14-08-2011, 11:24 AM
ಮಂಗಳೂರು ತಾಲೂಕಿನ ತಾಳಿಪಾಡಿ ಗ್ರಾಮದ ದಿ| ಸಂಜೀವ ಜಿ. ಅಮೀನ್ ಮತ್ತು ಶ್ರೀಮತಿ ಜಾನಕಿಯವರ ಸುಪುತ್ರರಾದ ಡಾ| ಸದಾನಂದ ಕುಂದರ್ರವರು ಸುಮಾರು 34 ವರ್ಷಗಳಿಂದ ನೆಲ್ಯಾಡಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು, ಜಾದೂಗಾರರಾಗಿಯೂ ಖ್ಯಾತಿಯನ್ನು ಪಡೆದಿರುತ್ತಾರೆ. ಕಳೆದ 20 ವರ್ಷಗಳಿಂದ ಕರ್ನಾಟಕ, ಕೇರಳ, ಗೋವಾ ರಾಜ್ಯಗಳಲ್ಲಿ 900 ಕ್ಕೂ ಮಿಕ್ಕಿ ಜಾದೂ ಪ್ರದರ್ಶನಗಳನ್ನು ನೀಡಿ ಜನಮೆಚ್ಚುಗೆಯನ್ನು ಗಳಿಸಿರುತ್ತಾರೆ. ಆರೋಗ್ಯ ಮಾಹಿತಿಯಲ್ಲಿ ಜಾದೂ, ಜನಜಾಗೃತಿಗಾಗಿ ಜಾದೂ, ಬುದ್ಧಿಮಾಂದ್ಯರಿಗೆ ಜಾದೂ, ಗುಜರಾತ್ ಭೂಕಂಪ ಮತ್ತು ತ್ಸುನಾಮಿ ಸಂತ್ರಸ್ತರ ಪರಿಹಾರ ನಿಧಿಗಾಗಿ ಜಾದೂ ಹೀಗೆ ಹಲವು ಜನಹಿತ […]
Read More
08-08-2010, 11:14 AM
ಬೆಳ್ತಂಗಡಿ ತಾಲೂಕಿನ ಪ್ರತಿಷ್ಠಿತ ಮನೆತನಗಳಾದ ಕಾರಂದೂರು ಹಾಗೂ ಪಡುಪಾಲ್ಜಾಲು ಮನೆತನದ ಪಡುಪಾಲ್ಜಾಲು ಪದ್ಮ ಪೂಜಾರಿ ಮತ್ತು ಶ್ರೀಮತಿ ಲಕ್ಷ್ಮಿ ಪಿ. ಪೂಜಾರಿಯವರ ಸುಪುತ್ರರಾದ ಇವರು ಬಿ.ಎ. ಪದವೀಧರ. 7ನೇ ತರಗತಿಯಲ್ಲಿ ಶಾಲಾ ವಿದ್ಯಾರ್ಥಿ ನಾಯಕನಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. M.C.F. Ltd ಕಂಪೆನಿಯಲ್ಲಿ ಸಾರ್ವಜನಿಕ ಸಂಪರ್ಕ ವಿಭಾಗದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ, ಎರಡು ಬಾರಿ ಸಿಂಚನ ಜಾಹಿರಾತಿನ ಸಂಚಾಲಕರಾಗಿ ಯುವವಾಹಿನಿ ವಾರ್ಷಿಕ ಸಮಾವೇಶದ ಸಂಚಾಲಕರಾಗಿ, ಮಂಗಳೂರು ಶ್ರೀ ಗೋಕರ್ಣನಾಥ ಕೋ ಓಪರೇಟಿವ್ […]
Read More
02-08-2009, 11:10 AM
ಯುವವಾಹಿನಿ ಕೇಂದ್ರ ಸಮಿತಿಯ 2008-09 ನೇ ಸಾಲಿನ ಅಧ್ಯಕ್ಷರಾಗಿರುವ ಇವರು ಪ್ರಸಕ್ತ ಮೂಲ್ಕಿ ಬಿಲ್ಲವ ಸಂಘದ ಜೊತೆ ಕಾರ್ಯದರ್ಶಿಯಾಗಿ, ಬಪ್ಪನಾಡು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿದ್ದು ಮೂಲ್ಕಿ ದಿ ಯೂನಿಯನ್ ಕ್ಲಬ್ನ ಖಜಾಂಚಿಯಾಗಿ, ಮೂಲ್ಕಿ ಮೂರ್ತೆದಾರರ ಸೇವಾ ಸೊಸೈಟಿಯ ನಿರ್ದೇಶಕರಾಗಿರುತ್ತಾರೆ. ಹಾಗೂ ಮೂಲ್ಕಿ ಯುವವಾಹಿನಿ(ರಿ) ಘಟಕದ ಮಾಜಿ ಅಧ್ಯಕ್ಷರಾಗಿರುತ್ತಾರೆ. ಮೂಲ್ಕಿ ಚೆನ್ನಪ್ಪ ಸುವರ್ಣ ಮತ್ತು ಲಲಿತ ಸಿ. ಸುವರ್ಣರ ಸುಪುತ್ರನಾಗಿ 2-8-1960 ರಂದು ಜನಿಸಿದರು. ಪತ್ನಿ- ಚಿತ್ರಾ ಸಿ. ಸುವರ್ಣ, ಮಕ್ಕಳು – ಗಗನ್ ಸುವರ್ಣ, ದೀಕ್ಷಾ ಸುವರ್ಣ ಕಲಾ […]
Read More
02-08-2008, 11:06 AM
ಶ್ರೀಯುತ ಬಿ. ವಾಸು ಮತ್ತು ಶ್ರೀಮತಿ ಕುಸುಮ ದಂಪತಿಯವರ ಸುಪುತ್ರ ಶ್ರೀ ರವಿರಾಜ ಕುಮಾರ್ 10.04.1963 ರಂದು ಉಡುಪಿಯ ಉದ್ಯಾವರದಲ್ಲಿ ಜನಿಸಿದರು. ಬಿ.ಕಾಂ., ಎಲ್.ಎಲ್.ಬಿ ಪದವೀಧರರಾದ ಇವರು ಉಡುಪಿ ಹೃದಯ ಭಾಗದಲ್ಲಿರುವ ಮೈತ್ರಿ ಕಾಂಪ್ಲೆಕ್ಸ್ನಲ್ಲಿ ಸ್ವಂತ ಕಛೇರಿಯೊಂದಿಗೆ ವಕೀಲ ವೃತ್ತಿ ನಡೆಸುತ್ತಿದ್ದಾರೆ. ಉಡುಪಿ ಜಿಲ್ಲಾ ನ್ಯಾಯಾಲಯದ ವಕೀಲರಾದ ಶ್ರೀಯುತರು ಹಲವಾರು ಇನ್ಸೂರೆನ್ಸ್ ಕಂಪೆನಿಗಳಿಗೆ ಸಲಹಾ ವಕೀಲರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಮೂರು ವರ್ಷಗಳವರೆಗೆ ಸರಕಾರೀ ಹೆಣ್ಮಕ್ಕಳ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿಯೂ, 1995-2005 ರ ವರೆಗೆ ಸರಕಾರೀ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿಯೂ ದುಡಿದ ಅನುಭವ […]
Read More
05-08-2007, 10:59 AM
ಮಂಗಳೂರಿನ ಮರೋಳಿ ಕುಲಶೇಖರ ನಿವಾಸಿಯಾಗಿರುವ ನೇಮಿರಾಜ್ ಓರ್ವ ಉತ್ತಮ ಸಂಘಟಕರು, ಕಲಾಪೋಷಕರಾಗಿ ಬೆಳೆದವರು. ನಾಯಕತ್ವ ಗುಣವನ್ನು ತನ್ನೊಡಲಲ್ಲೇ ತುಂಬಿಕೊಂಡು ಬಂದಿರುವಂತಹ ಶ್ರೀಯುತರು ಯುವವಾಹಿನಿಯ ಸ್ಥಾಪಕ ಸದಸ್ಯರಾಗಿರುವುದರೊಂದಿಗೆ ಪ್ರತಿಯೊಂದು ಕಾರ್ಯಕ್ಷೇತ್ರದಲ್ಲೂ ತನ್ನನ್ನು ತೊಡಗಿಸಿಕೊಂಡವರು. ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿರುವ ಶ್ರೀಯುತರು 2004ರಲ್ಲಿ ಯುವವಾಹಿನಿ ಮಂಗಳೂರು ಘಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವರು. ಕೇಂದ್ರ ಸಮಿತಿಯ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ 2006-07ನೇ ಸಾಲಿನಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುತ್ತಾರೆ. ’ಜೈ ಭಾರತ್ಮಾತಾ ಎಜುಕೇಶನ್ ಸೊಸೈಟಿ, ಮಂಡ್ಯ’ ಇದರ ಅಧ್ಯಕ್ಷರಾಗಿ, ಆತ್ಮಶಕ್ತಿ ವಿವಿದೋದ್ಧೇಶ ಸಹಕಾರಿ ಸಂಘ […]
Read More
28-05-2006, 10:54 AM
2005-06 ಯುವವಾಹಿನಿಯ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡಬೇಕಾದ ವರ್ಷ. ಯುವವಾಹಿನಿ ಬಹುದಿನಗಳಿಂದ ಕಂಡ ಕನಸು ನನಸಾದ ಸಮಯ. ಬ್ರಹ್ಮಶ್ರೀ ನಾರಾಯಣ ಗುರುಗಳ 150 ನೇ ಜಯಂತಿಯ ವರ್ಷಾ ಚಾರಣೆಯ ಸಂಭ್ರಮದಲ್ಲಿ ಅವರ ಬದುಕನ್ನು ಸಾಕ್ಷ್ಯ ಚಿತ್ರದ ಮೂಲಕ ಸಮಾಜಕ್ಕರ್ಪಿಸಿದ ವರ್ಷ. ದಿನಾಂಕ 4-9-2005 ರಂದು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರನ ದಿವ್ಯ ಸನ್ನಿಧಿಯಲ್ಲಿ, ಅಧ್ಯಕ್ಷ ಕೊರಗಪ್ಪ ಸಭಾಭವನದಲ್ಲಿ ಕನ್ನಡ ಚಲನ ಚಿತ್ರರಂಗದ ದಿಗ್ಗಜ ಶ್ರೀ ಗಿರೀಶ್ ಕಾಸರವಳ್ಳಿಯವರ ಅಮೃತ ಹಸ್ತದಲ್ಲಿ, ಶ್ರೀ ಜಯ ಸಿ.ಸುವರ್ಣರವರ ಅಧ್ಯಕ್ಷತೆಯಲ್ಲಿ ಖ್ಯಾತ ನಿರ್ದೇಶಕರಾದ ಶ್ರೀ ಸದಾನಂದ […]
Read More
08-05-2005, 10:51 AM
ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದಲ್ಲಿ ದಿನಾಂಕ 2-9-1971 ರಲ್ಲಿ ಜನಿಸಿದ ಜಿತೇಂದ್ರ ಜೆ.ಸುವರ್ಣರವರು ಬಿ.ಕಾಂ. ಪದವೀದರರಾಗಿದ್ದು ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿರುವರು. ಯುವವಾಹಿನಿಯ 2004-05 ರ ಸಾಲಿನ ಅಧ್ಯಕ್ಷರಾಗಿ ಎಲ್ಲಾ ಘಟಕದೊಂದಿಗೆ ನಿಕಟ ಸಂಪರ್ಕವಿರಿಸಿ ಘಟಕಗಳು ಉತ್ತಮ ಕಾರ್ಯಕ್ರಮವನ್ನು ನಡೆಸಿಕೊಳ್ಳುವಲ್ಲಿ ಸಹಕರಿಸಿ ಸಂಸ್ಥೆಯನ್ನು ಮುನ್ನಡೆಸಿದವರು. ಉದ್ಯಮಿಯಾಗಿರುವ ಇವರು ಕೊಡುಗೈದಾನಿಯಾಗಿದ್ದು, ಹಲವಾರು ಸಂಘ ಸಂಸ್ಥೆಗಳಲ್ಲಿ ದುಡಿದಿರುವ ಅನುಭವ ಹೊಂದಿದವರಾಗಿರುತ್ತಾರೆ. ಬಂಟ್ವಾಳ ತಾಲೂಕು ಯುವಜನ ಒಕ್ಕೂಟದ ಮಾಜಿ ಉಪಾಧ್ಯಕ್ಷರಾಗಿದ್ದು, ಭಾರತೀಯ ರಾಷ್ಟ್ರೀಯ ಕಾಂಗ್ರೆಸಿನ ಗ್ರಾಮ ಮಟ್ಟ, ಮಂಡಳಿ ಮಟ್ಟ ಹಾಗೂ ಜಿಲ್ಲಾ ಮಟ್ಟದಲ್ಲಿ ವಿವಿಧ […]
Read More
30-05-2004, 10:47 AM
2003-04 ನೇ ಸಾಲಿನಲ್ಲಿ ಯುವವಾಹಿನಿಯನ್ನು ಮುನ್ನಡೆಸುವ ಜವಾಬ್ದಾರಿಯನ್ನು 4-5-2003 ರಂದು ಜರಗಿದ ಜಂಟಿ ಸಭೆಯಲ್ಲಿ ಶ್ರೀ ಲಕ್ಷ್ಮಣ ಸಾಲಿಯಾನ್ ವಹಿಸಿಕೊಂಡರು. ವಿದ್ಯೆ: 2003-04ರ ಸಾಲಿನಲ್ಲಿ ಘಟಕಗಳಿಗೆ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡುವ ಆಶಯದಲ್ಲಿ ಕೇಂದ್ರ ಸಮಿತಿಯು ಹೆಚ್ಚಿನ ಕಾರ್ಯಕ್ರಮಗಳನ್ನು ಈ ವರ್ಷ ಹಮ್ಮಿಕೊಳ್ಳಲಿಲ್ಲ. ತಾ. 14-12-2003 ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ 55 ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಸಹಾಯಧನವನ್ನು ವಿತರಿಸಲಾಯಿತು. ಉಪ್ಪಿನಂಗಡಿ ಘಟಕದ ವತಿಯಿಂದ ಸುಮಾರು 180 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ, ಸುಮಾರು 60 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ಸುರತ್ಕಲ್ ಘಟಕದ ವತಿಯಿಂದ ಸುಮಾರು 66 ವಿದ್ಯಾರ್ಥಿಗಳಿಗೆ […]
Read More
27-04-2003, 10:40 AM
ತುಕಾರಾಮ ಎನ್. ಇವರು ಯುವವಾಹಿನಿ(ರಿ) ಕೇಂದ್ರ ಸಮಿತಿಯ 2002-03 ನೇ ಸಾಲಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. 2-5-1962 ರಲ್ಲಿ ಜನಿಸಿದ ಇವರು 1997-98 ರಲ್ಲಿ ಯುವವಾಹಿನಿ ಮಂಗಳೂರು ಘಟಕದ ಅಧ್ಯಕ್ಷರಾಗಿ ಬಳಿಕ ’ಸಿಂಚನ ಪತ್ರಿಕೆಯ ಸಂಪಾದಕರಾಗಿ, 2001-02 ರಲ್ಲಿ ಕೇಂದ್ರ ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಶಾಲಿಯಾಗಿರುತ್ತಾರೆ. ಇವರು ಕೇಂದ್ರ ಸಮಿತಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ’ಕೋಟಿ-ಚೆನ್ನಯ್ಯ’ ರಾಷ್ಟ್ರೀಯ ಕ್ರೀಡಾಕೂಟವನ್ನು ಬಿಲ್ಲವ ಮಹಾಮಂಡಲದ ಸಹಯೋಗದೊಂದಿಗೆ ದಿನಾಂಕ 12-5-2002 ರಂದು ನಡೆಸಲಾಗಿದ್ದು, ಹಲವಾರು ಯುವ ಪ್ರತಿಭೆಗಳು ಇದರಿಂದ ಬೆಳಕಿಗೆ ಬರುವಂತೆ ಆಗಿರುತ್ತದೆ. ನಮ್ಮ […]
Read More
03-10-2002, 10:34 AM
2001-02 ನೇ ಸಾಲಿನಲ್ಲಿ ಯುವವಾಹಿನಿ(ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಯುವವಾಹಿನಿಯನ್ನು ಮುನ್ನಡೆಸಿದವರು ಟಿ. ಶಂಕರ ಸುವರ್ಣರವರು. ಯುವವಾಹಿನಿ ಬಂಟ್ವಾಳ ಘಟಕದ ಸದಸ್ಯರಾಗಿ 1988 ರಲ್ಲಿ ಯುವವಾಹಿನಿಗೆ ಪಾದಾರ್ಪಣೆ ಮಾಡಿದ ಇವರು ಯುವವಾಹಿನಿ ಬಂಟ್ವಾಳ ಘಟಕದಲ್ಲಿ ವಿವಿಧ ಹುದ್ದೆಯನ್ನು ಅಲಂಕರಿಸಿ, ಬಳಿಕ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಕೇಂದ್ರ ಸಮಿತಿಯಲ್ಲಿ ಸಂಘಟನಾ ಕಾರ್ಯದರ್ಶಿಯಾಗಿ, ನಿರ್ದೇಶಕರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದ ಇವರು 2001-02ನೇ ಸಾಲಿನಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ ಕೀರ್ತಿಗೆ ಪಾತ್ರರಾಗಿರುತ್ತಾರೆ. ಇವರ ಅಧ್ಯಕ್ಷೀಯ […]
Read More