Yuvavahini

ಸಮಾಜ ಸೇವೆ

“ಜಾಯ್ ಆಫ್ ಲರ್ನಿಂಗ್ – 2025” ಯುವವಾಹಿನಿ ಸದಸ್ಯರ ಸ್ವಯಂಸೇವೆಯ ಮಹತ್ತರ ಕೊಡುಗೆ

ಬೆಂಗಳೂರು : ದೇವನಹಳ್ಳಿ ಮಕ್ಕಳಧಾಮ ಕ್ಯಾಂಪಸ್‌ನಲ್ಲಿ ಸ್ಪರ್ಶ ಟ್ರಸ್ಟ್ ಆಯೋಜಿಸಿದ್ದ “ಜಾಯ್ ಆಫ್ ಲರ್ನಿಂಗ್ – 2025” ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಬೆಂಗಳೂರು ಘಟಕದ ಸದಸ್ಯರು ನಿಸ್ವಾರ್ಥ ಸೇವೆಯ ಮೂಲಕ ಸಮಾಜಮುಖಿ ಬದ್ಧತೆಯನ್ನು ಮೆರೆದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವಕಾಶವಂಚಿತ ಮಕ್ಕಳಿಗೆ ಶಿಕ್ಷಣ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಆತ್ಮವಿಶ್ವಾಸ, ಉತ್ಸಾಹ ಮತ್ತು ಬದುಕಿನ ಹೊಸ ಆಶಯ ತುಂಬುವ ಮಹತ್ವದ ಪ್ರಯತ್ನ ನಡೆಯಿತು. ಡಿಸೆಂಬರ್ 13ರಂದು ಕಬಡ್ಡಿ, ವಾಲಿಬಾಲ್, ತ್ರೋಬಾಲ್, ರಿಲೇ, ಲಾಂಗ್ ಜಂಪ್ ಸೇರಿದಂತೆ ವಿವಿಧ ಕ್ರೀಡಾ […]

Read More

ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಮಹಾ ನವಮಿ ಪ್ರಯುಕ್ತ ಸದಸ್ಯರು ಸ್ವಯಂ ಸೇವಕರಾಗಿ ಸೇವೆ-ಯುವವಾಹಿನಿ(ರಿ.) ಮುಲ್ಕಿ ಘಟಕ

ತಾರೀಕು 25-09-2025 ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಮಹಾ ನವಮಿ ಪ್ರಯುಕ್ತ ನಡೆಯುವ ಅನ್ನ ಪ್ರಸಾದ ವಿತರಣೆ ಯಲ್ಲಿ ಘಟಕದ ಅಧ್ಯಕ್ಷರು ಮತ್ತು ಸದಸ್ಯರು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು.

Read More

ಶ್ರೀ ಕ್ಷೇತ್ರ ಕುದ್ರೋಳಿ ಯ ಮಂಗಳೂರು ದಸರಾದ ಪ್ರಯುಕ್ತ ಒಂದು ದಿನದ ಅನ್ನ ದಾನಕ್ಕೆ ನಮ್ಮ ಘಟಕದ ಸದಸ್ಯರ ಸಹಕಾರ-ಯುವವಾಹಿನಿ( ರಿ.) ಮುಲ್ಕಿ ಘಟಕ

ಶ್ರೀ ಕ್ಷೇತ್ರ ಕುದ್ರೋಳಿ ಯ ಮಂಗಳೂರು ದಸರಾದ ಪ್ರಯುಕ್ತ ಯುವವಾಹಿನಿಯ ಮುಖೇನ ನಡೆಯುವ ಒಂದು ದಿನದ ಅನ್ನ ದಾನಕ್ಕೆ ನಮ್ಮ ಘಟಕದ ಸದಸ್ಯರ ಸಹಕಾರದಿಂದ ದೇಣಿಗೆಯನ್ನು ಕೇಂದ್ರ ಸಮಿತಿಯ ಅಧ್ಯಕ್ಷರಿಗೆ ನೀಡಲಾಯ್ತು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷ ರು , ಮಾಜಿ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು. ತಾರೀಕು 01-10-2025

Read More

ಯುವವಾಹಿನಿ ಅಶ್ರಯ ಯೋಜನೆಯಡಿಯಲ್ಲಿ ನಿರ್ಮಿಸಿದ ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದ ಪೆಲತ್ತಡಿ ಕಮಲ ಪೂಜಾರ್ತಿಯವರಿಗೆ ಮನೆಯ ಹಸ್ತಾಂತರ -ಯುವವಾಹಿನಿ(ರಿ) ಮಾಣಿ ಘಟಕ

ಯುವವಾಹಿನಿ(ರಿ)ಕೇಂದ್ರಸಮಿತಿಯ ಸಹಕಾರದೊಂದಿಗೆ ಯುವವಾಹಿನಿ ಅಶ್ರಯ ಯೋಜನೆಯಡಿಯಲ್ಲಿ ನಿರ್ಮಿಸಿದ ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದ ಪೆಲತ್ತಡಿ ಕಮಲ ಪೂಜಾರ್ತಿಯವರಿಗೆ ಮನೆಯ ಹಸ್ತಾಂತರ ಕಾರ್ಯಕ್ರಮ ಹಾಗೂ ತುಳಸಿ ಪೂಜಾ ಆಚರಣೆ ದಿನಾಂಕ 12.11.2025 ಬುಧವಾರ . ಸಂಜೆ ಭಜನಾ ಕಾರ್ಯಕ್ರಮದ ಜೊತೆಗೆ ತುಳಸಿ ಪೂಜೆಯ ನಂತರ ಸಭಾ ಕಾರ್ಯಕ್ರಮವನ್ನು ಅಖಿಲ ಭಾರತ ಬಿಲ್ಲವರ ಯೂನಿಯನ್ (ರಿ) ಕುದ್ರೋಳಿ ಮಂಗಳೂರು ಇದರ ಅಧ್ಯಕ್ಷರಾದ ಶ್ರೀಯುತ ನವೀನ್ ಚಂದ್ರ ಡಿ ಸುವರ್ಣ ಇವರು ಉದ್ಘಾಟಿಸಿದರು. ಯುವವಾಹಿನಿ(ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಲೋಕೇಶ್ […]

Read More

ಅಶಕ್ತ ಕುಟುಂಬಗಳಿಗೆ ನೆರವು -ಯುವವಾಹಿನಿ(ರಿ.) ಕೂಳೂರು ಘಟಕ

ದಿನಾಂಕ 19-10-2025 ನೇ ಆದಿತ್ಯವಾರ ದಂದು ದೀಪಾವಳಿ ಹಬ್ಬದ ಪ್ರಯುಕ್ತ ಬಡ ಕುಟುಂಬಗಳಿಗೆ ದಿನಸಿ ವಿತರಣೆ ಮಾಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಘಟಕದ ಅಧ್ಯಕ್ಷರಾದ ಲತೀಶ್ ಪೂಜಾರಿ ರವರು ಬ್ರಹ್ಮ ಶ್ರೀ ನಾರಾಯಣ ಗುರುಗಳಿಗೆ ದೀಪ ಬೆಳಗಿಸಿ, ಪ್ರಾರ್ಥಿಸಿದರು. ನಂತರ ಸದಸ್ಯರ ಜೊತೆಗೆ ಸೇರಿಕೊಂಡು ದೀಪಾವಳಿ ಹಬ್ಬವನ್ನು ನಮ್ಮಂತೆಯೇ ಬಡ ಕುಟುಂಬದವರೂ ಆಚರಣೆ ಮಾಡಬೇಕು ಎಂಬ ಉದ್ದೇಶದಿಂದ 8 ಬಡ ಕುಟುಂಬಗಳಿಗೆ ಒಂದು ತಿಂಗಳಿಗೆ ಬೇಕಾದಷ್ಟು ದಿನಸಿ ಸಾಮಾಗ್ರಿಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಘಟಕದ ಕಾರ್ಯದರ್ಶಿ ಜಯಲಕ್ಷ್ಮಿ, […]

Read More

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸಂಜೆಯಿಂದ ತಡ ರಾತ್ರಿಯವರೆಗೆ ನಿರಂತರವಾಗಿ ಸೇವಾ ಕೌಂಟರ್ನಲ್ಲಿ ಘಟಕದ ಸದಸ್ಯರು ಸೇವೆ-ಯುವವಾಹಿನಿ(ರಿ.) ಮಂಗಳೂರು ಘಟಕ

ಮಂಗಳೂರು ದಸರಾ ಪ್ರಯುಕ್ತ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸಂಜೆಯಿಂದ ತಡ ರಾತ್ರಿಯವರೆಗೆ ನಿರಂತರವಾಗಿ ಸೇವಾ ಕೌಂಟರ್ನಲ್ಲಿ ಘಟಕದ ಸದಸ್ಯರು ಸೇವೆಯನ್ನು ಸಲ್ಲಿಸಿದರು ಈ ಪುಣ್ಯ ಕಾರ್ಯದಲ್ಲಿ ತೊಡಗಿಸಿಕೊಂಡ ಸಲುವಾಗಿ ಶ್ರೀ ಶಾರದ ಮಾತೆಯ ದಿವ್ಯಾ ಸಾನಿಧ್ಯದಲ್ಲಿ ದೇವರ ಪ್ರಸಾದೊಂದಿಗೆ ಅನುಗ್ರಹ ಪತ್ರವನ್ನು ಕೇಂದ್ರ ಸಮಿತಿಯ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಘಟಕಕ್ಕೆ ಸಮರ್ಪಿಸಿದರು.

Read More

ಮಂಗಳೂರು ದಸರಾದ ಪ್ರಯುಕ್ತ ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಯಲ್ಲಿ ಬೆಳಗ್ಗೆಯಿಂದ ಸಂಜೆ ವರೆಗೆ ಸ್ವಯಂ ಸೇವೆ -ಯುವವಾಹಿನಿ( ರಿ.)ಸುರತ್ಕಲ್ ಘಟಕ

ದಿನಾಂಕ:27-09-2025 ಶನಿವಾರ ದಂದು ಮಂಗಳೂರು ದಸರಾದ ಪ್ರಯುಕ್ತ ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಯಲ್ಲಿ ಬೆಳಗ್ಗೆಯಿಂದ ಸಂಜೆ ವರೆಗೆ ಸ್ವಯಂ ಸೇವೆ ಸಲ್ಲಿಸಲಾಯಿತು.ಮತ್ತು ಘಟಕದ ವತಿಯಿಂದ ಶ್ರೀ ಕ್ಷೇತ್ರದಲ್ಲಿ ನಡೆಯುವ ಅನ್ನದಾನ ಸೇವೆಗಾಗಿ ಕೇಂದ್ರ ಸಮಿತಿಗೆ ದೇಣಿಗೆ ನೀಡಲಾಯಿತು.

Read More

ಮಂಗಳೂರು ದಸರಾ 2025 ಸೇವಾ ಕೌಂಟರ್ ಮತ್ತು ಅನ್ನದಾನ ಕೌಂಟರ್ ನಲ್ಲಿ ಸೇವೆ-ಯುವವಾಹಿನಿ( ರಿ.) ಪಣಂಬೂರು ಕುಳಾಯಿ ಘಟಕ

ಮಂಗಳೂರು ದಸರಾ 2025 ಇದರ ಹತ್ತನೇ ದಿನ ತಾ:01-10-2025ರಂದು ಸೇವೆಯಲ್ಲಿ ಘಟಕದ ಅಧ್ಯಕ್ಷರು ಹಾಗೂ ಸರ್ವ ಸದ್ಯಸರು ಸೇವಾ ಕೌಂಟರ್ ಮತ್ತು ಅನ್ನದಾನ ಕೌಂಟರ್ ನಲ್ಲಿ ಸೇವೆ ಸಲ್ಲಿಸಿದರು.

Read More

“ಸ್ವಯಂ ಸೇವಾ ಕಾರ್ಯ” -ಯುವವಾಹಿನಿ(ರಿ.)ಉಪ್ಪಿನಂಗಡಿ ಘಟಕ

ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ದಿನಾಂಕ 07.09.2025ರಂದು ನಡೆದ ಗುರುಗಳ 171ನೇ ಜಯಂತಿ ಕಾರ್ಯಕ್ರಮದಲ್ಲಿ ಘಟಕದ ವತಿಯಿಂದ ಸ್ವಯಂ ಸೇವೆಯಲ್ಲಿ ಭಾಗವಹಿಸಲಾಯಿತು. ಘಟಕದ ಹೆಚ್ಚಿನ ಸದಸ್ಯರು ಬೆಳಿಗ್ಗೆಯಿಂದಲೇ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು. ಅಧ್ಯಕ್ಷರಾದ ನಾಣ್ಯಪ್ಪ ಕೋಟ್ಯಾನ್ ಅವರೊಂದಿಗೆ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಸ್ವಯಂ ಸೇವೆಯಲ್ಲಿ  ಭಾಗವಹಿಸಿದ್ದರು.

Read More

ಮಂಗಳೂರು ದಸರಾ ಪ್ರಯುಕ್ತ ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ಘಟಕ-ಯುವವಾಹಿನಿ (ರಿ.) ಪಡುಬಿದ್ರಿ ಘಟಕ

ದಿನಾಂಕ 28/09/25 ರಂದು ಮಂಗಳೂರು ದಸರಾ ಪ್ರಯುಕ್ತ ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ಘಟಕದ ವತಿಯಿಂದ ಒಂದು ದಿನದ ಸ್ವಯಂ ಸೇವೆಯಲ್ಲಿ  ಭಾಗವಹಿಸಲಾಯಿತು .

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 2026ನೇ ಜುಲೈ 21 ಬೆಳಗ್ಗೆ ಗಂಟೆ 10.30ರಿಂದ
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಗಾಣದಪಡ್ಪು, ಬಿ.ಸಿ.ರೋಡ್

ಯುವವಾಹಿನಿ (ರಿ) ಬಂಟ್ವಾಳ ಘಟಕ

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!