ಕೊಣಾಜೆ, ಫೆ.10 : ಯುವವಾಹಿನಿ (ರಿ.) ಗ್ರಾಮ ಚಾವಡಿ ಕೊಣಾಜೆ ಘಟಕದ ಯುವ ಸಂಜೀವಿನಿ ವತಿಯಿಂದ 5ನೇ ಸೇವಾ ಕಾರ್ಯವಾಗಿ ಫೆಬ್ರವರಿ 10, 2026ರಂದು ಮಂಗಳವಾರ ಪುಣ್ಯಕೋಟಿ ನಗರ, ಕೈರಂಗಳದಲ್ಲಿರುವ ಅಮೃತ ಧಾರ ಗೋಶಾಲೆಯ ಅನಾಥ ಹಸುಗಳ ಪಾಲನೆಗಾಗಿ ಧನ ಸಹಾಯ ಹಸ್ತಾಂತರಿಸಲಾಯಿತು.

ಒಂದು ಹಸುವಿನ ವಾರ್ಷಿಕ ಪಾಲನೆಗಾಗಿ ರೂ. 15,000/- ಮೊತ್ತವನ್ನು ಗೋ ಸಂರಕ್ಷಣಾ ಕೇಂದ್ರಕ್ಕೆ ನೀಡಲಾಯಿತು. ಈ ಸಂದರ್ಭದಲ್ಲಿ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಗೋಮಾತೆಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡರು.
ಧನ ಸಹಾಯ ಹಸ್ತಾಂತರ ಕಾರ್ಯಕ್ರಮದಲ್ಲಿ ಗ್ರಾಮ ಚಾವಡಿ ಕೋಣಾಜೆ ಘಟಕದ ಅಧ್ಯಕ್ಷರಾದ ಬಾಬು ಬಂಗೇರ, 1ನೇ ಉಪಾಧ್ಯಕ್ಷರಾದ ಮುರಳೀಧರ ಕೊಣಾಜೆ, 2ನೇ ಉಪಾಧ್ಯಕ್ಷರಾದ ಅಜಿತ್ ಪಜೀರು, ಕಾರ್ಯದರ್ಶಿ ಮಿಥುನ್ ಕುಮಾರ್ ಪಜೀರು, ಕೋಶಾಧಿಕಾರಿ ಅಜಿತ್ ತಾರಿಪಾಡಿ, ನಿಕಟ ಪೂರ್ವ ಅಧ್ಯಕ್ಷರಾದ ಹರೀಶ್ ಕೊಣಾಜೆ, ಮಾತೃ ಸಂಘದ ಅಧ್ಯಕ್ಷರಾದ ವಿಜೇತ್ ಪಜೀರು, ಸಾಂಸ್ಕೃತಿಕ ನಿರ್ದೇಶಕಿ ಪೂರ್ಣಿಮಾ ಮಿಥುನ್, ಸಮಾಜ ಸೇವಾ ನಿರ್ದೇಶಕಿ ಸೌಮ್ಯ ಮನೋಜ್, ಪ್ರವಾಸ ಸಂಚಾಲಕ ರೋಷನ್ ಮಜ್ಜೆಲು, ಸಂಘಟನಾ ಕಾರ್ಯದರ್ಶಿ ಥ್ರಿಲೋಕೇಶ್ ಕೊಣಾಜೆ ಹಾಗೂ ಸದಸ್ಯ ನವೀನ್ ಪಾದಲ್ ಕೋಡಿ ಉಪಸ್ಥಿತರಿದ್ದರು.
ಯುವ ಸಂಜೀವಿನಿಯು ಸಮಾಜಮುಖಿ ಕಾರ್ಯಗಳಲ್ಲಿ ನಿರಂತರ ತೊಡಗಿಸಿಕೊಂಡಿದ್ದು, ಗೋ ಸಂರಕ್ಷಣೆಂತಹ ಪವಿತ್ರ ಕಾರ್ಯಗಳಲ್ಲಿ ಮುಂದಾಳತ್ವ ವಹಿಸಿರುವುದು ಶ್ಲಾಘನೀಯವಾಗಿದೆ.


