ಕೂಳೂರು : ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರ ದಿನ ನಿತ್ಯದ ಕೆಲಸವೇ ಒಂದು ಯೋಗ ಆಗಿತ್ತು.ಬೆಳಿಗ್ಗೆ ಬೇಗ ಏಳುವುದು ಯೋಗ.ಶ್ರೀ ಕೃಷ್ಣ ಪರಮಾತ್ಮನು ಭಗವದ್ಗೀತೆಯಲ್ಲಿ ಈ ರೀತಿ ಹೇಳಿದ್ದಾರೆ – ನಮ್ಮ ಪಂಚೇಂದ್ರಿಯಗಳು 5 ಕುದುರೆಗಳು ಇದ್ದಂತೆ ಅವುಗಳನ್ನು ಕಡಿವಾಣ ಹಾಕಿ ಹತೋಟಿಯಲ್ಲಿ ಇಟ್ಟು ಕೊಳ್ಳುವುದೇ ಯೋಗ ,ಮುಖ್ಯವಾಗಿ ನಾವು ತಿನ್ನುವ ಆಹಾರದಲ್ಲಿ ಸಮತೋಲನ ಇರಬೇಕು. ಆಗ ಆರೋಗ್ಯವಂತರಾಗಿ ಇರುತ್ತೇವೆ ಎಂದರು . ಮನಸ್ಸನ್ನು ಹತೋಟಿಯಲ್ಲಿ ಇಟ್ಟು ಕೊಳ್ಳುವುದು ಮುಖ್ಯ .ಯೋಗವೇ ಆರೋಗ್ಯ ಆದ್ದರಿಂದ ಎಲ್ಲರೂ ಯೋಗ ಮಾಡಿ ಆರೋಗ್ಯವಂತರಾಗಿ ಇರೋಣ ಎಂದರು ಯೋಗ ವಿಶ್ವದಲ್ಲಿ ಮಹತ್ತರ ಪಾತ್ರ ವಹಿಸಿದೆ.. ಎಂದು ಯುವವಾಹಿನಿ (ರಿ) ಮಂಗಳೂರು ಘಟಕದ ನಿಕಟಪೂರ್ವ ಅಧ್ಯಕ್ಷರಾದ ಹಾಗೂ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ(ರಿ) ಕರ್ಣಾಟಕ ಮಂಗಳೂರು ವಲಯ ಇದರ ಸ್ಥಾಪಕರಾದ ರವೀಶ್ ಕುಮಾರ್ ತಿಳಿಸಿದರು
ಅವರು ದಿನಾಂಕ 27.06.2018 ರಂದು ಯುವವಾಹಿನಿ (ರಿ) ಕೂಳೂರು ಘಟಕದ ಆಶ್ರಯದಲ್ಲಿ ಜರಗಿದ ಯೋಗದ ಬಗ್ಗೆ ಮಾಹಿತಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು . ಯುವವಾಹಿನಿ(ರಿ) ಕೂಳೂರು ಘಟಕದ ಅಧ್ಯಕ್ಷ ರಾದ ಲೋಕೇಶ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು . ಸಲಹೆಗಾರರಾದ ನೇಮಿರಾಜ್ ,ಉಪಾಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್ ,ನಿಕಟಪೂರ್ವ ಅಧ್ಯಕ್ಷರಾದ ಪುಷ್ಪ ರಾಜ್ ಕುಮಾರ್ ,ಗೋಪಾಲಕೃಷ್ಣ ಭಜನಾ ಮಂಡಳಿಯ ಅಧ್ಯಕ್ಷರಾದ ಗಿರಿಧರ್ ಸನಿಲ್ ,ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಅಧ್ಯಕ್ಷರಾದ ಜಯಾನಂದ ಅಮೀನ್, ಸ್ಥಾಪಕ ಅಧ್ಯಕ್ಷರಾದ ಸುಜಿತ್ ರಾಜ್,ಮಂಗಳೂರು ಮಹಿಳಾ ಘಟಕದ ನಿಕಟ ಪೂರ್ವ ಅಧ್ಯಕ್ಷರಾದ ಸುಪ್ರೀತಾ ಪೂಜಾರಿ ಇವರು ಉಪಸ್ಥಿತರಿದ್ದರು .ಅಧ್ಯಕ್ಷರು ಎಲ್ಲರನ್ನು ಸ್ವಾಗತಿಸಿದರು . ವಿನೀತ್ ಕುಮಾರ್ ಇವರು ಸಂಪನ್ಮೂಲ ವ್ಯಕ್ತಿಯಾದ ರವೀಶ್ ಕುಮಾರ್ ಇವರ ಪರಿಚಯವನ್ನು ಸಭೆಯ ಮುಂದಿಟ್ಟರು
ಮಾಹಿತಿ ಕಾರ್ಯಾಗಾರದ ನಂತರ ಮಂಗಳೂರು ವಿಶ್ವವಿದ್ಯಾನಿಲಯದ ಪಿ.ಜಿ.ಡಿಪ್ಲೋಮಾ ಇನ್ ಯೋಗಿಕ್ ಸೈನ್ಸ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಯುವ ವಾಹಿನಿ(ರಿ) ಮಹಿಳಾ ಘಟಕದ ಉಪಾಧ್ಯಕ್ಷರಾದ ಉಮಾ ಶ್ರೀಕಾಂತ್ ಇವರನ್ನು ಘಟಕದ ವತಿಯಿಂದ ಅಭಿನಂದಿಸಲಾಯಿತು . ಬಳಿಕ ಉಮಾ ಶ್ರೀಕಾಂತ್ ಇವರು ಮಾತನಾಡಿ ತಮ್ಮನ್ನು ಅಭಿನಂದಿಸಿದ ಯುವ ವಾಹಿನಿ ಕೂಳೂರು ಘಟಕಕ್ಕೆ ಧನ್ಯವಾದ ಸಲ್ಲಿಸಿದರು .ಕಾರ್ಯದರ್ಶಿ ಪವಿತ್ರ ಅಂಚನ್ ಧನ್ಯವಾದ ನೀಡಿದರು .