Yuvavahini

ಮೂಡಬಿದ್ರಿ

ಯುವವಾಹಿನಿಯಿಂದ ಅಶಕ್ತ ಕುಟುಂಬಕ್ಕೆ ಮನೆ ನಿರ್ಮಾಣದ ಶಿಲಾನ್ಯಾಸ

ಮೂಡುಬಿದಿರೆ : ಸೇವೆಯೇ ಧರ್ಮ ಎಂಬ ತತ್ವವನ್ನು ಕಾರ್ಯರೂಪಕ್ಕೆ ತಂದು, ಯುವವಾಹಿನಿ (ರಿ.) ಮೂಡುಬಿದಿರೆ ಘಟಕವು ಮಾನವೀಯತೆಯ ಮೌಲ್ಯವನ್ನು ಮತ್ತೊಮ್ಮೆ ಪ್ರತಿಪಾದಿಸಿದೆ. ಮೂಡುಮಾರ್ನಾಡು ಗ್ರಾಮದ ಸುಮಿತ್ರಾ–ವಿಶ್ವನಾಥ್ ದಂಪತಿಯ ಶೋಚನೀಯ ಸ್ಥಿತಿಯಲ್ಲಿದ್ದ ಮನೆಯನ್ನು ಮರುನಿರ್ಮಿಸಲು ಸುಮಾರು 6 ಲಕ್ಷ ರೂ. ವೆಚ್ಚದ ಯೋಜನೆ ರೂಪಿಸಿ, ಮನೆ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು. ಸುಮಾರು 600 ಚದರ ಅಡಿ ವಿಸ್ತೀರ್ಣದ ಮನೆ ನಿರ್ಮಾಣದ ಮೂಲಕ ಅಶಕ್ತ ಕುಟುಂಬಕ್ಕೆ ಭದ್ರ ಆಶ್ರಯ ಕಲ್ಪಿಸುವ ಸಂಕಲ್ಪವನ್ನು ಘಟಕ ಕೈಗೊಂಡಿದೆ. ಯುವವಾಹಿನಿಯ ಮಾಜಿ ಅಧ್ಯಕ್ಷರು […]

Read More

ವಿಶ್ವ ಮಹಿಳಾ ದಿನಾಚರಣೆ-ಯುವವಾಹಿನಿ (ರಿ)ಮೂಡುಬಿದಿರೆ ಘಟಕದ

ಯುವವಾಹಿನಿ (ರಿ)ಮೂಡುಬಿದಿರೆ ಘಟಕದ* ಆತಿಥ್ಯದಲ್ಲಿ *ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ(ರಿ) ಕಡಂದಲೆ-ಪಾಲಡ್ಕ* ಹಾಗೂ *ಮಹಿಳಾ ಘಟಕದ* ಸಹಯೋಗದೊಂದಿಗೆ *ವಿಶ್ವ ಮಹಿಳಾ ದಿನಾಚರಣೆ* ಅಂಗವಾಗಿ *ಮಾ. 9ರಂದು* *ಬಿಲ್ಲವ ಸಂಘ, ಕಡಂದಲೆ-ಪಾಲಡ್ಕದಲ್ಲಿ* ಸಾಧಕ ಮಹಿಳೆಯರಿಗೆ ಸನ್ಮಾನ ಮತ್ತು ಮಾಹಿತಿ ಕಾರ್ಯಕ್ರಮ *“ಸಮರ್ಪಣೆ-2025”* ಕಾರ್ಯಕ್ರಮವು ಕಡಂದಲೆ – ಪಾಲಡ್ಕ ಇಲ್ಲಿ ಜರುಗಿತು. ಅನ್ನಪೂರ್ಣದ *ಶ್ರೀಮತಿ ಪ್ರಶಾಂತಿ ಶೇಖರ ಅಂಚನ್* ರವರು ದೀಪಾ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಡಂದಲೆ-ಪಾಲಡ್ಕ ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ಘಟಕದ ಅಧ್ಯಕ್ಷೆ *ಶ್ರೀಮತಿ ಸೌಮ್ಯ […]

Read More

ಹೊಂಬೆಳಕು 2025 -ನಾಯಕತ್ವ ತರಬೇತಿ ಶಿಬಿರ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ )ಮೂಡುಬಿದಿರೆ ಘಟಕ ವ್ಯಕ್ತಿತ್ವ ವಿಕಸನ ಶಿಬಿರ ಹೊಂಬೆಳಕು- 2025,16/02/2025 ನೇ ಆದಿತ್ಯವಾರ ಸ್ಥಳ.. ಸಮಾಜ ಮಂದಿರ ಮೂಡುಬಿದಿರೆ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ, ಘಟಕದ ಅಧ್ಯಕ್ಷರು ಎಲ್ಲರನ್ನೂ ಸ್ವಾಗತಿಸಿದರು.ಯುವ ಉದ್ಯಮಿ ಪುತ್ತಿಗೆ ಭಾಸ್ಕರ್ ಕೋಟ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾದ ಇರುವೈಲ್ ಬಿಲ್ಲವ ಸಂಘದ ಅಧ್ಯಕ್ಷರಾದ *ಕುಮಾರ್ ಪೂಜಾರಿಯವರು ಮತ್ತು ಘಟಕದ ನಿಕಟಪೂರ್ವ ಅಧ್ಯಕ್ಷರಾದ ಶಂಕರ್ ಏ ಕೋಟ್ಯಾನ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು 🔶ವೇದಿಕೆಯಲ್ಲಿ ವ್ಯಕ್ತಿತ್ವ ವಿಕಸನ […]

Read More

ಸಾಮಾಜಿಕ ಜಾಲತಾಣ ಸಂಪಾದಕರ ಮಾತು

ಯುವವಾಹಿನಿಯ ಸಾಮಾಜಿಕ ಜಾಲತಾಣದ ಸಂಪಾದಕರಾಗಿ ಆಯ್ಕೆಯಾದಾಗ ಭಯ ಹಾಗೂ ಸವಾಲು ಇತ್ತು. ಸ್ಥಬ್ದವಾಗಿದ್ದ ವೆಬ್‌ಸೈಟ್‌ಗೆ ವೀಕ್ಷಕರನ್ನು ಗಳಿಸುವ ಸವಾಲು, ಓದುಗರಿಗೆ ಬೋರ್ ಆಗದ ವರದಿ ತಯಾರಿಸಿ ಅಪ್‌ಲೋಡ್ ಮಾಡುವ ಭಯ… ಆದರೆ ಈ ಸಮಯದಲ್ಲಿ ನನಗೆ ಧೈರ್ಯ ತುಂಬಿ, ಇಡೀ ವರ್ಷ ಸಹಕಾರ ನೀಡಿದ ವೆಬ್‌ಸೈಟ್ ಸ್ಥಾಪಕ ಸಂಪಾದಕ ರಾಜೇಶ್ ಸುವರ್ಣ ಬಂಟ್ವಾಳ, ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಇವರಿಗೆ ಮೊದಲಾಗಿ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ಘಟಕದ ವರದಿಗಳಿಗೆ ನಿರ್ದಿಷ್ಟ ರೂಪ ನೀಡಿ ಸಹಕರಿಸಿದ ಅರ್ಚನ.ಎಂ.ಬಂಗೇರ […]

Read More

ಯುವವಾಹಿನಿ (ರಿ) ಮೂಡುಬಿದಿರೆ ಘಟಕದ ಸಾಧನೆ ಮೆಚ್ಚುವಂತದ್ದು : ಪದ್ಮನಾಭ ಸಾಲಿಯನ್

ಮೂಡುಬಿದಿರೆ : ಯುವವಾಹಿನಿ (ರಿ) ಮೂಡುಬಿದಿರೆ ಘಟಕದ 2024-25 ನೇ ಸಾಲಿನ ತಂಡದ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಕಾರ್ಯಕ್ರಮವು ಮೂಡುಬಿದಿರೆಯ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ 29-12-2024 ರ ಅಪರಾಹ್ನ ಜರಗಿತು. ಮೂಡುಬಿದಿರೆ ಘಟಕವು ಆರಂಭವಾದಾಗಿನಿಂದ ಇದರ ಪ್ರತಿಯೊಂದು ಕಾರ್ಯಕ್ರಮವನ್ನು ನೋಡುವ ಅವಕಾಶ ನನಗೆ ಸಿಕ್ಕಿದೆ. ಇದುವರೆಗೆ ಘಟಕದ ಚುಕ್ಕಾಣಿಯನ್ನು ಎತ್ತಿ ಹಿಡಿದ ಆರು ಅಧ್ಯಕ್ಷರುಗಳು ಕೂಡ ಘಟಕದ ಬೆಳವಣಿಗೆಗೆ ಸಾಕ್ಷಿಯಾಗಿದ್ದಾರೆ ಎಂದು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ನಿವೃತ್ತ ಬ್ಯಾಂಕ್ ಅಧಿಕಾರಿ ಶ್ರೀ […]

Read More

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ : ಉಮಾನಾಥ ಕೋಟ್ಯಾನ್ ಯುವವಾಹಿನಿಯ ಸಮಾವೇಶದ ಪ್ರತಿ ಕ್ಷಣವನ್ನು ಆನಂದಿಸಿದ್ದೇನೆ, ಶಿಸ್ತು, ಅಚ್ಚುಕಟ್ಟುತನ, ಹೊಸತನ ಇತರರಿಗೆ ಮಾದರಿಯಾಗಿದೆ ಎಂದು ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮುಲ್ಕಿ – ಮೂಡುಬಿದಿರೆ ಕ್ಷೇತ್ರದ ಶಾಸಕ […]

Read More

ಲೋಕದ ಅಭ್ಯುದಯಕ್ಕಾಗಿ ಕೊಡುಗೆ ನೀಡುವ ದೀಪಗಳಾಗೋಣ

ಮೂಡುಬಿದಿರೆ: ಹಣತೆಯು ತಾನು ಬೆಳಕು ಚೆಲ್ಲುವ ಜೊತೆಗೆ ಇತರ ಹಣತೆಗಳನ್ನೂ ಬೆಳಗಿಸಿ ಬೆಳಕನ್ನು ಆಚರಿಸುವ ಪ್ರಕ್ರಿಯೆಯಲ್ಲಿ ಜೀವನ ಸಾರ್ಥಕ್ಯ ಸಾರುತ್ತದೆ‌. ನಾವೂ ಲೋಕದ ಅಭ್ಯುದಯಕ್ಕಾಗಿ ಕೊಡುಗೆ ನೀಡುವ ದೀಪಗಳಾಗಬೇಕಾಗಿದೆ. ಗಂಧದಂತೆ ಸವೆಸಿಕೊಂಡು ತ್ಯಾಗಿಯಾಗಿ ಪರಿಮಳಿಸಬೇಕಾಗಿದೆ ಎಂದು ಎಸ್.ಎನ್.ಎಂ ಪಾಲಿಟೆಕ್ನಿಕ್ ಉಪನ್ಯಾಸಕ ಡಾ. ಎಸ್.ಪಿ.ಗುರುದಾಸ್ ಅಭಿಪ್ರಾಯಪಟ್ಟರು. ಸಮಾಜ ಮಂದಿರ ಸಭಾ (ರಿ) ಮೂಡುಬಿದಿರೆ ಮತ್ತು ಯುವವಾಹಿನಿ (ರಿ) ಮೂಡುಬಿದಿರೆ ಘಟಕ ಇವರ ಜಂಟಿ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗಾಗಿ 3ನೇ ವರ್ಷದ ಬೆದ್ರ ಗೂಡುದೀಪ ಮತ್ತು ರಂಗೋಲಿ […]

Read More

ಯುವವಾಹಿನಿಯ ಸಿದ್ದತೆ ಮತ್ತು ಬದ್ದತೆ ಇತರರಿಗೆ ಮಾದರಿ : ನಾರಾಯಣ ಪಿ.ಎಂ

ಮೂಡುಬಿದಿರೆ: ದಿನೇ ದಿನೇ ಬಲಿಷ್ಠ ಸಂಘಟನೆಯಾಗಿ ಯಶಸ್ಸಿನತ್ತ ಮುನ್ನುಗ್ಗುತ್ತಿರುವ ಯುವವಾಹಿನಿಯ ಸದಸ್ಯರ ಸಿದ್ದತೆ ಮತ್ತು ಬದ್ದತೆ ಇತರರಿಗೆ ಮಾದರಿಯಾಗಿದೆ ಎಂದು ಉದ್ಯಮಿ ನಾರಾಯಣ ಪಿ.ಎಂ ತಿಳಿಸಿದರು. ಅವರು ಯುವವಾಹಿನಿ ಮೂಡುಬಿದಿರೆ ಘಟಕದ ಆಶ್ರಯದಲ್ಲಿ ದಿನಾಂಕ 15-09-2024 ರಂದು ಮೂಡುಬಿದಿರೆ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಲ್ಲಿ ನಡೆದ ಬಹುಮಾನ, ವಿದ್ಯಾರ್ಥಿ ವೇತನ ಹಾಗೂ ಸದಸ್ಯರ ಐಡಿ ಕಾರ್ಡ್ ವಿತರಣಾ ಸಮಾರಂಭವನ್ನು ದೀಪ ಬೆಳಗುವುದರ ಮೂಲಕ‌ ಉದ್ಘಾಟಿಸಿ ಮಾತನಾಡಿದರು.  ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷ ಶಂಕರ್ ಎ. ಕೋಟ್ಯಾನ್ […]

Read More

ಮದ್ಯಮುಕ್ತ ಮೆಹೆಂದಿ ಕಾರ್ಯಕ್ರಮದಲ್ಲಿ ಮೂಡುಬಿದಿರೆ ಯುವವಾಹಿನಿ ತಂಡ

ಮೂಡುಬಿದಿರೆ : ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಧ್ಯೇಯ ಉದ್ದೇಶವನ್ನು ಇಟ್ಟುಕೊಂಡ ಯುವವಾಹಿನಿ (ರಿ.) ಮೂಡುಬಿದರೆ ಘಟಕವು ಪ್ರಾರಂಭಿಸಿದ ಮದ್ಯ ಮುಕ್ತ ಮೆಹಂದಿ ಕಾರ್ಯಕ್ರಮದ ಅಡಿಯಲ್ಲಿ ಯುವವಾಹಿನಿಯ 34 ನೇ ಘಟಕ ಗ್ರಾಮಚಾವಡಿ ಕೊಣಾಜೆ ಇದರ ಅಧ್ಯಕ್ಷರಾದ ಹರೀಶ್ ಪೂಜಾರಿ ಇವರ ಧರ್ಮಪತ್ನಿಯ ತಮ್ಮನಾದ ಪಾಲಡ್ಕದ ಪೂಜಾರಿಬೆಟ್ಟು ನಿವಾಸಿ ಗ್ರಾಮಚಾವಡಿ ಘಟಕದ ಸದಸ್ಯ ಸುಕೇಶ್ ಪೂಜಾರಿ ಇವರು ತನ್ನ ಮದುವೆಯ ಮೆಹಂದಿ ಕಾರ್ಯಕ್ರಮವನ್ನು ತನ್ನ ಹುಟ್ಟೂರಾದ ಪಾಲಡ್ಕದ (ಮೂಡುಬಿದಿರೆ) ಮನೆಯಲ್ಲಿ ಬಹಳ ಸಾಂಪ್ರದಾಯಕವಾಗಿ ಆಚರಿಸಿದರು. ಈ ಸಂದರ್ಭದಲ್ಲಿ ಮಾಜಿ […]

Read More

ನಾರಾಯಣಗುರುಗಳು ಮನುಕುಲದ ಪರಿವರ್ತನಾ ಚಿಂತಕರು : ಡಾ.ಮೋಹನ್ ಆಳ್ವ

ಮೂಡುಬಿದಿರೆ : ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ಜಗತ್ತಿಗೆ ಸಾರಿದ ನಾರಾಯಣಗುರುಗಳು ಅಸ್ಪ್ರಶ್ಯತೆಯ ವಿರುದ್ಧ ಮೌನ ಕ್ರಾಂತಿಯ ಮೂಲಕ ಸಾಮಾಜಿಕ ಸುಧಾರಣೆಯನ್ನು ತನ್ನ ಜೀವಿತಾವಧಿಯಲ್ಲೇ ಸಾಧಿಸಿ ತೋರಿಸಿದ ಮನುಕುಲದ ಪರಿವರ್ತನಾ ಚಿಂತನೆಯ ವಿಶ್ವಗುರು ಬ್ರಹ್ಮಶ್ರೀ ನಾರಾಯಣಗುರುಗಳು ಎಂದು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಮ್.ಮೋಹನ್ ಆಳ್ವ ಅಭಿಪ್ರಾಯ ಪಟ್ಟರು. ಅವರು ದಿನಾಂಕ 28-08-2024ನೇ ಬುಧವಾರದಂದು ಬ್ರಹ್ಮಶ್ರೀ ನಾರಾಯಣಗುರುಗಳ 170ನೇ ಜನ್ಮ ದಿನಾಚರಣೆಯ ಪ್ರಯುಕ್ತ ಯುವವಾಹಿನಿ ಮೂಡುಬಿದಿರೆ ಘಟಕದ ಆಶ್ರಯದಲ್ಲಿ, ಮೂಡುಬಿದಿರೆ ಆಳ್ವಾಸ್ ಶಿಕ್ಷಣ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 2026ನೇ ಮಾರ್ಚ್ 01, ಭಾನುವಾರ
ಸ್ಥಳ : ಸಣ್ಣ ಕೈಗಾರಿಕಾ ಸಂಘದ ಸಭಾಂಗಣ, ಯೆಯ್ಯಾಡಿ ಮಂಗಳೂರು

ಯುವವಾಹಿನಿ ಪದಾಧಿಕಾರಿಗಳು ಹಾಗೂ ಅರ್ಹ ಸದಸ್ಯರಿಗೆ ತರಬೇತಿ ಕಾರ್ಯಾಗಾರ

ದಿನಾಂಕ : 2026, ಮಾರ್ಚ್ 14
ಸ್ಥಳ : ಮಂಗಳೂರು ಪುರಭವನ

ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಕೊಲ್ಯ ಘಟಕದ ಆತಿಥ್ಯದಲ್ಲಿ, “ಸಖೀ ಸಂವಾದ”ಕಾರ್ಯಾಗಾರ

ದಿನಾಂಕ : 2026ನೇ ಫೆಬ್ರವರಿ 28, ಶನಿವಾರ
ಸ್ಥಳ : ನಾರಾಯಣಗುರು ಆಡಿಟೋರಿಯಂ ಬನ್ನಂಜೆ

ಯುವವಾಹಿನಿ (ರಿ) ಉಡುಪಿ ಘಟಕದ ರಜತ ಸಡಗರದ ಸಲುವಾಗಿ ಉಡುಪಿ ಜಿಲ್ಲಾ ವ್ಯಾಪ್ತಿಯ ಬಿಲ್ಲವ ಬಂಧುಗಳ ಪ್ರತಿಭಾನ್ವೇಷಣೆ

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
error: Content is protected !!