ಬೆಂಗಳೂರು: ಯುವವಾಹಿನಿ(ರಿ.) ಬೆಂಗಳೂರು ಘಟಕ ಆಯೋಜಿಸಿದಂತಹ ಆಟಿದ ಐತಾರ ಮತ್ತು ನನ್ನಲ್ಲಿರುವ ನಾಯಕ ಕಾರ್ಯಕ್ರಮವು 11-08-2024 ಆದಿತ್ಯವಾರ ಸಿಟಿ ಫ್ರೆಂಡ್ಸ್ ಸ್ಪೋರ್ಟ್ಸ್ & ಕಲ್ಚರಲ್ ಇನ್ಸ್ಟಿಟ್ಯೂಟ್, ರಾಜಾಜಿನಗರ ಕೈಗಾರಿಕಾ ಪ್ರದೇಶ ಬೆಂಗಳೂರು ಇಲ್ಲಿ ವಿಜೃಂಭಣೆಯಿಂದ ಜರುಗಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ವ್ಯಕ್ತಿತ್ವ ವಿಕಸನ ನಿರ್ದೇಶಕರು ಸೇರಿಕೊಂಡು ನಾಲ್ಕು ತಂಡಗಳಾದ ಆಟಿದ ಬೊಳ್ಳಿಲು, ಆಟಿದ ಬರ್ಸ, ಆಟಿದ ಪಂಚಮಿ, ಆಟಿ ಕಳೆಂಜ ಹಾಗೂ ತಂಡಗಳನ್ನು ತಾಂಬೂಲ ಹಾಗೂ ಶಾಲು ಹಾಕಿ, ಗುಲಾಬಿ ಹೂವನ್ನು ನೀಡುವ ಮೂಲಕ ಸಂಪ್ರದಾಯಿಕವಾಗಿ ಕಾರ್ಯಕ್ರಮಕ್ಕೆ ಸ್ವಾಗತಿಸಲಾಯಿತು.
ಅಧ್ಯಕ್ಷರು, ಕಾರ್ಯದರ್ಶಿ ವ್ಯಕ್ತಿತ್ವ ವಿಕಸನ ನಿರ್ದೇಶಕರು ಹಾಗೂ ನಾಲ್ಕು ತಂಡಗಳ ನಾಯಕರುಗಳ ಜೊತೆಗೆ ಕಾರ್ಯಕ್ರಮದ ಸಮಗ್ರ ನಿರ್ವಹಕರು ನರೇಶ್ ಕುಮಾರ್ ಸಸಿಹಿತ್ಲು ಸೇರಿಕೊಂಡು ದೀಪ ಪ್ರಜ್ವಲನೆ ಮಾಡಿ, ಚೆನ್ನೆ ಮನೆ ಆಟವನ್ನು ಆಡಿ ಬಹುಮಾನಗಳನ್ನು ಅನಾವರಣ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಆಟಿದ ತೆನಸ್, ಅಟಿಲ್ದ ಕಮ್ಮೆನ, ತುಳು ಸಬಿ ಸವಾಲ್, ತುಳು ಸಾಂಸ್ಕೃತಿಕ ಪ್ರಹಸನ, ತುಳುನಾಡ ತುತ್ತೈತ, ತುಳುವ ಅಜಕೆ, ತುಳುವ ಸುತ್ತುಲೆನಾ ನೆಂಪುದ ಪಂಥ ಎಂಬ ಸ್ಪರ್ಧೆಗಳನ್ನು ನರೇಶ್ ಕುಮಾರ್ ಸಸಿಹಿತ್ಲು ನಿರ್ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಆಟಿದ ತೆನಸ್ ಸ್ಪರ್ಧೆಯಲ್ಲಿ 4 ತಂಡದವರು ಸೇರಿಕೊಂಡು 150ಕ್ಕೂ ಹೆಚ್ಚು ತುಳುನಾಡಿನ ಪದಾರ್ಥಗಳನ್ನು ತಯಾರಿಸಿ ಪ್ರದರ್ಶಿಸಿದರು.
ಮಧ್ಯಾಹ್ನ ಮಂಗಳೂರು ಶೈಲಿಯ ಕೊರಿ ರೊಟ್ಟಿ ಊಟದ ನಂತರ ನನ್ನಲ್ಲಿರುವ ನಾಯಕ ಎಂಬ ನಾಯಕ್ವದ ತರಬೇತಿಯನ್ನು ರಾಷ್ಟ್ರೀಯ ತರಬೇತುದಾರರು ಸಂಪನ್ಮೂಲ ವ್ಯಕ್ತಿ ಅಭಿಜಿತ್ ಕರ್ಕೇರ ನಡೆಸಿಕೊಟ್ಟು ನಾಯಕತ್ವದ ಬಗ್ಗೆ ಆಕರ್ಷಣೀಯವಾಗಿ ಸದಸ್ಯರಿಗೆ ಅರಿವು ಮೂಡಿಸಿದರು.
ಸಮಾರೋಪ ಸಮಾರಂಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ
ಯುವವಾಹಿನಿ(ರಿ.) ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಶ್ರೀಧರ್ ಡಿ ಪೂಜಾರಿ ಸಭೆ ಉದ್ದೇಶಿಸಿ ಮಾತನಾಡಿ ಯುವವಾಹಿನಿ ಬೆಂಗಳೂರು ಘಟಕದಲ್ಲಿ ಇಂತಹ ಹೆಚ್ಚಿನ ಸಂಘಟನಾತ್ಮಕ ಕಾರ್ಯಕ್ರಮಗಳು ಆಯೋಜನೆ ಆಗಲಿ ಎಂದು ಆಶಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿರುವಂತಹ ಅಭಿಜಿತ್ ಕರ್ಕೇರ ಇವರನ್ನು ಸನ್ಮಾನಿಸಲಾಯಿತು ಹಾಗೂ ಎಲ್ಲರಲ್ಲೂ ನಾಯಕತ್ವದ ಬಗ್ಗೆ ಜಾಗೃತಿಯನ್ನು ಮೂಡಿಸಬೇಕೆಂದು ಹೇಳಿದರು.
ಈ ಸುಸಂದರ್ಭ ಘಟಕದ ನವ ವಧುವರರಿಗೆ ನೆನಪಿನ ಕಾಣಿಕೆ ನೀಡಲಾಯಿತು, ಹೊಸ ಸದಸ್ಯರನ್ನು ವೇದಿಕೆಯಲ್ಲಿ ಗುರುತಿಸಲಾಯಿತು.
ಮಾಜಿ ಅಧ್ಯಕ್ಷರು ಯುವವಾಹಿನಿ(ರಿ.) ಕೇಂದ್ರ ಸಮಿತಿ ಮಂಗಳೂರು ಹಾಗೂ ಪತ್ರಕರ್ತರು ಆಗಿರುವಂತಹ ನರೇಶ್ ಕುಮಾರ್ ಸಸಿಹಿತ್ಲು ಇವರನ್ನು ಸನ್ಮಾನಿಸಲಾಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಇವರು ಬೆಂಗಳೂರು ಯುವವಾಹಿನಿ ಸ್ಥಾಪನೆಗೊಂಡ ಕಥೆಯನ್ನು ಹೇಳಿ ಮುಂಬರುವ ದಿನಗಳಲ್ಲಿ ಇದೇ ರೀತಿ ಒಳ್ಳೆಯ ಕಾರ್ಯಕ್ರಮಗಳು ಮೂಡಿಬರಲಿ ಎಂದು ಹಾರೈಸಿದರು.
ವ್ಯಕ್ತಿತ್ವ ವಿಕಸನ ನಿರ್ದೇಶಕರು ಸಂತೋಷ್ ಪೂಜಾರಿ ಹಾಗೂ ಅನಿತಾ ಕಮಲಾಕ್ಷ ಇವರು ಮಾತನಾಡಿ 4 ತಂಡದ ಸದಸ್ಯರಿಗೆ ಹಾಗೂ ಸಹಕರಿಸಿದ ಎಲ್ಲರಿಗೂ ಅಭಿನಂದನೆಯನ್ನು ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಸಾದ್ ಕುಮಾರ್ ಸಭೆಯನ್ನು ಉದ್ದೇಶಿಸಿ ಮಾತನಾಡಿ ಘಟಕದ ಪ್ರತಿಯೊಬ್ಬ ಸದಸ್ಯರು ಸಕ್ರಿಯಗೊಳ್ಳಬೇಕು ಎನ್ನುವ ಆಶಯ ವ್ಯಕ್ತ ಪಡಿಸಿದರು.
ಅಂತಿಮವಾಗಿ ಸ್ಪರ್ಧೆಗಳಲ್ಲಿ ವಿಜೇತರಾಗಿರುವ ತಂಡಗಳಿಗೆ ಬಹುಮಾನ ವಿತರಣೆ ಮಾಡಲಾಯಿತು,
ಸಮಾರೋಪ ಸಮಾರಂಭವನ್ನು ಸಕೇಶ್ ಬುನ್ನನ್ ನಿರೂಪಿಸಿದರು.