
22-10-2025, 4:22 PM
ದಿನಾಂಕ:27-09-2025 ಶನಿವಾರ ದಂದು ಮಂಗಳೂರು ದಸರಾದ ಪ್ರಯುಕ್ತ ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಯಲ್ಲಿ ಬೆಳಗ್ಗೆಯಿಂದ ಸಂಜೆ ವರೆಗೆ ಸ್ವಯಂ ಸೇವೆ ಸಲ್ಲಿಸಲಾಯಿತು.ಮತ್ತು ಘಟಕದ ವತಿಯಿಂದ ಶ್ರೀ ಕ್ಷೇತ್ರದಲ್ಲಿ ನಡೆಯುವ ಅನ್ನದಾನ ಸೇವೆಗಾಗಿ ಕೇಂದ್ರ ಸಮಿತಿಗೆ ದೇಣಿಗೆ ನೀಡಲಾಯಿತು.
Read More

22-10-2025, 4:17 PM
ಘಟಕದ ವತಿಯಿಂದ ಗುರುಸ್ಮರಣೆ ಕಾರ್ಯಕ್ರಮವು ದಿನಾಂಕ 21/09/2025 ಆದಿತ್ಯವಾರ ನಾರಾಯಣ ಗುರು ಸಭಾಗೃಹ ಕುಳಾಯಿ ಇಲ್ಲಿ ನಡೆಯಿತು. ಬ್ರಹ್ಮ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ ಇದರ ಅಧ್ಯಕ್ಷರಾದ ಶ್ರೀಯುತ ಕೇಶವ ಸುವರ್ಣರವರು ಮಾತನಾಡಿ ಶ್ರೀ ಗುರುಗಳ ಜೀವನ ಸಾಮರಸ್ಯದ ಬಗೆಗೆ ವಿವರಿಸಿದರು. ಶ್ರೀಮತಿ ಶೃತಿ ಅಮೀನ್. ಕೆ ಇವರು ಗುರುಸಂದೇಶ ನೀಡುವುದರ ಮೂಲಕ ಗುರುವರ್ಯರ ಜೀವನದ ವಾಸ್ತವಿಕ ಘಟನೆಗಳು ಹಾಗೂ ನಮ್ಮ ಜೀವನದಲ್ಲಿ ಆಧುನಿಕತೆಯ ಗಾಳಿ ಯಾವ ರೀತಿ ಮಡುಗಟ್ಟಿದೆ, ಆಧುನಿಕತೆಯಿಂದ […]
Read More

22-10-2025, 4:13 PM
ಮಂಗಳೂರು ದಸರಾ 2025 ಇದರ ಹತ್ತನೇ ದಿನ ತಾ:01-10-2025ರಂದು ಸೇವೆಯಲ್ಲಿ ಘಟಕದ ಅಧ್ಯಕ್ಷರು ಹಾಗೂ ಸರ್ವ ಸದ್ಯಸರು ಸೇವಾ ಕೌಂಟರ್ ಮತ್ತು ಅನ್ನದಾನ ಕೌಂಟರ್ ನಲ್ಲಿ ಸೇವೆ ಸಲ್ಲಿಸಿದರು.
Read More

22-10-2025, 4:08 PM
ಲಯನ್ಸ್ ಮತ್ತು ಲಿಯೋ ಕ್ಲಬ್ ಹಳೆಯಂಗಡಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕ ಮಂಗಳೂರು ಮಹಾನಗರ ಇವರ ಸಹಯೋಗದಲ್ಲಿ, ದಿನಾಂಕ 05-10-2025 ನೇ ಆದಿತ್ಯವಾರ ಬೆಳಿಗ್ಗೆ ಉಚಿತ ಯೋಗ ಶಿಕ್ಷಣ ತರಗತಿಯನ್ನು – ಹಳೆಯಂಗಡಿ ಬಿಲ್ಲವ ಭವನದಲ್ಲಿ ಉದ್ಘಾಟನೆ ಮಾಡಲಾಯಿತು
Read More

22-10-2025, 3:59 PM
ಕುದ್ರೋಳಿ ನವರಾತ್ರಿ ಮಹೋತ್ಸವದಲ್ಲಿ ಸ್ವಯಂ ಸೇವೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುತ್ತಿರುವ ನವರಾತ್ರಿ ಮಹೋತ್ಸವದಲ್ಲಿ ಯುವವಾಹಿನಿ ಉಪ್ಪಿನಂಗಡಿ ಘಟಕದ ವತಿಯಿಂದ ಸ್ವಯಂ ಸೇವೆ ನಡೆಯಿತು. ಘಟಕದ ಅಧ್ಯಕ್ಷರಾದ ನಾಣ್ಯಪ್ಪ ಕೋಟ್ಯಾನ್ ಇವರ ನೇತೃತ್ವದಲ್ಲಿ 100 ಕ್ಕೂ ಹೆಚ್ಚಿನ ಮಂದಿ ಸದಸ್ಯರು02.10.2025ರಂದು ಬೆಳಿಗ್ಗೆಯಿಂದ ಸಂಜೆ ತನಕ ಸೇವೆ ಸಲ್ಲಿಸಿದರು. ಸೇವೆಯಲ್ಲಿ ಘಟಕದ ಗೌರವ ಸಲಹೆಗಾರರಾದ ವರದರಾಜ್, ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು.
Read More

22-10-2025, 3:56 PM
ದಿನಾಂಕ 02- 10- 2025 : ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಯ ದಸರಾ ಮಹೋತ್ಸವದ ಕೊನೆಯ ದಿನ ಶ್ರೀ ಶಾರದಾ ಮಾತೆಯ ಶೋಭಾ ಯಾತ್ರೆಯಂದು ನಾರಾಯಣ ಗುರು ವೃತ್ತದ ಬಳಿ ಸಾರ್ವಜನಿಕರಿಗೆ ತಂಪಾದ ಶರಬತ್ ನೀಡುವ ಸೇವಾ ಕಾರ್ಯ ಘಟಕದ ವತಿಯಿಂದ ನೆರವೇರಿತು. ಶರಬತ್ ಸೇವೆಯ ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್. ಎಲ್ ಶೇಟ್ ಡೈಮಂಡ್ ಹೌಸ್ ನ ಮಾಲೀಕರಾದ ರವೀಂದ್ರ ಶೇಟ್ ಗುರುಗಳ ಭಾವಚಿತ್ರಕ್ಕೆ ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು.ಕೇಂದ್ರ ಸಮಿತಿಯ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಸಾರ್ವಜನಿಕರಿಗೆ […]
Read More

22-10-2025, 3:53 PM
ಯುವವಾಹಿನಿ ಯುವಶಕ್ತಿಯ ಪ್ರೇರಣೆಯ ದೀಪ .ಸಮಾಜ ಸೇವೆ, ಶಿಸ್ತು ಮತ್ತು ಒಗ್ಗಟ್ಟಿನ ಮೌಲ್ಯಗಳನ್ನು ಪಾಲಿಸುತ್ತಾ, ಯುವಕರಲ್ಲಿ ಹೊಸ ಚೈತನ್ಯವನ್ನು ಯುವವಾಹಿನಿ ತುಂಬುತ್ತಿದೆ. ನಿರಂತರ ಸೇವೆ, ಶಿಸ್ತು, ಮತ್ತು ಸಕಾರಾತ್ಮಕ ಚಿಂತನೆಗಳ ಮೂಲಕ ನಾರಾಯಣಗುರುಗಳ ಸಂದೇಶ ಅನುಷ್ಠಾನ ಮಾಡುತ್ತಿರುವ ಯುವವಾಹಿನಿ ಯುವ ಪೀಳಿಗೆಗೆ ಪ್ರೇರಣೆಯ ದೀಪವಾಗಿದೆ. ಎಂದು ಬಂಟ್ವಾಳ ತಾಲುಕು ಬಿಲ್ಲವ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪೂಜಾರಿ ಮೆಲ್ಕಾರ್ ತಿಳಿಸಿದರು ಅವರು ಘಟಕದ ಆಶ್ರಯದಲ್ಲಿ ದಿನಾಂಕ 09/10/2025 ರಂದು ಮೇನಾಡು ಉದಯ ಪೂಜಾರಿ ಇವರ […]
Read More

22-10-2025, 3:46 PM
ದಿನಾಂಕ 04-10-2025 ರಿಂದ 6-10-2025 ರ ವರೆಗೆ ಶಿವಗಿರಿ ಯಾತ್ರೆ ಕೈಗೊಳ್ಳಲಾಯಿತು. ದಿನಾಂಕ 04-10-2025 ರಂದು ಶನಿವಾರ ರೈಲಿನಲ್ಲಿ 52 ಜನ ಸದಸ್ಯರ ತಂಡ ಹೊರಟು ಆದಿತ್ಯವಾರ ಬೆಳಿಗ್ಗೆ ವರ್ಕಳ ಶಿವಗಿರಿ ತಲುಪಿದೆವು. ಶ್ರೀ ಶ್ರೀ ಶ್ರೀ ಸತ್ಯಾನಂದ ಸ್ವಾಮೀಜಿ ಅಲ್ಲಿಂದ ನಮ್ಮನ್ನು ಶಿವಗಿರಿ ಮಠಕ್ಕೆ ಕರೆದುಕೊಂಡು ಹೋದರು. ಅಲ್ಲಿ ಸ್ನಾನಾದಿಗಳನ್ನು ಮುಗಿಸಿ ಶಿವಗಿರಿ ಮಠ, ನಾರಾಯಣ ಗುರು ವರ್ಯರ ವಿಶ್ರಾಂತಿ ಗೃಹ, ಗುರುಗಳು ಸ್ಥಾಪಿಸಿದ ಶಾರದಾ ಪೀಠ, ಗುರು ವರ್ಯರ ಮೂಲ ಸಮಾಧಿ ಬೇಟಿ ನೀಡಿ […]
Read More

22-10-2025, 3:39 PM
ರೋಟರಿ ಕ್ಲಬ್ ಮಂಗಳೂರು ಪೂರ್ವ, ರೋಟರಿ ಸಮುದಾಯ ದಳ ಕೊಲ್ಯ, ಸಾರ್ವಜನಿಕ ಶ್ರೀಶಾರದಾ ಮಹೋತ್ಸವ ಸಮಿತಿ ಕೊಲ್ಯ ಹಾಗೂ ಎನಿಮಲ್ ಕೇರ್ ಟ್ರಸ್ಟ್ ಮಂಗಳೂರು ಇವರ ಸಹಕಾರದೊಂದಿಗೆ ಹುಚ್ಚುನಾಯಿ ನಿಯಂತ್ರಣ ಲಸಿಕಾ ಶಿಬಿರ ಮತ್ತು ದೇಸಿ ನಾಯಿ ಹಾಗೂ ಬೆಕ್ಕಿನ ಮರಿಗಳ ಉಚಿತ ದತ್ತು ಸ್ವೀಕಾರ ಶಿಬಿರ ದಿನಾಂಕ 28.09.25 ರಂದು ಶ್ರೀ ಶಾರದ ಮಹೋತ್ಸವ ಸಮಿತಿಯ ವಠಾರದಲ್ಲಿ ನೆರವೇರಿತು, ಸುಮಾರು ನೂರಕ್ಕೂ ಅಧಿಕ ನಾಯಿ ಹಾಗೂ ಬೆಕ್ಕಿಗೆ ಲಸಿಕೆ ನೀಡಲಾಯಿತು.ಈ ಸಮಯದಲ್ಲಿ ಜಂಟಿ ಸಂಸ್ಥೆಗಳ ಅಧ್ಯಕ್ಷರು, […]
Read More

22-10-2025, 3:32 PM
ದಿನಾಂಕ 28/07/2025 ರಂದು ಶ್ರೀ ಗೋಕರ್ನಾಥೇಶ್ವರ ಕ್ಷೇತ್ರ ಕುದ್ರಳ್ಳಿಯಲ್ಲಿ ಘಟಕದ ವತಿಯಿಂದ ಭಜನಾ ಸಂಕೀರ್ತನೆಯನ್ನು ನಡೆಸಲಾಯಿತು
Read More