Yuvavahini

ಮಾಹಿತಿ

ಯುವದರ್ಪಣ : ಮಾಹಿತಿ ಕಾರ್ಯಾಗಾರ

ಉಪ್ಪಿನಂಗಡಿ : ಯುವವಾಹಿನಿ(ರಿ) ಉಪ್ಪಿನಂಗಡಿ ಘಟಕದ ಆಶ್ರಯದಲ್ಲಿ‌ ಘಟಕದ ಸದಸ್ಯರಿಗೆ ಯುವದರ್ಪಣ ಮಾಹಿತಿ ಕಾರ್ಯಾಗಾರವು ರೋಟರಿ ಭವನ ರಾಮನಗರ ಉಪ್ಪಿನಂಗಡಿ ಇಲ್ಲಿ ದಿನಾಂಕ :30/09/18 ರಂದು ಆದಿತ್ಯವಾರ ನಡೆಯಿತು.ಯುವದರ್ಪಣ ಕಾರ್ಯಕ್ರಮದ ಮೂಲಕ ಹೊಸ ಮುಖಗಳನ್ನು ಪರಿಚಯಿಸುವ ಈ ಪ್ರಯತ್ನ ಶ್ಲಾಘನೀಯ ಎಂದು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಯುವವಾಹಿನಿ(ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ್ ನಡುಬೈಲ್ ತಿಳಿಸಿದರು. ಯುವವಾಹಿನಿ(ರಿ) ಉಪ್ಪಿನಂಗಡಿ ಘಟಕದ ಅದ್ಯಕ್ಷ ಅಜಿತ್ ಕುಮಾರ್ ಪಾಲೇರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಯುವವಾಹಿನಿ(ರಿ) ಕೇಂದ್ರ ಸಮಿತಿಯ ನಿಕಟಪೂರ್ವ ಅಧ್ಯಕ್ಷ […]

Read More

ಯುವವಾಹಿನಿಯ ಮಾರ್ಗದರ್ಶಿ ಬಿಡುಗಡೆ

ಮಂಗಳೂರು : ಯುವವಾಹಿನಿಯ ಉಪನಿಬಂಧನೆಗ ಹಾಗೂ ಉಪನಿಯಮಗಳನ್ನು ಒಳಗೊಂಡ ಮಾರ್ಗದರ್ಶಿ ಪುಸ್ತಕವನ್ನು ಯುವವಾಹಿನಿಯ ಸಲಹೆಗಾರರಾದ ಬಿ.ತಮ್ಮಯ ಬಿಡುಗಡೆಗೊಳಿಸಿದರು. ದಿನಾಂಕ‌ 29.07.2018 ರಂದು ನಡೆದ ಯುವವಾಹಿನಿ ಕೇಂದ್ರ ಸಮಿತಿಯ ಮಾಸಿಕ‌ ಸಭೆಯಲ್ಲಿ ಈ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ, ನಿಯೋಜಿತ ಅಧ್ಯಕ್ಷ ಜಯಂತ ನಡುಬೈಲು, ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ, ಉಪಾಧ್ಯಕ್ಷ ನರೆಶ್ ಕುಮಾರ್ ಸಸಿಹಿತ್ಲು, ನಿಕಟಪೂರ್ವ ಅಧ್ಯಕ್ಷ ಪದ್ಮನಾಭ ಮರೋಳಿ, ಮಾಜಿ ಅಧ್ಯಕ್ಷರಾದ ಅಶೋಕ್ ಕುಮಾರ್, ವಿಶ್ವನಾಥ್ ಕೆ. ಮತ್ತಿತರರು […]

Read More

ಪ್ರಕೃತಿ ಸಂರಕ್ಷಣೆ ಮತ್ತು ಮಾದಕ ವ್ಯಸನ ವಿಚಾರ ಸಂಕಿರಣ

ಪಣಂಬೂರು : ಯುವವಾಹಿನಿ (ರಿ) ಪಣಂಬೂರು ಘಟಕದ ದಿನಾಂಕ 02-07-2018ನೇ ಸೋಮವಾರದಂದು ಪ್ರಕೃತಿ ಸಂರಕ್ಷಣೆ ಮತ್ತು ಮಾದಕ ವ್ಯಸನ” ಎನ್ನುವ ವಿಚಾರ ಸಂಕಿರಣ ಕಾರ್ಯಕ್ರಮ ಜರುಗಿತು . “ಪ್ರಕೃತಿ ಸಂರಕ್ಷಣೆ ಮತ್ತು ಮಾದಕ ವ್ಯಸನ” ಎನ್ನುವ ವಿಚಾರದ ವಿಚಾರ ಸಂಕಿರಣ ಜರಗಿತು. ಶ್ರೀ ಯೋಗೀಶ್ ಮಲ್ಲಿಗೆಮಾಡು, ರೋಶನಿ ನಿಲಯ, ಮಂಗಳೂರು ಇವರು ಅತ್ಯುತ್ತಮವಾದ ವಿಚಾರಗಳನ್ನು ಮಂಡಿಸಿದರು. ಈ ಪ್ರಕೃತಿ ಅದರ ವೈಶಿಷ್ಟ್ಯ, ನಾವು ಹೇಗೆ ಪ್ರಕೃತಿಯಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಪಡೆಯುತ್ತಿದ್ದೇವೆ, ಯಾವ ರೀತಿಯಾಗಿ ನಾವು ಪ್ರಕೃತಿಯ ಕೊಡುಗೆಯನ್ನು […]

Read More

ಯೋಗ ವಿಶ್ವದಲ್ಲಿ ಮಹತ್ತರ ಪಾತ್ರ ವಹಿಸಿದೆ : ರವೀಶ್ ಕುಮಾರ್

 ಕೂಳೂರು : ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರ ದಿನ ನಿತ್ಯದ ಕೆಲಸವೇ ಒಂದು ಯೋಗ ಆಗಿತ್ತು.ಬೆಳಿಗ್ಗೆ ಬೇಗ ಏಳುವುದು ಯೋಗ.ಶ್ರೀ ಕೃಷ್ಣ ಪರಮಾತ್ಮನು ಭಗವದ್ಗೀತೆಯಲ್ಲಿ ಈ ರೀತಿ ಹೇಳಿದ್ದಾರೆ – ನಮ್ಮ ಪಂಚೇಂದ್ರಿಯಗಳು 5 ಕುದುರೆಗಳು ಇದ್ದಂತೆ ಅವುಗಳನ್ನು ಕಡಿವಾಣ ಹಾಕಿ ಹತೋಟಿಯಲ್ಲಿ ಇಟ್ಟು ಕೊಳ್ಳುವುದೇ ಯೋಗ ,ಮುಖ್ಯವಾಗಿ ನಾವು ತಿನ್ನುವ ಆಹಾರದಲ್ಲಿ ಸಮತೋಲನ ಇರಬೇಕು. ಆಗ ಆರೋಗ್ಯವಂತರಾಗಿ ಇರುತ್ತೇವೆ ಎಂದರು . ಮನಸ್ಸನ್ನು ಹತೋಟಿಯಲ್ಲಿ ಇಟ್ಟು ಕೊಳ್ಳುವುದು ಮುಖ್ಯ .ಯೋಗವೇ ಆರೋಗ್ಯ ಆದ್ದರಿಂದ ಎಲ್ಲರೂ ಯೋಗ ಮಾಡಿ […]

Read More

ಸಂಸ್ಕೃತಿ ಉಳಿದರೆ ಪರಿಸರ ಉಳಿಯುತ್ತದೆ : ಯೋಗೀಶ್

ಕಂಕನಾಡಿ : ಸಂಸ್ಕೃತಿ ಉಳಿದರೆ ಪರಿಸರ ಉಳಿಯುತ್ತದೆ. ದೇಶದ ಅಭಿವೃದ್ಧಿ ಯಾಗಬೇಕಾದರೆ ಮಾನವರ ಅಭಿವೃದ್ಧಿಯಾಗಬೇಕು. ಸುಸ್ಥಿರ ಅಭಿವೃದ್ಧಿ ಗುರಿಗಳಿದ್ದರೆ ಮಾತ್ರ ಮಾನವರ ಅಭಿವೃದ್ಧಿ ಸಾಧ್ಯ ಎಂದು ರೋಶನಿ ನಿಲಯದ ಚೈಲ್ಡ್ ಲೈನ್ ನಗರ ಸಂಚಾಲಕರಾದ ಯೋಗಿಶ್ ಮಲ್ಲಿಗೆ ಮಾಡು ತಿಳಿಸಿದರು. ಅವರು ದಿನಾಂಕ 07-06-2018ರಂದು ಯುವವಾಹಿನಿ (ರಿ) ಕಂಕನಾಡಿ ಘಟಕದ ವಾರದ ಸಭೆಯಲ್ಲಿ “ತಂಬಾಕು ರಹಿತ ದಿನ” ಮತ್ತು “ವಿಶ್ವ ಪರಿಸರ ದಿನಾಚರಣೆ”ಯ ಪ್ರಯುಕ್ತ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಮಾದಕ ವ್ಯಸನಗಳಲ್ಲಿ ತಂಬಾಕು ಕೂಡ ಒಂದು. […]

Read More

ಕೌಟುಂಬಿಕ ವಲಯದಲ್ಲಿ ಹೆಣ್ಣಿನ ಪಾತ್ರ ಅದ್ಭುತ , ವರ್ಣನಾತೀತ : ಶಹನಾಜ್

ಮಂಗಳೂರು : ಕೌಟುಂಬಿಕ ವಲಯದಲ್ಲಿರುವ ವ್ಯಕ್ತಿಗಳಿಗೆ ಹೆಣ್ಣು ಆಸಕ್ತಿಯ, ಆತ್ಮ ಸಂಗಾತದ ವಿಷಯ. ತಾಯಿಯಾಗಿ, ತಂಗಿಯಾಗಿ, ಅಕ್ಕನಾಗಿ, ಹೆಂಡತಿಯಾಗಿ, ನಾದಿನಿಯಾಗಿ, ಅತ್ತಿಗೆಯಾಗಿ, ಅತ್ತೆಯಾಗಿ, ಗೆಳತಿಯಾಗಿ, ಪ್ರೇಮಿಯಾಗಿ ಆಕೆ ನಿರ್ವಹಿಸುವ ಪಾತ್ರಗಳು ಅದ್ಬುತ, ವರ್ಣನಾತೀತ. ಏಕೆಂದರೆ ಸ್ತ್ರೀ ಒಂದು ಸಮುದಾಯವನ್ನು ಸಮರ್ಥವಾಗಿ ಪ್ರತಿನಿಧಿಸುವ ಸಾಮರ್ಥ್ಯ ಹೊಂದಿರುವಂತಹವಳು. ಕೌಟುಂಬಿಕ ವಲಯದ ಸ್ತ್ರೀ ಕುಟುಂಬದ ಕಟ್ಟುಪಾಡುಗಳಿಗೆ ಒಳಗಾಗಿ ಜೀವನ ನಡೆಸುತ್ತಿದ್ದಾಳೆ ಹಾಗೂ ಆಕೆ ತನ್ನ ಕುಟುಂಕ್ಕಾಗಿ ಎಲ್ಲಾ ತ್ಯಾಗಕ್ಕೂ ಸಿದ್ದಳಾಗಿರುತ್ತಾಳೆ ಎಂದು ಅನುಪಮಾ ಮಹಿಳಾ ಮಾಸಿಕ ಪತ್ರಿಕೆಯ ಸಂಪಾದಕರು, ಹಾಗೂ ಸಾಹಿತಿ […]

Read More

ಜಿ.ಎಸ್.ಟಿ ಮಾಹಿತಿ ಕಾರ್ಯಾಗಾರ

ಯುವವಾಹಿನಿ (ರಿ) ಸುರತ್ಕಲ್ ಹಾಗೂ ಪಣಂಬೂರು ಘಟಕದ ಆಶ್ರಯದಲ್ಲಿ ದಿನಾಂಕ 30.04.2018 ರಂದು ಕುಳಾಯಿ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದಲ್ಲಿ ಜಿ.ಎಸ್.ಟಿ.ತರಿಗೆ ಮಾಹಿತಿ ಕಾರ್ಯಾಗಾರ ನಡೆಯಿತು. ಸೋಪ್ಟ್ ಲಿಂಕ್ ಸಂಸ್ಥೆಯ ಮೆನೇಜರ್ ಬಾಲಕೃಷ್ಣ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕಾರ್ಯಾಗಾರವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ‌ಯುವವಾಹಿನಿ ಸುರತ್ಕಲ್ ಘಟಕದ ಅಧ್ಯಕ್ಷರಾದ ಅಶೋಕ್ ಕೋಟ್ಯಾನ್, ಯುವವಾಹಿನಿ ಪಣಂಬೂರು ಘಟಕದ ಅಧ್ಯಕ್ಷರಾದ ಉದಯ ಕುಮಾರ್ ಯುವವಾಹಿನಿ ಸುರತ್ಕಲ್ ಘಟಕದ ಸಲಹೆಗಾರರಾದ ಸಾಧು ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಸುರತ್ಕಲ್ […]

Read More

ಅಂತರಂಗದಲ್ಲಿ ತಣ್ಣಗೆ ಹರಿದಾಡಿ ಮುದಗೊಳಿಸಿದ ಸಖೀ ಸಂವಾದ : ಪೂರ್ಣಿಮಾ ಸುರೇಶ್

ಸಖ್ಯ ಸುಖಕೆ ಪರಿಧಿ ಇದೆಯೇ? ಅಂತರಂಗದಲಿ ತಣ್ಣಗೆ ಹರಿದಾಡಿ ಮುದಗೊಳಿಸಿ,ಹಿತಾನುಭವ ಜೊತೆಜೊತೆಗೆ ಭದ್ರತೆಯ ಭಾವ ಉಣಿಸಿ ಸಮೃದ್ಧಗೊಳಿಸುವುದು.ಅಂತೇ ಸಖಿ- ಸಖ ಪದಗಳು ಪಂಚೇಂದ್ರಿಯಗಳ ಮುಟ್ಟಿದರೆ ಉಲ್ಲಾಸ. ತಂಗಾಳಿ ಸ್ಪರ್ಶಿಸಿದಂತೆ. ಈ ಭಾವ ನೆನಕೆಗೆ ದಿನಾಂಕ‌08.04.2018 ರಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ (ರಿ) ಉಡುಪಿ ಘಟಕದ ಆತಿಥ್ಯದಲ್ಲಿ ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್ ನಲ್ಲಿ ವಿಶ್ವ ಮಹಿಳಾ ದಿನಾಚರಣೆಯ ನೆನಪಿನಲ್ಲಿ ” ಸಖೀ ಸಂವಾದ” ಅರಳಿಸುವ ಜವಾಬ್ದಾರಿಯನ್ನ ನಿಭಾಯಿಸಿತ್ತು. ಹೆಸರಿನಲ್ಲೇ ಹೂವಿನಲಿ ಅಡಗಿಹ ಗಂಧದ ಸೆಳೆತ […]

Read More

ಉದ್ಯಮ ಶೀಲತಾ ಕೌಶಲ್ಯ ಜಾಗೃತಿ ಶಿಬಿರ

 ಅಡ್ವೆ : ಸ್ವ-ಉದ್ಯೋಗದ ಮೂಲಕ ತಾನು ಬೆಳೆಯುವುದರೊಂದಿಗೆ ಇತರರ ಬೆಳವಣಿಗೆಗೆ ಸಹಕಾರಿಯಾಗಿದೆ.ಸ್ವ ಉದ್ಯೋಗದಿಂದ ಸಮಾಜದ ಹಿತ ಅಡಗಿದೆ ಸಾವಿರಾರು ಉದ್ಯೋಗದ ಸ್ರಷ್ಟಿಯಾಗಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಯುವವಾಹಿನಿ(ರಿ) ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಜಯಂತ ನಡುಬೈಲು ತಿಳಿಸಿದರು ಅವರು ದಿನಾಂಕ 01.04.2018 ರಂದು ಯುವವಾಹಿನಿ(ರಿ) ಅಡ್ವೆ ಘಟಕದ ಆಶ್ರಯದಲ್ಲಿ ಅಡ್ವೆಆನಂದಿ ಸಭಾಭವನದಲ್ಲಿ ಜರುಗಿದ ಉದ್ಯಮ ಶೀಲತಾ ಕೌಶಲ್ಯ ಜಾಗೃತಿ ಶಿಬಿರ”ವನ್ನು ಉದ್ಘಾಟಿಸಿ ಮಾತನಾಡಿದರು . ಯುವವಾಹಿನಿ ಸದಸ್ಯರು ಸ್ವಾವಲಂಬಿಯಾಗಿ ಬದುಕಲು ಕಲಿಯಿರಿ, ಅದಕ್ಕೆ ಬೇಕಾದ […]

Read More

ಕಾನೂನು ಮಾಹಿತಿ ಶಿಬಿರ

ಯುವವಾಹಿನಿ (ರಿ) ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ವಕೀಲರ ಸಂಘ ಬೆಳ್ತಂಗಡಿ, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಬೆಳ್ತಂಗಡಿ,ಯುವವಾಹಿನಿ ಸಂಚಾಲನ ಸಮಿತಿ ವೇಣೂರು ಇದರ ಸಹಯೋಗದೊಂದಿಗೆ ದಿನಾಂಕ 30.08.2017 ರಂದು ಸರಕಾರಿ ಪದವಿ ಪೂರ್ವ ಕಾಲೇಜು ಕೊಕ್ರಾಡಿಯಲ್ಲಿ ನಡೆದ ಕಾನೂನು ಮಾಹಿತಿ ಶಿಬಿರವನ್ನು ಬೆಳ್ತಂಗಡಿ JMFC ನ್ಯಾಯಾಲಯದ ಸಿವಿಲ್ ನ್ಯಾಯಾಧೀಶರಾದ ಸತೀಶ್ ಉದ್ಘಾಟಿಸಿದರು. ಕಾರ್ಯಾಗಾರದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಗುರುನಾರಾಯಣ ಸ್ವಾಮೀ ಸೇವಾ ಸಂಘದ ಮಾಜಿ ನಿರ್ದೇಶಕ, ಕೊಕ್ರಾಡಿ SDMC ಅಧ್ಯಕ್ಷ ಸೂರ್ಯನಾರಾಯಣ ಡಿ.ಕೆ.ವಹಿಸಿ ಸತತ ಮೂರು ವರ್ಷಗಳಿಂದ ಕಾನೂನು […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 2026ನೇ ಜೂನ್ 14 ಭಾನುವಾರ ಬೆಳಗ್ಗೆ ಗಂಟೆ 9.00 ರಿಂದ
ಸ್ಥಳ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಅಸೋಸಿಯೇಷನ್ ಆಡಿಟೋರಿಯಂ ವಿಧಾನಸೌಧ ಬಳಿ, ಕಬ್ಬನ್ ಪಾರ್ಕ್ ಬೆಂಗಳೂರು

ಯುವವಾಹಿನಿ (ರಿ) ಬೆಂಗಳೂರು ಘಟಕ

ದಿನಾಂಕ : 2026ನೇ ಜೂನ್ 13 ಶನಿವಾರ ಸಂಜೆ ಗಂಟೆ 6.00 ರಿಂದ
ಸ್ಥಳ : ಮುಲ್ಕಿ , ಬಿಲ್ಲವ ಸಮಾಜ ಸೇವಾ ಸಂಘ(ರಿ)

ಯುವವಾಹಿನಿ (ರಿ) ಮುಲ್ಕಿ ಘಟಕ

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!