21-06-2015, 11:27 AM
ಬಂಟ್ವಾಳ: ಸಂಘಟನೆಯ ಬೆಳವಣಿಗೆಯಿಂದ ಸಾಮಾಜಿಕ ಜಾಗೃತಿ ಉಂಟಾಗುತ್ತದೆ. ನಿಸ್ವಾರ್ಥ ಮನೋಭಾವದ ಸಮಾಜ ಸೇವಕರು ಸಂಘಟಿತರಾದಾಗ ಸಾಮಾಜಿಕ, ಧಾರ್ಮಿಕ, ರಾಜಕೀಯ ಮಾತ್ರವಲ್ಲ ಆಧ್ಯಾತ್ಮಿಕ ಭಾವನೆಗಳು ಜಾಗೃತಗೊಳ್ಳುತ್ತದೆ. ಬಂಟ್ವಾಳ ತಾಲೂಕಿನ ಕೇಂದ್ರಸ್ಥಾನ ಬಿ.ಸಿ.ರೋಡಿನಲ್ಲಿ ಯುವವಾಹಿನಿಯ ಕಛೇರಿ ಯುವವಾಹಿನಿ ಭವನ ನಿರ್ಮಾಣವಾಗಿ ಸಂಘಟನೆಯು ಇನ್ನಷ್ಟು ಬಲಿಷ್ಠಗೊಂಡಿರುವುದು ಶ್ಲಾಘನೀಯ ಎಂದು ದ.ಕ.ಜಿಲ್ಲಾ ಮೂರ್ತೆದಾರರ ಮಹಾ ಮಂಡಲದ ಅಧ್ಯಕ್ಷರಾದ ಕೆ. ಸಂಜೀವ ಪೂಜಾರಿ ತಿಳಿಸಿದರು. ಅವರು ದಿನಾಂಕ 21-6-2015 ರಂದು ಬಿ.ಸಿ.ರೋಡಿನಲ್ಲಿ ನೂತನವಾಗಿ ನಿರ್ಮಾಣವಾದ ಯುವವಾಹಿನಿಯು ಬಂಟ್ವಾಳ ತಾಲೂಕು ಘಟಕದ ಕಛೇರಿ ಯುವವಾಹಿನಿ ಭವನದ ಉದ್ಘಾಟನಾ ಸಮಾರಂಭದಲ್ಲಿ […]
Read More
19-01-2014, 11:57 AM
ಸಾಮಾಜಿಕ ಸ್ಥಾನಮಾನ ಇಲ್ಲದ ವರ್ಗದವರಿಗೆ ಶಕ್ತಿ ತುಂಬುವ ಕಾರ್ಯವನ್ನು ಬ್ರಹ್ಮಶ್ರೀ ನಾರಾಯಣಗುರು ಮಾಡಿದ್ದಾರೆ. ಅವರ ತತ್ವ ಸಂದೇಶವನ್ನು ಯುವಕರು ಪಾಲಿಸಬೇಕು ಹಾಗೂ ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಕಳೆದ 25 ವರ್ಷಗಳ ಸಾಧನೆ ಶ್ಲಾಘನೀಯವಾದುದು ಎಂದು ಕೇಂದ್ರ ಸರಕಾರದ ಮಾಜಿ ವಿತ್ತ ಸಚಿವ ಬಿ. ಜನಾರ್ದನ ಪೂಜಾರಿ ತಿಳಿಸಿದರು. ಅವರು ದಿನಾಂಕ 19.01.2014ನೇ ಆದಿತ್ಯವಾರ ಬಿ.ಸಿ.ರೋಡ್ ಗಾಣದಪಡ್ಪು ನಾರಾಯಣಗುರು ನಗರದ ಕಾಂತಬಾರೆ ಬೂದಬಾರೆ ಸಭಾಂಗಣದ ಕೋಟಿ ಚೆನ್ನಯ ವೇದಿಕೆಯಲ್ಲಿ ಜರುಗಿದ ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ರಜತ ಸಂಭ್ರಮ […]
Read More
19-01-2014, 4:03 AM
ತಾನು ಪ್ರತಿನಿಧಿಸುವ ಕ್ಷೇತ್ರದಲ್ಲಿ ಕಿರಿಯರು ಮುಂದೆ ಬರಲು ಅವಕಾಶ ಕಲ್ಪಿಸಬೇಕು, ಇದ್ದಷ್ಟು ಸಮಯ ತಾನೇ ಇರಬೇಕು ಎಂಬ ನಿಯಮ ಸರಿಯಲ್ಲ, ಹಾಗೂ ಯುವಕರು ಯುವ ಬಿಲ್ಲವ ಸಮಾವೇಶ ಅತ್ಯಂತ ಯಶಸ್ವಿಯಾಗಿ ಸಂಘಟಿಸಿರುವುದು ಬಂಟ್ವಾಳ ಯುವವಾಹಿನಿಯ ಶಕ್ತಿಯನ್ನು ಅನಾವರಣಗೊಳಿಸಿದೆ ಎಂದು ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮೀನ್ ಮಟ್ಟು ತಿಳಿಸಿದರು. ಅವರು ದಿನಾಂಕ 19.01.2014ನೇ ಆದಿತ್ಯವಾರ ಬಿ.ಸಿ.ರೋಡ್ ಗಾಣದಪಡ್ಪು ನಾರಾಯಣಗುರು ನಗರದ ಕಾಂತಬಾರೆ ಬೂದಬಾರೆ ಸಭಾಂಗಣದ ಕೋಟಿ ಚೆನ್ನಯ ವೇದಿಕೆಯಲ್ಲಿ ಜರುಗಿದ ಯುವವಾಹಿನಿ ಬಂಟ್ವಾಳ ತಾಲೂಕು […]
Read More
07-10-2011, 4:42 AM
ಪ್ರಕೃತಿಯು ಯಾರ ಸೊತ್ತೂ ಅಲ್ಲ. ಮನುಷ್ಯನ ನಿಜವಾದ ನೋವು ಪ್ರಕೃತಿಗೆ ತಿಳಿದಿರುತ್ತದೆ. ಇಂತಹ ಸಂದರ್ಭದಲ್ಲಿ ದೇವರು ಮಹಾ ಗುರು ಒಬ್ಬನನ್ನು ಅವತಾರ ಪುರುಷನನ್ನಾಗಿಯೋ, ಮಹಾತ್ನನನ್ನಾಗಿಯೋ ಭೂಮಿಗೆ ಕಳುಹಿಸುತ್ತಾನೆ. ಇಂತಹವರು ಧರ್ಮದ ಪರಿಪಾಲನೆಗಾಗಿ ಬಹಳ ಶ್ರಮಿಸುತ್ತಿರುವುದರಿಂದ ಮನುಷ್ಯನು ಸುಖವನ್ನು ಕಾಣುತ್ತಾನೆ. ತನ್ನಂತೆ ಎಲ್ಲಾ ಮಾನವ ಜೀವಿಗಳಲ್ಲಿ ಭಗವಂತನನ್ನು ಕಂಡು ಎಲ್ಲರಿಗೂ ಬದುಕುವ ದಾರಿಯನ್ನು ತೋರಿಸುತ್ತಾನೆ. ನೂರ ಐವತ್ತೇಳು ವರ್ಷಗಳ ಹಿಂದೆ ಅಸ್ಪೃಶ್ಯತೆಯ ಕರಿ ನೆರಳು ಮನುಷ್ಯನ ಜೀವನದ ಮೇಲೆ ಪರಿಣಾಮ ಬೀರಿದಾಗ ದೇವರು ನಾರಾಯಣ ಗುರುಗಳನ್ನು ಅವತಾರ ಪುರುಷರನ್ನಾಗಿ […]
Read More
09-08-2009, 12:11 PM
ಯುವವಾಹಿನಿ ಬಂಟ್ವಾಳ ತಾಲೂಕು ಘಟಕವು 2008-09 ನೇ ಸಾಲಿನಲ್ಲಿ ಘಟಕದ ಅದ್ಯಕ್ಷ ಬಿ.ಶ್ರೀಧರ ಅಮೀನ್ ನೇತೃತ್ವದಲ್ಲಿ ಬಂಟ್ವಾಳ ತಾಲೂಕಿನಾದ್ಯಂತ 22 ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರ ಹಾಗೂ ಹಲವು ಕಡೆಗಳಲ್ಲಿ ವೆನ್ಲಾಕ್ ಆಸ್ಪತ್ರೆಯ ಬ್ಲಡ್ ಬ್ಯಾಂಕಿನ ಮೂಲಕ ರಕ್ತದಾನ ಶಿಬಿರಗಳನ್ನು ನಡೆಸಿದ್ದಕ್ಕಾಗಿ ಕರ್ನಾಟಕ ಸರಕಾರದ ಆರೋಗ್ಯ ಇಲಾಖೆಯು ಪ್ರಶಸ್ತಿ ಪತ್ರ ನೀಡಿ ಗೌರವಿಸಿದೆ. ಈ ಪ್ರಶಸ್ತಿ ಪತ್ರವನ್ನು ಬಂಟ್ವಾಳ ಕ್ಷೇತ್ರದ ಶಾಸಕರಾದ ಬಿ. ರಮಾನಾಥ ರೈ ಹಸ್ತಾಂತರಿಸಿದರು.
Read More