ನಾಗರಿಕಾ ಸೇವಾ ಪರೀಕ್ಷೆ ಕಬ್ಬಿಣದ ಕಡಲೆಯಲ್ಲ ಶಿಸ್ತು, ಶ್ರದ್ಧೆ, ಗುರಿ, ಆಳ ಅಧ್ಯಯನ, ಜತೆಗೆ ದೃಢವಾದ ಆತ್ಮವಿಶ್ವಾಸ ಇದ್ದರೆ ಖಂಡಿತವಾಗಿ ಯಶಸ್ಸು ಸಾಧ್ಯ ಎಂದು ಶಾಸಕ ಜೆ.ಆರ್.ಲೋಬೋ ಹೇಳಿದರು. ಮಂಗಳೂರು ಬಲ್ಮಠದ ಬೆಸೆಂಟ್ ಜತ್ತನ್ನ ಸಭಾಂಗಣದಲ್ಲಿ ದಿನಾಂಕ 18.02.2018 ರಂದು ಜರುಗಿದ ಯುವವಾಹಿನಿ (ರಿ) ಮಂಗಳೂರು ಘಟಕ, ಆತ್ಮಶಕ್ತಿ ವಿವಿದ್ದೋದ್ದೇಶ ಸಹಕಾರಿ ಸಂಘ, ಕರ್ನಾಡಕ ಕ್ರಿಶ್ಚಿಯನ್ ಅಸೋಸಿಯೇಷನ್ ಸಿಸೈಟಿ, ಹಾಗೂ ಸರ್ವಜ್ಞ ಐಎಎಸ್ ಅಕಾಡೆಮಿ ವತಿಯಿಂದ ಐಎಎಸ್, ಐಪಿಎಸ್, ಕೆಎಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ಉಚಿತ ಪ್ರೇರಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ನಾನು ಕೂಡಾ ಗ್ರಾಮೀಣ ಭಾಗದಿಂದ ಬಂದಂತಹ ವಿದ್ಯಾರ್ಥಿ ನಾಗರಿಕಾ ಸೇವಾ ಪರೀಕ್ಷೆ ಎದುರಿಸಿ ಉತ್ತಮ ಅಧಿಕಾರಿ ಆಗಬೇಕು ಎಂಬ ಕನಸು ಕಂಡಿದ್ದೆ ಅದಕ್ಜಾಗಿ ಶ್ರದ್ಧೆಯಿಂದ ಓದಿ ಕೆಎಎಸ್ ಪಾಸು ಮಾಡಿ ಅಧಿಕಾರಿ ಆದೆ. ಸಮಾಜ ಸೇವೆ ಮಾಡುವುದಕ್ಕೆ ಇಂತಹ ಹುದ್ದೆಗಳು ಪ್ರೇರೇಪಣೆ ನೀಡುತ್ತದೆ. ಆಗಿನ ಕಾಲದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಇಷ್ಟೊಂದು ರೀತಿಯ ಸೌಲಭ್ಯ ಇರಲಿಲ್ಲ ಈಗಿನ ಕಾಲದಲ್ಲಿ ಹಲವಾರು ಸಂಸ್ಥೆಗಳು ಐಎಎಸ್, ಕೆಎಎಸ್, ಐಪಿಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮಾಹಿತಿ ಶಿಬಿರ ಹಮ್ಮಿಕೊಳ್ಳುತ್ತಿವೆ ಇಂತಹ ಅಮೂಲ್ಯ ಅವಕಾಶವನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಪ್ರೊಬೆಷನರಿ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಅಕ್ಷಯ್ ಹಕೈ, ಮಾತನಾಡಿ ಬಹಳಷ್ಟು ಜನರು ಐಎಎಸ್ , ಕೆಎಎಸ್, ಮುಂತಾದ ಪರೀಕ್ಷೆಗಳನ್ನು ಪ್ಯಾಷನ್ ಗಾಗಿ ಎದುರಿಸುತ್ತಾರೆ. ಅಂತಹ ಭಾವನೆ ಬೇಡ ನಾಗರಿಕಾ ಸೇವಾ ಪರೀಕ್ಷೆ ಎದುರಿಸವ ಕ್ರಮ, ಯಾಕಾಗಿ ಹೇಗೆ ಅದಕ್ಕೆ ಬೇಕಾಗುವ ತಯಾರಿ ನಿರಂತರ ಓದು ಮುಖ್ಯ ಎಂದರು.
ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಉಪನ್ಯಾಸಕಿ ಸುಮನಾ ಸುಧಾಕರ್, ಸರ್ವಜ್ಞ ಐಎಎಸ್ ಅಕಾಡೆಮಿಯ ನಿರ್ದೇಶಕರಾದ ಸುರೇಶ್ ಎಮ್.ಎಸ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಶಿಬಿರ ನಡೆಸಿಕೊಟ್ಟರು.
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ ಉಪಸ್ಥಿತರಿದ್ದರು ಆತ್ಮಶಕ್ತಿ ಸಹಕಾರಿ ಸಂಘದ ಅಧ್ಯಕ್ಷರಾದ ಚಿತ್ತರಂಜನ್ ಸ್ವಾಗತಿಸಿದರು, ಯುವವಾಹಿನಿ (ರಿ) ಮಂಗಳೂರು ಘಟಕದ ಅಧ್ಯಕ್ಷರಾದ ನವೀನ್ ಚಂದ್ರ ಧನ್ಯವಾದ ನೀಡಿದರು