
19-08-2026, 6:00 PM
ವೇಣೂರು, ಆಗಸ್ಟ್ 19:ಯುವವಾಹಿನಿ (ರಿ.) ವೇಣೂರು ಘಟಕದ ವತಿಯಿಂದ ಯುವವಾಹಿನಿಯ ಆಡಳಿತ ಕಚೇರಿಗೆ ದಾರಂದ ಬಾಗಿಲು ಸಮರ್ಪಿಸುವ ಕಾರ್ಯಕ್ರಮವು ನಾರಾವಿಯ ಸನ್ನಿಧಿ ಪ್ಯಾಲೇಸ್ನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಅವರು, ಯುವವಾಹಿನಿಯು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ನಿರಂತರವಾಗಿ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದ್ದು, ಸಂಘಟನೆಯ ಬಲವರ್ಧನೆ ಹಾಗೂ ಸಮಾಜದ ಅಭಿವೃದ್ಧಿಗೆ ಇಂತಹ ಸಮಾಜಮುಖಿ ಕೊಡುಗೆಗಳು ಮಹತ್ವದ್ದಾಗಿವೆ. ಆಡಳಿತ ಕಚೇರಿಗೆ ಕೊಡುಗೆ ನೀಡಿದ ದಾನಿಗಳ ಹೆಸರು ಶಾಶ್ವತವಾಗಿ ನೆನಪಿನಲ್ಲಿ […]
Read More

10-08-2026, 9:00 PM
ವೇಣೂರು, ಆಗಸ್ಟ್ 10: ಯುವವಾಹಿನಿ (ರಿ.) ವೇಣೂರು ಘಟಕದ ವತಿಯಿಂದ ‘ಆಸರೆ’ ಯೋಜನೆಯ ಸಹಾಯಹಸ್ತ ಕಾರ್ಯಕ್ರಮದ ಅಂಗವಾಗಿ ಗುಂಡೂರಿ ಗ್ರಾಮದ ಬಡ ಕುಟುಂಬದ ವಿದ್ಯಾರ್ಥಿ ನಿಕ್ಷಿತ್ ಗುಂಡೂರಿ ಅವರಿಗೆ ಶೈಕ್ಷಣಿಕ ನೆರವು ವಿತರಿಸಲಾಯಿತು. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ಯುವವಾಹಿನಿ ವೇಣೂರು ಘಟಕವು ಹಮ್ಮಿಕೊಂಡಿರುವ ‘ಆಸರೆ’ ಯೋಜನೆಯಡಿ ಈ ನೆರವು ನೀಡಲಾಯಿತು. ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ವೇಣೂರು ಘಟಕದ ಅಧ್ಯಕ್ಷ ಪ್ರಕಾಶ್ ಕೋಟ್ಯಾನ್ ನಾರಾವಿ, ಕಾರ್ಯದರ್ಶಿ ದಕ್ಷಾ ಎ. ಅಂಬಲ ಅಂಡಿಂಜೆ, ಕೋಶಾಧಿಕಾರಿ […]
Read More

10-08-2026, 6:00 PM
ವೇಣೂರು, ಆಗಸ್ಟ್ 10: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ನೂತನ ಆಡಳಿತ ಕಛೇರಿ ನಿರ್ಮಾಣಕ್ಕೆ ಸಹಕಾರ ನೀಡುವ ಉದ್ದೇಶದಿಂದ ಯುವವಾಹಿನಿ (ರಿ.) ವೇಣೂರು ಘಟಕದ ವತಿಯಿಂದ ಆಯೋಜಿಸಲಾಗುತ್ತಿರುವ ದ್ವಾರ ಹಾಗೂ ದಾರಂದ ಬಾಗಿಲು ಸಮರ್ಪಣಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ವೇಣೂರು ಬಿಲ್ಲವ ಸಂಘದಲ್ಲಿ ನಡೆಯಿತು. ಕೇಂದ್ರ ಸಮಿತಿಯ ನೂತನ ಕಛೇರಿಯ ಪೂರ್ವ ಪ್ರಧಾನ ದ್ವಾರ ಬಾಗಿಲನ್ನು ಶ್ರೀಮತಿ ವೀರಮ್ಮ ಸಂಜೀವ ಸಾಲ್ಯಾನ್ ಹಾಗೂ ಮಕ್ಕಳು, ಸನ್ನಿಧಿ ವುಡ್ ಇಂಡಸ್ಟ್ರೀಸ್ ಮತ್ತು ‘ಸನ್ನಿಧಿ’ ಪ್ಯಾಲೇಸ್, ಡೊಂಕುಬೆಟ್ಟು, […]
Read More

26-06-2026, 1:00 PM
ವೇಣೂರು ಜೂನ್ 26: ಯುವವಾಹಿನಿ (ರಿ.) ವೇಣೂರು ಘಟಕದ ವತಿಯಿಂದ “ಬೆಳಕು” ಯೋಜನೆಯಡಿ ಸಮಾಜಮುಖಿ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಂಡು, ಬೆಳ್ತಂಗಡಿ ತಾಲೂಕಿನ ಪೇರಿ–ಹೊಸಂಗಡಿ ಗ್ರಾಮದ ಶ್ರೀಮತಿ ಬೇಬಿ ಅವರ ಮನೆಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು. ಈ ಕಾರ್ಯಕ್ರಮವು ದಿನಾಂಕ 26-06-2026ರಂದು ಪೇರಿ–ಹೊಸಂಗಡಿ ಶ್ರೀ ಶಾರದಾಂಭ ಭಜನಾ ಮಂದಿರದಲ್ಲಿ ಯುವವಾಹಿನಿ ವೇಣೂರು ಘಟಕದ ಅಧ್ಯಕ್ಷರಾದ ಪ್ರಕಾಶ್ ಕೋಟ್ಯಾನ್ ನಾರಾವಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸದಸ್ಯತ್ವ ಅಭಿಯಾನ ಹಾಗೂ “ಆಸರೆ” ಯೋಜನೆ ಕುರಿತು ಚರ್ಚಿಸಿ, […]
Read More

05-03-2026, 9:00 PM
ನಾರಾವಿ: ಇಲ್ಲಿನ ಪ್ರಸಿದ್ಧ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ಜರಗುತ್ತಿರುವ ಬ್ರಹ್ಮಕಲಶ ಮಹೋತ್ಸವದ ಅಂಗವಾಗಿ, ಯುವವಾಹಿನಿ (ರಿ.) ವೇಣೂರು ಘಟಕದ ಸದಸ್ಯರು ದಿನಾಂಕ 05-03-2026, ಗುರುವಾರ ಸಂಜೆ ದೇವಾಲಯದಲ್ಲಿ ಸ್ವಯಂಸೇವಕರಾಗಿ ವಿಶೇಷ ಸೇವೆಯನ್ನು ಸಲ್ಲಿಸಿದರು. ಬ್ರಹ್ಮಕಲಶೋತ್ಸವದ ಧಾರ್ಮಿಕ ವಿಧಿವಿಧಾನಗಳಲ್ಲಿ ಭಕ್ತಿಪೂರ್ವಕವಾಗಿ ಪಾಲ್ಗೊಂಡ ಸದಸ್ಯರು, ಬಳಿಕ ದೇವಾಲಯದ ಅನ್ನಪ್ರಸಾದ ವಿತರಣಾ ವಿಭಾಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಸಂಜೆ 7 ಗಂಟೆಯಿಂದ ಆರಂಭಗೊಂಡ ಈ ಸೇವಾ ಕಾರ್ಯಕ್ರಮದಲ್ಲಿ ಭಕ್ತಾದಿಗಳಿಗೆ ಅನ್ನಪ್ರಸಾದ ಬಡಿಸುವ ಮೂಲಕ ಪದಾಧಿಕಾರಿಗಳು ಹಾಗೂ ಸದಸ್ಯರು ಶ್ರಮದಾನ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ […]
Read More

01-03-2026, 10:00 AM
ವೇಣೂರು: ನಾರಾವಿಯ ಪುಣ್ಯಕ್ಷೇತ್ರ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ಜರಗುತ್ತಿರುವ ಬ್ರಹ್ಮಕಲಶ ಮಹೋತ್ಸವದ ಅಂಗವಾಗಿ, ಯುವವಾಹಿನಿ (ರಿ.) ವೇಣೂರು ಘಟಕದ ವತಿಯಿಂದ ಅತ್ಯಂತ ಯಶಸ್ವಿಯಾಗಿ ಹೊರಕಾಣಿಕೆ ಸಮರ್ಪಿಸಲಾಯಿತು.ದಿನಾಂಕ 01-03-2026ರ ಭಾನುವಾರದಂದು ನಡೆದ ಈ ವೈಭವದ ಹೊರಕಾಣಿಕೆ ಮೆರವಣಿಗೆಯಲ್ಲಿ ವೇಣೂರು ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು. ಭಕ್ತಿ ಮತ್ತು ಶ್ರದ್ಧೆಯ ಸಂಕೇತವಾಗಿ ಸಮರ್ಪಿಸಲಾದ ಈ ಹೊರಕಾಣಿಕೆಯನ್ನು ದೇವಸ್ಥಾನದ ಸಮಿತಿಯವರು ಗೌರವಪೂರ್ವಕವಾಗಿ ಸ್ವೀಕರಿಸಿದರು. ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಯುವವಾಹಿನಿ ವೇಣೂರು ಘಟಕದ ಪದಾಧಿಕಾರಿಗಳು, ಮಾಜಿ […]
Read More

26-01-2026, 9:00 PM
ವೇಣೂರು : ಯುವವಾಹಿನಿ (ರಿ.) ವೇಣೂರು ಘಟಕದ ವತಿಯಿಂದ ದಿನಾಂಕ 26.01.2026ರ ಸೋಮವಾರ ಸೈಂಟ್ ಮೇರಿ ದ್ವೀಪಕ್ಕೆ ಒಂದು ದಿನದ ಪ್ರವಾಸ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.ಬೆಳಿಗ್ಗೆ 9 ಗಂಟೆಗೆ ವೇಣೂರುನಿಂದ ಹೊರಟ ಪ್ರವಾಸ ತಂಡವು ಬಜಗೋಳಿಯಲ್ಲಿ ಉಪಹಾರ ಸೇವಿಸಿ, ಬಸ್ಸಿನಲ್ಲಿ ವಿವಿಧ ಮನರಂಜನಾ ಕಾರ್ಯಕ್ರಮಗಳೊಂದಿಗೆ ಮಲ್ಪೆಗೆ ಪ್ರಯಾಣಿಸಿತು. ಬಳಿಕ ಬೋಟ್ ಮೂಲಕ ಸೈಂಟ್ ಮೇರಿ ದ್ವೀಪಕ್ಕೆ ಭೇಟಿ ನೀಡಿ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿ ಸಂಭ್ರಮಿಸಿದರು. ಮಧ್ಯಾಹ್ನದ ಊಟವನ್ನು ಮಲ್ಪೆ ಬೀಚ್ ಸಮೀಪದ ಹೋಟೆಲ್ನಲ್ಲಿ ಸೇವಿಸಿದ ಬಳಿಕ ಮಲ್ಪೆ […]
Read More

19-01-2026, 1:00 PM
ವೇಣೂರು : ಸಂಸ್ಥೆ ಎಂಬುದು ಕೇವಲ ಸಂಘಟನೆಯಷ್ಟೇ ಅಲ್ಲ, ಅದು ಸಮಾಜವನ್ನು ರೂಪಿಸುವ ಶಕ್ತಿ ಕೇಂದ್ರವಾಗಿರುತ್ತದೆ. ಯುವವಾಹಿನಿಯ ಪ್ರತಿಯೊಬ್ಬ ಸದಸ್ಯನಲ್ಲೂ ನಾಯಕತ್ವದ ಗುಣ ಅಡಗಿದೆ. ಸೇವೆ, ಶಿಸ್ತು ಮತ್ತು ಸಮರ್ಪಣೆಯ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಯುವವಾಹಿನಿ ಶಕ್ತಿಯಾಗಿ ಹೊರಹೊಮ್ಮಿದೆ. ಒಟ್ಟಾಗಿ ಚಿಂತಿಸಿ, ಒಟ್ಟಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಸಂಸ್ಥೆಯ ಗುರಿ ಸಾಕಾರವಾಗುತ್ತದೆ. ಇಂದಿನ ನಿಮ್ಮ ಸೇವೆಯೇ ನಾಳೆಯ ಶ್ರೇಷ್ಠ ಸಮಾಜದ ಅಡಿಗಲ್ಲು ಎಂದು ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ ಡಿ […]
Read More

18-01-2026, 10:00 AM
ವೇಣೂರು :ಯುವವಾಹಿನಿ (ರಿ) ವೇಣೂರು ಘಟಕದ ವತಿಯಿಂದ ದಿನಾಂಕ 18.01.2026ರ ಆದಿತ್ಯವಾರ ಕರಿಮಣೇಲು ಗ್ರಾಮದ ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನದಲ್ಲಿ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ವೇಣೂರು ಘಟಕದ ಅಧ್ಯಕ್ಷರಾದ ಪ್ರಕಾಶ್ ಕೋಟ್ಯಾನ್ ನಾರಾವಿ, ಬೆಳ್ತಂಗಡಿ ಘಟಕದ ಸ್ಥಾಪಕಾಧ್ಯಕ್ಷರಾದ ರಾಕೇಶ್ ಮೂಡುಕೋಡಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು, ಘಟಕದ ಪದಾಧಿಕಾರಿಗಳು, ನಿರ್ದೇಶಕರು ಹಾಗೂ ಸಂಘಟನಾ ಕಾರ್ಯದರ್ಶಿಗಳು ಉಪಸ್ಥಿತರಿದ್ದು ಶ್ರಮದಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಪರಿಸರ ಸ್ವಚ್ಛತೆ ಹಾಗೂ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸುವ ಉದ್ದೇಶದಿಂದ […]
Read More