Yuvavahini

ಬೆಂಗಳೂರು

ಅಕ್ಷತಾ ಸುಧೀರ್ ಪೂಜಾರಿ : ಮಿಸ್ಸೆಸ್ ಬಿಲ್ಲವ

ಮಂಗಳೂರು : ಬಿರುವೆರ್ ಕುಡ್ಲ ಸಹಯೋಗದೊಂದಿಗೆ ಎನ್ ಬಿ ಗ್ರೂಪ್ ಮತ್ತು‌ ಎಚ್ ಎಫ್ ಕೆ ಸಹಕಾರದೊಂದಿಗೆ ಸುದೀಕ್ಷಾ ಕಿರಣ್ ಸುವರ್ಣ ನೇತ್ರತ್ವದಲ್ಲಿ ನಡೆದ ಸೌಂದರ್ಯ ಸ್ಪರ್ಧೆಯ ಗ್ರಾಂಡ್ ಫಿನಾಲೆಯಲ್ಲಿ ಯುವವಾಹಿನಿ ಬೆಂಗಳೂರು ಘಟಕದ ಮಹಿಳಾ ಸಂಘಟನಾ ನಿರ್ದೇಶಕಿ ಅಕ್ಷತಾ ಸುಧೀರ್ ಪೂಜಾರಿ ಮಿಸ್ಸೆಸ್ ಬಿಲ್ಲವ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ನಗರದ ಖಾಸಗಿ‌ ಹೋಟೇಲಿನಲ್ಲಿ ದಿನಾಂಕ‌‌ 26.05.2019 ರಂದು ನಡೆದ ಸೌಂದರ್ಯ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಸುಮಾರು 36 ಸ್ಪರ್ಧಿಗಳಿದ್ದರು. ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ […]

Read More

ಜೀವ ಉಳಿಸೋಣ – ಪ್ರಥಮ ಚಿಕಿತ್ಸೆಯ ಬಗ್ಗೆ ತರಬೇತಿ

ಬೆಂಗಳೂರು :ಯುವವಾಹಿನಿ (ರಿ.) ಬೆಂಗಳೂರು ಘಟಕದ ಆಶ್ರಯದಲ್ಲಿ ಪ್ರಥಮ ಚಿಕಿತ್ಸೆಯ ಬಗ್ಗೆ ತರಬೇತಿ ಕಾರ್ಯಾಗಾರ ದಿನಾಂಕ 19-05-2019 ರಂದು ಬೆಂಗಳೂರು ಗಾಯತ್ರಿ ಮಿನಿ ಹಾಲ್ ಮಲ್ಲೇಶ್ವರಂ ನಲ್ಲಿ ಆರೋಗ್ಯವೇ ಭಾಗ್ಯ -2019 ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಸುಧೀರ್ ಎಸ್ ಪೂಜಾರಿ ವಹಿಸಿದ್ದರು ಹಾಗೂ ಕಾರ್ಯಕ್ರಮದ ಮುಂದಾಳತ್ವವನ್ನು ಆರೋಗ್ಯ ನಿರ್ದೇಶಕರಾದ ಮಿತೇಶ್ ಪೂಜಾರಿ ನಿರ್ವಹಿಸಿದರು.ಈ ಸಂದರ್ಬದಲ್ಲಿ ಘಟಕದ ಕಾರ್ಯದರ್ಶಿಯವರಾದ ರಾಘವೇಂದ್ರ ಪೂಜಾರಿ , ಉಪಾಧ್ಯಕ್ಷರಾದ ಕಿಶನ್ ಪೂಜಾರಿ, ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು. […]

Read More

ಶಾಶ್ವತ ವಿದ್ಯಾ ನಿಧಿ ಯೋಜನೆಗೆ ಚಾಲನೆ

ಬೆಂಗಳೂರು : ದಿನಾಂಕ 01-05-2019 ರಂದು ಗಾಯತ್ರಿ ಮಿನಿ ಹಾಲ್ ಮಲ್ಲೇಶ್ವರಂ ನಲ್ಲಿ ಘಟಕದ ಮಾಸಿಕ ಸಭೆ ಮತ್ತು ಶಾಶ್ವತ ವಿದ್ಯಾ ನಿಧಿ ಯೋಜನೆಗೆ ಚಾಲನೆ ಘಟಕದ ಅಧ್ಯಕ್ಷರಾದ ಸುಧೀರ್ ಎಸ್ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ದೀಪ ಬೆಳಗಿಸಿ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಇಂದಿನ ಮಕ್ಕಳೇ ಮುಂದಿನ ಭವಿಷ್ಯ , ಭವಿಷ್ಯದ ಮಕ್ಕಳ ಸುಸಜ್ಜಿತ ಶಿಕ್ಷಣ ಅಗತ್ಯ, ಶಿಕ್ಷಣ ಒದಗಿಸಲು ಉತ್ತಮ ಮಾರ್ಗದರ್ಶನ ಮತ್ತು ಸಹಾಯ ಅಗತ್ಯಎಂದು ಅರಿತಂತೆ ಅಧ್ಯಕ್ಷರಾದ ಸುಧೀರ್ ಎಸ್ ಪೂಜಾರಿ, ಉಪಾಧ್ಯಕ್ಷರಾದ ಕಿಶನ್ […]

Read More

ಯುವವಾಹಿನಿ ಸೇವಾ ಸಂಜೀವಿನಿ ಲೋಕಾರ್ಪಣೆ

ಬೆಂಗಳೂರು : ಯುವವಾಹಿನಿ (ರಿ.) ಬೆಂಗಳೂರು ಘಟಕದ ಆಶ್ರಯದಲ್ಲಿ ದಿನಾಂಕ 03-03-2019 ಆದಿತ್ಯವಾರ ಗಾಯತ್ರಿ ಮಿನಿ ಹಾಲ್ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಅತ್ಯಮೂಲ್ಯವಾದ ಯೋಜನೆ ಯುವವಾಹಿನಿ ಸೇವಾ ಸಂಜೀವಿನಿ ಯ ಲೋಕಾರ್ಪಣೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಸುಧೀರ್ ಎಸ್ ಪೂಜಾರಿ ಅವರು ವಹಿಸಿದ್ದರು. ಪ್ರೀತಿ ಎಂಬ ಎಣ್ಣೆಯನ್ನು ಸುರಿದು,ನಂಬಿಕೆ ಎನ್ನುವ ಬತ್ತಿಯನ್ನು ಇಟ್ಟು,ಆತ್ಮವಿಶ್ವಾಸ ಎನ್ನುವ ದೀಪದಡಿಯಲ್ಲಿ ಅಶಕ್ತರ ಪಾಲಿಗೆ ಬೆಳಕಾಗಾಗಬೇಕೆಂಬ ಅಭಿಲಾಷೆಯೊಂದಿಗೆ, ಯುವವಾಹಿನಿ ಸೇವಾ ಸಂಜೀವಿನಿ’ ಯುವವಾಹಿನಿ ಬೆಂಗಳೂರು ಘಟಕದ ಬಹುದಿನಗಳ ಕನಸಿನ ಯೋಜನೆಯನ್ನು ಬೆಂಗಳೂರು […]

Read More

ವಿಶುಕುಮಾರ್ ಪರಿಚಯ ಕಾರ್ಯಕ್ರಮ

ಬೆಂಗಳೂರು : ಯುವವಾಹಿನಿ ಕೇಂದ್ರ ಸಮಿತಿಯ ಹಾಗು ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿ ಇದರ ಆಶ್ರಯದಲ್ಲಿ ಸರಣಿ ಕಾರ್ಯಕ್ರಮವಾದ ವಿಶುಕುಮಾರ್ ಪರಿಚಯ ಕಾರ್ಯಕ್ರಮವನ್ನು ದಿನಾಂಕ 16-12-2018 ರಂದು ಸರಕಾರಿ ಕಿರಿಯ ಪ್ರಾರ್ಥಮಿಕ ಶಾಲೆ ಕಾನ್ಶಿರಾಮ್ ನಗರದಲ್ಲಿ ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಶಂಕರ್ ಸುವರ್ಣರವರು ವಿಶುಕುಮಾರ್ ಅವರ ಸಾಹಿತ್ಯ, ಕಾದಂಬರಿ, ಸಿನಿಮಾ ಕ್ಷೇತ್ರದ ಸಾಧನೆಯನ್ನು ಘಟಕದ ಸದಸ್ಯರಿಗೆ ಪರಿಚಯಿಸಿದರು. ನ್ಯಾಯವಾದಿ ನವನೀತ್ ಹಿಂಗಾಣಿ ವಿಶುಕುಮಾರ್ ಬದುಕು ಸಾಹಿತ್ಯದ ಬಗ್ಗೆ ಬೆಳಕು ಚೆಲ್ಲಿದರು. […]

Read More

ನಮ್ಮ ನಡೆ ಸ್ವಚ್ಚತೆಯ ಕಡೆ

ಬೆಂಗಳೂರು : ಯುವವಾಹಿನಿ (ರಿ.) ಬೆಂಗಳೂರು ಘಟಕದ ವತಿಯಿಂದ ದಿನಾಂಕ 16-12-2018 ರಂದು ಬೆಳಿಗ್ಗೆ 9.30 ಕೆ ಸರಕಾರಿ ಕಿರಿಯ ಪ್ರಾರ್ಥಮಿಕ ಶಾಲೆ ಕಾನ್ಶಿರಾಮ್ ನಗರದಲ್ಲಿ ಆಯೋಜಿಸಲಾಗಿತ್ತು. ಘಟಕದ ಅಧ್ಯಕ್ಷರಾದ ಸುಧೀರ್ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ, ಸಮಾಜಸೇವಾ ನಿರ್ದೇಶಕರಾಗಿರುವ ರಘು ಕೋಟ್ಯಾನ್ ಇವರ ಸಾರಥ್ಯದಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು, ಶಾಲಾ ಆವರಣದ ಸುತ್ತ ಮುತ್ತವಿದ್ದ ಪ್ಲಾಸ್ಟಿಕ್ ಹಾಗು ಇನ್ನಿತರ ಒಣ ಕಸ ಮತ್ತು ಹಸಿ ಕಸಗಳನ್ನು ವಿಂಗಡಿಸಲಾಯಿತು, ಸ್ವಚ್ಚತಾ ಕಾರ್ಯಕ್ರಮಗಳ ಜೊತೆ ಶಾಲೆಯ ಪರಿಸರಕ್ಕೆ ಅನುಕೂಲಕರವಾಗುವ ಹಾಗೆ […]

Read More

ಯುವವಾಹಿನಿ ಬೆಂಗಳೂರು ಹಾಗೂ ಮಂಗಳೂರು ಘಟಕಗಳಿಗೆ ಪ್ರಶಸ್ತಿ

ಬಜಪೆ‌ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ‌ ಆಶ್ರಯದಲ್ಲಿ ಯುವವಾಹಿನಿ (ರಿ.) ಬಜಪೆ‌ ಘಟಕದ ಆತಿಥ್ಯದಲ್ಲಿ ಯುವವಾಹಿನಿ ಅಂತರ್ ಘಟಕ‌ ರಸಗೀತಾ – 2018 ರ ಜಾನಪದ ಗೀತೆ ಸಮೂಹ ಗಾಯನ ಸ್ಪರ್ಧೆಯಲ್ಲಿ ಯುವವಾಹಿನಿ ಬೆಂಗಳೂರು ಘಟಕ ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲಿ ಯುವವಾಹಿನಿ ಮಂಗಳೂರು ಘಟಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಜಾನಪದ ಗೀತಾ ಗಾಯನ ಸ್ಪರ್ಧೆಯ ತೀರ್ಪುಗಾರರಾಗಿ ಉಮಾಕಾಂತ್ ನಾಯಕ್ ಮತ್ತು ಮಲ್ಲಿಕಾ ಶೆಟ್ಟಿ ಇವರು ಭಾಗವಹಿಸಿದ್ದರು. ಈ ವಿಭಾಗದಲ್ಲಿ ಒಟ್ಟು 11 ಘಟಕಗಳು ಸ್ಪರ್ಧೆಯನ್ನು ನೀಡಿದುವು. ಕನಕಾ […]

Read More

ಯುವವಾಹಿನಿ (ರಿ.) ಬೆಂಗಳೂರು ಘಟಕದಿಂದ ಮಕ್ಕಳ ದಿನಾಚರಣೆ

ಬೆಂಗಳೂರು : ಯುವವಾಹಿನಿ (ರಿ.) ಬೆಂಗಳೂರು ಘಟಕದ ಅಥಿತ್ಯದಲ್ಲಿ ತಾ: 02-12-2018 ರಂದು ಸ್ಪರ್ಶ ಟ್ರಸ್ಟ್ ನ ನಿಸರ್ಗ ಗ್ರಾಮದಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಟ್ರಸ್ಟಿನ ಮಕ್ಕಳಿಗೆ ವಿವಿಧ ರೀತಿಯ ಸಾಂಸ್ಕೃತಿಕ ಸ್ಪರ್ಧೆ ಮತ್ತು ಆಟೋಟ ಸ್ಪರ್ಧೆಗಳನ್ನು ನಡೆಸುವ ಮೂಲಕ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಸುಧೀರ್ ಪೂಜಾರಿಯವರು ವಹಿಸಿಕೊಂಡಿದ್ದರು, ಸ್ಪರ್ಶ ಟ್ರಸ್ಟ್ ನ ಅಡ್ಮಿನ್ ಉಸ್ತುವಾರಿ ಆಗಿರುವ ರಾಜು ಹಾಗೂ ಶಶಧರ ಕೋಟ್ಯಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಘಟಕದ ಸದಸ್ಯರಾದ ಕಿಶನ್ […]

Read More

ಮಂಗಳೂರು ದಸರಾ ಉತ್ಸವದಲ್ಲಿ ಯುವವಾಹಿನಿಯ ಸೇವೆ

ಮಂಗಳೂರು ದಸರಾ ಉತ್ಸವದಲ್ಲಿ ಯುವವಾಹಿನಿಯ ಸೇವೆ ಮಂಗಳೂರು : ಜಗದ್ವಿಖ್ಯಾತ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವರಾತ್ರಿಯ ವೈಭವದ ಮಂಗಳೂರು ದಸರಾದಲ್ಲಿ ಯುವವಾಹಿನಿಯ ಸದಸ್ಯರು ನಿರಂತರ ಸೇವಾ ಕಾರ್ಯದಲ್ಲಿ ತೊಡಗಿದರು. ದಿನಾಂಕ 10.10.2018 ರಿಂದ 19.10.2018 ರ ವರಗೆ ಯುವವಾಹಿನಿಯ ಮಂಗಳೂರು, ಸುರತ್ಕಲ್, ಬಂಟ್ವಾಳ, ಪುತ್ತೂರು, ಪಣಂಬೂರು, ಹಳೆಯಂಗಡಿ, ಹೆಜಮಾಡಿ, ಸಸಿಹಿತ್ಲು, ಪಡುಬಿದ್ರೆ, ಉಪ್ಪಿನಂಗಡಿ, ಮಂಗಳೂರು ಮಹಿಳಾ, ಮುಲ್ಕಿ, ಬೆಳುವಾಯಿ, ಅಡ್ವೆ, ಬಜಪೆ, ಬೆಳ್ತಂಗಡಿ, ಕಂಕನಾಡಿ, ಕೂಳೂರು, ಕೊಲ್ಯ, ಸುಳ್ಯ, ಮಾಣಿ, ವೇಣೂರು, ಮೂಡಬಿದ್ರೆ, ಕೆಂಜಾರು-ಕರಂಬಾರು, ಶಕ್ತಿನಗರ, […]

Read More

ಯುವವಾಹಿನಿ (ರಿ) ಬೆಂಗಳೂರು ಘಟಕದಿಂದ ಒಂದು ದಿನದ ಪ್ರವಾಸ

ಬೆಂಗಳೂರು : ಯುವವಾಹಿನಿ (ರಿ) ಬೆಂಗಳೂರು ಘಟಕದಿಂದ ದಿನಾಂಕ 07-10-1018 ರಂದು ಒಂದು ದಿನದ ಪ್ರವಾಸ ಅನ್ವಯ ಕೋಟಿಲಿಂಗೇಶ್ವರ ಮತ್ತು ಅಂತರಗಂಗೆಗೆ ಹಮ್ಮಿಕೊಳ್ಳಲಾಗಿತ್ತು, ಒಟ್ಟು 43 ಬೆಂಗಳೂರಿನ ಯುವವಾಹಿನಿ ಬಂಧುಗಳು ಈ ಪ್ರವಾಸದಲ್ಲಿ ಪಾಲ್ಗೊಂಡಿದ್ದರು. ಪ್ರವಾಸ ಬೆಳಿಗ್ಗೆ 7.15 ಗೆ ಹೊರಟು ಹೊಸಕೋಟೆಯಲ್ಲಿ ಬೆಳಗ್ಗಿನ ಉಪಾಹಾರ ಮುಗಿಸಿ 12 ಗಂಟೆಗೆ ಮದ್ಯಾಹ್ನ ಕೋಟಿಲಿಂಗೇಶ್ವರ ಗೆ ತಲುಪಿ 2 ಗಂಟೆ ಹೊತ್ತಿಗೆ ಊಟ ಮುಗಿಸಿ ಅಂತರಗಂಗೆ ಗೆ ಪಯಣ ನಡೆಸಿ 3.30 ಗಂಟೆಗೆ ತಲುಪಿದ್ದೇವೆ, ಅಲ್ಲಿಯ ದರ್ಶನ ಮುಗಿಸಿ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!