ಶೈಕ್ಷಣಿಕ ದತ್ತು ಸ್ವೀಕಾರ, ವಿದ್ಯಾರ್ಥಿ ವೇತನ ವಿತರಣೆ, ಗೌರವ ಅಭಿನಂದನೆ ಮತ್ತು ಅಕ್ಷರ, ಪ್ರತಿಭಾ ಪುರಸ್ಕಾರ

ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ (ರಿ) : ಪ್ರೇರಣಾ -2018

ಮಂಗಳೂರು : ದಿನಾಂಕ 16-09-2018ರ ಆದಿತ್ಯವಾರದಂದು ಸರ್ವಮಂಗಳೆ ಸಭಾಂಗಣ, ಶ್ರೀ ಬ್ರಹ್ಮಬೈದರ್ಕಳ ಗರೋಡಿ ಕಂಕನಾಡಿ, ಮಂಗಳೂರು ಇಲ್ಲಿ ನಡೆದ “ಶೈಕ್ಷಣಿಕ ದತ್ತು ಸ್ವೀಕಾರ, ವಿದ್ಯಾರ್ಥಿ ವೇತನ ವಿತರಣೆ, ಗೌರವ ಅಭಿನಂದನೆ ಮತ್ತು ಅಕ್ಷರ ಪ್ರತಿಭಾ ಪುರಸ್ಕಾರ – ಪ್ರೇರಣಾ -2018” ಕಾರ್ಯಕ್ರಮದ ವರದಿ.
ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಪೂರ್ವಾಹ್ನ ಗಂಟೆ 9.45ಕ್ಕೆ ಸರಿಯಾಗಿ ಆರಂಭವಾಯ್ತು. ಚಿತ್ತರಂಜನ್, ಅಧ್ಯಕ್ಷರು, ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಕಂಕನಾಡಿ ಇವರು ಉದ್ಘಾಟಕರಾಗಿಯೂ, ಶ್ರೀ ಧರ್ಮಪಾಲ್, ಅಧ್ಯಕ್ಷರು-ಬಿಲ್ಲವ ಸೇವಾ ಸಮಾಜ ಕಂಕನಾಡಿ ಇವರು ಮುಖ್ಯ ಅತಿಥಿಯಾಗಿಯೂ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕುಮಾರಿ ಸುಶ್ಮಿತಾರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮದ ಆರಂಭವಾಯಿತು. ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ ನಡುಬೈಲು ಗಣ್ಯರನ್ನು ಸ್ವಾಗತಿಸಿದರು.
ಚಿತ್ತರಂಜನ್‍ರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಯುವವಾಹಿನಿಯ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ತಾನು ಕಳೆದ ಹಲವಾರು ವರ್ಷಗಳಿಂದ ಯುವವಾಹಿನಿಯ ನಿಕಟ ಸಂಪರ್ಕದಿಂದಿದ್ದು ಯುವವಾಹಿನಿಯು ವಿದ್ಯಾರ್ಥಿಗಳಿಗೆ, ಯುವಜನರಿಗೆ ಸಹಾಯವಾಗುವ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಸಂತಸದ ವಿಚಾರ ಎಂದು ತಿಳಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಧರ್ಮಪಾಲ್‍ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಮುಂದೆ ಗಂಟೆ 10.15ರಿಂದ 11.15ರ ವರೆಗೆ “ವಿದ್ಯಾರ್ಥಿಗಳು ಮತ್ತು ಆಧುನಿಕ ತಂತ್ರಜ್ಞಾನ” ಡಾ. ರಾಜೇಶ್ ಬೆಜ್ಜಂಗಳ ನಿರ್ದೇಶಕರು, ಕನ್ನಡ ವಿಭಾಗ, ಭಾರತೀಯ ಭಾಷಾ ಅಧ್ಯಾಯನಾಂಗ, ಕಣ್ಣೂರು ವಿಶ್ವವಿದ್ಯಾನಿಲಯ, ಕಾಸರಗೋಡು ಇವರು ಅತ್ಯಂತ ಆಕರ್ಷಕ ರೀತಿಯಲ್ಲಿ ನಡೆಸಿಕೊಟ್ಟರು. ಆಧುನಿಕ ತಂತ್ರಜ್ಞಾನವನ್ನೊಳಗೊಂಡ ಮೊಬೈಲ್ ಬಳಕೆಯ ಮಹತ್ವ, ಅದರ ಒಳಿತು ಕೆಡುಕುಗಳನ್ನು ಸೋದಾಹರಣ ಸಹಿತವಾಗಿ ವಿವರಿಸಿ ವಿದ್ಯಾರ್ಥಿಗಳಿಗೆ ಉಪಯೋಗವಾಗುವ ಮಾಹಿತಿಗಳನ್ನು ಪಡೆಯಬಹುದಾದ ಮಾರ್ಗಗಳನ್ನು ತಿಳಿಸಿದರು. ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕಗಳ ಜ್ಞಾನಕ್ಕೆ ತಮ್ಮ ಕಲಿಕೆಯನ್ನು ಸೀಮಿತಗೊಳಿಸದೆ ತಮ್ಮ ಕೌಶಲ್ಯಾವೃದ್ಧಿಗೆ, ಜ್ಞಾನವಿಕಸನಕ್ಕೆ ಪೂರಕವಾಗುವ ಅನೇಕ ಸೌಲಭ್ಯಗಳು ಅಂತರ್ಜಾಲದಲ್ಲಿ ಲಭ್ಯವಿದ್ದು ಅದರ ಪ್ರಯೋಜನವನ್ನು ಪಡಕೊಳ್ಳುವಂತೆ ತಿಳಿಸಿದರು. ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆಯಿಂದ ಮತ್ತು ಅನೇಕ ಖಾಸಗಿ ವಿದ್ಯಾಸಂಸ್ಥೆಯವರು ನಡೆಸುವಂತಹ ಸ್ವಯಂಪ್ರಭಾ (Swayam Prabha), Mooks, KNTCL ನಂತಹ ಕೋರ್ಸುಗಳು ಉಚಿತವಾಗಿ ಅಂತರ್ಜಾಲದಲ್ಲಿ ಲಭ್ಯವಿದ್ದು ಇವೆಲ್ಲವುಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಂಡರೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನವಾಗುವುದರೊಂದಿಗೆ ಜ್ಞಾನ ವಿಕಸನ, ಕೌಶಲವೃದ್ಧಿಯಾಗುತ್ತದೆಂದು ವಿವರವಾಗಿ ತಿಳಿಸಿದರು. ಮುಂದೆ 11.20ರಿಂದ 12.00 ಗಂಟೆಯವರೆಗೆ ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತೆ “ಉನ್ನತ ವ್ಯಾಸಂಗ ಮತ್ತು ಪೂರ್ವ ಸಿದ್ಧತೆ” ಎನ್ನುವ ವಿಷಯದಲ್ಲಿ ಸುರೇಶ್ ಎಂ.ಎಸ್. ನಿರ್ದೇಶಕರು, ಸರ್ವಜ್ಞ ಐಎಎಸ್ ಅಕಾಡೆಮಿ ಮಂಗಳೂರು ಇವರು ಮತ್ತು ಚಂದ್ರಶೇಖರ್ ವಿದ್ಯಾನಿಧಿ ಟ್ರಸ್ಟ್‍ನ ಟ್ರಸ್ಟಿ ಹಾಗೂ ಎಮ್.ಸಿ.ಎಫ್. ಪಣಂಬೂರು ಇಲ್ಲಿಯ ಉದ್ಯೋಗಿ ಇವರುಗಳು ನಡೆಸಿಕೊಟ್ಟು ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು.


ನಂತರ ಗಂಟೆ 12.15ರಿಂದ ಸಮಾರೋಪ ಸಮಾರಂಭವು ನಡೆಯಿತು. ಡಾ. ಶಿವಪ್ರಸಾದ್, ತಜ್ಞ ಹೋಮಿಯೋಪತಿ ವೈದ್ಯರು, ಮಂಗಳೂರು ಮತ್ತು ಜಗದೀಪ್ ಡಿ. ಸುವರ್ಣ, ಮೆನೇಜಿಂಗ್ ಡೈರೆಕ್ಟರ್, ಡಿ.ಆರ್. ಸುವರ್ಣ ಗ್ರೂಫ್ ಮಂಗಳೂರು ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್‍ನ ಟ್ರಸ್ಟಿಗಳಾದ ಶೇಖರ್ ಪೂಜಾರಿ, ರಾಜಶೇಖರ ಕೋಟ್ಯಾನ್ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್‍ನ ಮೇನೇಜಿಂಗ್ ಟ್ರಸ್ಟಿ ಶ್ರೀ ಪದ್ಮನಾಭ ಮರೋಳಿಯವರು ಅತಿಥಿಗಳನ್ನು ಮತ್ತು ಎಲ್ಲರನ್ನು ಸ್ವಾಗತಿಸಿದ ನಂತರ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಶ್ರೀ ಸಂತೋಷ್ ಕುಮಾರ್‍ರವರು ಪ್ರಸ್ತಾವನೆಗೈದರು.
ಮುಂದೆ ಕಳೆದ ಸಾಲಿನ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ 95%ಕ್ಕಿಂತ ಅಧಿಕ ಅಂಕ ಗಳಿಸಿ ತೇರ್ಗಡೆಯಾದ 8 ವಿದ್ಯಾರ್ಥಿಗಳಿಗೆ ಅಕ್ಷರ ಪುರಸ್ಕಾರ ನೀಡಿ ಗೌರವಿಸಲಾಯ್ತು. (i) ಕು| ಶ್ರಾವ್ಯ (ii) ಕು| ರಿಧಿ ಪಿ. ಕೋಟ್ಯಾನ್ (iii) ಕು| ನಿಧಿಶ್ರೀ ಎಮ್.ಪಿ. (iv) ಕು| ನಿಧಿಶಾ (v) ಮಾ| ಗಗನ್ ಸಿ. ಪೂಜಾರಿ (vi) ಕು| ವಿಪ್ತಾ ವಿ. ಸನಿಲ್ (vii) ಕು. ನಿರೀಕ್ಷಾ ಯನ್. ಹಾಗೂ (viii) ಮಾ| ಶಶಾಂಕ್ ಈ 8 ವಿದ್ಯಾರ್ಥಿಗಳು ಈ ಬಾರಿಯ ಅಕ್ಷರ ಪುರಸ್ಕಾರ ನಡೆದ ವಿದ್ಯಾರ್ಥಿಗಳು. ಹಾಗೆಯೇ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಈ ಬಾರಿ ಮಾ| ಆದರ್ಶ್ ಪಿ.ಎಸ್. ಮತ್ತು ಕುಮಾರಿ ಪ್ರತಿಕಾ ಪಿ. ಕೋಟ್ಯಾನ್ – ಇಬ್ಬರು ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯ್ತು. ನಂತರ (i) ಸಿ.ಎ. ಶ್ರವಣ್ ಕೆ. ಅಂಚನ್, ಚಾರ್ಟರ್ಡ್ ಅಕೌಂಟೆಂಟ್ ಮತ್ತು (ii) ಡಾ| ಸ್ವಾತಿ ಎಸ್. ಇವರುಗಳನ್ನು ಗೌರವಾಭಿನಂದನೆಗಳೊಂದಿಗೆ ಪುರಸ್ಕರಿಸಲಾಯಿತು.


ಮುಂದೆ ಈ ಸಾಲಿನಲ್ಲಿ ಡಾಕ್ಟರೇಟ್ ಮಾಡಿದ Ph.D  ಆ 5 ಮಂದಿಯನ್ನು ಅಭಿನಂದನೆಗಳೊಂದಿಗೆ ಪುರಸ್ಕರಿಸಲಾಯ್ತು. (i) ಡಾ. ಸತೀಶ್ ಕುಮಾರ್ ಎನ್. (ii) ಡಾ. ದಾಕ್ಷಾಯಿಣಿ (iii) ಡಾ. ಬಬಿತಾ ರೋಹಿತ್ (iv) ಡಾ. ಸುಜಾತ ಬಿ. (v) ಡಾ. ಭಾರತಿ ಕೆ. – ಇವರುಗಳು ಈ ಕಾರ್ಯಕ್ರಮದಲ್ಲಿ ಅಭಿನಂದಿಸಲ್ಪಟ್ಟ ಸಾಧಕರು.
ಪ್ರೇರಣಾ – 2018 ಕಾರ್ಯಕ್ರಮದಲ್ಲಿ ಭಾಗಿಯಾದವರಲ್ಲಿ ಈ ಕೆಳಗಿನ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ಅನುಭವಗಳನ್ನು ಸಭೆಯಲ್ಲಿ ಹಂಚಿಕೊಂಡರು.
(i) ಕು. ನವ್ಯ ಸುವರ್ಣ – ಶ್ರೀನಿವಾಸ್ ಇಂಜಿನಿಯರಿಂಗ್ ಕಾಲೇಜು – ಅಂತಿಮ ವರ್ಷದ ಬಿ.ಇ.
(ii) ಕು. ತೀಕ್ಷ್ಣ ಟಿ. ಕೋಟ್ಯಾನ್ – NITK Surathkal – ಅಂತಿಮ ವರ್ಷದ ಬಿ.ಇ.(Impel ಕಂಪೆನಿಯಲ್ಲಿ ಹುದ್ದೆಗೆ ಆಯ್ಕೆಯಾಗಿರುವರು)
(iii) ಚೇತನಾ -A.J. Institute of Dental Science – B.Sc.ಮಾಡಿ ಈಗ Internship ಮಾಡುತ್ತಿದ್ದಾರೆ
(iv) ಉಜ್ವಲ್ – KMC Mangalore – ಇಲ್ಲಿ MBBS ಪೂರ್ತಿಗೊಳಿಸಿ ಈಗ Internship ಮಾಡುತ್ತಿದ್ದಾರೆ.
(v) ಪೂಜಾ – ಮಂಗಳೂರು ಯುನಿವರ್ಸಿಟಿಯಲ್ಲಿ ಪ್ರಥಮ M.Com  ವರ್ಷದ ವಿದ್ಯಾರ್ಥಿನಿ.
ಈ ಎಲ್ಲಾ ವಿದ್ಯಾರ್ಥಿಗಳು ಹಂಚಿಕೊಂಡ ಅವರ ಅಭಿಪ್ರಾಯ, ಅನುಭವಗಳು ಅತ್ಯಂತ ಆಕರ್ಷಕವಾಗಿ ಸಭಿಕರ, ಇತರ ವಿದ್ಯಾರ್ಥಿಗಳ ಮನ ಮುಟ್ಟುವಂತಿತ್ತು.


ಅಂದು ನಡೆದ ಕಾರ್ಯಕ್ರಮದ ಮುಖ್ಯ ಭಾಗ ವಿದ್ಯಾರ್ಥಿ ವೇತನ ವಿತರಣೆಯಲ್ಲಿ ಟ್ರಸ್ಟ್‍ನ ವತಿಯಿಂದ ದತ್ತು ಸ್ವೀಕರಿಸಿದ 16 ವಿದ್ಯಾರ್ಥಿಗಳು, ಆರ್ಥಿಕ ಧನಸಹಾಯ ಪಡೆದ 30 ವಿದ್ಯಾರ್ಥಿಗಳು ಸೇರಿ ರೂ. 3.77 ಲಕ್ಷದಷ್ಟು ವಿತರಿಸಲಾಯ್ತು. ಇದರೊಂದಿಗೆ ಯುವವಾಹಿನಿ ಮಂಗಳೂರು ಘಟಕವು ದತ್ತು ಪಡೆದ 7 ವಿದ್ಯಾರ್ಥಿಗಳಿಗೆ ಆರ್ಥಿಕ ಧನಸಹಾಯ ವಿತರಿಸಲಾಯಿತು. ನಂತರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡಾ| ಶಿವಪ್ರಸಾದ್ ಕೆ. ಮತ್ತು ಶ್ರೀ ಜಗದೀಪ್ ಡಿ. ಸುವರ್ಣ ತಮ್ಮ ಮಾತುಗಳಲ್ಲಿ ಯುವವಾಹಿನಿಯ ಕಾರ್ಯಚಟುವಟಿಕೆಗಳಿಗೆ ತಮ್ಮ ಸಂತಸ ವ್ಯಕ್ತಪಡಿಸಿದರು. ಟ್ರಸ್ಟಿಯವರಾದ ರಾಜಶೇಖರ ಕೋಟ್ಯಾನ್‍ರವರು ಯುವವಾಹಿನಿಗೆ ಶುಭ ಹಾರೈಸಿದರು. ಯುವವಾಹಿನಿ (ರಿ) ಕೇಂದ್ರ ಸಮಿತಿಯ ನಿರ್ದೇಶಕ ಶಶಿಧರ ಕಿನ್ನಿಮಜಲು ಮತ್ತು ಕೇಂದ್ರ ಸಮಿತಿಯ ಉಪಾಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು ಜಂಟಿಯಾಗಿ ಕಾರ್ಯಕ್ರಮವನ್ನು ನಿರೂಪಿಸಿದರು
ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್‍ನ ಕಾರ್ಯದರ್ಶಿ ರವಿಚಂದ್ರರವರ ಧನ್ಯವಾದಗಳೊಂದಿಗೆ ಅಂದಿನ ಕಾರ್ಯಕ್ರಮದ ಮುಕ್ತಾಯವಾಯಿತು.


.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 16-11-2024
ಸ್ಥಳ : ಯುವವಾಹಿನಿ ಸಭಾಂಗಣ 3ನೇ ಮಹಡಿ, ರಘು ಬಿಲ್ಡಿಂಗ್ ಊರ್ವ ಸ್ಟೋರ್, ಮಂಗಳೂರು

ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕ

ದಿನಾಂಕ : 15-11-2024
ಸ್ಥಳ : ಸಿ. ಎಸ್. ಐ. ಬಾಲಿಕಾಶ್ರಮ, ಮೂಲ್ಕಿ

ಯುವವಾಹಿನಿ (ರಿ.) ಮೂಲ್ಕಿ ಘಟಕ

ದಿನಾಂಕ : 23-11-2024
ಸ್ಥಳ : ಸಂಪಿಗೆ ನಗರ, ಉದ್ಯಾವರ ಉಡುಪಿ

ಯುವವಾಹಿನಿ (ರಿ) ಉಡುಪಿ ಘಟಕ

ದಿನಾಂಕ : 24-11-2024
ಸ್ಥಳ : ನಾಗಪ್ಪ ಕಾಂಪ್ಲೆಕ್ಸ್ , ಎನ್ .ಹೆಚ್-66, ಬಲಾಯಿಪಾದೆ, ಉಡುಪಿ

ಯುವವಾಹಿನಿ (ರಿ) ಉಡುಪಿ ಘಟಕ

ದಿನಾಂಕ : 17-11-2024
ಸ್ಥಳ : ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ, ಹೆಜಮಾಡಿ

ಯುವವಾಹಿನಿ (ರಿ) ಪಡುಬಿದ್ರಿ ಘಟಕ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ಹಾಗೂ ಕೇಂದ್ರ ಸಮಿತಿ, ಮಂಗಳೂರು.

ಆರ್ಥಿಕತೆಯ ಸಂಕಷ್ಟದ ವಿದ್ಯಾರ್ಥಿಗಳಿಗೆ ಯುವವಾಹಿನಿಯ ವಿದ್ಯಾನಿಧಿ ಸಂಜೀವಿನಿಯಾಗಿದೆ : ಪದ್ಮನಾಭ ಮಾಣಿಂಜ

ಮಂಗಳೂರು:- ವಿದ್ಯೆ ನಮ್ಮನ್ನು ಯಾರ ಮತ್ತು ಯಾವುದರ ಹಂಗೂ ಇಲ್ಲದೆ ಅಸಹಾಯಕತೆ ಎನ್ನುವ ಪದವೇ ಇಲ್ಲದೆ ನಮ್ಮನ್ನು ನಾವು ಬೆಳೆಸಿಕೊಳ್ಳಬೇಕು. ಅದಕ್ಕೆ ಬಡತನ, ಆರ್ಥಿಕತೆ, ಯಾವುದೂ ಅಡ್ಡಿ ಬರಬಾರದು. ನನಗೂ ಸಹಾಯ ಮಾಡುವವರಿದ್ದರೆ ನಾನೂ ಕಲಿಯುತ್ತಿದ್ದೆ ಎನ್ನುವ ವಿದ್ಯಾರ್ಥಿ ಸಮೂಹಕ್ಕೆ ಯುವವಾಹಿನಿಯ...

Tuesday, 13-12-2022
error: Content is protected !!