ಮಂಗಳೂರು ಅ 29: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ ಉಡುಪಿ ಘಟಕದ ಆತಿಥ್ಯದಲ್ಲಿ ಹಾಗೂ ವಿಶುಕುಮಾರ್ ದತ್ತಿನಿಧಿ ಸಮಿತಿಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಆನ್‌ಲೈನ್ ‘ವಿಶು ವಿಹಂಗಮ’ ಕೃತಿ ವಿಮರ್ಶೆ ಮತ್ತು ‘ವಿಶು ಕಾವ್ಯಾಮೃತ’ ಕವನ ಸ್ಪರ್ಧೆಗಳ ಫಲಿತಾಂಶ ಪ್ರಕಟಗೊಂಡಿದೆ.
ಸಾಹಿತ್ಯ ಲೋಕಕ್ಕೆ ಕರಾವಳಿಯ ಅಮೂಲ್ಯ ಕೊಡುಗೆಯಾಗಿರುವ ಮೇರು ಸಾಹಿತಿ ವಿಶುಕುಮಾರ್ ಅವರ ಸಾಹಿತ್ಯ ಕೃತಿಗಳನ್ನು ಯುವ ಬರಹಗಾರರು ಹಾಗೂ ಸಾಹಿತ್ಯಾಸಕ್ತರಿಗೆ ಪರಿಚಯಿಸುವ ಉದ್ದೇಶದಿಂದ ಈ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ರಾಜ್ಯದ ಬಹುತೇಕ ಜಿಲ್ಲೆಗಳ ಸ್ಪರ್ಧಿಗಳು ಭಾಗವಹಿಸಿದ್ದು, ಕವನ ಸ್ಪರ್ಧೆಯಲ್ಲಿ 106 ಮಂದಿ ಹಾಗೂ ಕೃತಿ ವಿಮರ್ಶೆ ಸ್ಪರ್ಧೆಯಲ್ಲಿ 25 ಮಂದಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ.

ಕೃತಿ ವಿಮರ್ಶೆ ಸ್ಪರ್ಧೆಗೆ ವಿಶುಕುಮಾರ್ ಅವರ ‘ಕರಾವಳಿ’, ‘ಮಥನ’, ‘ಈ ಪರಿಯ ಬದುಕು’ ಮತ್ತು ‘ಕರ್ಮ’ ಕಾದಂಬರಿಗಳನ್ನು ಆಯ್ಕೆ ಮಾಡಲಾಗಿತ್ತು. ಕವನ ಸ್ಪರ್ಧೆಗೆ ‘ಕರ್ನಾಟಕ ಕರಾವಳಿ ತೀರದ ವೈಶಿಷ್ಟ್ಯತೆ ಮತ್ತು ವೈವಿಧ್ಯತೆ’ ಎಂಬ ವಿಷಯವನ್ನು ನೀಡಲಾಗಿತ್ತು.
ಕೃತಿ ವಿಮರ್ಶೆ ಸ್ಪರ್ಧೆಯ ತೀರ್ಪುಗಾರರಾಗಿ ಹಿರಿಯ ಸಾಹಿತಿಗಳಾದ ಮುದ್ದು ಮೂಡುಬೆಳ್ಳೆ ಮತ್ತು ಮೀನಾಕ್ಷಿ ರಾಮಚಂದ್ರ ಹಾಗೂ ಕವನ ಸ್ಪರ್ಧೆಯ ತೀರ್ಪುಗಾರರಾಗಿ ನಿವೃತ್ತ ಶಿಕ್ಷಕಿ, ಹಿರಿಯ ಸಾಹಿತಿ ರತ್ನಾ ಕೆ. ಭಟ್ ತಲಂಜೇರಿ ಮತ್ತು ಕವಯಿತ್ರಿ ಅಮಿತಾಂಜಲಿ ಕಿರಣ್ ಸಹಕರಿಸಿದರು.

‘ವಿಶು ವಿಹಂಗಮ’ ಕೃತಿ ವಿಮರ್ಶೆ ಸ್ಪರ್ಧೆಯ ವಿಜೇತರು: ಡಾ. ಮೈತ್ರಿ ಭಟ್ ವಿಟ್ಲ ಪ್ರಥಮ, ರಶ್ಮಿ ಸನಿಲ್ ಮಂಗಳೂರು ದ್ವಿತೀಯ ಹಾಗೂ ಚೈತ್ರ ಕಬ್ಬಿನಾಲೆ ಕಾರ್ಕಳ, ಉಡುಪಿ ತೃತೀಯ ಬಹುಮಾನ ಪಡೆದಿದ್ದಾರೆ.
ಮೆಚ್ಚುಗೆ ಬಹುಮಾನಕ್ಕೆ ಶೋಭಾ ದಿನೇಶ್ ಉದ್ಯಾವರ, ಬಿ. ಸತ್ಯವತಿ ಭಟ್ ಕೊಳಚಪ್ಪು ಮಂಗಳೂರು, ರೇಖಾ ಶ್ರೀನಿವಾಸ್ ಮುನಿಯೂರು ಕಾಸರಗೋಡು, ಪೂರ್ಣಿಮಾ ಕೋಟ್ಯಾನ್ ಮಾರ್ನಾಡು ಮೂಡುಬಿದಿರೆ ಹಾಗೂ ಸು.ಶಿ. ಶಾಂತಕುಮಾರ ಹರವೆ ಚಾಮರಾಜನಗರ, ಮೈಸೂರು ಆಯ್ಕೆಯಾಗಿದ್ದಾರೆ.
‘ವಿಶು ಕಾವ್ಯಾಮೃತ’ ಕವನ ಸ್ಪರ್ಧೆಯ ವಿಜೇತರು: ಪೂರ್ಣಿಮಾ ಕೋಟ್ಯಾನ್ ಮಾರ್ನಾಡು ಮೂಡುಬಿದಿರೆ ಪ್ರಥಮ, ರಶ್ಮಿ ಸನಿಲ್ ಮಂಗಳೂರು ದ್ವಿತೀಯ ಹಾಗೂ ಎಸ್.ವಿ. ಶಾಂತಕುಮಾರ ಪಲ್ಲಾಗಟ್ಟಿ ಜಗಳೂರು, ದಾವಣಗೆರೆ ತೃತೀಯ ಬಹುಮಾನ ಗಳಿಸಿದ್ದಾರೆ.
ಮೆಚ್ಚುಗೆ ಬಹುಮಾನಕ್ಕೆ ಲಕ್ಷ್ಮೀ ವಿ. ಭಟ್ ತಲಂಜೇರಿ ಮಂಜೇಶ್ವರ, ಮಾಲತೇಶ ನಾಗಪ್ಪ ಚಳಗೇರಿ ಬ್ಯಾಡಗಿ ಹಾವೇರಿ, ನರೇಂದ್ರ ಎಸ್. ಗಂಗೊಳ್ಳಿ ಕುಂದಾಪುರ, ಶ್ರೀಲತಾ ಉಡುಪಿ, ಉಮ್ಮರ್ ಫಾರೂಕ್ ಎ. ನರಿಂಗಾನ ಬಂಟ್ವಾಳ, ರಮ್ಯ ರಘುಪತಿ ಕೊಕ್ಕಡ ಬೆಳ್ತಂಗಡಿ, ಹಿತೇಶ್ ಕುಮಾರ್ ಎ. ಕಾಸರಗೋಡು, ಡಾ. ಸುರೇಶ ನೆಗಳಗುಳಿ ಮಂಗಳೂರು, ಗಂಗಾಧರ ಪಿ. ಬನ್ನಿಹಟ್ಟಿ ಶಿವಮೊಗ್ಗ ಹಾಗೂ ಕಾವ್ಯಶ್ರೀ ರವಿ ಚಲವಾದಿ ಹುಬ್ಬಳ್ಳಿ ಆಯ್ಕೆಯಾಗಿದ್ದಾರೆ. ಸ್ಪರ್ಧೆಯ ಸಂಚಾಲಕರಾಗಿ ಯುವವಾಹಿನಿ ಕೇಂದ್ರ ಸಮಿತಿಯ ‘ಯುವ ಸಿಂಚನ’ ಪತ್ರಿಕಾ ಸಮಿತಿಯ ಸಹಸದಸ್ಯ ಲತೀಶ್ ಎಂ. ಸಂಕೊಳಿಗೆ ಕಾರ್ಯನಿರ್ವಹಿಸಿದರು. ವಿಶುಕುಮಾರ್ ದತ್ತಿನಿಧಿ ಸಮಿತಿಯ ಸಂಚಾಲಕ ಜಗದೀಶ್ ಕುಮಾರ್ ಹಾಗೂ ಸಮಿತಿ ಸದಸ್ಯ ದಯಾನಂದ ಕರ್ಕೇರ ಉಗ್ಗೆಲುಬೆಟ್ಟು ಸಹಕರಿಸಿದರು.
ವಿಶುಕುಮಾರ್ ಅವರ ಸಾಹಿತ್ಯ ಪರಂಪರೆಯನ್ನು ಹೊಸ ತಲೆಮಾರಿಗೆ ಪರಿಚಯಿಸುವುದರೊಂದಿಗೆ ಕನ್ನಡ ಸಾಹಿತ್ಯಾಭಿರುಚಿ ಮತ್ತು ಸೃಜನಶೀಲ ಬರವಣಿಗೆಯನ್ನು ಉತ್ತೇಜಿಸುವಲ್ಲಿ ಈ ಸ್ಪರ್ಧೆಗಳು ಮಹತ್ವದ ಪಾತ್ರ ವಹಿಸಿವೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ತಿಳಿಸಿದರು








