28-04-2018, 7:34 AM
ಮೂಡಬಿದ್ರೆ : ಬಹುಮುಖ ನೆಲೆಗಳಿಂದ ಶಿಕ್ಷಣವು ದೊರೆತಾಗ ಮಾತ್ರ ಬದುಕಿನ ನಡೆ ಜ್ಞಾನದ ಹಾದಿಯಾಗುತ್ತದೆ. ಪಠ್ಯ ಕೇಂದ್ರಿತ ಶಿಕ್ಷಣವು ಅಂಕಗಳನ್ನೇ ಮಾನದಂಡವಾಗಿಸಿದೆ. ಸ್ಪರ್ಧಾತ್ಮಕವಾದ ಆಧುನಿಕ ಶಿಕ್ಷಣ ಕ್ರಮವು ವಿದ್ಯಾರ್ಥಿಗಳನ್ನು ಬದುಕಿನ ಜೀವನಾನುಭವಗಳಿಂದ ವಂಚಿತವನ್ನಾಗಿಸಿದೆ. ಪಕೃತಿ ವರವಾದ ಬದುಕನ್ನು ಕಟ್ಟಿಕೊಳ್ಳಲು ಬೇಕಾದ ಸಂಸ್ಕಾರವು ಇಲ್ಲವಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳ ಬದುಕಿನಲ್ಲಿ ಎದುರಾಗುವ ಸವಾಲು, ಆತಂಕವನ್ನು ಎದುರಿಸಲು ನೈತಿಕ ಸ್ಥೈರ್ಯ ಇಲ್ಲಾವಾಗಿ ಅದೆಷ್ಟೋ ವಿದ್ಯಾರ್ಥಿಗಳು ಆತ್ಮಹತ್ಯೆ ರೂಪದ ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಶೋಚನೀಯ ಸಂಗತಿ ಎಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ […]
Read More
15-04-2018, 3:11 PM
ಯಡ್ತಾಡಿ : ವಿದ್ಯಾರ್ಥಿ ಜೀವನದಲ್ಲಿ ಸಿಗುವ ವಿಪುಲವಾದ ಅವಕಾಶವನ್ನು ಬಳಸಿಕೊಂಡರೆ ಜೀವನದಲ್ಲಿ ಉನ್ನತ ಮಟ್ಟಕ್ಕೇರಲು ಸಾಧ್ಯ , ಇಂತಹ ಶಿಬಿರದಲ್ಲಿ ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಪಡೆಯಲು ಉತ್ತಮ ಅವಕಾಶ ಲಭಿಸುತ್ತವೆ ಎಂದು ಯುವವಾಹಿನಿ (ರಿ) ಯಡ್ತಾಡಿ ಘಟಕದ ಅಧ್ಯಕ್ಷರಾದ ಶಂಕರ ಪೂಜಾರಿ ತಿಳಿಸಿದರು ಅವರು ದಿನಾಂಕ 15.04.2018 ನೇ ಆದಿತ್ಯವಾರ ಯುವವಾಹಿನಿ (ರಿ) ಯಡ್ತಾಡಿ ಘಟಕ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಯಡ್ತಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿಕಸನ 2018 ಮಕ್ಕಳ ಬೇಸಿಗೆ ಶಿಬಿರದ ಉದ್ಘಾಟನಾ […]
Read More
08-04-2018, 3:38 PM
ಬೆಳ್ತಂಗಡಿ : ತರಬೇತಿಯಿಂದ ಮಾತ್ರ ಪರಿಪೂರ್ಣತೆ ಹೊಂದಲು ಸಾಧ್ಯ, ವಿದ್ಯಾರ್ಥಿಗಳು ಕಠಿಣ ತರಬೇತಿಯಿಂದ ನಿಶ್ಚಿತವಾದ ಗುರಿ ತಲುಪಲು ಸಾಧ್ಯ ಎಂದು ಶಾಸಕ ಕೆ.ವಸಂತ ಬಂಗೇರ ತಿಳಿಸಿದರು. ಅವರು ದಿನಾಂಕ 08.04.2018 ರಂದು ಯುವವಾಹಿನಿ (ರಿ) ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ಬೆಳ್ತಂಗಡಿ ಸುವರ್ಣ ಆರ್ಕೇಡ್ ನಲ್ಲಿ ವಿದ್ಯಾರ್ಥಿಗಳಿಗಾಗಿ ಜರುಗಿದ ಬೆಳಕು : ಎಸ್.ಎಸ್.ಎಲ್.ಸಿ ನಂತರ ಮುಂದೇನು ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಜನೆಗೆ ಯಾವುದನ್ನು ಆಯ್ಕೆ ಮಾಡಿಕೊಂಡಾಗ ಯಾವ ಹಂತಕ್ಕೆ ತಲುಪಲು ಸಾಧ್ಯ ಎಂಬುವುದಕ್ಕೆ ತರಬೇತಿ ಅಗತ್ಯ ಎಂದು […]
Read More
01-04-2018, 3:34 PM
ಅಡ್ವೆ : ಸ್ವ-ಉದ್ಯೋಗದ ಮೂಲಕ ತಾನು ಬೆಳೆಯುವುದರೊಂದಿಗೆ ಇತರರ ಬೆಳವಣಿಗೆಗೆ ಸಹಕಾರಿಯಾಗಿದೆ.ಸ್ವ ಉದ್ಯೋಗದಿಂದ ಸಮಾಜದ ಹಿತ ಅಡಗಿದೆ ಸಾವಿರಾರು ಉದ್ಯೋಗದ ಸ್ರಷ್ಟಿಯಾಗಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಯುವವಾಹಿನಿ(ರಿ) ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಜಯಂತ ನಡುಬೈಲು ತಿಳಿಸಿದರು ಅವರು ದಿನಾಂಕ 01.04.2018 ರಂದು ಯುವವಾಹಿನಿ(ರಿ) ಅಡ್ವೆ ಘಟಕದ ಆಶ್ರಯದಲ್ಲಿ ಅಡ್ವೆಆನಂದಿ ಸಭಾಭವನದಲ್ಲಿ ಜರುಗಿದ ಉದ್ಯಮ ಶೀಲತಾ ಕೌಶಲ್ಯ ಜಾಗೃತಿ ಶಿಬಿರ”ವನ್ನು ಉದ್ಘಾಟಿಸಿ ಮಾತನಾಡಿದರು . ಯುವವಾಹಿನಿ ಸದಸ್ಯರು ಸ್ವಾವಲಂಬಿಯಾಗಿ ಬದುಕಲು ಕಲಿಯಿರಿ, ಅದಕ್ಕೆ ಬೇಕಾದ […]
Read More
25-02-2018, 3:12 PM
ಪುತ್ತೂರು: ವಿಜಯ ಕರ್ನಾಟಕ ದಿನ ಪತ್ರಿಕೆ ಮತ್ತು ಪುತ್ತೂರು ಯುವವಾಹಿನಿ (ರಿ.) ಇವರ ಸಹಯೋಗದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ – ಸಂವಾದ ಕಾರ್ಯಕ್ರಮ ಪುತ್ತೂರು ಸಂತ ಫಿಲೋಮಿನಾ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆಯಿತು. ವಿಜಯೀಭವ ಹೆಸರಿನಲ್ಲಿ ವಿಜಯ ಕರ್ನಾಟಕ ಪತ್ರಿಕೆ ರಾಜ್ಯದಾದ್ಯಂತ ಇಂಥ ಕಾರ್ಯಕ್ರಮ ನಡೆಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಯಕ್ರಮವನ್ನು ಪುತ್ತೂರಿನಲ್ಲಿ ಆಯೋಜಿಸಲಾಗಿತ್ತು. ಯುವವಾಹಿನಿ ಪುತ್ತೂರು ಘಟಕವು ಪೂರ್ಣ ಸಹಯೋಗ ನೀಡುವ ಮೂಲಕ ಕಾರ್ಯುಕ್ರಮದಲ್ಲಿ ಸಂಪೂರ್ಣ ಪಾಲು ಪಡೆಯಿತು. ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಯುವವಾಹಿನಿಯ […]
Read More
18-02-2018, 3:20 PM
ನಾಗರಿಕಾ ಸೇವಾ ಪರೀಕ್ಷೆ ಕಬ್ಬಿಣದ ಕಡಲೆಯಲ್ಲ ಶಿಸ್ತು, ಶ್ರದ್ಧೆ, ಗುರಿ, ಆಳ ಅಧ್ಯಯನ, ಜತೆಗೆ ದೃಢವಾದ ಆತ್ಮವಿಶ್ವಾಸ ಇದ್ದರೆ ಖಂಡಿತವಾಗಿ ಯಶಸ್ಸು ಸಾಧ್ಯ ಎಂದು ಶಾಸಕ ಜೆ.ಆರ್.ಲೋಬೋ ಹೇಳಿದರು. ಮಂಗಳೂರು ಬಲ್ಮಠದ ಬೆಸೆಂಟ್ ಜತ್ತನ್ನ ಸಭಾಂಗಣದಲ್ಲಿ ದಿನಾಂಕ 18.02.2018 ರಂದು ಜರುಗಿದ ಯುವವಾಹಿನಿ (ರಿ) ಮಂಗಳೂರು ಘಟಕ, ಆತ್ಮಶಕ್ತಿ ವಿವಿದ್ದೋದ್ದೇಶ ಸಹಕಾರಿ ಸಂಘ, ಕರ್ನಾಡಕ ಕ್ರಿಶ್ಚಿಯನ್ ಅಸೋಸಿಯೇಷನ್ ಸಿಸೈಟಿ, ಹಾಗೂ ಸರ್ವಜ್ಞ ಐಎಎಸ್ ಅಕಾಡೆಮಿ ವತಿಯಿಂದ ಐಎಎಸ್, ಐಪಿಎಸ್, ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ […]
Read More
18-02-2018, 2:17 PM
ಉಡುಪಿ: ಪ್ರಸ್ತುತ ಇರುವ ಸ್ಥಿತಿಯಿಂದ ಉತ್ತಮ ಸ್ಥಿತಿಯತ್ತ ಕೊಂಡೋಯ್ಯುವುದೇ ಸಂಸ್ಕಾರ, ಮಾನವ ಅರಿಷಡ್ವರ್ಗಗಳನ್ನು ತ್ಯಜಿಸಿದಾಗ ಮಾಧವನಾಗುತ್ತಾನೆ, ಇದಕ್ಕೆ ಮಾನವೀಯ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಯುವವಾಹಿನಿ ಇಂತಹ ಕಾರ್ಯಾಗಾರವನ್ನು ನಿರಂತರ ನಡೆಸುತ್ತಿದೆ ಎಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ ತಿಳಿಸಿದರು. ಅವರು ದಿನಾಂಕ 18.02.2018 ನೇ ಆದಿತ್ಯವಾರ ಉಡುಪಿ ಬಲೈಪಾದೆ ನಿತ್ಯಾನಂದ ಆರ್ಕೆಡ್ ನಲ್ಲಿ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ (ರಿ) ಉಡುಪಿ ಘಟಕದ ಆತಿಥ್ಯದಲ್ಲಿ ಜರುಗಿದ ಬಹು […]
Read More
07-01-2018, 2:46 PM
ವಿಶ್ವವಿದ್ಯಾಲಯ ಪರೀಕ್ಷೆಗಳಿಗಿಂತ ಜೀವನ ಪರೀಕ್ಷೆ ಮುಖ್ಯವಾದವು, ಈ ಪರೀಕ್ಷೆಯಲ್ಲಿ ಯಶಸ್ವೀಯಾಗುವುದರ ಮೂಲಕ ವಿದ್ಯಾರ್ಥಿ ಜೀವನ ಸಾರ್ಥಕತೆ ಪಡೆಯಬೇಕು. ಜೀವನದಲ್ಲಿ ಮಾತಿಗಿಂತ ಸಾಧನೆ ಮುಖ್ಯ, ಯಾವತ್ತೂ ಮಾತೇ ಸಾಧನೆಯಾಗಬಾರದು ಎಂದು ಕೇಂದ್ರ ಸಮಿತಿಯು ಅಧ್ಯಕ್ಷರಾದ ಯಶವಂತ ಪೂಜಾರಿ ತಿಳಿಸಿದರು. ಅವರು ದಿನಾಂಕ 07.01.2017 ರಂದು ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ಸ್ಟೂಡೆಂಟ್ ವಿಂಗ್ ಉದ್ಘಾಟಿಸಿ ಮಾತನಾಡಿದರು. ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾದ ಲೋಕೇಶ್ ಪೂಜಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಲಹೆಗಾರರಾದ […]
Read More
25-12-2017, 3:08 PM
ವಿದ್ಯೆಯು ವಿದ್ಯಾರ್ಥಿಗಳ ಬೌದ್ಧಿಕ ವಿಕಾಸಕ್ಕೆ ಪೂರಕವಾದುದು. ಶಿಕ್ಷಣ ದ ಬಗೆಗಿನ ಕಾಳಜಿಯು ಅಗತ್ಯವಾದುದು. ಯಾವುದೇ ಪ್ರತಿಷ್ಠೆ, ಸ್ಥಾನಮಾನಕ್ಕಾಗಿ ನಮ್ಮ ಕೆಲಸ ಕಾರ್ಯಗಳು ಇರಕೂಡದು. ನಿಸ್ವಾರ್ಥ ವಾದ ಮನಸ್ಸಿನ ಸೇವೆಯನ್ನು ಸಮಾಜ ಗುರುತಿಸುತ್ತದೆ. ಸಾಮಾಜಿಕ ಸೇವೆಯಿಂದ ದೊರೆಯುವ ತೃಪ್ತಿ ಎಲ್ಲಾ ಬಗೆಯ ಸನ್ಮಾನ ಪ್ರಶಂಸೆಗಳನ್ನು ಮೀರಿದುದು. ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಕೂಡದು ಎನ್ನುವ ಮಹತ್ವಾಕಾಂಕ್ಷೆ ಯಿಂದ ಎಲ್ ಸಿ ಆರ್ ವಿದ್ಯಾಸಂಸ್ಥೆಯನ್ನು ಪ್ರಾರಂಭಿಸಿದೆ. ಅನೇಕ ಮಂದಿ ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣವನ್ನು ಈ ವಿದ್ಯಾಸಂಸ್ಥೆಯಲ್ಲಿ ಪಡೆಯುತ್ತಿದ್ದಾರೆ. ಇದು […]
Read More
25-12-2017, 10:09 AM
ಬಂಟ್ವಾಳ : ಮನುಷ್ಯ ಪರಿಸರದ ಕೂಸು. ಪ್ರತಿಭೆಗೆ ಯಾವುದೇ ಜಾತಿಯ ಹಂಗಿಲ್ಲ. ನಮ್ಮೊಳಗಿನ ಕೀಳರಿಮೆಯನ್ನು ಮೊದಲು ಕಸದ ಬುಟ್ಟಿಗೆ ಹಾಕಿ ನಮ್ಮ ದೃಷ್ಟಿ ಗುರಿಯ ಸಾಧನೆಯ ಕಡೆಗೆ ಇರಬೇಕು. ಆತ್ಮ ವಿಶ್ವಾಸಕ್ಕಿಂತ ದೊಡ್ಡ ಶಕ್ತಿ ಇನ್ನೊಂದು ಇಲ್ಲ. ಚರಿತ್ರೆಯನ್ನು ಅಧ್ಯಯನ ಮಾಡಿದರೆ ನಮಗೆ ಗೊತ್ತಾಗುತ್ತೆ, ಯಾರು ಕೂಡ ಒಮ್ಮೆಲೆ ನಾಯಕರಾಗಿ ರೂಪುಗೊಳ್ಳೊದಿಲ್ಲ. ಯಾವುದಾದರೊಂದು ಹೋರಾಟದ ಕಾರಣವಾಗಿ ನಾಯಕರುಗಳು ರೂಪುಗೊಳ್ಳುತ್ತಾರೆ. ನಾರಾಯಣ ಗುರುಗಳು ಸಮಾಜಕ್ಕಾಗಿ ಬದುಕಿದವರು. ಸಮಾಜದ ಎಲ್ಲಾ ಬಗೆಯ ಸಮಸ್ಯೆಗಳಿಗೆ ಶಿಕ್ಷಣವು ಚಿಕಿತ್ಸೆ ಯಾಗುತ್ತೆ ಎಂಬ ನಂಬಿಕೆ […]
Read More