ಬಂಟ್ವಾಳ: ಸಂಘಟನೆಯ ಬೆಳವಣಿಗೆಯಿಂದ ಸಾಮಾಜಿಕ ಜಾಗೃತಿ ಉಂಟಾಗುತ್ತದೆ. ನಿಸ್ವಾರ್ಥ ಮನೋಭಾವದ ಸಮಾಜ ಸೇವಕರು ಸಂಘಟಿತರಾದಾಗ ಸಾಮಾಜಿಕ, ಧಾರ್ಮಿಕ, ರಾಜಕೀಯ ಮಾತ್ರವಲ್ಲ ಆಧ್ಯಾತ್ಮಿಕ ಭಾವನೆಗಳು ಜಾಗೃತಗೊಳ್ಳುತ್ತದೆ. ಬಂಟ್ವಾಳ ತಾಲೂಕಿನ ಕೇಂದ್ರಸ್ಥಾನ ಬಿ.ಸಿ.ರೋಡಿನಲ್ಲಿ ಯುವವಾಹಿನಿಯ ಕಛೇರಿ ಯುವವಾಹಿನಿ ಭವನ ನಿರ್ಮಾಣವಾಗಿ ಸಂಘಟನೆಯು ಇನ್ನಷ್ಟು ಬಲಿಷ್ಠಗೊಂಡಿರುವುದು ಶ್ಲಾಘನೀಯ ಎಂದು ದ.ಕ.ಜಿಲ್ಲಾ ಮೂರ್ತೆದಾರರ ಮಹಾ ಮಂಡಲದ ಅಧ್ಯಕ್ಷರಾದ ಕೆ. ಸಂಜೀವ ಪೂಜಾರಿ ತಿಳಿಸಿದರು.
ಅವರು ದಿನಾಂಕ 21-6-2015 ರಂದು ಬಿ.ಸಿ.ರೋಡಿನಲ್ಲಿ ನೂತನವಾಗಿ ನಿರ್ಮಾಣವಾದ ಯುವವಾಹಿನಿಯು ಬಂಟ್ವಾಳ ತಾಲೂಕು ಘಟಕದ ಕಛೇರಿ ಯುವವಾಹಿನಿ ಭವನದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಸೇಸಪ್ಪ ಕೋಟ್ಯಾನ್ ಯುವವಾಹಿನಿ ಭವನವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಶ್ರೀ ಪದ್ಮರಾಜ್, ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಪ್ರೇಮನಾಥ್ ಕೆ. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಕೆ ಮಾಡಿದರು. ಯುವವಾಹಿನಿ ಮಾಜಿ ಅಧ್ಯಕ್ಷರಾದ ಭುವನೇಶ್ ಪಚ್ಚಿನಡ್ಕರವರು ಯುವವಾಹಿನಿ ಭವನ ನಿರ್ಮಾಣಕ್ಕೆ ಸಹಕಾರ ನೀಡಿದ ಎಲ್ಲರನ್ನು ಅಭಿನಂದಿಸಿದರು. ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾದ ರಾಜೇಶ್ ಸುವರ್ಣ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಯುವವಾಹಿನಿ ಭವನ ನಿರ್ಮಾಣಕ್ಕೆ ಸ್ಥಳಾವಕಾಶ ಒದಗಿಸಿದ ಯುವವಾಹಿನಿಯ ಮಾಜಿ ಅಧ್ಯಕ್ಷರಾದ ಶ್ರೀ ರಾಜೇಶ ಬಿ. ದಂಪತಿಗಳನ್ನು ಅಭಿನಂದಿಸಲಾಯಿತು.
ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಜೇತರಾದ ಯುವವಾಹಿನಿಯ ಸದಸ್ಯರಾದ ಶ್ರೀಮತಿ ಬಬಿತಾ ಕೋಟ್ಯಾನ್, ಶ್ರೀ ಯೋಗಿಶ್ ಸುವರ್ಣ, ಶ್ರೀಮತಿ ಜಯಶ್ರೀ ಕರ್ಕೆರಾ, ಶ್ರೀ ಸುನಿಲ್ ಕುಮಾರ್ ಕಾಯರ್‌ಮಾರ್ ಹಾಗೂ ಬಂಟ್ವಾಳ ಪುರಸಭೆಯ ನಾಮನಿರ್ದೇಶಿತ ಸದಸ್ಯರಾದ ಲೋಕೇಶ್ ಸುವರ್ಣರನ್ನು ಅಭಿನಂದಿಸಲಾಯಿತು. ಯುವಾಹಿನಿಯ ಮಾಜಿ ಅಧ್ಯಕ್ಷರಾದ ತಾರಾನಾಥ ಕೆ. ಸನ್ಮಾನಿತರನ್ನು ಪರಿಚಯಿಸಿದರು.
ಯುವವಾಹಿನಿ ಬಂಟ್ವಾಳದ ಮಾಜಿ ಅಧ್ಯಕ್ಷರಾದ ಬಿ. ಶ್ರೀಧರ ಅಮೀನ್ ಪ್ರಸ್ತಾವನೆ ಮಾಡಿದರು. ಮಾಜಿ ಅಧ್ಯಕ್ಷರಾದ ಹರೀಶ್ ಎಸ್. ಕೋಟ್ಯಾನ್ ಸ್ವಾಗತಿಸಿದರು. ಕಾರ್ಯದರ್ಶಿ ಕು| ಸುಲತಾ ವಂದಿಸಿದರು. ಯುವವಾಹಿನಿ ಸಂಘಟನಾ ಕಾರ್ಯದರ್ಶಿ ದಿನೇಶ್ ಕೆ. ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.