ್ನಾಗಿ ಪರಿವರ್ತಿಸಿಕೊಂಡು ಸ್ವಾವಲಂಬಿ ಜೀವನ ನಡೆಸುವುದರ ಜೊತೆಗೆ, ಭವಿಷ್ಯದಲ್ಲಿ ಇತರರಿಗೂ ಉದ್ಯೋಗಾವಕಾಶ ಕಲ್ಪಿಸುವ ಉದ್ಯಮಿಗಳಾಗಿ ಬೆಳೆಯಬೇಕು ಎಂದು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಪ್ರಥಮ ಉಪಾಧ್ಯಕ್ಷೆ ಹಾಗೂ ತರಬೇತಿಯ ಸಂಪನ್ಮೂಲ ವ್ಯಕ್ತಿ ವಿದ್ಯಾ ರಾಕೇಶ್ ಹೇಳಿದರು. ಯುವವಾಹಿನಿ (ರಿ.) ಕೊಲ್ಯ ಘಟಕ, ಸಿಡಾಕ್ ಮಂಗಳೂರು ಹಾಗೂ ಭಾರತೀಯ ವಿಕಾಸ ಟ್ರಸ್ಟ್ ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ 30 ದಿನಗಳ ಬ್ರೈಡಲ್ ಮೇಕಪ್ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಅವರು […]

27-10-2026, 8:00 PM
ಮಂಗಳೂರು ಅ27 : ದಸರಾ ಸಂಭ್ರಮದಂದು ಕುದ್ರೋಳಿ ಕ್ಷೇತ್ರದಲ್ಲಿ ಸ್ವಯಂ ಸೇವೆಯ ಮತ್ತು ದಸರಾ ಶೋಭಾಯಾತ್ರೆಯ ಜವಾಬ್ದಾರಿ ಹೊತ್ತು ಕರ್ತವ್ಯ ನಿರ್ವಹಿಸಿದ ಸಂಚಾಲಕರಿಗೆ ಗೌರವ ಸಲ್ಲಿಸುವುದು ಆದ್ಯ ಕರ್ತವ್ಯ. ದಿನಾಂಕ: 27-10-2026 ರಂದು ಸಂಜೆ 6 ಗಂಟೆಗೆ ನಾರಾಯಣ ಗುರು ತತ್ವ ಆದರ್ಶಗಳ ಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕರಾದ ಗೋಪಾಲ್ ಪೂಜಾರಿ ಅವರು ಗುರು ಪೂಜೆ ನೆರವೇರಿಸಿದರು, ಅಂದಿನ ಗುರು ಪೂಜೆಯ ಸೇವೆಯನ್ನು ಎರಡನೇ ಉಪಾಧ್ಯಕ್ಷರು ಮಹೇಶ್ ಅಮೀನ್ ನೀಡಿದ್ದು ಪೂಜೆಯ ನಂತರ ಅವರಿಗೆ ಪ್ರಸಾದ ನೀಡಲಾಯಿತು. […]

26-10-2026, 9:00 PM
ಮಂಗಳೂರು ಅ 26 : ಮಹಿಳೆಯರಿಗೆ ಜವಾಬ್ದಾರಿ ನೀಡಿದರೆ ಅವರು ಯಾವುದೇ ಕ್ಷೇತ್ರದಲ್ಲೂ ಸಾಧನೆ ಮಾಡಬಲ್ಲರು ಎಂಬುದಕ್ಕೆ ಯುವವಾಹಿನಿ ಮಹಿಳಾ ಘಟಕವೇ ಸಾಕ್ಷಿಯಾಗಿದೆ. ಮಹಿಳೆಯರು ತಮ್ಮ ಮಕ್ಕಳನ್ನು ಸಂಘ-ಸಂಸ್ಥೆಗಳೊಂದಿಗೆ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿ, ಸಮಾಜಮುಖಿ ಚಟುವಟಿಕೆಗಳಲ್ಲಿ ಭಾಗವಹಿಸಲು ಉತ್ತೇಜನ ನೀಡಬೇಕು ಎಂದು ರಾಷ್ಟ್ರೀಯ ಬಿಲ್ಲವ ಮಹಿಳಾ ಮಂಡಳಿ, ಕಟಪಾಡಿಯ ಅಧ್ಯಕ್ಷೆ ಗೀತಾಂಜಲಿ ಸುವರ್ಣ ಹೇಳಿದರು. ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಅಕ್ಟೋಬರ್ 26ರಂದು ಮಂಗಳೂರಿನ ಯುವವಾಹಿನಿ ಸಭಾಂಗಣದಲ್ಲಿ ಉದ್ಘಾಟಿಸಿ […]