Yuvavahini

ವೇಣೂರು

ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವ : ಸ್ವಯಂಸೇವಕ ಸೇವೆ

ನಾರಾವಿ: ಇಲ್ಲಿನ ಪ್ರಸಿದ್ಧ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ಜರಗುತ್ತಿರುವ ಬ್ರಹ್ಮಕಲಶ ಮಹೋತ್ಸವದ ಅಂಗವಾಗಿ, ಯುವವಾಹಿನಿ (ರಿ.) ವೇಣೂರು ಘಟಕದ ಸದಸ್ಯರು ದಿನಾಂಕ 05-03-2026, ಗುರುವಾರ ಸಂಜೆ ದೇವಾಲಯದಲ್ಲಿ ಸ್ವಯಂಸೇವಕರಾಗಿ ವಿಶೇಷ ಸೇವೆಯನ್ನು ಸಲ್ಲಿಸಿದರು. ಬ್ರಹ್ಮಕಲಶೋತ್ಸವದ ಧಾರ್ಮಿಕ ವಿಧಿವಿಧಾನಗಳಲ್ಲಿ ಭಕ್ತಿಪೂರ್ವಕವಾಗಿ ಪಾಲ್ಗೊಂಡ ಸದಸ್ಯರು, ಬಳಿಕ ದೇವಾಲಯದ ಅನ್ನಪ್ರಸಾದ ವಿತರಣಾ ವಿಭಾಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಸಂಜೆ 7 ಗಂಟೆಯಿಂದ ಆರಂಭಗೊಂಡ ಈ ಸೇವಾ ಕಾರ್ಯಕ್ರಮದಲ್ಲಿ ಭಕ್ತಾದಿಗಳಿಗೆ ಅನ್ನಪ್ರಸಾದ ಬಡಿಸುವ ಮೂಲಕ ಪದಾಧಿಕಾರಿಗಳು ಹಾಗೂ ಸದಸ್ಯರು ಶ್ರಮದಾನ ಮಾಡಿದರು.​ಈ ಸಂದರ್ಭದಲ್ಲಿ ಮಾತನಾಡಿದ […]

Read More

ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವ : ಹೊರಕಾಣಿಕೆ ಸಮರ್ಪಣೆ

ವೇಣೂರು: ನಾರಾವಿಯ ಪುಣ್ಯಕ್ಷೇತ್ರ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ಜರಗುತ್ತಿರುವ ಬ್ರಹ್ಮಕಲಶ ಮಹೋತ್ಸವದ ಅಂಗವಾಗಿ, ಯುವವಾಹಿನಿ (ರಿ.) ವೇಣೂರು ಘಟಕದ ವತಿಯಿಂದ ಅತ್ಯಂತ ಯಶಸ್ವಿಯಾಗಿ ಹೊರಕಾಣಿಕೆ ಸಮರ್ಪಿಸಲಾಯಿತು.​ದಿನಾಂಕ 01-03-2026ರ ಭಾನುವಾರದಂದು ನಡೆದ ಈ ವೈಭವದ ಹೊರಕಾಣಿಕೆ ಮೆರವಣಿಗೆಯಲ್ಲಿ ವೇಣೂರು ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು. ಭಕ್ತಿ ಮತ್ತು ಶ್ರದ್ಧೆಯ ಸಂಕೇತವಾಗಿ ಸಮರ್ಪಿಸಲಾದ ಈ ಹೊರಕಾಣಿಕೆಯನ್ನು ದೇವಸ್ಥಾನದ ಸಮಿತಿಯವರು ಗೌರವಪೂರ್ವಕವಾಗಿ ಸ್ವೀಕರಿಸಿದರು. ​ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಯುವವಾಹಿನಿ ವೇಣೂರು ಘಟಕದ ಪದಾಧಿಕಾರಿಗಳು, ಮಾಜಿ […]

Read More

ಸ್ನೇಹ, ಸಂಭ್ರಮ ಮತ್ತು ಸೌಹಾರ್ದದ ಪಯಣ

ವೇಣೂರು : ಯುವವಾಹಿನಿ (ರಿ.) ವೇಣೂರು ಘಟಕದ ವತಿಯಿಂದ ದಿನಾಂಕ 26.01.2026ರ ಸೋಮವಾರ ಸೈಂಟ್ ಮೇರಿ ದ್ವೀಪಕ್ಕೆ ಒಂದು ದಿನದ ಪ್ರವಾಸ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.ಬೆಳಿಗ್ಗೆ 9 ಗಂಟೆಗೆ ವೇಣೂರುನಿಂದ ಹೊರಟ ಪ್ರವಾಸ ತಂಡವು ಬಜಗೋಳಿಯಲ್ಲಿ ಉಪಹಾರ ಸೇವಿಸಿ, ಬಸ್ಸಿನಲ್ಲಿ ವಿವಿಧ ಮನರಂಜನಾ ಕಾರ್ಯಕ್ರಮಗಳೊಂದಿಗೆ ಮಲ್ಪೆಗೆ ಪ್ರಯಾಣಿಸಿತು. ಬಳಿಕ ಬೋಟ್ ಮೂಲಕ ಸೈಂಟ್ ಮೇರಿ ದ್ವೀಪಕ್ಕೆ ಭೇಟಿ ನೀಡಿ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿ ಸಂಭ್ರಮಿಸಿದರು. ಮಧ್ಯಾಹ್ನದ ಊಟವನ್ನು ಮಲ್ಪೆ ಬೀಚ್ ಸಮೀಪದ ಹೋಟೆಲ್‌ನಲ್ಲಿ ಸೇವಿಸಿದ ಬಳಿಕ ಮಲ್ಪೆ […]

Read More

ಯುವವಾಹಿನಿ ಸಕಾರಾತ್ಮಕ ಬದಲಾವಣೆಯ ಪ್ರೇರಕ ಶಕ್ತಿ : ಜಗದೀಶ್ಚಂದ್ರ ಡಿ ಕೆ

ವೇಣೂರು : ಸಂಸ್ಥೆ ಎಂಬುದು ಕೇವಲ ಸಂಘಟನೆಯಷ್ಟೇ ಅಲ್ಲ, ಅದು ಸಮಾಜವನ್ನು ರೂಪಿಸುವ ಶಕ್ತಿ ಕೇಂದ್ರವಾಗಿರುತ್ತದೆ. ಯುವವಾಹಿನಿಯ ಪ್ರತಿಯೊಬ್ಬ ಸದಸ್ಯನಲ್ಲೂ ನಾಯಕತ್ವದ ಗುಣ ಅಡಗಿದೆ. ಸೇವೆ, ಶಿಸ್ತು ಮತ್ತು ಸಮರ್ಪಣೆಯ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಯುವವಾಹಿನಿ ಶಕ್ತಿಯಾಗಿ ಹೊರಹೊಮ್ಮಿದೆ. ಒಟ್ಟಾಗಿ ಚಿಂತಿಸಿ, ಒಟ್ಟಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಸಂಸ್ಥೆಯ ಗುರಿ ಸಾಕಾರವಾಗುತ್ತದೆ. ಇಂದಿನ ನಿಮ್ಮ ಸೇವೆಯೇ ನಾಳೆಯ ಶ್ರೇಷ್ಠ ಸಮಾಜದ ಅಡಿಗಲ್ಲು ಎಂದು ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ ಡಿ […]

Read More

ಸ್ವಚ್ಛತಾ ಶ್ರಮದಾನ

ವೇಣೂರು :ಯುವವಾಹಿನಿ (ರಿ) ವೇಣೂರು ಘಟಕದ ವತಿಯಿಂದ ದಿನಾಂಕ 18.01.2026ರ ಆದಿತ್ಯವಾರ ಕರಿಮಣೇಲು ಗ್ರಾಮದ ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನದಲ್ಲಿ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ವೇಣೂರು ಘಟಕದ ಅಧ್ಯಕ್ಷರಾದ ಪ್ರಕಾಶ್ ಕೋಟ್ಯಾನ್ ನಾರಾವಿ, ಬೆಳ್ತಂಗಡಿ ಘಟಕದ ಸ್ಥಾಪಕಾಧ್ಯಕ್ಷರಾದ ರಾಕೇಶ್ ಮೂಡುಕೋಡಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು, ಘಟಕದ ಪದಾಧಿಕಾರಿಗಳು, ನಿರ್ದೇಶಕರು ಹಾಗೂ ಸಂಘಟನಾ ಕಾರ್ಯದರ್ಶಿಗಳು ಉಪಸ್ಥಿತರಿದ್ದು ಶ್ರಮದಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಪರಿಸರ ಸ್ವಚ್ಛತೆ ಹಾಗೂ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸುವ ಉದ್ದೇಶದಿಂದ […]

Read More

ಯುವವಾಹಿನಿ ವೇಣೂರು ಘಟಕದ ಅಧ್ಯಕ್ಷರಾಗಿ ಪ್ರಕಾಶ್ ಕೋಟ್ಯಾನ್ ನಾರಾವಿ ಆಯ್ಕೆ

ವೇಣೂರು : ಯುವವಾಹಿನಿ (ರಿ) ವೇಣೂರು ಘಟಕದ. 2025-26 ನೇ ಸಾಲಿನ ನೂತನ ಅಧ್ಯಕ್ಷರಾಗಿ ಪ್ರಕಾಶ್ ಕೋಟ್ಯಾನ್ ನಾರಾವಿ ಆಯ್ಕೆಯಾಗಿದ್ದಾರೆಅಧ್ಯಕ್ಷರು : ಪ್ರಕಾಶ್ ಕೋಟ್ಯಾನ್ ನಾರಾವಿಪ್ರಥಮ ಉಪಾಧ್ಯಕ್ಷರು : ಸತೀಶ್ ಉಜಿರ್ ದಡ.ದ್ವಿತೀಯ ಉಪಾಧ್ಯಕ್ಷರು : ಸತೀಶ್ ಎನ್ ಪಿ ಮೂಡುಕೋಡಿಕಾರ್ಯದರ್ಶಿ : ದಕ್ಷಾ ಎ ಅಂಡಿಂಜೆಜೊತೆ ಕಾರ್ಯದರ್ಶಿ : ಸುರೇಶ್ ಪೂಜಾರಿ ಅಂಡಿಂಜೆಕೋಶಾಧಿಕಾರಿ : ಸತೀಶ್ ಚಿಗುರು ಸಮಾಜ ಸೇವಾ ನಿರ್ದೇಶಕರು : ಪ್ರಕಾಶ್ ಕುತ್ಲೂರು, ದಿನೇಶ್ ತಾರಿಪಡ್ಪುವ್ಯಕ್ತಿತ್ವ ವಿಕಸನ ನಿರ್ದೇಶಕರು : ಸುಜಿತ್ ಹೊಸಂಗಡಿ, […]

Read More

ಯುವವಾಹಿನಿ ಯುವಜನತೆಯ ಅಶಾಕಿರಣ: ಪದ್ಮರಾಜ್ ಆರ್

ವೇಣೂರು: ಬಿಲ್ಲವ ಸಮಾಜದ ಭರವಸೆಯ ಸಂಘಟನೆಯಾಗಿ ಹೊರಹೊಮ್ಮಿದ ಯುವವಾಹಿನಿ, ಯುವಜನತೆಯ ಆಶಾಕಿರಣವಾಗಿ ಮೂಡಿಬರುತ್ತಿರುವುದು ಸಂತಸದ ವಿಚಾರ ಎಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ, ಗುರು ಬೆಳದಿಂಗಳು ಫೌಂಡೇಶನ್ ಅಧ್ಯಕ್ಷರಾದ ಪದ್ಮರಾಜ್ ಆರ್ ತಿಳಿಸಿದರು. ಅವರು ದಿನಾಂಕ 2024 ನೇ ಜನವರಿ 25 ರಂದು ಕೊಕ್ರಾಡಿ ಬ್ರಹ್ಮಶ್ರೀ ನಾರಾಯಣಗುರು ಸಬಾಭವನದಲ್ಕಿ ಜರಗಿದ ಯುವವಾಹಿನಿ(ರಿ.) ವೇಣೂರು ಘಟಕದ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯರಾದ ಕೆ ಹರೀಶ್ ಕುಮಾರ್ ಕಾರ್ಯಕ್ರಮವನ್ನು […]

Read More

ಕೃಷಿ ಸಂಸ್ಕೃತಿಯಲ್ಲಿ ಯುವಸಮುದಾಯ ತೊಡಗಿಸಿಕೊಳ್ಳಬೇಕು:- ಸಚಿವ ಸುನೀಲ್ ಕುಮಾರ್ ಅಭಿಮತ

ಬೆಳ್ತಂಗಡಿ :- “ಕೆಸರುಗದ್ದೆ ಕ್ರೀಡಾಕೂಟ ಇಂದು ಜನಾಕರ್ಷಣೆ ಪಡೆಯುತ್ತಿದೆ. ಯಾವುದೇ ಒಂದು ಸಂಘಟನೆ ಬಲಪಡಿಸಲು ಈ ರೀತಿಯ ಕ್ರೀಡಾಕೂಟ ಅಗತ್ಯ. ಇಂತಹ ಹತ್ತು ಹಲವಾರು ಕಾರ್ಯಕ್ರಮಗಳ ಮೂಲಕ ಬಿಲ್ಲವ ಸಮುದಾಯವನ್ನು ಒಟ್ಟುಗೂಡಿಸುವ ಕಾರ್ಯ ಯುವವಾಹಿನಿ ಸಂಘಟನೆಯಿಂದಾಗಲಿ” ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು. ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಯುವವಾಹಿನಿ ವೇಣೂರು ಘಟಕದ ಆತಿಥ್ಯದಲ್ಲಿ ವೇಣೂರು ಮೂಡುಕೋಡಿ ಗ್ರಾಮದ ನೆಲ್ಲಿಗುಡ್ಡೆ ನೋನೊಟ್ಟು ಗದ್ದೆಯಲ್ಲಿ ಭಾನುವಾರ ನಡೆದ ”ಕೆಸರ್ ಡೊಂಜಿ ದಿನ”ಕೆಸರುಗದ್ದೆ ಕ್ರೀಡಾಕೂಟದ […]

Read More

ಕೆಸರ್‌ಡೊಂಜಿ ದಿನ :- ಯುವವಾಹಿನಿ ಮಾಣಿ ಘಟಕಕ್ಕೆ ಸಮಗ್ರ ಪ್ರಶಸ್ತಿ

ವೇಣೂರು :- ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಯುವವಾಹಿನಿ ವೇಣೂರು ಘಟಕದ ಆತಿಥ್ಯದಲ್ಲಿ “ಕೆಸರ್ ಡೊಂಜಿ ದಿನ”ಕೆಸರುಗದ್ದೆ ಕ್ರೀಡಾಕೂಟದ ಸಮಗ್ರ ಪ್ರಶಸ್ತಿಯನ್ನು ಯುವವಾಹಿನಿ ಮಾಣಿ ಘಟಕವು ತನ್ನ ಮುಡಿಗೇರಿಸಿಕೊಂಡಿದೆ. ದಿನಾಂಕ 09 ಅಕ್ಟೋಬರ್ 2022ರಂದು ಜರಗಿದ ಕೆಸರ್ ಡೊಂಜಿ ಕ್ರೀಡಾಕೂಟದಲ್ಲಿ ಭಾಗವಹಿಸಿ ಅತೀ ಹೆಚ್ಚು ವಿಭಾಗದಲ್ಲಿ ಸ್ಪರ್ಧಿಸಿ ತೀವ್ರ ಪೈಪೋಟಿ ನೀಡಿ ಹೆಚ್ಚು ಬಹುಮಾನ ಪಡೆಯುವಲ್ಲಿ ಯಶಸ್ವಿಯಾಯಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀ ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ ಪ್ರಶಸ್ತಿ ವಿತರಿಸಿದರು. ಈ ಸಂದರ್ಭದಲ್ಲಿಕಾರ್ಯಕ್ರಮದಲ್ಲಿ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!