06-08-2017, 3:52 PM
ಬಂಧುಗಳೇ, ಯುವವಾಹಿನಿಯ ಮೂರು ಮುಖ್ಯ ಧ್ಯೇಯಗಳಲ್ಲಿ ಒಂದಾದ “ವಿದ್ಯೆ”ಗೆ ಪೂರಕವಾಗಿ ಸ್ಥಾಪಿಸಲ್ಪಟ್ಟು ಕಾರ್ಯಚರಿಸುತ್ತಿರುವ ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ (ರಿ.), ಯುವವಾಹಿನಿ ಕೇಂದ್ರ ಸಮಿತಿಯ ಮಹತ್ವಾಕಾಂಕ್ಷೆಯ ಒಂದು ಯೋಜನೆ. ನಮ್ಮ ಸಮಾಜದ ವಿದ್ಯಾರ್ಥಿಗಳು ಆರ್ಥಿಕ ಕೊರತೆಯಿಂದಲೋ, ಮಾಹಿತಿಯ ಅಭಾವದಿಂದಲೋ ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಪೋಷಿಸುವ ಕೆಲಸವನ್ನು ಯುವವಾಹಿನಿ ಕಳೆದ ಹಲವು ವರ್ಷಗಳಿಂದ ನಿರ್ವಹಿಸುತ್ತಾ ಬಂದಿದೆ. ಪದವಿ, ಸ್ನಾತಕೋತ್ತರ ಪದವಿ, ವಿವಿಧ ವೃತ್ತಿಪರ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ನಮ್ಮ ವಿದ್ಯಾನಿಧಿಯಿಂದ ಆರ್ಥಿಕ ಧನಸಹಾಯ ಪಡೆದು ತಮ್ಮ ವಿದ್ಯಾರ್ಜನೆಯನ್ನು […]
Read More
31-07-2017, 7:34 AM
ಯುವವಾಹಿನಿ (ರಿ.) ಕೇಂದ್ರ ಸಮಿತಿ ಇದರ ವಿದ್ಯಾನಿಧಿ ಟ್ರಸ್ಟ್ ವತಿಯಿಂದ ದಿನಾಂಕ 30.07.2017ನೇ ರವಿವಾರ ಯುವವಾಹಿನಿ ಸಭಾಂಗಣ ಉರ್ವಸ್ಟೋರ್ ಇಲ್ಲಿ ನಡೆಯಿತು. 9.30ಕ್ಕೆ ಬ್ರಹ್ಮಶ್ರೀ ನಾರಾಯಣಗುರುಗಳ ಪೋಟೋ ಎದುರು ಟ್ರಸ್ಟಿಗಳಾದ ಸಂಜೀವ ಪೂಜಾರಿಯವರು ದೀಪ ಬೆಳಗಿಸುವುದರ ಮೂಲಕ ಬೆಳಗ್ಗಿನ ಕಾರ್ಯಗಾರಕ್ಕೆ ಚಾಲನೆ ನೀಡಿದರು. ನಂತರ ರಾಷ್ಟ್ರೀಯ ತರಬೇತುದಾರರಾದ ರಾಜೇಂದ್ರ ಭಟ್ ರವರಿಗೆ ಪುಷ್ಪ ನೀಡಿ ತರಬೇತಿಗೆ ಆಹ್ವಾನ ನೀಡಲಾಯಿತು. ನಂತರ 2.30 ತಾಸುಗಳನ್ನು ರಾಜೇಂದ್ರ ಭಟ್ ರವರು ವಿದ್ಯಾರ್ಥಿ-ವಿದ್ಯಾರ್ಥಿನಿಯರೊಂದಿಗೆ ತನ್ನ ಅದ್ಬುತವಾದ ಮಾತುಗಳಿಂದ ಕಾರ್ಯಗಾರವನ್ನು ನಡೆಸಿಕೊಟ್ಟರು. ಮಧ್ಯಾಹ್ನ […]
Read More
09-07-2017, 12:46 PM
ಯುವವಾಹಿನಿ (ರಿ) ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ಹೊಸ್ಮಾರು ಬಲ್ಯೊಟ್ಟು ಶ್ರೀ ವಿಖ್ಯಾತನಂದ ಸ್ವಾಮೀಜಿಯವರು ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಂದೇಶ ಹಾಗೂ ವಿದ್ಯಾನಿಧಿ ವಿತರಣಾ ಕಾರ್ಯಕ್ರಮ ದಿನಾಂಕ 09.07.2017 ನೇ ಆದಿತ್ಯವಾರ ನಡ್ಪಿಕಲ್ಲು ಶ್ರೀ ರಾಮ ಭಜನಾ ಮಂದಿರದಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಬಲ್ಯೊಟ್ಟು ಕ್ಷೇತ್ರದ ಶ್ರೀ ವಿಖ್ಯಾತನಂದ ಸ್ವಾಮೀಜಿ ಆಶೀರ್ವಚನ ನೀಡಿ ವಿದ್ಯೆಯಿಂದ ಸ್ವತಂತ್ರರಾಗಿ ಸಂಘಟನೆಯಿಂದ ಬಲಯುತರಾಗಿ ಎಂಬ ಗುರು ಸಂದೇಶವನ್ನು ಯುವವಾಹಿನಿ ಅಕ್ಷರಶಃ ಪಾಲಿಸುತ್ತಿದೆ. ಬಡ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ನೀಡುವ ಮೂಲಕ ಅಕ್ಷರ ಕ್ರಾಂತಿಗೆ ಮುನ್ನುಡಿ […]
Read More
02-07-2017, 5:13 AM
IAS, IPS ಮುಂತಾದ ಉನ್ನತ ಹುದ್ದೆಗಳ ಬಗ್ಗೆ ಆಸಕ್ತಿ ತೋರಿಸಿ, ಕೇವಲ ಡಾಕ್ಟರ್ ,ಇಂಜಿನಿಯರಿಂಗ್ ನಂತಹ ಹುದ್ದೆಗಳಿಗೆ ಮಾತ್ರ ಪ್ರಾಮುಖ್ಯತೆ ನೀಡದೆ, ಈ ದೇಶದ ಉನ್ನತ ಅಧಿಕಾರಿಗಳಾಗಿ ಸಮಾಜದ ಋಣ ತೀರಿಸಿ ಎಂದು ಉದ್ಯಮಿ, ಬಿಲ್ಲವ ಸಮಾಜದ ಮುಖಂಡರಾದ ಶ್ರೀ ಬಿ.ಎನ್.ಶಂಕರ ಪೂಜಾರಿ ತಿಳಿಸಿದರು. ಅವರು ದಿನಾಂಕ 02.07.2017 ನೇ ಆದಿತ್ಯವಾರ ಉಡುಪಿಯ ಕುತ್ಪಾಡಿ ,ಬಲಾಯಿಪಾದೆ ನಿತ್ಯಾನಂದ ಆರ್ಕೆಡ್ ಇಲ್ಲಿ ಯುವವಾಹಿನಿ (ರಿ) ಉಡುಪಿ ಘಟಕದ ಆಶ್ರಯದಲ್ಲಿ ಜರುಗಿದ ವಿದ್ಯಾನಿಧಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. SSLC […]
Read More
16-06-2017, 8:58 AM
ವಿದ್ಯೆಯು ಚೋರರಿಂದ ಅಪಹರಿಸಲ್ಪಡುವಂತದ್ದಲ್ಲ ,ರಾಜರಿಂದ ಗೆದ್ದುಕೊಳ್ಳಲು ಸಾಧ್ಯವಾಗುವಂತಹದ್ದಲ್ಲ, ಸೋದರರಿಂದ ಭಾಗಮಾಡಿಕೊಳ್ಳುವಂತದ್ದಲ್ಲ, ಹಂಚಿದಷ್ಟು ವೃದ್ದಿಯಾಗುವುದೇ ವಿದ್ಯೆ. ಆದ್ದರಿಂದ ಸಕಲ ದಾನಕ್ಕಿಂತಲೂ ವಿದ್ಯಾದಾನವೇ ಶ್ರೇಷ್ಠವಾದುದು. ಶಿಕ್ಷಣಕ್ಕೆ ಬಡತನ, ಆರ್ಥಿಕತೆ, ಇತರ ಬದುಕಿನ ಜಂಜಾಟಗಳು ಯಾವುದೂ ಅಡ್ಡಿ ಬರಬಾರದು ಎಂಬ ನೆಲೆಯಲ್ಲಿ ಕಲಿಯಲು ಹಂಬಲಿಸುವ ಯುವ ಮನಸ್ಸು ಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಮಾಜದ ಅಂಚಿಗೆ ತಳ್ಳಲ್ಪಟ್ಟ ಶೋಷಿತರ ,ಧಮನಿರತರ, ನೋವಿಗೆ ಸ್ಪಂದನೆ ನೀಡುವ ಕೆಲಸ ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ಮಾಡುತ್ತಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಯುವವಾಹಿನಿ […]
Read More
15-06-2017, 2:25 PM
“ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಟಾಪರ್ಸ್ ಎಲ್ಲಿದ್ದಾರೆ? ಜೀವನದಲ್ಲಿ ಯಶಸ್ವಿಗೊಂಡರೇ.? ಟಾಪರ್ಸ್ ಎನಿಸಿಕೊಂಡಿರುವ ಕರಾವಳಿಯ ವಿದ್ಯಾರ್ಥಿಗಳು ನಮ್ಮ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಿಲ್ಲ. ಐಎಎಸ್, ಐಪಿಎಸ್, ಇನ್ನಿತರ ಸಮಾಜದ ಉನ್ನತ ವiಟ್ಟದ ಕ್ಷೇತ್ರಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳು ಈ ಬಗ್ಗೆ ಯೋಚಿಸುವ ಅಗತ್ಯವಿದೆ” ಎಂದು ನಗರದ ಶ್ರೀ ನಾರಾಯಣಗುರು ಕಾಲೇಜಿನ ಉಪನ್ಯಾಸಕರಾದ ಕೇಶವ ಬಂಗೇರರವರು ಅಭಿಪ್ರಾಯ ವ್ಯಕ್ತ ಪಡೆಸಿದರು. ಅವರು ದಿನಾಂಕ ಮಂಗಳೂರು ಉಜ್ಜೋಡಿಯ ಶ್ರೀ ಮಹಾಂಕಾಳಿ ದೈವಸ್ಥಾನ ವಠಾರದಲ್ಲಿ ಯುವವಾಹಿನಿ ಕಂಕನಾಡಿ ಘಟಕದ ಆಶ್ರಯದಲ್ಲಿ […]
Read More
11-06-2017, 12:59 PM
ಮಕ್ಕಳನ್ನು ಸಮಾಜದ ಆಸ್ತಿಯನ್ನಾಗಿಸಲು ಅವರಿಗೆ ಸೂಕ್ತವಾದ ಶಿಕ್ಷಣ ನೀಡುವಂತಹ ವಾತಾವರಣ ನಿರ್ಮಾಣ ಆಗಬೇಕು. ಗುರುಹಿರಿಯರನ್ನು ಗೌರವಿಸುವ ಸಂಸ್ಕೃತಿಯನ್ನು ಹೆತ್ತವರು ಮನೆಯಿಂದ ಆರಂಭಿಸಿದಲ್ಲಿ ಮಾತ್ರ ಅವರ ಬದುಕಿನಲ್ಲಿ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಳ್ಳಲು ಸಾಧ್ಯವಿದೆ. ಯುವ ಜನರಿಗೆ ಸೂಕ್ತ ಮಾರ್ಗದರ್ಶನ ನೀಡಿ ಸ್ವಾವಲಂಬಿಗಳನ್ನಾಗಿ ಮಾಡಿರಿ ಎಂದು ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ನಾನಿಲ್ ಹೇಳಿದರು. ಅವರು ಯುವವಾಹಿನಿ (ರಿ) ಹಳೆಯಂಗಡಿ ಘಟಕದ ಆಶ್ರಯದಲ್ಲಿ ಹಳೆಯಂಗಡಿ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ದಿನಾಂಕ 11.06.2017 ರಂದು ಜರುಗಿದ ಉಚಿತ […]
Read More
11-06-2017, 7:42 AM
ಯುವವಾಹಿನಿ(ರಿ) ಸುಳ್ಯ ಘಟಕದ ಆಶ್ರಯದಲ್ಲಿ SSLC ಮತ್ತು PUC ಯಲ್ಲಿ 90%ಗಿಂತ ಅಧಿಕ ಅಂಕ ಪಡೆದ ವಿಧ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ತಾ.11/6/2017 ರಂದು ಆದಿತ್ಯವಾರ ಸುಳ್ಯದ ದ್ವಾರಕ ಹೋಟೆಲ್ ಸಭಾಂಗಣದಲ್ಲಿ ನಡೆಯಿತು. SSLC ಯಲ್ಲಿ 91% ಅಂಕ ಪಡೆದ ಆಶಿಕಾ.ಜಿ.ಆರ್ ಮತ್ತು PUC ಯಲ್ಲಿ 92% ಅಂಕ ಪಡೆದ ಲಿಖಿತಾ ಅವರನ್ನು ಬಿಲ್ಲವ ಸಂಘದ ಅಧ್ಯಕ್ಷರಾದ ವಿಠಲದಾಸ್ ಅವರು ಅಭಿನಂದಿಸಿದರು. ಯುವ ವಾಹಿನಿ ಅಧ್ಯಕ್ಷರಾದ ಶಿವಪ್ರಸಾದ್ ಕೆ.ವಿ , ಕಾರ್ಯದರ್ಶಿ ರವೀಂದ್ರ , ಜತೆ ಕಾರ್ಯದರ್ಶಿ […]
Read More
31-01-2017, 11:25 AM
ಯುವವಾಹಿನಿ (ರಿ) ಮೂಲ್ಕಿ ಘಟಕದ ವತಿಯಿಂದ ದಿನಾಂಕ 31-01-2017 ರಂದು ಶ್ರೀ ನಾರಾಯಣಗುರು ಸಂಯುಕ್ತ ಪದವಿಪೂರ್ವ ಕಾಲೇಜಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಪರೀಕ್ಷಾ ಪೂರ್ವ ತರಬೇತಿ ಕಾರ್ಯಕ್ರಮವನ್ನು ನಡೆಸಲಾಯಿತು. ಶಾಲಾ ಮಂಡಳಿಯ ಕಾರ್ಯದರ್ಶಿ ಬಾಲಚಂದ್ರ ಸನಿಲ್ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಜೇಸಿಐ. ರಾಷ್ಟ್ರೀಯ ತರಬೇತುದಾರರಾದ ಜೇಸಿ. ರಾಜೇಂದ್ರ ಭಟ್ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸುಮಾರು 3 ಗಂಟೆಗಳ ಕಾಲ ತರಬೇತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಶಾಲಾ ಆಡಳಿತಾಧಿಕಾರಿ ಅಡ್ವೆ ರವೀಂದ್ರ ಪೂಜಾರಿ, ಪ್ರಾಂಶುಪಾಲರಾದ ಯತೀಶ್ ಅಮೀನ್, ಘಟಕದ […]
Read More
23-01-2017, 2:14 AM
ಮಂಗಳೂರು: ಯುವವಾಹಿನಿ (ರಿ) ಮಂಗಳೂರು ಘಟಕ ಇದರ ಆಶ್ರಯದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಯುವಜನ ಜಾಗೃತಿ ಪ್ರಗತಿ ಉಪನ್ಯಾಸ, ಸಂವಾದ, ಸಮನ್ವಯ ಕಾರ್ಯಾಗಾರವು ದಿನಾಂಕ 23.12.2017 ರಂದು ಗೋಕರ್ಣನಾಥೇಶ್ವರ ಕಾಲೇಜಿನ ಸಭಾಭವನದಲ್ಲಿ ನಡೆಯಿತು. ವಿದ್ಯಾರ್ಥಿಗಳು ಪಾಠ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ, ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಇಂತಹ ಕಾರ್ಯಾಗಾರವು ಅವಶ್ಯಕವಾಗಿದ್ದು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕಾರ್ಯಾಗಾರವನ್ನು ಉಧ್ಘಾಟಿಸಿದ ಗೋಕರ್ಣನಾಥೇಶ್ವರ ಕಾಲೇಜಿನ ಪ್ರಾಂಶುಪಾಲರಾದ ಡಾ. ರೇಣುಕಾ ಕೆ ತಿಳಿಸಿದರು . ಉದ್ಯಮಿ ಶ್ರೀ ದತ್ತೇಶ್ ಪೂಜಾರಿ , ಪ್ರಿಯಾ ವುಡ್ […]
Read More