17-08-2018, 2:51 PM
ಬಜ್ಪೆಯಲ್ಲಿ ವಾಸವಾಗಿರುವ ದಿ| ಮನೋಜ್ ಕುಮಾರ್ ಮತ್ತು ಶ್ರೀಮತಿ ಶಾಲಿನಿಯವರ ಪುತ್ರಿ ಕುಮಾರಿ ದಿವ್ಯ ಇವರ ಮದುವೆ ಖರ್ಚಿನ ಸಹಾಯಾರ್ಥವಾಗಿ ದಿನಾಂಕ 17.08.2017ರಂದು ಯುವವಾಹಿನಿ (ರಿ) ಬಜ್ಪೆ ಘಟಕದ ವತಿಯಿಂದ ಧನ ಸಹಾಯ ಹಸ್ತಾಂತರಿಸಲಾಯಿತು . ಈ ಸಂದರ್ಭದಲ್ಲಿ ಸಂತೋಷ್ ಕುಮಾರ್ ಜೋಕಟ್ಟೆ, ಯುವವಾಹಿನಿ ಬಜ್ಪೆ ಘಟಕದ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
Read More
15-08-2018, 2:11 PM
ಯಡ್ತಾಡಿ : ಸ್ವಾತಂತ್ರ್ಯ ದಿನದಂದು ಕೇವಲ ಧ್ವಜ ಹಾರಿಸಿ ಸಿಹಿ ತಿಂಡಿ ತಿಂದು ಮನೆಗೆ ಮರಳುವ ಬದಲು, ನಾಲ್ಕು ಜನರಿಗೆ ಉಪಯೋಗವಾಗುವ ಅರ್ಥಪೂರ್ಣ ಕಾರ್ಯಕ್ರಮವನ್ನು ಮಾಡುವುದು, ಯುವವಾಹಿನಿ (ರಿ) ಯಡ್ತಾಡಿ ಘಟಕದ ಪ್ರತಿ ವರುಷದ ಕಾರ್ಯಕ್ರಮ. ಈ ಬಾರಿ ಮಾಡಲೇ ಬೇಕಾದ ಕೆಲಸ ಎಲ್ಲರ ಕಣ್ಣೆದುರೇ ಇದ್ದರೂ, ಯಾರಿಗೂ ಈ ಮೊದಲು ಅನುಕೂಲಕರ ಸಮಯ ಒದಗಿ ಬಂದಿರಲಿಲ್ಲ. ಯಡ್ತಾಡಿಯಿಂದ ಕಂಬಳಗದ್ದೆಗೆ ಹೋಗುವ ಕಾಂಕ್ರೀಟ್ ರೋಡಿನ ಎರಡು ಬದಿಗಳಲ್ಲಿ ಹಬ್ಬಿದ ಗಿಡ ಮರ ಹಾಗು ಕಸ ಕಡ್ಡಿಗಳು, ಅದಾಗಲೇ […]
Read More
13-08-2018, 4:25 PM
ಪಡುಬಿದ್ರಿ : ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ಅನಾರೋಗ್ಯದಿಂದ ಬಳಲುತ್ತಿರುವ, ನಮ್ಮ ಘಟಕದ ಸದಸ್ಯರಾದ ನಂದಿಕೂರಿನ ಹೇಮಂತ್ ರವರ ತಾಯಿ ಜಯಂತಿಯವರಿಗೆ ಯುವವಾಹಿನಿ (ರಿ.) ಪಡುಬಿದ್ರಿ ಘಟಕದಿಂದದಿನಾಂಕ 13.08.2018 ರಂದು ರೂ.10,600 ಧನಸಹಾಯ ಮಾಡಲಾಯಿತು. ಈ ಸಂದರ್ಭದಲ್ಲಿ ಯುವವಾಹಿನಿಯ ಅಧ್ಯಕ್ಷರಾದ ದೀಪಕ್ ಕೆ. ಬೀರ, ನಿಕಟಪೂರ್ವ ಅಧ್ಯಕ್ಷರಾದ ಸಂತೋಷ್ ಎಸ್. ಪೂಜಾರಿ, ಮಾಜಿ ಅಧ್ಯಕ್ಷರಾದ ಅಶೋಕ್ ಪಾದೆಬೆಟ್ಟು, ಕಾರ್ಯದರ್ಶಿ ಶೈಲಜ, ಪಡುಬಿದ್ರಿ ಘಟಕದ ಸಮಾಜ ಸೇವಾ ನಿರ್ದೇಶಕರಾದ ಅಕ್ಷಯ್ ನಂದಿಕೂರು, ಅರುಣ್ ನಂದಿಕೂರು ಉಪಸ್ಥಿತರಿದ್ದರು.
Read More
12-08-2018, 5:02 PM
ಅಡ್ವೆ: ಹಿಂದಿನ ಕಾಲದ ಪದ್ದತಿಯನ್ನು ಇಂದಿನ ಜನಾಂಗಕ್ಕೆ ಪರಿಚಯಿಸುವ ಸಲುವಾಗಿ ಆಟಿಡೊಂಜಿ ದಿನ ದಂತಹ ಕಾರ್ಯಕ್ರಮಗಳು ಇದೀಗ ಆಟಿ ತಿಂಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಸುತ್ತಿದೆ. ಈಗಿನ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಇಂತಹ ಕಾರ್ಯಕ್ರಮಗಳು ತುಳುನಾಡಿನ ಸಂಸ್ಕೃತಿಯನ್ನು ಎತ್ತಿ ಹಿಡಿಯುವಲ್ಲಿ ಜೀವ ತುಂಬುತ್ತಿದ್ದು, ಮುಂದಿನ ಪೀಳಿಗೆಗಳು ನಮ್ಮ ಕೃಷಿ ಬದುಕನ್ನು ಟಿವಿ ಪರದೆ ಮೇಲೆ ನೋಡುವಂತಾಗದಿರಲಿ ಎಂದು ಸಾಹಿತಿ, ಹೆಜಮಾಡಿ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ವಾಮನ ಕೋಟ್ಯಾನ್ ನಡಿಕುದ್ರು ನುಡಿದರು. ಅವರು ಯುವವಾಹಿನಿ (ರಿ.) ಅಡ್ವೆ ಘಟಕದ ವತಿಯಿಂದ […]
Read More
12-08-2018, 3:50 PM
ಹಳೆಯಂಗಡಿ : ಯುವಪೀಳಿಗೆಯನ್ನು ಮುಖ್ಯವಾಹಿನಿಗೆ ಕರೆತರಲು, ಸಮಾಜದ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘಟನೆಯು ಸಹಕಾರಿಯಾಗಿದೆ. . ತುಳುನಾಡಿನ ಸಂಸ್ಕೃತಿ ಮತ್ತು ಸಂಸ್ಕಾರ ಉಳಿಸಿ ಬೆಳೆಸಲು ಹಿರಿಯರ ಮಾರ್ಗದರ್ಶನದಲ್ಲಿ ನಂಬಿಕೆಯನ್ನು ಪ್ರೋತ್ಸಾಹಿಸುವ ಕಾರ್ಯ ನಾವೆಲ್ಲರೂ ಸೇರಿ ಮಾಡಬೇಕು ಎಂದು ಕರ್ನಾಟಕ ಧಾರ್ಮಿಕ ಪರಿಷತ್ ನ ಸದಸ್ಯ ಪದ್ಮನಾಭ ಕೋಟ್ಯಾನ್ ಹೇಳಿದರು. ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ವಠಾರದಲ್ಲಿ ದಿನಾಂಕ 12.08.2018 ರಂದು ತುಳು ಸಂಸ್ಕ್ರತಿಯನ್ನು ಬಿಂಬಿಸುವ ಆಟಿದ ಐಸ್ರ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಮಂಗಳೂರು […]
Read More
12-08-2018, 2:40 PM
. ಬಜ್ಪೆ: ವ್ಯವಸಾಯ ಮತ್ತು ಕೃಷಿಯೊಂದಿಗೆ ಆಟಿ ತಿಂಗಳಿಗೆ ಅತೀ ಹತ್ತಿರದ ಸಂಭಂದವಿದೆ. ಆಹಾರ ಅನುಷ್ಠಾನಗಳಲ್ಲಿ ಪ್ರತಿ ತಿಂಗಳಿಗೆ ಅದರದ್ದೇ ಆದ ಮಹತ್ವವಿದೆ. ಅದರಲ್ಲೂ ಪ್ರಕೃತಿ, ಭೂಮಿ ಮತ್ತು ನಮ್ಮ ಈ ಜೀವ, ದೇಹದ ನಡುವೆ ಅತೀಯಾದ ಸಂಭಂದವಿರುವುದು ಆಟಿ ತಿಂಗಳಲ್ಲಿ. ಈ ತಿಂಗಳಲ್ಲಿ ನಾವೇನನ್ನ ಆಹಾರ ಪಥ್ಯಗಳಾಗಿ ಸ್ವೀಕರಿಸುತ್ತೇವೆ, ಪ್ರಕೃತಿ ಭೂಮಿಗೂ ಅದನ್ನು ಉಣಬಡಿಸಿ ಸಮ ತೋಲನವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ. ಈ ಹಿಂದಿನ ದಿನ ಮಾನಗಳಲ್ಲಿ ಅವಶ್ಯವಾಗಿ ಆಟಿ ತಿಂಗಳಲ್ಲಿ ಸೇವಿಸಬೇಕಾದ ಆಹಾರವು ಔಷಧವಾಗಿ ಇಡೀ […]
Read More
11-08-2018, 4:59 PM
ಮಂಗಳೂರು : ಯುವವಾಹಿನಿ(ರಿ) ಮಂಗಳೂರು ಮಹಿಳಾ ಘಟಕದ ವತಿಯಿಂದ ದಿನಾಂಕ 11-08-2018 ರಂದು ನಡೆದ ಸಾಪ್ತಾಹಿಕ ಸಭೆಯಲ್ಲಿ ನಮ್ಮ ಸಮಾಜದ ಆರ್ಥಿಕವಾಗಿ ಹಿಂದುಳಿದ ಕುಟುoಬದ ಕುಮಾರಿ ಪೂಜಾಳ ಮದುವೆಗೆ ರೂ 10,000/- ಧನಸಹಾಯ ನೀಡಲಾಯಿತು. ಈ ಸಂದರ್ಭದಲ್ಲಿ ಯುವವಾಹಿನಿ(ರಿ) ಮಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ.ಸಿ.ಕರ್ಕೇರ , ಕಾರ್ಯದರ್ಶಿ ರವಿಕಲಾ , ಸಲಹೆಗಾರ ಪರಮೇಶ್ವರ ಪೂಜಾರಿ ಹಾಗು ಸದಸ್ಯರು ಉಪಸ್ಥಿತರಿದ್ದರು.
Read More
07-08-2018, 9:20 AM
ಮಂಗಳೂರು : ಯುವವಾಹಿನಿಯ 31 ನೇ ವಾರ್ಷಿಕ ಸಮಾವೇಶವು ದಿನಾಂಕ 05.08.2018 ರಂದು ಮಂಗಳೂರಿನ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್ ನಲ್ಲಿ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿತು. ಈ ನಿಟ್ಟಿನಲ್ಲಿ ಸಮಾರಂಭದ ಯಶಸ್ಸಿಗೆ ಸಹಕಾರ ನೀಡಿದವರಿಗೆ ಅಭಿನಂದನಾ ಕಾರ್ಯಕ್ರಮ ದಿನಾಂಕ 07.08.2018 ರಂದು ಮಂಗಳೂರಿನ ಯುವವಾಹಿನಿ ಸಭಾಂಗಣದಲ್ಲಿ ಜರುಗಿತು. ಸಮಾವೇಶ ನಿರ್ದೇಶಕ ಹರೀಶ್ ಕೆ.ಪೂಜಾರಿ, ಸಮಾವೇಶ ಸಂಚಾಲಕ ನವೀನ್ ಚಂದ್ರ, ಕಾರ್ಯಕ್ರಮ ನಿರೂಪಿಸಿದ ದಿನೇಶ್ ಸುವರ್ಣ, ಮಂಗಳೂರು ಘಟಕದ ಕೋಶಾಧಿಕಾರಿ ಗಣೇಶ್ […]
Read More
05-08-2018, 5:13 PM
ಮಂಗಳೂರು : ಯುವವಾಹಿನಿಯ 31 ನೇ ವಾರ್ಷಿಕ ಸಮಾವೇಶವು ದಿನಾಂಕ 05.08.2018 ರಂದು ಮಂಗಳೂರಿನ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್ ನಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಂದರ್ಭದಲ್ಲಿ ಹಲವು ವಿಭಾಗದಲ್ಲಿ ಸಾಧನೆ ಮಾಡಿದ ಸಾಧಕರು ಹಾಗೂ ಸಂಘ, ಸಂಸ್ಥೆಗಳಿಗೆ ಗೌರವ ಅಭಿನಂದನೆ, ಯುವವಾಹಿನಿ ಸಾಧಕ ಪುರಸ್ಕಾರ, ಯುವ ಸಾಧನಾ ಪುರಸ್ಕಾರ, ಸಾಧನಾ ಶ್ರೀ ಪ್ರಶಸ್ತಿ, ಸಾಧನಾ ಶ್ರೇಷ್ಠ ಪ್ರಶಸ್ತಿ ಪ್ರದಾನ ಮಾಡಲಾಯಿತು. ರೋಟರಿ ಜಿಲ್ಲೆ 3181 ಇದರ ರಾಜ್ಯಪಾಲ […]
Read More
05-08-2018, 4:37 PM
ಮಂಗಳೂರು : ಯುವವಾಹಿನಿಯ 31 ನೇ ವಾರ್ಷಿಕ ಸಮಾವೇಶವು ದಿನಾಂಕ 05.08.2018 ರಂದು ಮಂಗಳೂರಿನ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್ ನಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಂದರ್ಭದಲ್ಲಿ ಹಲವು ವಿಭಾಗದಲ್ಲಿ ಸಾಧನೆ ಮಾಡಿದ ಸಾಧಕರು ಹಾಗೂ ಸಂಘ, ಸಂಸ್ಥೆಗಳಿಗೆ ಗೌರವ ಅಭಿನಂದನೆ, ಯುವವಾಹಿನಿ ಸಾಧಕ ಪುರಸ್ಕಾರ, ಯುವ ಸಾಧನಾ ಪುರಸ್ಕಾರ, ಸಾಧನಾ ಶ್ರೀ ಪ್ರಶಸ್ತಿ, ಸಾಧನಾ ಶ್ರೇಷ್ಠ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಮಾಜಿಕ ಹಾಗೂ ಬ್ಯಾಕಿಂಗ್ ಕ್ಸೇತ್ರದಲ್ಲಿನ ಸಾಧನೆಗೆ […]
Read More