
ಅಧ್ಯಕ್ಷರಾಗಿ ಗೋಪಾಲ್ ಪೂಜಾರಿ
18-08-2026, 9:58 AM
ಕುಪ್ಪೆಪದವು : ಯುವವಾಹಿನಿ ಕುಪ್ಪೆಪದವು ಎಡಪದವು ಘಟಕದ 2026-27 ನೇ ಸಾಲಿನಅಧ್ಯಕ್ಷರಾಗಿ ಗೋಪಾಲ್ ಪೂಜಾರಿ ಆಯ್ಕೆಯಾಗಿದ್ದಾರೆ


18-08-2026, 9:58 AM
ಕುಪ್ಪೆಪದವು : ಯುವವಾಹಿನಿ ಕುಪ್ಪೆಪದವು ಎಡಪದವು ಘಟಕದ 2026-27 ನೇ ಸಾಲಿನಅಧ್ಯಕ್ಷರಾಗಿ ಗೋಪಾಲ್ ಪೂಜಾರಿ ಆಯ್ಕೆಯಾಗಿದ್ದಾರೆ

17-08-2026, 8:00 PM
ಮಂಗಳೂರು, ಆಗಸ್ಟ್ 17: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯಲ್ಲಿ ಪ್ರತೀ ಸೋಮವಾರ ನಡೆಯುತ್ತಿರುವ ಸಾಪ್ತಾಹಿಕ ಭಜನಾ ಸಂಕೀರ್ತನ ಸರಣಿಯ ಅಂಗವಾಗಿ ಭಜನಾ ಸೇವೆಯು ಸೋಮವಾರ ಸಂಜೆ ಕ್ಷೇತ್ರದಲ್ಲಿ ಭಕ್ತಿ ಭಾವದಿಂದ ನಡೆಯಿತು. ಈ ವಾರದ ಭಜನಾ ಸೇವೆಯನ್ನು ವೇದಾವತಿ ಮತ್ತು ಬಳಗ, ಅಳಪೆ–ಮಂಗಳೂರು ಇವರ ಸಹಯೋಗದಲ್ಲಿ ನೆರವೇರಿಸಲಾಯಿತು. ಹರಿನಾಮ ಸ್ಮರಣೆಯೊಂದಿಗೆ ಭಕ್ತಿ ಭಾವಪೂರ್ಣವಾಗಿ ಭಜನೆ ನಡೆಸಿ, ಶ್ರೀ ಗೋಕರ್ಣನಾಥ ಹಾಗೂ ಶ್ರೀ ನಾರಾಯಣಗುರುಗಳ ಚರಣಕ್ಕೆ ಭಜನಾ ಸೇವೆಯನ್ನು […]

16-08-2026, 8:00 PM
ಸುಳ್ಯ, ಆಗಸ್ಟ್ 16: ಯುವವಾಹಿನಿ (ರಿ.) ಸುಳ್ಯ ಘಟಕದ ವತಿಯಿಂದ ಆಗಸ್ಟ್ ತಿಂಗಳ ‘ಗುರು ಸ್ಫೂರ್ತಿ’ ಕಾರ್ಯಕ್ರಮವು ಸಂತೋಷ್ ಕುಮಾರ್ ಅಲೆಕ್ಕಾಡಿ ಅವರ ನಿವಾಸದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ.) ಸುಳ್ಯ ಘಟಕದ ಅಧ್ಯಕ್ಷರಾದ ಮಹೇಶ್ ಕಲ್ಪಣೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರಾದ ಕೃಷ್ಣ ಕುಮಾರ್ ಅಲೆಕ್ಕಾಡಿ, ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುಂದರ ಪೂಜಾರಿ ಕಡಬ, ಯುವವಾಹಿನಿ ತಾಲೂಕು ಘಟಕದ ನಾರಾಯಣ ಗುರು ತತ್ವ ಪ್ರಚಾರ ಅನುಷ್ಠಾನ […]

16-08-2026, 8:00 PM
ಕಾರ್ಕಳ, ಆಗಸ್ಟ್ 16: ಭಜನೆಯ ಮೂಲಕ ಯುವ ಜನತೆಯಲ್ಲಿ ಸಂಸ್ಕಾರ, ಶಿಸ್ತು ಹಾಗೂ ಆಧ್ಯಾತ್ಮಿಕ ಚಿಂತನೆ ಬೆಳೆಸಲು ಸಾಧ್ಯ. ಭಜನಾ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಸಮಾಜದ ಜವಾಬ್ದಾರಿಯಾಗಿದೆ ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು. ಯುವವಾಹಿನಿ (ರಿ.) ಕಾರ್ಕಳ ಘಟಕದ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ, ಶಿರ್ಲಾಲು ಇವರ ಸಹಕಾರದೊಂದಿಗೆ ಶಿರ್ಲಾಲಿನಲ್ಲಿ ನಡೆದ ಕಾರ್ಕಳ ಮತ್ತು ಹೆಬ್ರಿ ತಾಲೂಕಿನ ಬಿಲ್ಲವ ಸಂಘಗಳ ದ್ವಿತೀಯ ವರ್ಷದ ಕುಣಿತ ಭಜನಾ ಸ್ಪರ್ಧೆ […]

16-08-2026, 6:00 PM
ಮಂಗಳೂರು, ಆಗಸ್ಟ್ 16: ಯುವವಾಹಿನಿ (ರಿ.) ಕೂಳೂರು ಘಟಕದ ವತಿಯಿಂದ ಸೇವಾನಿಧಿ ಯೋಜನೆಯಡಿ ಅನಾರೋಗ್ಯದಿಂದ ಸಂಕಷ್ಟದಲ್ಲಿರುವ ಎರಡು ಕುಟುಂಬಗಳಿಗೆ ಒಟ್ಟು ₹20,000 ಧನಸಹಾಯ ನೀಡಲಾಯಿತು. 29ನೇ ಸೇವಾನಿಧಿ ಯೋಜನೆಯ ಅಂಗವಾಗಿ ಸಜಿಪ ನಿವಾಸಿ, ಅನಾರೋಗ್ಯದಿಂದ ತೀವ್ರ ತೊಂದರೆಗೀಡಾದ 8 ವರ್ಷದ ತಾಶ್ವಿ ಅವರ ಕುಟುಂಬಕ್ಕೆ ₹10,000 ಹಾಗೂ 30ನೇ ಸೇವಾನಿಧಿ ಯೋಜನೆಯ ಅಂಗವಾಗಿ ಕಾಸರಗೋಡು ಜೋಡುಕಲ್ಲು ನಿವಾಸಿ ದುರ್ಗಾ ಪ್ರಸಾದ್ ಅವರ ಕುಟುಂಬಕ್ಕೆ ₹10,000 ಧನಸಹಾಯ ನೀಡಲಾಯಿತು. ಯುವವಾಹಿನಿ (ರಿ.) ಕೂಳೂರು ಘಟಕದ ಅಧ್ಯಕ್ಷೆ ಗೀತಾ ವಸಂತ್ […]

16-08-2026, 6:00 PM
ಉಪ್ಪಿನಂಗಡಿ ಅಗಸ್ಟ್ 16: ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕದ ವತಿಯಿಂದ ಆಗಸ್ಟ್ 16ರಂದು ಆಯೋಜಿಸಲಾದ “ಸ್ನೇಹ ಮಿಲನ–2026” ಒಂದು ದಿನದ ಸ್ನೇಹ ಪ್ರವಾಸವು ಸದಸ್ಯರ ಉತ್ಸಾಹ, ಸಂತಸ ಹಾಗೂ ಸೌಹಾರ್ದತೆಯೊಂದಿಗೆ ಯಶಸ್ವಿಯಾಗಿ ನಡೆಯಿತು. ಪ್ರವಾಸಕ್ಕೆ ಮುನ್ನ ಘಟಕದ ಅಧ್ಯಕ್ಷ ಮನೋಜ್ ಎನ್. ಸಾಲ್ಯಾನ್ ಅವರು ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಬೆಳಿಗ್ಗೆ 6 ಗಂಟೆಗೆ ಪ್ರವಾಸಕ್ಕೆ ಚಾಲನೆ ನೀಡಲಾಯಿತು. ಸಕಲೇಶಪುರದ ಜಪ್ಪದಕಲ್ಲು ರೆಸಾರ್ಟ್ಗೆ ತೆರಳಿದ ಸದಸ್ಯರು ದಿನವಿಡೀ ವಿವಿಧ ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಪ್ರವಾಸದಲ್ಲಿ ಒಟ್ಟು 37 […]

16-08-2026, 4:00 PM
ಹಳೆಯಂಗಡಿ, ಆಗಸ್ಟ್ 16: ಪರಿಸರ ಸಂರಕ್ಷಣೆ ಕೇವಲ ಸರ್ಕಾರ ಅಥವಾ ಸಂಘ-ಸಂಸ್ಥೆಗಳ ಜವಾಬ್ದಾರಿಯಲ್ಲ. ಪ್ರತಿಯೊಬ್ಬ ನಾಗರಿಕನೂ ಕನಿಷ್ಠ ಒಂದು ಸಸಿಯನ್ನು ನೆಟ್ಟು, ಅದನ್ನು ಪೋಷಿಸಿ ಮರವಾಗಿ ಬೆಳೆಸುವ ಸಂಕಲ್ಪ ಮಾಡಿದಾಗ ಮಾತ್ರ ಹಸಿರು ಪರಿಸರ ನಿರ್ಮಾಣ ಸಾಧ್ಯ ಎಂದು ಮೂಡುಬಿದ್ರೆಯ ವಲಯ ಅರಣ್ಯಾಧಿಕಾರಿ ಪಿ. ಶ್ರೀಧರ್ ಹೇಳಿದರು. ಹಳೆಯಂಗಡಿ ಲಯನ್ಸ್ ಮತ್ತು ಲಿಯೋ ಕ್ಲಬ್, ಬಿಲ್ಲವ ಸಮಾಜ ಸೇವಾ ಸಂಘ, ಯುವವಾಹಿನಿ (ರಿ.) ಹಳೆಯಂಗಡಿ ಘಟಕ, ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ, ಪೂಜಾ ಅರೇಂಜರ್ಸ್ ಹಳೆಯಂಗಡಿ ಹಾಗೂ ಪರಿಸರ […]

16-08-2026, 3:00 PM
ಬಂಟ್ವಾಳ ಅಗಸ್ಟ್ 16: ಯುವವಾಹಿನಿ (ರಿ.) ಬಂಟ್ವಾಳ ಘಟಕದ ಪ್ರತಿಷ್ಠಿತ“ಆಟಿ ಡೊಂಜಿ ಕೂಟ” ದ ಸಮಾರೋಪ ಸಮಾರಂಭವು ಜನಪದ ನೃತ್ಯ ವೈಭವ, ಚೆನ್ನಮಣೆ ಸ್ಪರ್ಧೆ ಹಾಗೂ ಪ್ರತಿಭಾ ಪುರಸ್ಕಾರಗಳೊಂದಿಗೆ ಸಂಭ್ರಮದಿಂದ ನಡೆಯಿತು. ಸಮಾರೋಪದ ಅಂಗವಾಗಿ ನಡೆದ ಜನಪದ ನೃತ್ಯ ವೈಭವ ಪ್ರೇಕ್ಷಕರ ಗಮನ ಸೆಳೆಯಿತು. ಬಂಟ್ವಾಳ ತಾಲೂಕಿನ ವಿವಿಧ ಬಿಲ್ಲವ ಸಂಘಗಳ ತಂಡಗಳು ವೈವಿಧ್ಯಮಯ ಜನಪದ ನೃತ್ಯ ಪ್ರದರ್ಶನಗಳ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಸ್ಪರ್ಧೆಯಲ್ಲಿ ಬೈದಶ್ರೀ ಬಿಲ್ಲವ ಸಂಘ, ಬಡೆಕೊಟ್ಟು–ಮಣಿನಾಲ್ಕೂರು ತಂಡ ಪ್ರಥಮ ಸ್ಥಾನ, ಬ್ರಹ್ಮಶ್ರೀ […]

16-08-2026, 11:00 AM
ಬಂಟ್ವಾಳ, ಆಗಸ್ಟ್ 16: “ಯುವವಾಹಿನಿ ಕೇವಲ ಒಂದು ಸಂಘಟನೆಯಲ್ಲ; ಅದು ಯುವಶಕ್ತಿಯನ್ನು ಸಮಾಜಸೇವೆಯ ಶಕ್ತಿಯಾಗಿ ಪರಿವರ್ತಿಸುತ್ತಿರುವ ಒಂದು ಚಳವಳಿ. ಯುವಕರನ್ನು ಒಗ್ಗೂಡಿಸಿ ಶಿಕ್ಷಣ, ಆರೋಗ್ಯ, ಸಮಾಜಸೇವೆ, ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳ ಮೂಲಕ ಸಮಾಜದ ಅಭಿವೃದ್ಧಿಗೆ ನಿರಂತರವಾಗಿ ಕೊಡುಗೆ ನೀಡುತ್ತಿರುವ ಯುವವಾಹಿನಿಯ ಕಾರ್ಯ ಶ್ಲಾಘನೀಯವಾಗಿದೆ. ಯುವವಾಹಿನಿ ಯುವ ಜನಾಂಗದ ಕಣ್ಮಣಿಯಾಗಿ, ಸಮಾಜದ ಆಶಾಕಿರಣವಾಗಿ ಬೆಳೆದು ನಿಂತಿದೆ” ಎಂದು ಉದ್ಯಮಿ ಪ್ರಕಾಶ್ ಕುಂಪಲ ಹೇಳಿದರು. ಅವರು ಯುವವಾಹಿನಿ (ರಿ.) ಬಂಟ್ವಾಳ ಘಟಕದ ಆಶ್ರಯದಲ್ಲಿ ಬಿ.ಸಿ.ರೋಡ್ನ ನಾರಾಯಣಗುರು ಸಭಾಭವನದಲ್ಲಿ ನಡೆದ […]

15-08-2026, 9:00 PM
ಮಂಗಳೂರು: ಶ್ರೀ ಚಾಮುಂಡೇಶ್ವರಿ ಕ್ಷೇತ್ರ, ಉರ್ವಾ ಹೊಗೆಬೈಲ್, ಮಂಗಳೂರು ಇವರ ವತಿಯಿಂದ ಆಯೋಜಿಸಲಾಗಿರುವ 48 ದಿನಗಳ ಸಂಧ್ಯಾ ಭಜನಾ ಸೇವೆಯ ಅಂಗವಾಗಿ, ದಿನಾಂಕ 15-08-2026ರಂದು ಸಂಜೆ 6.30ರಿಂದ 8.00 ಗಂಟೆಯವರೆಗೆ ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ ವತಿಯಿಂದ ಭಜನಾ ಸೇವೆ ನಡೆಯಿತು. ಮಹಿಳಾ ಘಟಕದ ಸದಸ್ಯೆಯರು ಭಕ್ತಿಭಾವದಿಂದ ವಿವಿಧ ಭಜನೆಗಳನ್ನು ಹಾಡಿ, ಶ್ರೀ ದೇವಿಯ ಸನ್ನಿಧಿಯಲ್ಲಿ ಭಜನಾ ಸೇವೆಯನ್ನು ಸಲ್ಲಿಸಿದರು. ಭಜನೆಯ ಬಳಿಕ ಶ್ರೀ ಚಾಮುಂಡೇಶ್ವರಿ ದೇವಿಗೆ ಭಕ್ತಿಯಿಂದ ಪೂಜೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಮಹಿಳಾ ಘಟಕದ […]