ದಿನಾಂಕ 02- 10- 2025 : ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಯ ದಸರಾ ಮಹೋತ್ಸವದ ಕೊನೆಯ ದಿನ ಶ್ರೀ ಶಾರದಾ ಮಾತೆಯ ಶೋಭಾ ಯಾತ್ರೆಯಂದು ನಾರಾಯಣ ಗುರು ವೃತ್ತದ ಬಳಿ ಸಾರ್ವಜನಿಕರಿಗೆ ತಂಪಾದ ಶರಬತ್ ನೀಡುವ ಸೇವಾ ಕಾರ್ಯ ಘಟಕದ ವತಿಯಿಂದ ನೆರವೇರಿತು.
ಶರಬತ್ ಸೇವೆಯ ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್. ಎಲ್ ಶೇಟ್ ಡೈಮಂಡ್ ಹೌಸ್ ನ ಮಾಲೀಕರಾದ ರವೀಂದ್ರ ಶೇಟ್ ಗುರುಗಳ ಭಾವಚಿತ್ರಕ್ಕೆ ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು.ಕೇಂದ್ರ ಸಮಿತಿಯ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಸಾರ್ವಜನಿಕರಿಗೆ ಶರಬತ್ ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆಯನ್ನು ನೀಡಿದರು.
ಅನೇಕ ಸಂಖ್ಯೆಯಲ್ಲಿ ಸಾರ್ವಜನಿಕರು ತಂಪಾದ ಶರಬತ್ ಸೇವಿಸುವುದರ ಮೂಲಕ ಬಾಯಾರಿಕೆಯನ್ನು ನೀಗಿಸಿ ಘಟಕದ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಶರಬತ್ ಸೇವೆಯ ಸಂಚಾಲಕರಾದ ನಾರಾಯಣ ಕರ್ಕೇರ ಹಾಗೂ ಸಹ ಸಂಚಾಲಕರಾದ ಶ್ರೀಕಾಂತ್ ಅಂಚನ್ ರವರ ನೇತೃತ್ವದಲ್ಲಿ ಶರಬತ್ ಸೇವೆಯು ಯಶಸ್ವಿಯಾಗಿ ನೆರವೇರಿತು.
OCT 22, 2025 3.56 PM IST


