ಅಡ್ವೆ : ಸ್ವ-ಉದ್ಯೋಗದ ಮೂಲಕ ತಾನು ಬೆಳೆಯುವುದರೊಂದಿಗೆ ಇತರರ ಬೆಳವಣಿಗೆಗೆ ಸಹಕಾರಿಯಾಗಿದೆ.ಸ್ವ ಉದ್ಯೋಗದಿಂದ ಸಮಾಜದ ಹಿತ ಅಡಗಿದೆ ಸಾವಿರಾರು ಉದ್ಯೋಗದ ಸ್ರಷ್ಟಿಯಾಗಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಯುವವಾಹಿನಿ(ರಿ) ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಜಯಂತ ನಡುಬೈಲು ತಿಳಿಸಿದರು
ಅವರು ದಿನಾಂಕ 01.04.2018 ರಂದು ಯುವವಾಹಿನಿ(ರಿ) ಅಡ್ವೆ ಘಟಕದ ಆಶ್ರಯದಲ್ಲಿ ಅಡ್ವೆಆನಂದಿ ಸಭಾಭವನದಲ್ಲಿ ಜರುಗಿದ ಉದ್ಯಮ ಶೀಲತಾ ಕೌಶಲ್ಯ ಜಾಗೃತಿ ಶಿಬಿರ”ವನ್ನು ಉದ್ಘಾಟಿಸಿ ಮಾತನಾಡಿದರು . ಯುವವಾಹಿನಿ ಸದಸ್ಯರು ಸ್ವಾವಲಂಬಿಯಾಗಿ ಬದುಕಲು ಕಲಿಯಿರಿ, ಅದಕ್ಕೆ ಬೇಕಾದ ಹಾಗೆ ತಕ್ಕ ಮಟ್ಟಿನ ಉದ್ಯೋಗ ಅಥವಾ ವ್ಯವಹಾರಗಳನ್ನು ನಡೆಸಲಿ, ಎಲ್ಲದಕ್ಕಿಂತ ಮೊದಲಾಗಿ ತಾನು ದುಡಿದು ಸಂಪಾದಿಸಬೇಕು ಎಂಬ ಛಲ ಇದ್ದಲ್ಲಿ ಮಾತ್ರ ಮನುಷ್ಯನು ಸ್ವಾವಲಂಬಿಯಾಗಿ ಬದುಕಲು ಸಾಧ್ಯ ಅದೇ ಛಲ ಇತರರಿಗೂ ಮಾನದಂಡವಾಗಿರಬೇಕು ಎಂದರು.
ಯುವವಾಹಿನಿಯ ದೇಯೋದ್ದೇಶಗಳಲ್ಲಿ ಒಂದಾದ ಉದ್ಯೋಗಕ್ಕೆ ಪೂರಕವಾಗಿ ಅಡ್ವೆ ಘಟಕವು ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಅದರ ಯಶಸ್ಸು ಎಲ್ಲರಿಗೂ ದೂರೆಯಲಿ, ಮುಂಬರುವ ದಿನಗಳಲ್ಲಿ ಯುವವಾಹಿನಿ ಸಂಸ್ಥೆಯು ಇನ್ನಷ್ಟು ಪ್ರಗತಿಪರ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರಲಿ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎ ಪಿ ಎಂ ಸಿ ಸದಸ್ಯರಾದ ನವೀನ್ ಚಂದ್ರ ಸುವರ್ಣ ಶುಭಹಾರೈಸಿದರು.
ತರಬೇತುದಾರರಾದ ಶ್ರೀ ಸತೀಶ್ ಮಾಬೆನ್ ಮತ್ತು ರೇಖಾ ಗೋಪಾಲ್ ವಿವಿಧ ಗ್ರಹೋಪಯೋಗಿ ವಸ್ತುಗಳ ತಯಾರಿಕೆಯ ಬಗ್ಗೆ ಹಾಗೂ ಸ್ವ ಉದ್ಯೋಗ ನಡೆಸಲು ಸರಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ, ವಿವಿಧ ಯೋಜನೆಗಳ ಬಗ್ಗೆ ತರಬೇತಿ ನೀಡಿದರು. ಈ ಯೋಜನೆಗಳ ಸದುಪಯೋಗ ಯಾವ ರೀತಿಯಲ್ಲಿ ಪಡೆಯಬೇಕು, ಅದರ ಬಗ್ಗೆ ಮುಂಜಾಗ್ರತ ಕ್ರಮಗಳೇನು ಎಂಬುದರ ಬಗ್ಗೆಯೂ ವಿವರಿಸಿದರು.
ಯುವವಾಹಿನಿ(ರಿ) ಅಡ್ವೆ ಘಟಕದ ಭಾಸ್ಕರ್ ಸಾಲ್ಯಾನ್ ಸ್ವಾಗತಿಸಿ ,ಕಾರ್ಯದರ್ಶಿ ಶ್ರೀಧರ್.ಟಿ.ಪೂಜಾರಿ ವಂದಿಸಿದರು.
Noble thoughts ! Keep it up