Yuvavahini

NOV 27, 2019 3.34 AM IST

ಯುವವಾಹಿನಿ (ರಿ.) ಬೆಂಗಳೂರು ಘಟಕ

ಪದಗ್ರಹಣ ಸಮಾರಂಭ

ಯುವವಾಹಿನಿ (ರಿ.) ಬೆಂಗಳೂರು ಘಟಕ

ಪದಗ್ರಹಣ ಸಮಾರಂಭ

ನವಿಲಿನ ನಾಟ್ಯ ಚೆಂದ ಕೋಗಿಲೆಯ ದನಿ ಚೆಂದ, ನಮ್ಮ ಯುವವಾಹಿನಿಯ ಪದಗ್ರಹಣ ಕಾರ್ಯಕ್ರಮ ಇವೆಲ್ಲದಕಿಂತ ಚೆಂದ,ನಮ್ಮ ಮನೆಯಲ್ಲಿ ಯಾವುದಾದರು ಶುಭ ಸಮಾರಂಭಗಳುನಡೆವ ಸಂದರ್ಭದಲ್ಲಿ ಬಂಧು ಬಳಗ ಸ್ನೇಹಿತರು ಎಲ್ಲರು ಸೇರಿ ಎಷ್ಟೊಂದು ಉತ್ಸಹದಿಂದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತೆವೆಯೋ ಅದಕ್ಕಿಂದ ಒಂದು ಹೆಜ್ಜೆ ಮುಂದು ನಾವೆಲ್ಲರೂ ನಮ್ಮ ಮನೆ ನಮ್ಮ ಕುಟುಂಬ ಎನ್ನುವ ಭಾವನೆಯೊಂದಿಗೆ.
ಬೆಂಗಳೂರು ಯುವವಾಹಿನಿ ಘಟಕ ಸ್ಥಾಪನೆಯಾಗಿ ತನ್ನ ಒಂದು ವರ್ಷದ ಹಾದಿಯಲ್ಲಿ ಏನೆಲ್ಲ ಸಾಧಿಸಬಹುದು
ಎನ್ನುವುದನ್ನು ಸಾದಿಸಿ ತೋರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕಣ್ಣುಮುಚ್ಚಿ ಬಿಡುವುದರ ವೇಳೆಗಾಗಲೇ ಒಂದು ವರ್ಷ ಮುಕ್ತಯವಾಗಿ ಎರಡನೇ ವರ್ಷದ ಪದಗ್ರಹಣ ಕಾರ್ಯಕ್ರಮಕ್ಕೆ ತಯಾರಾಗುತಿತ್ತು ಹೊಸತೊಂದು ಯುವ ಪಡೆ ಹೊಸ ಹುರುಪಿನೊಂದಿಗೆ,
ನವೆಂಬರ್ 17ರಂದು ದಿನ ನಿಗದಿಯಾದಂತೆ ನಮ್ಮ ಯುವವಾಹಿನಿ ರೀ ಬೆಂಗಳೂರು ಘಟಕ ಸಮಯ 3:30ಕ್ಕೆ ಸರಿಯಾಗಿ ಕಾರ್ಯಕ್ರಮವನ್ನು ಆ, ವಿಗ್ನ ವಿನಾಶಕ ವಿನಾಯಕನನ್ನು ಸ್ಮರಿಸುತ್ತ ಪ್ರಾಂಭಿಸಿದೆವೆ, ಉತ್ತಮ ನಿರೂಪಕರ ಕನ್ನಡ ತುಳು ವಾಕ್ ಚಾತುರ್ಯದೊಂದಿಗೆ ಸಾಮಾಜಿಕ ಕಳಕಳಿಯ ನಾಟಕದ ಮೂಲಕ ಹಳ್ಳಿಯ ಸೊಗಡನ್ನು ಸವಿಯುತ್ತ ಜಾನಪದೀಯ ಸಾಂಪ್ರದಾಯಿಕ ಉಡುಗೆ ತೊಡುಗೆಗಳ ಜೊತೆಗೂಡಿ ಊರಿನ ನೆನಪನ್ನು ಒಮ್ಮೆ ಕಣ್ಣೆದುರು ಮೂಡಿಸಿದರು ನಮ್ಮ ಯುವವಾಹಿನಿ ಬೆಂಗಳೂರು ಘಟಕದ ಕಲಾವಿದರು,ಯಕ್ಷಗಾದ ನೃತ್ಯ, ಹಾಗೆ ಸಿನೆಮಾ ಹಾಡುಗಳಿಗೆ ಒಂದು ಸ್ಟೆಪ್ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಹೊಸ ಮೆರುಗನ್ನು ನೀಡಿದರು ನಮ್ಮ ತಂಡದ ನೃತ್ಯಪಟುಗಳು, ಹಾಸ್ಯಮಯ ನೃತ್ಯದ ಮೂಲಕ ನೆರೆದಿದ್ದ ಯುವವಾಹಿನಿ ಯ ಬಂಧು ಮಿತ್ರರನ್ನ ನಗೆಗಡಲಿನಲ್ಲಿ ತೇಲಾಡಿಸಿದರು ನಮ್ಮ ಯುವವಾಹಿನಿ ಯ ಯುವ ಪಡೆಯ ಬಹುಮಖ ಪ್ರತಿಭೆಗಳು, ಹಾಗೆ ಒಂದು ಹೊಸ ವ್ಯಕ್ತಿಯ ಪರಿಚಯದೊಂದಿಗೆ ನೋಡುವ ಕಣ್ಣ್ಗಳಿಗೆ ಮಾತ್ರವಲ್ಲದೆ ಕೇಳೋ ಕಿವಿಗಳಿಗೂ ಕೋಗಿಲೆಯಕಂಠದ ನಮ್ಮ ತಂಡದ ಗಾಯಕರಿಂದ ಸಂಗೀತ ರಸದೌತಣವಿತರು.
ಈ ಎಲ್ಲ ಕಾರ್ಯಕ್ರಮಗಳ ನಡುವೆ ಸಮಾಜಕ್ಕೆ ಒಂದೊಳ್ಳೆಯ ಸಂದೇಶವನ್ನು ರವಾನಿಸುತ್ತ ನಮ್ಮ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪೂರ್ಣ ವಿರಾಮವನ್ನು ಹಾಕುತ್ತ ಪದಗ್ರಹಣ ಕಾರ್ಯಕ್ರವನ್ನು ಪ್ರಾಂಭಿಸಿದೆವು,
ಅತಿಥಿಗಳನ್ನು ವೇದಿಕೆಕೆಗೆ ಪರಿಚಯಿಸುತ್ತ, ಅವರನ್ನು ಗೌವರವಪೂರ್ವಕವಾಗಿ ಬರಮಾಡಿಕೊಂಡು ಯುವವಾಹಿನಿ ಬೆಳೆದು ಬಂದಹಾದಿಯನ್ನು ತಿಳಿಸುವುದರ ಮೂಲಕ ಬೆಂಗಳೂರು ಘಟಕದ ಸ್ಥಾಪನೆ ಮತ್ತು ಸ್ಥಾಪನೆಗೊಂಡು ನಂತರದ ದಿನಗಳ ಹಾದಿಯನ್ನು ಪರಿಚಯಿಸಿದೆವು, ಕಡಿಮೆ ಸಮಯದಲ್ಲಿ ಸಿಕ್ಕ ಅವಕಾಶಗಳೆಲ್ಲವನು ಸದುಪಯೋಗಿಸಿಕೊಂಡು ಎರಡನೇ ವರ್ಷದ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ್ದ ಅತಿಥಿಗಳಿಂದ ಮೆಚ್ಚುಗೆಯ ಮಾತುಗಳನ್ನು ಕೇಳಿದೇವು.
ನಮ್ಮ ಪದಗ್ರಹಣ ಕಾರ್ಯಕ್ರಮ್ಮಕ್ಕೆ ಆಗಮಿಸಿದ್ದ ಅತಿಥಿಗಳನ್ನು ಸನ್ಮಾನಿಸುತ್ತ ಅವರ ಜೊತೆ ಜೊತೆಗೆ, ಯುವವಾಹಿನಿಯ ಸಾಧಕರನ್ನು ಸನ್ಮಾನಿಸಲಾಯಿತು, ಅತಿಥಿಗಳ ಮಾತು ಪ್ರತಿಯೊಬ್ಬ ವ್ಯಕ್ತಿಗೂ ಸ್ಫೂರ್ತಿದಾಯಕವಾಗಿತ್ತು, ಅವರ ಯಶಸ್ಸಿನ ದಾರಿಯು ಪ್ರತಿಯೊಬ್ಬರಿಗೂ ಮಾರ್ಗದರ್ಶನ ಸಾಧನೆಗೆ ಬೇಕಾಗಿರುವುದು ಗುರಿ ತಾಳ್ಮೆ ಛಲ ಎನ್ನುವುದು ಅವರ ಮಾತುಗಳಲ್ಲಿನ ಮುಖ್ಯ ವಿಷಯವಾಗಿತ್ತು, ಸಭಾಕಾರ್ಯಕ್ರಮದ ಜೊತೆ ಜೊತೆ ಪದಗ್ರಹಣ ಕಾರ್ಯಕ್ರಮವು ಕೂಡ ಬಹಳ ಸುಂದರವಾಗಿ ನೆರವೇರಿತು. ಯುವವಾಹಿನಿ ಬೆಂಗಳೂರು ಘಟಕದ ನೂತನ ಅಧ್ಯಕ್ಷರು ಅಧಿಕಾರ ಸ್ವೀಕರಿಸುತ್ತ, ಘಟಕ ನಡೆದು ಬಂದ ದಾರಿಯನ್ನುನೆನಪಿಸಿದರು , ಇನ್ನು ಮುಂದೆ ಸಾಗುವ ದಾರಿಯಬಗ್ಗೆ ಆಲೋಚಿಸುತ್ತಾ, ಘಟಕದ ಎಲ್ಲರ ಸಹಕಾರವನ್ನು ಬಯಸಿದರು ಹಾಗು ಪ್ರತಿಜ್ನಾವಿಧಿ ಸ್ವೀಕರಿಸಿದರು. ಘಟಕದ ಬಲಿಷ್ಠವಾದ ಯುವ ಪಡೆಯನ್ನು ನೋಡಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರು ಸ್ವಾಮಿ ವಿವೇಕಾನಂದರನ್ನು ನೆನಪಿಸುತ್ತ ಯುವವಾಹಿನಿ ಬೆಂಗಳೂರು ಘಟಕದ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು, ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲ ಘಟಕದ ಅಧ್ಯಕ್ಷರುಗಳು ಶುಭಹಾರೈಸಿದರು.
ಒಂದು ವರ್ಷದ ಸುದೀರ್ಘ ಪ್ರಯಾಣವನ್ನು ಒಂದು ದಿನ ನೆನಪಿಸುತ್ತ ಪದಗ್ರಹಣ ಕಾರ್ಯಕ್ರಮ ಮುಗಿದೇಹೋಯಿತು.
ಬೇಂದ್ರೆಯವರ ಒಂದು ಹಾಡು ನೆನಪಾಗುತ್ತದ
ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.
ಈ ಹಾಡಿನ ಹಾಗೆ
ಯುಗ ಯುಗಗಳೇ ಕಳೆದರು,
ಪದಗ್ರಹಣ ಕಾರ್ಯಕ್ರಮ ಮರಳಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.

ದೂರದ ಊರಿನಿಂದ ಹಾಗು ಒಂದು ದಿನವನ್ನು ಯುವವಾಹಿನಿಗಾಗಿ ಮೀಸಲಿಟ್ಟು ಪದಗ್ರಹಣ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣಕರ್ತರಾಗಿರುವ ಸರ್ವರಿಗೂ ಬೆಂಗಳೂರು ಯುವವಾಹಿನಿ ಘಟಕದ ಪರವಾಗಿ ಧನ್ಯವಾದಗಳು ಸಮರ್ಪಿಸುತಿದ್ದೇವೆ..
ನಿಮ್ಮ ಪ್ರೀತಿ ಸಹಕಾರ ಎಂದೆಂದಿಗೂ ನಮ್ಮೊಂದಿಗಿರಲಿ
ಯುವವಾಹಿನಿ (ರಿ.) ಬೆಂಗಳೂರು ಘಟಕ

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!