ಯುವವಾಹಿನಿ(ರಿ) ಬಂಟ್ವಾಳ ತಾಲೂಕು ಘಟಕ

ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕ ನಡೆದು ಬಂದ ದಾರಿ

ಲೋಕ ಶಾಂತಿ ಹರಿಕಾರ ಬ್ರಹ್ಮಶ್ರೀ ನಾರಾಯಣಗುರುವರ್ಯರ ತತ್ವಾದರ್ಶದ ನೆಲೆಯಲ್ಲಿ ವಿದ್ಯೆಯಿಂದ ಸ್ವತಂತ್ರರಾಗಿರಿ ಸಂಘಟನೆಯಿಂದ ಬಲಯುತರಾಗಿರಿ ಎಂಬ ಬೋಧನೆಯ ಅನುಸಾರ ವಿದ್ಯೆ-ಉದ್ಯೋಗ-ಸಂಪರ್ಕ ಎಂಬ ಮೂರು ಮುಖ್ಯ ಧ್ಯೇಯಗಳನ್ನಿಟ್ಟುಕೊಂಡು ಸಮಾಜ ಅಭ್ಯುದಯದ ಕೈಂಕರ್ಯಕ್ಕಾಗಿ 1987  ಅಕ್ಟೋಬರ್ 2 ರಂದು ಸುಂಕದಕಟ್ಟೆಯ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನದ ಸನ್ನಿಧಿಯಲ್ಲಿ ಅಸ್ತಿತ್ವಕ್ಕೆ ಬಂದ ಬಿಲ್ಲವ ಸಮಾಜದ ನಿಸ್ವಾರ್ಥ ಸಮಾನ ಮನಸ್ಕ ಯುವಕರ ಸಂಘಟನೆ ಯುವವಾಹಿನಿ.

ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಔದ್ಯೋಗಿಕವಾಗಿ ಸಮಾಜದಲ್ಲಿ ಬಿಲ್ಲವರು ಬಲಿಷ್ಠರಾಗಬೇಕು ಎಂಬ ಸಂಕಲ್ಪದಲ್ಲಿ ಯುವವಾಹಿನಿ 1987 ರಿಂದಲೂ ಕೆಲಸ ನಿರ್ವಹಿಸುತ್ತಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಒಟ್ಟು 24 ಘಟಕಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಅವುಗಳಲ್ಲಿ ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕವೂ ಒಂದು ಪ್ರತಿಷ್ಠಿತ ಘಟಕ.

ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕವು 14-2-1988 ರಲ್ಲಿ ಬಿ. ತಮ್ಮಯರವರ ನೇತೃತ್ವದಲ್ಲಿ ಪ್ರಾರಂಭವಾಯಿತು. ಪ್ರಾರಂಭದಲ್ಲಿ ಸುಮಾರು ಹತ್ತು ಹನ್ನೆರಡು ವಿದ್ಯಾವಂತ ಉದ್ಯೋಗಸ್ಥ ಸದಸ್ಯರಿಂದ ಪ್ರಾರಂಭವಾದ ಈ ಘಟಕ ಈಗ ನೂರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ.

ಯುವ ಪ್ರತಿಭೆಗಳಿಗೆ ವೇದಿಕೆಯಾಗಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರಸ್ವತಿಯಾಗಿ, ರೋಗಿಗಳಿಗೆ ಸಂಜೀವಿನಿಯಾಗಿ, ಅಮಾಯಕರಿಗೆ ಕರುಣಾಮಯಿಯಾಗಿ ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕವು ಜೀವನದಿ ನೇತ್ರಾವತಿಯ ಮಡಿಲಲ್ಲಿ ಕ್ರಿಯಾಶೀಲ ಕಾರ್ಯಕ್ರಮಗಳ ಮೂಲಕ ಎಲ್ಲಾ ಕ್ಷೇತ್ರಗಳಲ್ಲಿ ನಿರಂತರವಾಗಿ ಕಾರ್ಯಾಚರಿಸುತ್ತಿದೆ ಎನ್ನಲು ಹೆಮ್ಮೆ ಎನಿಸುತ್ತದೆ. ಸಮಾಜದ ಹಿರಿಯರ ಸಲಹೆ, ಮಾರ್ಗದರ್ಶನ, ಹಿತಚಿಂತಕರು, ಪ್ರಾಜ್ಞರುಗಳ ಜೊತೆ ವಿಚಾರ ವಿನಿಮಯ ನಡೆಸಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಬಂಟ್ವಾಳ ತಾಲೂಕಿನಾದ್ಯಂತ ನಡೆಸಿ ಜನಮಾನಸದಲ್ಲಿ ನೆಲೆನಿಂತಿದೆ.

ವಿದ್ಯೆ: ವಿದ್ಯೆಗೆ ಪೂರಕವಾಗಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ, ದತ್ತು ಸ್ವೀಕಾರ, ಶೈಕ್ಷಣಿಕ ಮತ್ತು ವೃತ್ತಿ ಮಾರ್ಗದರ್ಶನ ಶಿಬಿರ, ವಿವಿಧ ಕೋರ್ಸ್‌ಗಳ ಬಗ್ಗೆ ಮಾಹಿತಿ, ಪರೀಕ್ಷೆ ಎದುರಿಸುವ ಬಗ್ಗೆ ತರಬೇತಿ, ಪ್ರೇರಣಾ ಶಿಬಿರ, ವ್ಯಕ್ತಿತ್ವ ವಿಕಸನ, ನಾಯಕತ್ವ ತರಬೇತಿ ಮತ್ತು ಐ.ಎ.ಎಸ್, ಐ.ಪಿ.ಎಸ್. ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ತರಬೇತಿ ಹೀಗೆ ಸಾಲು ಸಾಲು ಕಾರ್ಯಕ್ರಮಗಳು ನಡೆದಿದೆ.

ಉದ್ಯೋಗ: ಉದ್ಯೋಗಕ್ಕೆ ಪೂರಕವಾಗಿ ಸ್ವ-ಉದ್ಯೋಗ ತರಬೇತಿ, ಉದ್ಯೋಗ ಸೇವಾ ಕೇಂದ್ರ, ಉದ್ಯೋಗ ಮಾಹಿತಿ ರವಾನೆ, ಉದ್ಯೋಗ ಮಾರ್ಗದರ್ಶಿ ಶಿಬಿರ ಮುಂತಾದ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದೆ.

ಸಂಪರ್ಕ: ಸಂಪರ್ಕದ ನೆಲೆಯಲ್ಲಿ ಅನೇಕ ಕಾರ್ಯಕ್ರಮಗಳು, ಸರಕಾರದ ಕೆಲವು ಸವಲತ್ತುಗಳನ್ನು ಅರ್ಹ ಸಮಾಜ ಬಾಂಧವರಿಗೆ ಒದಗಿಸುವಲ್ಲಿ ಸಹಕಾರ ನೀಡಿದ ತೃಪ್ತಿ ಬಂಟ್ವಾಳ ಘಟಕದ್ದು. ವೃದ್ಧಾಪ್ಯ ವೇತನ, ಅಂಗವಿಕಲ ವೇತನ, ವಿಧವಾ ವೇತನ, ಆಶಾಕಿರಣ, ಅಪಘಾತ ವಿಮಾ ಯೋಜನೆ, ವೈಯಕ್ತಿಕ ವಿಮಾ ಯೋಜನೆ, ಕೃಷಿ ಕಾರ್ಮಿಕರ ವಿಮಾ ಯೋಜನೆ ಮೊದಲಾದ ಸೌಲಭ್ಯಗಳ ವಿವರಗಳನ್ನು ಸಂಗ್ರಹಿಸಿ ಸಮಾಜ ಬಾಂಧವರಿಗೆ ತಿಳಿಸಲಾಗಿದೆ. ಕೃಷಿಕರಿಗೆ ಮಣ್ಣಿನ ಪರೀಕ್ಷೆ ಮತ್ತು ಕೃಷಿ ಸವಲತ್ತುಗಳ ಬಗ್ಗೆ ಮಾಹಿತಿ ಶಿಬಿರ, ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಸಾಮೂಹಿಕ ಸಸಿ ವಿತರಣೆ ಹಾಗೂ ವನಮಹೋತ್ಸವವನ್ನು ಆಚರಿಸಲಾಗಿದೆ.

ಪ್ರತಿ ವರ್ಷವು ರಕ್ತದಾನ ಶಿಬಿರವನ್ನು ನಡೆಸಲಾಗುತ್ತಿದೆ. ತುರ್ತು ಸಂದರ್ಭದಲ್ಲಿ ರಕ್ತ ನೀಡಿ ಜೀವ ಉಳಿಸುವ ಮೂಲಕ ಸಮಾಜ ಸೇವೆ ಮಾಡುತ್ತಿದೆ. ಆರೋಗ್ಯ ಶಿಬಿರ ಏರ್ಪಡಿಸುವ ಮೂಲಕ ಜನರಲ್ಲಿ ಆರೋಗ್ಯ ಪ್ರಜ್ಞೆ ಮೂಡಿಸಿದೆ. ಉಚಿತ ಕಣ್ಣು ಪರೀಕ್ಷೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ, ಉಚಿತ ದಂತ ಚಿಕಿತ್ಸಾ ಶಿಬಿರ, ಆಯುರ್ವೇದ ಗಿಡಮೂಲಿಕೆಗಳ ಮಾಹಿತಿ ಶಿಬಿರ, ವರ್ಷದಲ್ಲಿ ಅತೀ ಹೆಚ್ಚು ಕಣ್ಣು ಪರೀಕ್ಷಾ ಶಿಬಿರಗಳನ್ನು ಏರ್ಪಡಿಸಿದ ಸಂಸ್ಥೆಯೆಂದು ರಾಜ್ಯ ಸರಕಾರದಿಂದ ಪುರಸ್ಕಾರವನ್ನು ಕೂಡಾ ಪಡಕೊಂಡಿದೆ.

ಅಧ್ಯಯನ ಪ್ರವಾಸ, ಗ್ರಾಮೀಣ ಪ್ರತಿಭೆಗಳ ಗುರುತಿಸುವಿಕೆ, ಸನ್ಮಾನ, ಗುರು ಸಂದೇಶ ಯಾತ್ರೆ, ಬಿ.ಸಿ.ರೋಡಿನ ಅನ್ನಪೂರ್ಣೇಶ್ವರಿ ದೇವಸ್ಥಾನ ಹಾಗೂ ಕುದ್ರೋಳಿ ದಸರಾ ಮಹೋತ್ಸವದಲ್ಲಿ ನಮ್ಮ ಘಟಕದ ಸದಸ್ಯರು ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಂಪರ್ಕದ ಕೊಂಡಿಯಾಗಿ ನಮ್ಮ ಸಮಾಜದ ನೈಜ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಬೈದ್ಯಶ್ರೀ ಕ್ರೀಡೋತ್ಸವ ನಡೆಸಿಕೊಂಡು ಬರುತ್ತಿದ್ದೇವೆ. ತುಳು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಒಂದು ವೈಶಿಷ್ಟಪೂರ್ಣ ಕಾರ್ಯಕ್ರಮ ಆಟಿದ ಒಂಜಿ ದಿನ, ತುಳುವೆರೆ ತುಡಾರ ಪರ್ಬ. ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಯುವಕರಿಗೆ ಪರಿಚಯಿಸುವ ಮೂಲಕ ಅವರಲ್ಲಿ ಸೃಜನಶೀಲತೆಯನ್ನು ಬೆಳೆಸಲಾಗುತ್ತಿದೆ. ಯುವವಾಹಿನಿ ಪ್ರಕಾಶನದ ಮೂಲಕ ಬಂಟ್ವಾಳ ಘಟಕವು ಸುಮಾರು ಏಳು ಪುಸ್ತಕಗಳನ್ನು ಹೊರತಂದಿದೆ. ಪ್ರತಿ ವರ್ಷವೂ ಯುವವಾಹಿನಿ (ರಿ) ಕೇಂದ್ರ ಸಮಿತಿಯ ವಾರ್ಷಿಕ ಸಮಾವೇಶ ಮತ್ತು ವಿಶುಕುಮಾರ್ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಸುತ್ತಿದ್ದು ನಮ್ಮ ಘಟಕದ ಆತಿಥ್ಯದಲ್ಲಿ ನಾಲ್ಕು ಬಾರಿ ಈ ಸಮಾವೇಶ ನಡೆಸಲಾಗಿದೆ.

ಸ್ಪಂದನ: ಸ್ಪಂದನ ಕಾರ್ಯಕ್ರಮದ ಮೂಲಕ ಆರ್ಥಿಕ ಶಕ್ತಿ ಹೊಂದಿರುವ ಯುವವಾಹಿನಿಯ ಸದಸ್ಯರು ಒಂದಷ್ಟು ಹಣ ಒಟ್ಟು ಮಾಡಿ ಕಷ್ಟದಲ್ಲಿರುವ ಸಮಾಜದ ಜನರ ಮನೆಗಳಿಗೆ ಭೇಟಿ ಮಾಡಿ ಅವರಿಗೆ ಹಣ ನೀಡಿ ಸಾಂತ್ವನ ನೀಡುತ್ತಿದ್ದಾರೆ.

ಗುರು ಜಯಂತಿ : ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತಿ ದಿನದಂದು ಬಿ.ಸಿ.ರೋಡಿನ ಸಮಾಜ ಕಲ್ಯಾಣ ಇಲಾಖಾ ವಸತಿ ಶಾಲೆಯ ಮಕ್ಕಳಿಗೆ ಪುಸ್ತಕ, ಪೆನ್ನು, ಸಿಹಿತಿಂಡಿ, ಹಣ್ಣು ಹಂಪಲು ವಿತರಿಸಿ ಗುರುಗಳ ಸಂದೇಶಗಳ ಬಗ್ಗೆ ಉಪನ್ಯಾಸ ನೀಡುವ ಕಾರ್ಯಕ್ರಮ ಪ್ರತಿ ವರ್ಷ ಹಮ್ಮಿಕೊಳ್ಳುತ್ತಿದ್ದೇವೆ. ಈ ವರ್ಷ ಕುದನೆಗುಡ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೂಡಾ ಗುರು ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗುರುವರ್ಯರ ತತ್ವಾದರ್ಶಗಳನ್ನು ಎಲ್ಲಾ ಸಮಾಜ ಬಾಂಧವರಿಗೆ ತಿಳಿಯಪಡಿಸುವ ಉದ್ದೇಶದಿಂದ ನಮ್ಮ ತಾಲೂಕಿನ ಪ್ರಾಥಮಿಕ, ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಗುರುಗಳ ಬಗ್ಗೆ ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಮತ್ತು ಚಿತ್ರಕಲಾ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಗಿದೆ.

ಸಂಘಟನೆ: ಬಂಟ್ವಾಳ ತಾಲೂಕಿನ ನಮ್ಮ ಸಮಾಜದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಸ್ಥಿತಿ-ಗತಿಗಳ ಬಗ್ಗೆ ತಿಳಿಯುವ ಉದ್ದೇಶದಿಂದ ತಾಲೂಕಿನ 84 ಗ್ರಾಮಗಳಲ್ಲಿಯೂ ಸರ್ವೆ ಕಾರ್ಯ ನಡೆಸುವ ಯೋಜನೆ ರೂಪಿಸಿದ್ದೇವೆ.

ದಿನಾಂಕ 19-1-2014 ರಂದು ನಮ್ಮ ಘಟಕದ ರಜತ ಸಂಭ್ರಮ, ಯುವ ಬಿಲ್ಲವ ಸಮಾವೇಶ, ಹಾಗೂ ಗುರು ಸಂದೇಶ ಯಾತ್ರೆಯು ವಿಜೃಂಭನೆಯಿಂದ ಜರುಗಿದೆ. ಹತ್ತು ಸಹಸ್ರಕ್ಕೂ ಅಧಿಕ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸಿ ಯುವವಾಹಿನಿಯ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ.

ಬಂಟ್ವಾಳ ತಾಲೂಕಿನ ಕೇಂದ್ರ ಸ್ಥಳ ಬಿ.ಸಿ.ರೋಡಿನಲ್ಲಿ ಘಟಕವು ಯುವವಾಹಿನಿ ಭವನ ಎಂದು ಸ್ವಂತ ಕಛೇರಿ ಹೊಂದಿದೆ.

ವರುಷಕ್ಕೊಂದು ಮನೆ ಹರುಷಕ್ಕೊಂದು ನೆಲೆ ಎಂಬ ಧ್ಯೇಯ ವಾಕ್ಯದೊಂದಿಗೆ ಬಡ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಡಲಾಗುತ್ತಿದೆ.

ನಮ್ಮ ಕೃತಜ್ಞತೆಗಳು: ನಮಗೆ ನಿರಂತರ ಸಲಹೆ, ಸೂಚನೆ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸುತ್ತಿರುವ ಬಂಟ್ವಾಳ ತಾಲೂಕು ಬಿಲ್ಲವರ ಸಮಾಜ ಬಾಂಧವರ ಸರ್ವೆ ಕಾರ್ಯಕ್ಕೆ ಅಭೂತಪೂರ್ವ ಬೆಂಬಲ ದೊರಕಿದ್ದು ಸಹಕರಿಸಿದ ಎಲ್ಲಾ ಗ್ರಾಮದ ಸಮಾಜ ಬಾಂಧವರಿಗೆ ಹೃದಯಾಂತರಾಳದ ಕೃತಜ್ಞತೆಗಳು.

ನಮ್ಮ ಆರ್ಥಿಕ ಭಾರವನ್ನು ಕಡಿಮೆಗೊಳಿಸಲು ಸಹಕರಿಸಿದ ಎಲ್ಲಾ ಮಹನೀಯರುಗಳಿಗೆ ಸಂಘಟನೆಯನ್ನು ಮುನ್ನಡೆಸಿ ಇಂದಿಗೂ ನಮ್ಮೊಂದಿಗೆ ಇದ್ದು ಪ್ರೋತ್ಸಾಹಿಸುತ್ತಿರುವ ಎಲ್ಲಾ ಮಾಜಿ ಅಧ್ಯಕ್ಷರುಗಳಿಗೆ, ನಮಗೆ ಸದಾ ಸಲಹೆ ಸೂಚನೆಗಳನ್ನು ನೀಡುತ್ತಿರುವ ನಮ್ಮ ಸಲಹೆಗಾರರಿಗೆ ವಂದನೆಗಳನ್ನು ಸಲ್ಲಿಸುತ್ತಿದ್ದೇವೆ.

ಸಂಘಟಿತ ಶಕ್ತಿ ಮತ್ತು ಸಮಗ್ರ ಶಿಕ್ಷಣ ಇವು ಸಮಾಜವನ್ನು ಪೂರ್ಣ ಪ್ರಗತಿಗೆ ಅವಲಂಭಿಸಬಹುದಾದ ಎರಡು ಆಧಾರ ಸ್ತಂಭಗಳು. ಮಾನವ ಸಮಾಜದ ಉನ್ನತಿಗೆ ವಿದ್ಯೆಯೇ ಯೋಗ್ಯ ಮಾರ್ಗದರ್ಶನವಾಗಿರುವುದರಿಂದ ನಾವೆಲ್ಲ ನಮ್ಮ ಅಭ್ಯುದಯಕ್ಕೆ ವಿದ್ಯೆಗೆ ಹೆಚ್ಚಿನ ಪ್ರೋತ್ಸಾಹವನ್ನು ಕೊಡಬೇಕು. ಗುರುವರ್ಯರ ಈ ತತ್ವವನ್ನೇ ದೃಷ್ಠಿಯಲ್ಲಿರಿಸಿಕೊಂಡು ಘಟಕವು ಸ್ಫೂರ್ತಿಯಿಂದ ಸಮಾಜದ ಒಳಿತಿಗಾಗಿ ವರ್ಷವಿಡೀ ಕಾರ್ಯಕ್ರಮಗಳ ವಾಹಿನಿಯು ಹರಿಯುತ್ತಿರುವಂತೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇವೆ. ಸಮಾಜದ ಹಿರಿಯರ ಸಲಹೆ, ಮಾರ್ಗದರ್ಶನ, ನಮ್ಮ ಸಮಾಜ ಬಾಂಧವರು ನಿರಂತರವಾಗಿ ನೀಡುತ್ತಿರುವ ಪ್ರೋತ್ಸಾಹ, ತೆರೆಮರೆಯಲ್ಲಿ ನಿಸ್ವಾರ್ಥದಿಂದ ಕೆಲಸ ಮಾಡುತ್ತಿರುವ ಸದಸ್ಯರ ಶ್ರಮ ಇವುಗಳೇ ನಮ್ಮ ಸರ್ವತೋಮುಖ ಸಾಧನೆಯ ಹಿಂದಿನ ಶಕ್ತಿ ಎಂದರೆ ತಪ್ಪಾಗಲಾರದು.
ಮುಂದಿನ ದಿನಗಳಲ್ಲಿ ತಮ್ಮಿಂದ ಇನ್ನಷ್ಟು ಸಹಕಾರವನ್ನು ಬಯಸುತ್ತಾ ಯುವವಾಹಿನಿಯ ಮುಂದೆ ಸಾಕಷ್ಟು ಕನಸುಗಳಿವೆ, ಅವುಗಳಿಗಾಗಿ ದುಡಿಯುವ ಮನಸುಗಳಿಗೆ ಶ್ರಮಿಸುವ ಕೈಗಳಿವೆ, ಹರಸುವ ನೀವುಗಳಿದ್ದರೆ ನಮ್ಮ ಕನಸು ಸಾರ್ಥಕವಾದೀತು. ಯುವವಾಹಿನಿ ಸದಸ್ಯರ ಸತ್ ಚಿಂತನೆಗಳಿಂದ ಹೊರಹೊಮ್ಮಿದ ಅದ್ಭುತವಾದ ಕೆಲಸಗಳೆಲ್ಲವನ್ನು ಶಬ್ದಗಳಲ್ಲಿ ಸೆರೆ ಹಿಡಿದು ಬಣ್ಣಿಸಲು ನಮ್ಮಿಂದ ಸಾಧ್ಯವಾಗದು. ಆದರೆ ನಮ್ಮ ಈ ಎಲ್ಲಾ ಸಾಧನೆಗಳ ಯಶಸ್ವಿನ ಹಿಂದೆ ಇರುವ ಎಲ್ಲರಿಗೂ ನಮ್ಮ ಹೃದಯಾಂತರಾಳದ ನಮನಗಳು. ಎಲ್ಲರಿಗೂ ಕುದ್ರೋಳಿ ಗೋಕರ್ಣನಾಥ, ಕೋಟಿ ಚೆನ್ನಯ ಶಕ್ತಿಗಳು ಹಾಗೂ ಪರಮಪೂಜ್ಯ ಬ್ರಹ್ಮಶ್ರೀ ನಾರಾಯಣಗುರುಗಳು ಉತ್ತಮ ಭವಿಷ್ಯವನ್ನು ಕರುಣಿಸಲೆಂದು ಪ್ರಾರ್ಥನೆ.

5 thoughts on “ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕ ನಡೆದು ಬಂದ ದಾರಿ

  1. Yuvavahini Bantwal ghatakadha samagrha chithranavannu parichayisidha thamage anantha anantha namanagalu. Nimma abiruddige nanna subha harikegalu.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 16-11-2024
ಸ್ಥಳ : ಯುವವಾಹಿನಿ ಸಭಾಂಗಣ 3ನೇ ಮಹಡಿ, ರಘು ಬಿಲ್ಡಿಂಗ್ ಊರ್ವ ಸ್ಟೋರ್, ಮಂಗಳೂರು

ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕ

ದಿನಾಂಕ : 15-11-2024
ಸ್ಥಳ : ಸಿ. ಎಸ್. ಐ. ಬಾಲಿಕಾಶ್ರಮ, ಮೂಲ್ಕಿ

ಯುವವಾಹಿನಿ (ರಿ.) ಮೂಲ್ಕಿ ಘಟಕ

ದಿನಾಂಕ : 23-11-2024
ಸ್ಥಳ : ಸಂಪಿಗೆ ನಗರ, ಉದ್ಯಾವರ ಉಡುಪಿ

ಯುವವಾಹಿನಿ (ರಿ) ಉಡುಪಿ ಘಟಕ

ದಿನಾಂಕ : 24-11-2024
ಸ್ಥಳ : ನಾಗಪ್ಪ ಕಾಂಪ್ಲೆಕ್ಸ್ , ಎನ್ .ಹೆಚ್-66, ಬಲಾಯಿಪಾದೆ, ಉಡುಪಿ

ಯುವವಾಹಿನಿ (ರಿ) ಉಡುಪಿ ಘಟಕ

ದಿನಾಂಕ : 17-11-2024
ಸ್ಥಳ : ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ, ಹೆಜಮಾಡಿ

ಯುವವಾಹಿನಿ (ರಿ) ಪಡುಬಿದ್ರಿ ಘಟಕ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ಹಾಗೂ ಕೇಂದ್ರ ಸಮಿತಿ, ಮಂಗಳೂರು.

ಆರ್ಥಿಕತೆಯ ಸಂಕಷ್ಟದ ವಿದ್ಯಾರ್ಥಿಗಳಿಗೆ ಯುವವಾಹಿನಿಯ ವಿದ್ಯಾನಿಧಿ ಸಂಜೀವಿನಿಯಾಗಿದೆ : ಪದ್ಮನಾಭ ಮಾಣಿಂಜ

ಮಂಗಳೂರು:- ವಿದ್ಯೆ ನಮ್ಮನ್ನು ಯಾರ ಮತ್ತು ಯಾವುದರ ಹಂಗೂ ಇಲ್ಲದೆ ಅಸಹಾಯಕತೆ ಎನ್ನುವ ಪದವೇ ಇಲ್ಲದೆ ನಮ್ಮನ್ನು ನಾವು ಬೆಳೆಸಿಕೊಳ್ಳಬೇಕು. ಅದಕ್ಕೆ ಬಡತನ, ಆರ್ಥಿಕತೆ, ಯಾವುದೂ ಅಡ್ಡಿ ಬರಬಾರದು. ನನಗೂ ಸಹಾಯ ಮಾಡುವವರಿದ್ದರೆ ನಾನೂ ಕಲಿಯುತ್ತಿದ್ದೆ ಎನ್ನುವ ವಿದ್ಯಾರ್ಥಿ ಸಮೂಹಕ್ಕೆ ಯುವವಾಹಿನಿಯ...

Tuesday, 13-12-2022
error: Content is protected !!