ದಿನಾಂಕ 04-10-2025 ರಿಂದ 6-10-2025 ರ ವರೆಗೆ ಶಿವಗಿರಿ ಯಾತ್ರೆ ಕೈಗೊಳ್ಳಲಾಯಿತು.
ದಿನಾಂಕ 04-10-2025 ರಂದು ಶನಿವಾರ ರೈಲಿನಲ್ಲಿ 52 ಜನ ಸದಸ್ಯರ ತಂಡ ಹೊರಟು ಆದಿತ್ಯವಾರ ಬೆಳಿಗ್ಗೆ ವರ್ಕಳ ಶಿವಗಿರಿ ತಲುಪಿದೆವು. ಶ್ರೀ ಶ್ರೀ ಶ್ರೀ ಸತ್ಯಾನಂದ ಸ್ವಾಮೀಜಿ ಅಲ್ಲಿಂದ ನಮ್ಮನ್ನು ಶಿವಗಿರಿ ಮಠಕ್ಕೆ ಕರೆದುಕೊಂಡು ಹೋದರು. ಅಲ್ಲಿ ಸ್ನಾನಾದಿಗಳನ್ನು ಮುಗಿಸಿ ಶಿವಗಿರಿ ಮಠ, ನಾರಾಯಣ ಗುರು ವರ್ಯರ ವಿಶ್ರಾಂತಿ ಗೃಹ, ಗುರುಗಳು ಸ್ಥಾಪಿಸಿದ ಶಾರದಾ ಪೀಠ, ಗುರು ವರ್ಯರ ಮೂಲ ಸಮಾಧಿ ಬೇಟಿ ನೀಡಿ ಗುರು ವರ್ಯರ ಬಗ್ಗೆ ಮಾಹಿತಿಯನ್ನು ಶ್ರೀ ಶ್ರೀ ಶ್ರೀ ಸತ್ಯಾನಂದ ಸ್ವಾಮೀಜಿ ನಮಗೆ ತಿಳಿಸಿದರು.
ಬೆಳಿಗ್ಗಿನ ಉಪಹಾರ ಮಠದಲ್ಲಿ ಮುಗಿಸಿ ನಂತರ ಅಲ್ಲಿಂದ ಗುರು ಜನ್ಮಸ್ಥಳ ಚೆಂಬಳಂತಿ ಗೆ ಭೇಟಿ ನೀಡಿದೆವು. ಚೆಂಬಳಂತಿಯಲ್ಲಿ ಗುರು ವರ್ಯರ ಜನ್ಮ ನಕ್ಷತ್ರ ದಿನವಾದ ಕಾರಣ ವಿಶೇಷ ಪೂಜೆ ಇತ್ತು. ಅಲ್ಲಿ ಸದಸ್ಯರು ಎಲ್ಲರೂ ಸೇರಿ ಗುರು ವರ್ಯರ ಸ್ಮರಣೆ, ಗುರು ವರ್ಯರ ಅಷ್ಟೋತ್ತರ ನಾಮಾವಳಿ ಪಠಣೆ ಮಾಡಿದೆವು. ನಂತರ ಕೊಲ್ಲಮ್ ನಲ್ಲಿ ಗುರು ವರ್ಯರು ಸ್ಥಾಪಿಸಿದ ಬಾಲ ಸುಬ್ರಹ್ಮಣ್ಯ ದೇವಸ್ಥಾನ , ಅರವೀಪುರಮ್ ಶಿವ ದೇವಸ್ಥಾನ ಬೇಟಿ ನೀಡಿದೆವು. ನಂತರ ಕನ್ಯಾಕುಮಾರಿ ದೇವಸ್ಥಾನ ಬೇಟಿ ನೀಡಿ ನಂತರ ಮರುತ್ವಮಲೆ ಆಶ್ರಮದಲ್ಲಿ ವಿಶ್ರಾಂತಿ ಪಡೆದೆವು. ಮರುದಿನ ಬೆಳಿಗ್ಗೆ ಸ್ನಾನಾದಿಗಳನ್ನು ಮುಗಿಸಿ ಗುರು ಪೂಜೆಯಲ್ಲಿ ಪಾಲ್ಗೊಂಡು ನಂತರ ಗುರು ವರ್ಯರು 6 ವರ್ಷ ತಪಸ್ಸು ಮಾಡಿದ ಸ್ಥಳ ಮರುತ್ವ ಮಲೆಗೆ ಹೊರಟು, ಗುಹೆ ದರ್ಶನ ಪಡೆದು ಆಶ್ರಮಕ್ಕೆ ಹಿಂತಿರುಗಿ ಬೆಳಿಗ್ಗಿನ ಉಪಹಾರ ಮುಗಿಸಿ ಅಲ್ಲಿಂದ ವಿವೇಕಾನಂದರ ಸ್ಮಾರಕ ವೀಕ್ಷಣೆಗೆ ಹೊರಟು, ತ್ರಿವೇಣಿ ಸಂಗಮ ವೀಕ್ಷಣೆ ಮಾಡಿದೆವು. ಕನ್ಯಾಕುಮಾರಿ ಯಲ್ಲಿ ಶಾಪಿಂಗ್ ಮುಗಿಸಿ 1 ಗಂಟೆಗೆ ಆಶ್ರಮಕ್ಕೆ ಹಿಂತಿರುಗಿ ಮಧ್ಯಾಹ್ನದ ಭೋಜನ ಮುಗಿಸಿ ನಂತರ ಅನಂತ ಪದ್ಮನಾಭ ಕ್ಷೇತ್ರಕ್ಕೆ ಭೇಟಿ ನೀಡಿದೆವು. ನಂತರ ಅಲ್ಲಿಂದ ಹೊರಟು ತಿರುವನಂತಪುರಂ ನಿಂದಾ ಮಂಗಳೂರಿಗೆ ಪ್ರಯಾಣ ಬೆಳೆಸಿದೆವು. ಪ್ರಯಾಣದುದ್ದಕ್ಕೂ ಶ್ರೀ ಶ್ರೀ ಶ್ರೀ ಸತ್ಯಾನಂದ ಸ್ವಾಮೀಜಿಗಳು ಪ್ರತಿಯೊಂದು ಸ್ಥಳದ ವಿಶೇಷತೆ, ಗುರುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿದರು.
OCT 22, 2025 3.46 PM IST


