ಪಡುಬಿದ್ರಿ : ಯುವವಾಹಿನಿ(ರಿ.) ಪಡುಬಿದ್ರಿ ಘಟಕದ ವಿಶೇಷ ಕಾರ್ಯಕ್ರಮ ಮಕ್ಕಳ ಹಬ್ಬ. ದಿನಾಂಕ 18-11-2018 ರಂದು ಸ.ಮಾ.ಹಿ.ಪ್ರಾ. ಶಾಲೆ ಎರ್ಮಾಳು ತೆಂಕ ಹಾಗೂ ಸ.ಹಿ.ಪ್ರಾ.ಶಾಲೆ ಎರ್ಮಾಳು ಸೌತ್ ಇಲ್ಲಿನ ವಿದ್ಯಾರ್ಥಿಗಳಿಗೆ ಮಕ್ಕಳ ಹಬ್ಬದ ದಶಮಾನೋತ್ಸವ ಕಾರ್ಯಕ್ರಮವು ಸ.ಮಾ.ಹಿ.ಪ್ರಾ.ಶಾಲೆ ಎರ್ಮಾಳು ತೆಂಕ ಇಲ್ಲಿ ಜರಗಿತು. ಯುವವಾಹಿನಿ(ರಿ.) ಪಡುಬಿದ್ರಿ ಘಟಕದ ಅಧ್ಯಕ್ಷರಾದ ದೀಪಕ್ ಕೆ. ಬೀರ ಇವರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಬೆಂಗಳೂರಿನ ಯುವ ಉದ್ಯಮಿಯಾಗಿರುವ ಗಣೇಶ್ ಎಸ್. ಗುಜರನ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ, “ಯುವವಾಹಿನಿ(ರಿ.) ಪಡುಬಿದ್ರಿ ಘಟಕವು ಹತ್ತು ವರ್ಷಗಳಿಂದ ಮಕ್ಕಳ ಹಬ್ಬ ಎಂಬ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದ್ದು ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರತರಲು ಸೂಕ್ತ ವೇದಿಕೆಯನ್ನು ಕಲ್ಪಿಸಿರುವುದು ಶ್ಲಾಘನೀಯ” ಎಂದು ಅಭಿನಂದಿಸಿದರು. ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು ಹಾಗೂ ಪಡುಬಿದ್ರಿ ಘಟಕದ ಸಲಹೆಗಾರರು ಆಗಿರುವ ತಾರಾನಾಥ್ ಎಚ್. ಬಿ., ಉಭಯ ಶಾಲೆಗಳ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರುಗಳಾದ ಸೋಮಯ್ಯ ಹಾಗೂ ಶೇಖರ ನಲ್ಕೆ ,ಉಭಯ ಶಾಲೆಗಳ ವಿದ್ಯಾರ್ಥಿ ನಾಯಕರುಗಳಾದ ನಿಶಾಂತ್ ಹಾಗೂ ರವಿ, ಕಾರ್ಯಕ್ರಮದ ಸಂಚಾಲಕರಾದ ಶ್ರವಣ್ ಕುಮಾರ್, ಕಾರ್ಯದರ್ಶಿ ಶೈಲಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಘಟಕದ ಅಧ್ಯಕ್ಷರಾದ ದೀಪಕ್ ಕೆ. ಬೀರ ಎಲ್ಲರನ್ನು ಸ್ವಾಗತಿಸಿದರು. ಘಟಕದ ಮಾಜಿ ಅಧ್ಯಕ್ಷರಾದ ಪ್ರಸಾದ್ ವೈ. ಕೋಟ್ಯಾನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ತದನಂತರ ವೇದಿಕೆಯಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಈ ಸಂದರ್ಭದಲ್ಲಿ ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ್ ನಡುಬೈಲ್, ಕೇಂದ್ರ ಸಮಿತಿಯ ಪದಾಧಿಕಾರಿಗಳು, ಇತರ ಘಟಕದ ಸದಸ್ಯರು ಹಾಗೂ ಇತರೆ ಸಂಘ ಸಂಸ್ಥೆಯವರು ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭ
ಸ್ಪರ್ಧೆಗಳು ಮುಕ್ತಾಯಗೊಂಡ ನಂತರ ಸಮಾರೋಪ ಸಮಾರಂಭವು ಜರಗಿತು. ಘಟಕದ ಅಧ್ಯಕ್ಷರಾದ ದೀಪಕ್ ಕೆ. ಬೀರ ಇವರು ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ನರೇಶ್ ಕುಮಾರ್ ಸಸಿಹಿತ್ಲು, ಬಿಲ್ಲವ ಸಮಾಜ ಸೇವಾ ಸಂಘ(ರಿ.) ಪಡುಬಿದ್ರಿ ಇದರ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್, ಸ.ಮಾ.ಹಿ.ಪ್ರಾ. ಶಾಲೆ ಎರ್ಮಾಳು ತೆಂಕ ಇಲ್ಲಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ಎಲ್ಲದಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. “ಹಸಿ ಮಣ್ಣನ್ನು ಮಣ್ಣಿನ ಮುದ್ದೆಯನ್ನಾಗಿಯೂ ಮಾಡಬಹುದು ಅಥವಾ ಅದಕ್ಕೊಂದು ಸುಂದರ ರೂಪವನ್ನು ಕೊಡಬಹುದು. ಹಾಗೆಯೇ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುವುದರ ಜೊತೆಗೆ ಬಾಲ್ಯದಲ್ಲಿಯೇ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಿ ಅದಕ್ಕೊಂದು ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಡಬೇಕು. ಹೀಗಾದರೆ ಮಾತ್ರ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರೂಪಿಸಿ ಕೊಡಲು ಸಾಧ್ಯ” ಎಂದು ಡಾ। ರಶ್ಮಿ ಕೆ.ಎಸ್. ,ಅಸಿಸ್ಟೆಂಟ್ ಪ್ರೊಫೆಸರ್ ಕೆ.ಎಂ.ಸಿ . ಮಂಗಳೂರು ಇವರು ತಿಳಿಸಿದರು. ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಶೇಷ ಸಾಧನೆಗೈದ ಸಿಂಚನಾಳಿಗೆ ಕಲಾಶ್ರೀ ಪ್ರಶಸ್ತಿ ಹಾಗೂ ನಿಶಾಂತ್ ಸಿ. ಪೂಜಾರಿಗೆ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. “ತಮ್ಮ ಶಾಲಾ ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸಲು ಈ ಕಾರ್ಯಕ್ರಮವನ್ನು ಆಯೋಜಿಸಿದ ಯುವವಾಹಿನಿ ಸಂಸ್ಥೆಗೆ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳು ಸಿಗುವಂತಾಗಲಿ” ಎಂದು ಉಭಯ ಶಾಲಾ ಮುಖ್ಯೋಪಾಧ್ಯಾಯರುಗಳಾದ ವಿನೋದ ಹಾಗೂ ಕಾತ್ಯಾಯಿನಿ ಇವರು ಶುಭ ಹಾರೈಸಿದರು. ಕಾರ್ಯಕ್ರಮ ಸಂಚಾಲಕರಾದ ಶ್ರವಣ್ ಕುಮಾರ್ ಸ್ವಾಗತಿಸಿದರು. ಸುಜಾತ ಪಿ.ಕೋಟ್ಯಾನ್, ಶ್ವೇತ ಎಚ್.ಕೋಟ್ಯಾನ್, ಸುಷ್ಮ ಹಾಗೂ ಚೈತ್ರ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಶೈಲಜಾ ಧನ್ಯವಾದ ನೀಡಿದರು.
Nice Program….. Keep it up Padubidri