13-09-2025 ರಂದು ಶ್ರೀ ನಾರಾಯಣ ಗುರು ಜಯಂತಿ ಪ್ರಯುಕ್ತ ಕಾರ್ಯಕ್ರಮ
ಶನಿವಾರ ಬೆಳಿಗ್ಗೆ ಯುವವಾಹಿನಿ ಸಭಾಂಗಣದಲ್ಲಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.ಅದ್ಯಕ್ಷರಾದ ನೈನಾ ವಿಶ್ವನಾಥ್ ಎಲ್ಲರನ್ನು ಸ್ವಾಗತಿಸಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಮೊದಲಿಗೆ ಮಂಗಳೂರು ಮಹಿಳಾ ಘಟಕದ ಸದಸ್ಯರು ಭಜನೆಯನ್ನು ಪ್ರಾರಂಭ ಮಾಡಿದರು, ಆಮೇಲೆ ಮಂಗಳೂರು ಘಟಕದ ಸದಸ್ಯರು,ಕ್ರಷ್ಣ ಭಜನೆ ತಂಡ, ಹಾಗೂ ಬಿಲ್ಲವ ಮಹಿಳಾ ಸಂಘದ ಸದಸ್ಯರು ಮದ್ಯಾಹ್ನದವರೆಗೆ ಭಜನೆ ಮಾಡಿದರು,ನಂತರ ಮಹಾ ಪೂಜೆ ನಡೆಯಿತು.ಪ್ರಸಾಧ ವಿತರಣೆ ಆಗಿ ಅನ್ನ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು.ಗುರುಪೂಜೆ ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಲೋಕೇಶ್ ಕೊಟ್ಯಾನ್, ಹಾಗೂ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರುಗಳು, ಬಿಲ್ಲವ ಸಂಘದ ಅಧ್ಯಕ್ಷರು, ಹಾಗೂ ಮಂಗಳೂರು ಮಹಿಳಾ ಘಟಕದ ಸದಸ್ಯರು, ಮಾಜಿ ಅಧ್ಯಕ್ಷರು ಪದಾಧಿಕಾರಿಗಳು ಎಲ್ಲರೂ ಉಪಸ್ಥಿತರಿದ್ದರು.


