ಕಡಬ : ಯುವವಾಹಿನಿ (ರಿ) ಕಡಬ ಘಟಕ ರಾಷ್ಟ್ರೀಯ ಬಿಲ್ಲವ ಮಹಾಮಂಡಲ (ರಿ) ಮುಲ್ಕಿ ಮತ್ತು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಆಲಂಕಾರು, ಕಡಬ ಮತ್ತು ಮರ್ಧಾಳ ವಲಯ ಇದರ ಆಯೋಜನೆಯಲ್ಲಿ ದಿನಾಂಕ 16/09/2018 ನೇ ಆದಿತ್ಯವಾರ ದಂದು ಶ್ರೀ ದುರ್ಗಾಂಬಿಕಾ ದೇವಸ್ಥಾನದ ಸಭಾಭವನ ಕಡಬದಲ್ಲಿ ” ಜೀವನೋತ್ಸಹ-2018″ ಎಂಬ ಬಿಲ್ಲವ ಯುವ ಜನತೆಗೆ ತರಬೇತಿ ನೀಡುವ ವಿನೂತನ ಕಾರ್ಯಕ್ರಮ ನಡೆಯಿತು.
ಎನ್ ಮುತ್ತಪ್ಪ ಪೂಜಾರಿ ನೈಯಲ್ಗ ನಿವೃತ್ತ ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಸಿ.ಎ ಬ್ಯಾಂಕ್ ಆಲಂಕಾರು ಇವರು ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಮುಖ್ಯ ಅತಿಥಿಗಳಾಗಿದ್ದ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಡಾ. ಸದಾನಂದ ಕುಂದರ್ ರವರು ಸಾಂದರ್ಭಿಕ ವಾಗಿ ಮಾತನಾಡಿದರು.ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಯೋಗೀಶ್ ಕುಮಾರ್ ಅಗತ್ತಾಡಿ ವಹಿಸಿದ್ದರು. ಕಾರ್ಯಕ್ರಮದ ತರಬೇತುದಾರರಾದ ರಾಷ್ಟ್ರೀಯ ಬಿಲ್ಲವ ಮಹಾಮಂಡಲ (ರಿ) ಮುಲ್ಕಿ ಇದರ ತರಬೇತುದಾರ ಸುಧಾಕರ ಕಾರ್ಕಳ ಇವರು ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಾ , ಬಿಲ್ಲವ ಯುವಕರು ಬ್ರಹ್ಮಶ್ರೀ ನಾರಾಯಣ ಗುರುಗಳ ವಿದ್ಯೆಯಿಂದ ಸ್ವತಂತ್ರರಾಗಿರಿ ಸಂಘಟನೆಯಿಂದ ಬಲಯುತರಾಗಿರಿ ಎಂಬ ಸಂದೇಶದ ಚಾಲನೆಯಲ್ಲಿ ವಿದ್ಯೆಯನ್ನು ಪಡೆಯುತ್ತಿದ್ದಾರೆ,ಸಂಘಟನೆಯಿಂದಲೂ ಬಲಯುತರಾಗಿದ್ದಾರೆ,ಆದರೆ ಉದ್ಯೋಗದ ವಿಷಯ ಬಂದಾಗ ಮಾತ್ರ ನಾವು ಸೋತಿದ್ದೇವೆ,ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದೇವೆ.ಇದು ಬದಲಾಗಬೇಕು, “ನಾವು ಉದ್ಯೋಗವನ್ನು ಅರಸುತ್ತಾ ಹೋಗುವಂತಾಗಬಾರದು. ನಾವು ಉದ್ಯೋಗ ಸೃಷ್ಟಿ ಮಾಡುವವರಾಗಬೇಕು,ಉದ್ಯೋಗದಾತರಾಗಬೇಕು” .ಈ ರೀತಿಯ ವ್ಯಕ್ತಿತ್ವವನ್ನು ನಾವು ಮೈಗೂಡಿಸಿಕೊಳ್ಳಬೇಕಾದರೆ ನಮಗೆ ಕೆಲವು ವಿಷಯಗಳಲ್ಲಿ ನೈಪುಣ್ಯತೆ ಬೇಕು. ಅದನ್ನು ಈ “ಜೀವನೋತ್ಸಹ-2018” ದಿಂದ ತರಬೇತಿ ಕಾರ್ಯಗಾರದ ಮೂಲಕ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಕಡಬ ವಲಯ ಸಂಚಾಲಕರಾದ ಜಿನ್ನಪ್ಪ ಸಾಲ್ಯಾನ್,ಮರ್ಧಾಳ ವಲಯ ಸಂಚಾಲಕರಾದ ಸತೀಶ್ ಮರ್ಧಾಳ, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ (ರಿ) ಪುತ್ತೂರು ಇದರ ಜೊತೆಕಾರ್ಯದರ್ಶಿ ಸದಾನಂದ ಕುಮಾರ್ ಮಡ್ಯೊಟ್ಟು, JCI ಭಾರತ ವಲಯ ಉಪಾಧ್ಯಕ್ಷರಾದ ರವಿ ಕಕ್ಕೆಪದವು ಉಪಸ್ಥಿತರಿದ್ದರು. ವ್ಯಕ್ತಿತ್ವ ವಿಕಸನ ನಿರ್ಧೇಶಕರಾದ ಗಣೇಶ್ ನಡುವಾಲ್ ಸ್ವಾಗತಿಸಿ, ಕಾರ್ಯದರ್ಶಿಯವರಾದ ಮಿಥುನ್ ಸುಂದರ್ ಪಲ್ಲತ್ತಡ್ಕ ವಂದಿಸಿದರು. ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ಧೇಶಕ ದಯಾನಂದ ಕರ್ಕೇರ ಮಡ್ಯೊಟ್ಟು ಕಾರ್ಯಕ್ರಮ ನಿರೂಪಿಸಿದರು. ನಂತರ ನಡೆದ ತರಭೇತಿ ಕಾರ್ಯಗಾರದಲ್ಲಿ 60 ಮಂದಿ ಭಾಗವಹಿಸಿದ್ದರು.