ವಿಶ್ವವಿದ್ಯಾಲಯ ಪರೀಕ್ಷೆಗಳಿಗಿಂತ ಜೀವನ ಪರೀಕ್ಷೆ ಮುಖ್ಯವಾದವು, ಈ ಪರೀಕ್ಷೆಯಲ್ಲಿ ಯಶಸ್ವೀಯಾಗುವುದರ ಮೂಲಕ ವಿದ್ಯಾರ್ಥಿ ಜೀವನ ಸಾರ್ಥಕತೆ ಪಡೆಯಬೇಕು. ಜೀವನದಲ್ಲಿ ಮಾತಿಗಿಂತ ಸಾಧನೆ ಮುಖ್ಯ, ಯಾವತ್ತೂ ಮಾತೇ ಸಾಧನೆಯಾಗಬಾರದು ಎಂದು ಕೇಂದ್ರ ಸಮಿತಿಯು ಅಧ್ಯಕ್ಷರಾದ ಯಶವಂತ ಪೂಜಾರಿ ತಿಳಿಸಿದರು.
ಅವರು ದಿನಾಂಕ 07.01.2017 ರಂದು ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ಸ್ಟೂಡೆಂಟ್ ವಿಂಗ್ ಉದ್ಘಾಟಿಸಿ ಮಾತನಾಡಿದರು. ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾದ ಲೋಕೇಶ್ ಪೂಜಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಲಹೆಗಾರರಾದ ಬಿ.ತಮ್ಮಯ, ಉಪಾದ್ಯಕ್ಷರಾದ ಗಣೇಶ್ ಪೂಂಜರೆಕೋಡಿ, ಕೋಶಾಧಿಕಾರಿ ಲೋಕೇಶ್ ಪಿ.ಜೆ, ಕಾರ್ಯದರ್ಶಿ ದಿನೇಶ್ ಸುವರ್ಣ ರಾಯಿ, ಜತೆಕಾರ್ಯದರ್ಶಿ ಕಿರಣ್ ರಾಜ್ ಮತ್ತಿತರರು ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕೆ.ಸ್ವಾಗತಿಸಿದರು, ರಾಜೇಶ್ ಸುವರ್ಣ ವಂದಿಸಿದರು, ಶ್ರೀಧರ ಅಮೀನ್ ಕಾರ್ಯಕ್ರಮ ನಿರೂಪಿಸಿದರು. 150 ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳು ಯುವವಾಹಿನಿ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು.