10-09-2022, 5:26 PM
ನಾರಾಯಣಗುರುಗಳು ಸಾರಿದ ಸಾರ್ವಕಾಲಿಕ ಮೌಲ್ಯಗಳು ನಿಜ ಅರ್ಥದಲ್ಲಿ ಅನುಷ್ಟಾನಕ್ಕೆ ಬರಲೇಬೇಕಾದ ತುರ್ತು ಇಂದಿನ ಸಮಾಜಕ್ಕಿದೆ. ಓರ್ವ ಸಾಧಕನ ನೆಲೆ ಮತ್ತು ಬೆಲೆಗಳೆರಡೂ ಮಹತ್ವ ಪಡೆದುಕೊಳ್ಳುವುದು ಆತನಿದ್ದ ಕಾಲಕ್ಕಿಂತಲೂ ಆತನಿಲ್ಲದ ಕಾಲದಲ್ಲಿ ಅದು ಕಾರ್ಯೋನ್ಮುಖ ಗೊಳ್ಳುವುದರಲ್ಲಿ. ತಾನಿಲ್ಲದ ಕಾಲದಲ್ಲಿ ತನ್ನಿರುವನ್ನು ಉಳಿಸಬೇಕಾದರೆ ಅವನ ಜೀವನ ಕ್ರಮ ಮತ್ತು ಸಾಧನೆಗಳು ಕಾಲಾತೀತವಾಗಿರಬೇಕು. ಈ ನಿಟ್ಟಿನಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳು ವರ್ತಮಾನಕ್ಕೂ ಭವಿಷ್ಯದ ಎಲ್ಲಾ ತಲೆಮಾರುಗಳಿಗೂ ಪ್ರಸ್ತುತವೆನಿಸುವ ಸಾರ್ವಕಾಲಿಕ ದಾರ್ಶನಿಕರು. ಎಂದು ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ […]
Read More
10-09-2022, 5:18 PM
ಬೆಳ್ತಂಗಡಿ :- ವಿಶ್ವ ಮಾನವ ಸಂದೇಶ ಸಾರಿದ ಮಹಾನ್ ಚೇತನ, ಆಧ್ಯಾತ್ಮಿಕ ಕ್ರಾಂತಿಯನ್ನು ಹುಟ್ಟು ಹಾಕಿದ ಅಸಾಮಾನ್ಯ ಗುರು, ದೀನರ ಪಾಲಿಗೆ ದೇವರಂತೆ ಗೋಚರಿಸಿದ ಮಹಾನ್ ಸಂತ, ಬ್ರಹ್ಮಶ್ರೀ ನಾರಾಯಣ ಗುರುಗಳ 168 ನೇ ಜನ್ಮ ದಿನಾಚರಣೆ ಪಯುಕ್ತ ಯುವವಾಹಿನಿ ಬೆಳ್ತಂಗಡಿ ಘಟಕದಿಂದ ಗುರು ನಮನ ಕಾರ್ಯಕ್ರಮ ಗುರುವಾಯನಕೆರೆಯಲ್ಲಿ ನಡೆಯಿತು. ದೀಪ ಪ್ರಜ್ವಲನೆ ಮಾಡಿ, ಗುರವಿನ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಘಟಕದ ಅಧ್ಯಕ್ಷರಾದ ಶ್ರೀಮತಿ ಸುಜಾತ ಅಣ್ಣಿ ಪೂಜಾರಿ ಎಲ್ಲರನ್ನ ಸ್ವಾಗತಿಸಿದರು, ಕೇಂದ್ರ ಸಮಿತಿ […]
Read More
10-09-2022, 5:10 PM
ಕೂಳೂರು :- ಬ್ರಹ್ಮ ಶ್ರೀ ನಾರಾಯಣ ಗುರು ವರ್ಯರ 168 ನೇ ಜನುಮ ದಿನದ ಪ್ರಯುಕ್ತ ಯುವವಾಹಿನಿ (ರಿ.) ಕೂಳೂರು ಘಟಕದ ವತಿಯಿಂದ ಸ್ನೇಹ ಭಾರತಿ ವಿದ್ಯಾ ಸಂಸ್ಥೆ ನಮ್ಮ ಹಿರಿಯರ ಮನೆ ಜೋಕಟ್ಟೆ ಪೊರ್ಕೋಡಿಯಲ್ಲಿ ಸೇವಾ ಕಾರ್ಯಕ್ರಮವು ದಿನಾಂಕ 10 ಸೆಪ್ಟೆಂಬರ್ 2022 ರಂದು ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ದೀಕ್ಷಿತ್ ಸಿ ಎಸ್ ವಹಿಸಿದ್ದರು. ಗುರುಗಳ ಭಾವಚಿತ್ರಕ್ಕೆ ಹಿರಿಯರಾದ ಸುನಂದರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಘಟಕದ ಮಾಜಿ ಅಧ್ಯಕ್ಷರಾದ […]
Read More
10-09-2022, 5:00 PM
ಕೊಲ್ಯ :- ಪರಿಸರ ಸಂರಕ್ಷಣೆಯ ಕುರಿತ ನಾರಾಯಣ ಗುರುಗಳ ತತ್ವಾದರ್ಶಗಳಿಗೆ ಪೂರಕವಾಗಿ ಗಿಡಗಳನ್ನು ನೆಟ್ಟು ನೀರೆರೆದು ಪೋಷಿಸುವ ದೃಢ ಸಂಕಲ್ಪದೊಂದಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳ 168 ನೇ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಯುವವಾಹಿನಿ ಕೊಲ್ಯ ಘಟಕದ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಕು.ಭಾರತಿ ಸನಿಲ್ ರವರ ಮನಸ್ಸಿಗೆ ಮೂಡಿಬಂದ ಪರಿಕಲ್ಪನೆಯೆ ಪರಿಸರ ಸಂರಕ್ಷಣೆಯ ಕುರಿತು ಜನಜಾಗೃತಿ ಮೂಡಿಸುವುದು. ಈ ಪರಿಕಲ್ಪನೆ ಸಾಕಾರಗೊಳ್ಳಲು ಸೂಕ್ತವಾದ ವೇದಿಕೆ ಒದಗಿ ಬಂದದ್ದು ದಿನಾಂಕ 10 ಸೆಪ್ಟೆಂಬರ್ 2022 ರಂದು […]
Read More
10-09-2022, 4:48 PM
ಕಡಬ :- ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜನ್ಮದಿನಾಚರಣೆ ಯನ್ನು ಸರಸ್ವತಿ ವಿದ್ಯಾಲಯ ಶಾಲೆ ಕಡಬ ಇಲ್ಲಿ ಆಚರಿಸಲಾಯಿತು ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಪ್ರವೀಣ್ ಓಂಕಲ್, ಶಿವಪ್ರಸಾದ್ ನೂಚಿಲ ಸಂಘಟನಾ ಕಾರ್ಯದರ್ಶಿ ಕೇಂದ್ರ ಸಮಿತಿ ಮಂಗಳೂರು, ಕೃಷ್ಣಪ್ಪ ಅಮೈ ಕಾರ್ಯದರ್ಶಿ, ಮತ್ತು ಶಾಲೆಯ ಮುಖ್ಯಗುರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಗುರುಗಳ ತತ್ವವನ್ನು ಘಟಕದ ಅಧ್ಯಕ್ಷರು, ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಮಕ್ಕಳಿಗೆ ತಿಳಿಸಿಕೊಟ್ಟರು, ಶಾಲೆಯಲ್ಲಿ ಸೇರಿದ ಎಲ್ಲ ಮಕ್ಕಳಿಗೆ ನಮ್ಮ ಘಟಕದ ವತಿಯಿಂದ ಗುರುಗಳ […]
Read More
10-09-2022, 4:41 PM
ಕೊಲ್ಯ :- ಬ್ರಹ್ಮಶ್ರೀ ನಾರಾಯಣಗುರುಗಳ 168 ನೇ ಜನ್ಮದಿನಾಚರಣೆಯ ಯುವವಾಹಿನಿ (ರಿ.) ಕೊಲ್ಯ ಘಟಕದ ವತಿಯಿಂದ ಅಭಯ ಆಶ್ರಯ ಅಸೈಗೋಳಿಯಲ್ಲಿ, ನಾರಾಯಣಗುರುಗಳ ತತ್ವ ಮತ್ತು ಸಂದೇಶಗಳಲ್ಲಿ ಒಂದಾಗಿರುವ ಪರಿಸರವನ್ನು ರಕ್ಷಿಸಿ ಅದು ನಿಮ್ಮನ್ನು ರಕ್ಷಿಸುತದೆ ಎನ್ನುವುದಕ್ಕೆ ಪೂರಕವಾಗಿ ಪ್ರಕೃತಿಯ ಸಮತೋಲನವನ್ನು ಕಾಯ್ದುಕೊಳ್ಳುವ ಕೆಲವೊಂದು ಗಿಡಗಳನ್ನು ನೆಡಲಾಯಿತು. ಅಭಯ ಆಶ್ರಯದ ಪದಾಧಿಕಾರಿಗಳು, ಯುವವಾಹಿನಿ (ರಿ.) ಕೊಲ್ಯ ಘಟಕದ ಅಧ್ಯಕ್ಷರಾದ ಶ್ರೀ ಸುಂದರ್ ಸುವರ್ಣ , ಪದಾಧಿಕಾರಿಗಳು ಹಾಗೂ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು. ಬ್ರಹ್ಮಶ್ರೀ ನಾರಾಯಣಗುರು ತತ್ವ ಮತ್ತು […]
Read More
10-09-2022, 4:33 PM
ಕಡಬ:- ಯುವವಾಹಿನಿ (ರಿ.) ಕಡಬ ಘಟಕದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜನ್ಮದಿನಾಚರಣೆಯ ಪ್ರಯುಕ್ತ ಕಡಬ ತಾಲೂಕಿನ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಗೊಳಿಯಡ್ಕ ಇಲ್ಲಿಗೆ ಭೇಟಿ ನೀಡಿ ಪೂಜೆ ಸಲ್ಲಿಸಲಾಯಿತು. ನಂತರ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಕಟ್ಟತಡ್ಕ ಇಲ್ಲಿಗೆ ಭೇಟಿ ನೀಡಿ ಪೂಜೆ ಸಲ್ಲಿಸಲಾಯಿತು. ಗುರು ಮಂದಿರದ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿ ಕೊಂಡಿದ್ದ ಶಶಿಧರ್ ಮನೆಗೆ ಭೇಟಿ ನೀಡಿ ಆರೋಗ್ಯದ ಬಗ್ಗೆ ವಿಚಾರಿಸಿ ಆಶೀರ್ವಾದ ಪಡೆಯಲಾಯಿತು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಪ್ರವೀಣ್ […]
Read More
10-09-2022, 4:08 PM
ಕುಪ್ಪೆಪದವು:- ಯುವವಾಹಿನಿ (ರಿ.) ಕುಪ್ಪೆಪದವು ಘಟಕದ ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜನ್ಮದಿನಾಚರಣೆ ಅಂಗವಾಗಿ ಗುರು ನಮನ ಸಲ್ಲಿಸಲಾಯಿತು. ನಾಗಂದಡಿ ಸಭಾಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷ ರಾದ ಜಗದೀಶ್ ದುರ್ಗಾಕೊಡಿ, ಸ್ಥಾಪಕ ಅಧ್ಯಕ್ಷ ರಾದ ಅರುಣ್ ಕುಮಾರ್ ಅಂಬೇಲೋಟ್ಟು , ಮಾಜಿ ಅಧ್ಯಕ್ಷರಾದ ಅಜಯ್ ಅಮೀನ್ ಹಾಗೂ ಪದಾಧಿಕಾರಿಗಳು ಮತ್ತು ಘಟಕದ ಸದಸ್ಯರುಗಳು ಉಪಸ್ಥಿತರಿದ್ದರು.
Read More
10-09-2022, 2:36 PM
ಕೊಲ್ಯ :- ಅಭಯ ಆಶ್ರಯ ಅಸೈಗೋಳಿ ಇದರ ಓಂ ಧ್ಯಾನ ದೇಗುಲದ ದಿವ್ಯ ಸಾನಿಧ್ಯದಲ್ಲಿ ಸಾಕಾರಗೊಂಡ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ 168 ನೆಯ ಜನ್ಮ ದಿನಾಚರಣೆಯು ವಿಶ್ವ ಬಿಲ್ಲವರ ಸೇವಾ ಚಾವಡಿ ಮತ್ತು ಯುವವಾಹಿನಿ (ರಿ.) ಕೊಲ್ಯ ಘಟಕದ ವತಿಯಿಂದ ತಾರೀಕು 10 ಸೆಪ್ಟೆಂಬರ್ 2022ನೇ ಶನಿವಾರ ಸಂಜೆ ಅಸೈಗೊಳಿ ಅಭಯಾಶ್ರಯದ ಪ್ರಶಾಂತವಾದ ತಾಣದಲ್ಲಿ ಇತ್ತೀಚೆಗೆ ನೂತನವಾಗಿ ಲೋಕಾರ್ಪಣೆಗೊಂಡ ಓಂ ಧ್ಯಾನ ದೇಗುಲದ ದಿವ್ಯ ಸಾನಿಧ್ಯದಲ್ಲಿ ಆಶ್ರಮದ ಹಿರಿಯ ಸದಸ್ಯರ ಸಮಕ್ಷಮದಲ್ಲಿ ಬ್ರಹ್ಮ ಶ್ರೀ ನಾರಾಯಣ […]
Read More
10-09-2022, 2:14 PM
ಪುತ್ತೂರು :- ಬ್ರಹ್ಮಶ್ರೀ ನಾರಾಯಣಗುರುಗಳ 168ನೇ ಜನ್ಮ ದಿನಾಚರಣೆಯ, ಸಾಧಕರಿಗೆ ಸನ್ಮಾನ , ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವು ಪುತ್ತೂರು ಬಿಲ್ಲವ ಸಂಘದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಮಧ್ಯಾಹ್ನದ ಅನ್ನ ಪ್ರಸಾದ ಭೋಜನದ ವ್ಯವಸ್ಥೆಯನ್ನು ಯುವವಾಹಿನಿ(ರಿ.)ಪುತ್ತೂರು ಘಟಕಕ್ಕೆ ನೀಡಿದ್ದು ನೀಡಿದ ಜವಾಬ್ದಾರಿಯನ್ನು ನಿಭಾಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ. ಮಧ್ಯಾಹ್ನದ ನಂತರ ಯುವವಾಹಿನಿ (ರಿ.) ಪುತ್ತೂರು ಘಟಕದ ವತಿಯಿಂದ ವಿಠಲ್ ನಾಯಕ್ ಕಲ್ಲಡ್ಕ ಇವರ ತಂಡದಿಂದ ಮನರಂಜನಾ ಕಾರ್ಯಕ್ರಮ ಗೀತ […]
Read More