13-09-2018, 1:47 PM
ಕುಪ್ಪೆಪದವು :ಯುವವಾಹಿನಿ (ರಿ) ಕುಪ್ಪೆಪದವು ಘಟಕದಿಂದ ಇಲ್ಲಿನ ಸ್ಥಳೀಯ ನಿವಾಸಿ ಬಡ ಕುಟುಂಬದ ಶೇಖರ್ ಪೂಜಾರಿ ದುರ್ಗಕೊಡಿ ಇವರ ಮಗುವಿನ ಅನಾರೋಗ್ಯದ ನಿಮಿತ್ತ ದಿನಾಂಕ 13/09/2018 ರಂದು ವೈದ್ಯಕೀಯ ನೆರವು ನೀಡಲಾಯಿತು . ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಅರುಣ್ ಕುಮಾರ್ ,ಉಪಾಧ್ಯಕ್ಷರಾದ ಅಜಯ್ ಅಮೀನ್.ಕಾರ್ಯದರ್ಶಿ ರಿತೇಶ್ ನೆಲ್ಲಚಿಲ್ ಹಾಗೂ ಘಟಕದ ಪದಾಧಿಕಾರಿಗಳು ಸದಸ್ಯರು ಪಾಲ್ಗೊಂಡಿದ್ದರು
Read More
29-08-2018, 3:04 PM
ಕೂಳೂರು : ಯುವವಾಹಿನಿ(ರಿ) ಕೂಳೂರು ಘಟಕದ ವತಿಯಿಂದ ದಿನಾಂಕ 29/08/2018 ರಂದು ಕಣ್ಣಿನ ಆರೋಗ್ಯದ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು ಸಂಪನ್ಮೂಲ ವ್ಯಕ್ತಿಯಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಯ ನೇತ್ರ ತಜ್ಞರಾದ ಡಾ। ಸೌಮ್ಯಾ ಇವರು ಕಣ್ಣಿನ ಆರೋಗ್ಯದ ಬಗ್ಗೆ ಮಾಹಿತಿಯನ್ನು ನೀಡಿದರು . ಯುವವಾಹಿನಿ(ರಿ) ಕೂಳೂರು ಘಟಕದ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ಸಲಹೆಗಾರರಾದ ನೇಮಿರಾಜ್, ಯುವವಾಹಿನಿ(ರಿ) ಕೇಂದ್ರ ಸಮಿತಿಯ ಸ್ಥಾಪಕ ಅಧ್ಯಕ್ಷರಾದ ಸಂಜೀವ ಪೂಜಾರಿ, ನಿಕಟ ಪೂರ್ವ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್ , ಬ್ರಹ್ಮಶ್ರೀ ನಾರಾಯಣ ಗುರು […]
Read More
19-08-2018, 2:49 PM
ಕೆಂಜಾರು- ಕರಂಬಾರು : ಯುವವಾಹಿನಿ(ರಿ.) ಕೆಂಜಾರು- ಕರಂಬಾರು ಘಟಕ ಹಾಗೂ ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸಾಯನ್ಸ್ ಮುಕ್ಕ ಇವರ ಜಂಟಿ ಆಶ್ರಯದಲ್ಲಿ ಶ್ರೀ ದೇವಿ ಭಜನಾ ಮಂದಿರ ಕೆಂಜಾರು-ಕರಂಬಾರು ಇದರ ಸಭಾಭವನದಲ್ಲಿ ದಿನಾಂಕ 19.08.2018 ರಂದು ಉಚಿತ ದಂತ ಚಿಕಿತ್ಸಾ ಶಿಬಿರ ನಡೆಯಿತು. ಶ್ರೀ ದೇವಿ ಭಜನಾ ಮಂದಿರದ ಅಧ್ಯಕ್ಷರಾದ ಶ್ರೀಯುತ ಸೇಸಪ್ಪ ಅಮೀನ್ ರವರು ಶಿಬಿರವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಂದಿರದ ಗೌರವ ಅಧ್ಯಕ್ಷ ರಾದ ವಿಶ್ವಾನಂದ ಶೆಟ್ಟಿ,ಗೌರವ ಸಲಹೆಗಾರರಾದ ಜಗನ್ನಾಥ ಸಾಲ್ಯಾನ್ ,ಶ್ರೀನಿವಾಸ್ […]
Read More
13-08-2018, 4:25 PM
ಪಡುಬಿದ್ರಿ : ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ಅನಾರೋಗ್ಯದಿಂದ ಬಳಲುತ್ತಿರುವ, ನಮ್ಮ ಘಟಕದ ಸದಸ್ಯರಾದ ನಂದಿಕೂರಿನ ಹೇಮಂತ್ ರವರ ತಾಯಿ ಜಯಂತಿಯವರಿಗೆ ಯುವವಾಹಿನಿ (ರಿ.) ಪಡುಬಿದ್ರಿ ಘಟಕದಿಂದದಿನಾಂಕ 13.08.2018 ರಂದು ರೂ.10,600 ಧನಸಹಾಯ ಮಾಡಲಾಯಿತು. ಈ ಸಂದರ್ಭದಲ್ಲಿ ಯುವವಾಹಿನಿಯ ಅಧ್ಯಕ್ಷರಾದ ದೀಪಕ್ ಕೆ. ಬೀರ, ನಿಕಟಪೂರ್ವ ಅಧ್ಯಕ್ಷರಾದ ಸಂತೋಷ್ ಎಸ್. ಪೂಜಾರಿ, ಮಾಜಿ ಅಧ್ಯಕ್ಷರಾದ ಅಶೋಕ್ ಪಾದೆಬೆಟ್ಟು, ಕಾರ್ಯದರ್ಶಿ ಶೈಲಜ, ಪಡುಬಿದ್ರಿ ಘಟಕದ ಸಮಾಜ ಸೇವಾ ನಿರ್ದೇಶಕರಾದ ಅಕ್ಷಯ್ ನಂದಿಕೂರು, ಅರುಣ್ ನಂದಿಕೂರು ಉಪಸ್ಥಿತರಿದ್ದರು.
Read More
14-07-2018, 8:18 AM
ಬಜ್ಪೆ: ವಿದ್ಯೆ ಉದ್ಯೋಗ ಸಂಪರ್ಕವೆನ್ನುವ ಮಹತ್ತರವಾದ ಆಶಯವನ್ನಿರಿಸಿಕೊಂಡು, ಸಮಾಜಮುಖಿಯಾಗಿ ಕಾರ್ಯೋನ್ಮುಖವಾಗಿರುವ ಯುವವಾಹಿನಿ ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲೂ ತನ್ನನ್ನು ಬಹುವಾಗಿ ಅನ್ವಯಿತಗೊಳಿಸಿಕೊಂಡಿರುವ ಕಾರಣವಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ತನ್ನ ಮಡಿಗೇರಿಸಿಕೊಂಡಿರುವುದು ಕಡಿಮೆ ಸಾಧನೆಯೇನಲ್ಲ. ಯುವವಾಹಿನಿ ಕೇಂದ್ರ ಸಮಿತಿಯ ಪಡಿನೆಳಲಲ್ಲಿ ತನ್ನ ಪ್ರತಿಭೆಯನ್ನು ವಿಸ್ತಾರಗೊಳಿಸಿಕೊಂಡಿರುವ ಘಟಕಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಯುವವಾಹಿನಿ(ರಿ.) ಬಜ್ಪೆ ಘಟಕದ ಆಶ್ರಯದಲ್ಲಿ ದಿನಾಂಕ. 14.07.2018 ರಂದು ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಮಂಗಳೂರು ವಿಶೇಷ ಆರ್ಥಿಕ ವಲಯ(SEZ) ಇದರ ಸಹಭಾಗಿತ್ವದಲ್ಲಿ, ಪ್ರಸಾದ್ ನೇತ್ರಾಲಯ […]
Read More
08-07-2018, 3:18 PM
ಮೂಡಬಿದ್ರೆ : ಯುವವಾಹಿನಿ (ರಿ) ಮೂಡಬಿದ್ರೆ ಘಟಕ ಹಾಗೂ ಲಯನ್ಸ್ ಕ್ಲಬ್ ಶಿರ್ತಾಡಿ ಇದರ ಜಂಟಿ ಆಶ್ರಯದಲ್ಲಿ ಶ್ರೀನಿವಾಸ್ ಇನ್ಸಿಟ್ಯೂಟ್ ಅಫ್ ಡೆಂಟಲ್ ಸಾಯನ್ಸ್ ಮುಕ್ಕ ಸುರತ್ಕಲ್ ಇದರ ಸಹಯೋಗದೊಂದಿಗೆ ದಿನಾಂಕ 08.07.2018 ರಂದು ಆನೆಗುಡ್ಡೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ ಜರುಗಿತು. ಆನೆಗುಡ್ಡೆ ಸಂತ ಪ್ರಾನ್ಸಿಸ್ ಕ್ಸೇವಿಯರ್ ಚರ್ಚ್‌ನ ಧರ್ಮಗುರುಗಳಾದ ವಂದನೀಯ ಜೆರಾಲ್ಡ್ ಪ್ರಾನ್ಸಿಸ್ ಪಿಂಟೋ ಇವರು ದೀಪ ಬೆಳಗುವುದರ ಮತ್ತು ಮೂಲಕ ಶಿಬಿರ ಉದ್ಘಾಟಿಸಿದರು. ಯುವವಾಹಿನಿಯ ಯುವಕರು ಸಮಾಜಮುಖಿ […]
Read More
24-06-2018, 4:23 PM
ಕೂಳೂರು : ಯುವವಾಹಿನಿ (ರಿ) ಕೂಳೂರು ಘಟಕದಿಂದ ಅಂಗೈಯಲ್ಲಿ ಆರೋಗ್ಯ ಕಾರ್ಯಕ್ರಮವು ದಿನಾಂಕ 24.06.2018 ರಂದು ಕೂಳೂರು ನಾರಾಯಣಗುರು ಸೇವಾ ಸಂಘದಲ್ಲಿ ಜರುಗಿತು. ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಮಂಗಳೂರು ವಲಯದ ಶಿಕ್ಷಕರಾದ ಜನಾರ್ದನ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅಂಗೈಯಲ್ಲಿ ಆರೋಗ್ಯ ಕಾರ್ಯಾಗಾರ ನಡೆಸಿಕೊಟ್ಟರು.ದೇಹದ ವಿವಿಧ ಅನಾರೋಗ್ಯ ಸಮಸ್ಯೆಗಳಿಗೆ ಅಂಗೈ ಮೂಲಕ ಚಿಕಿತ್ಸೆ ನೀಡುವ ಬಗ್ಗೆ ಪ್ರಾಯೋಗಿಕವಾಗಿ ವಿವರಿಸಿದರು. ಯುವವಾಹಿನಿ ಕೂಳೂರು ಘಟಕದ ಉಪಾಧ್ಯಕ್ಷ ಭಾಸ್ಕರ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಕೂಳೂರು ಬ್ರಹ್ಮಶ್ರೀ […]
Read More
02-05-2018, 2:08 PM
ದಿನಾಂಕ : 02/05/2018 ರಂದು ಯುವವಾಹಿನಿ(ರಿ) ಕುಪ್ಪೆಪದವು ಘಟಕದ ವತಿಯಿಂದ ಕಿಲೆಂಜಾರು ಗ್ರಾಮದ ನಿವಾಸಿಯಾದ,ನಡೆದಾಡಲು ಅಸಾಧ್ಯವಾಗಿ ಹಾಸಿಗೆ ಹಿಡಿದಿರುವ ರವೀಂದ್ರ ಇವರಿಗೆ ವೀಲ್ ಚೇರ್ ಹಸ್ತಾಂತರಿಸಲಾಯಿತು ಈ ಸಂದರ್ಭದಲ್ಲಿ ಯುವವಾಹಿನಿ (ರಿ) ಕುಪ್ಪೆಪದವು ಘಟಕದ ಅಧ್ಯಕ್ಷರಾದ ಅರುಣ್ ಕುಮಾರ್ ಅಂಬೆಲೋಟ್ಟು , ಉಪಾಧ್ಯಕ್ಶರಾದ ಅಜೇಯ್ ಅಮೀನ್ ನಾಗಂದದಿ, ಕಾರ್ಯದರ್ಶಿ ರಿತೇಶ್ ನೆಲ್ಲಚಿಲ್ಲ್ , ವಿನಯ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು
Read More
28-04-2018, 2:08 PM
ಮೂಡಬಿದ್ರೆ: ದಿನಾಂಕ 28.04.2018 ರಂದು ಯುವವಾಹಿನಿ (ರಿ) ಮೂಡಬಿದ್ರೆ ಘಟಕದ ವತಿಯಿಂದ ಕಿಡ್ನಿ ವೈಫಲ್ಯ ದಿಂದ ಬಳಲುತ್ತಿರುವ, ಮಂಗಳೂರು ತಾಲೂಕು ದರೆಗುಡ್ಡೆ ಕೆಲ್ಲಪುತ್ತಿಗೆಯ ಮೇಲಿನ ಮನೆಯ ಡೊಂಬಯ್ಯ ಪೂಜಾರಿ ಎಂಬವರ ಮಗಳು ಬಡ ಕುಟುಂಬದ ಪೂಜಾ ಪೂಜಾರಿ ಇವರಿಗೆ ವೈದ್ಯಕೀಯ ನೆರವು ರೂ 15,000/- ಹಸ್ತಾಂತರಿಸಲಾಯಿತು. ಹಾಗೂ ಮಂಗಳೂರು ತಾಲೂಕಿನ ನೆಲ್ಲಿಕಾರ್ ನಿವಾಸಿ ಮನೋಜ್ ಪೂಜಾರಿ ಕಡು ಬಡತನದಲ್ಲಿ ಬದುಕುತ್ತಿರುವ ಇವರಿಗೆ ರೂ 5,000/- ವೈದ್ಯಕೀಯ ನೆರವು ನೀಡಲಾಯಿತು.
Read More
17-03-2018, 5:00 PM
ಮಾಣಿ : ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ ಪಾಟ್ರಕೇೂಡಿ ಕೆದಿಲದಲ್ಲಿ ದಿನಾಂಕ 17.03.2018 ರಂದು ಉಚಿತ ಆಯುಷ್ ಚಿಕಿತ್ಸಾ ಶಿಬಿರವು ಯುವವಾಹಿನಿ (ರಿ)ಮಾಣಿ ಘಟಕದ ಆಶ್ರಯದಲ್ಲಿ ದ.ಕ.ಜಿಲ್ಲಾ ಪಂಚಾಯತ್ ಆಯುಷ್ ಇಲಾಖೆಯ ವತಿಯಿಂದ ನಡೆಯಿತು. ಶಿಬಿರವನ್ನು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ) ಮಾಣಿ ಇದರ ಅಧ್ಯಕ್ಷರಾದ ನಾರಾಯಣ ಸಾಲ್ಯಾನ್ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು “ಹಿಂದಿನ ಕಾಲದಲ್ಲಿ ಜನರಿಗೆ ಯಾವುದೇ ರೇೂಗಗಳು ಕಂಡು ಬಂದಲ್ಲಿ ಗಿಡಮೂಲಿಕೆಗಳಿಂದ ಮನೆ ಮದ್ದು ತಯಾರಿಸಿ ಉಪಯೇೂಗಿಸುತ್ತಿದ್ದರು. ಈಗ ಅದಕ್ಕೆಂದೆ ಸರ್ಕಾರ […]
Read More