ಮಂಗಳೂರು : ವಿಶ್ವ ಹೃದ್ರೋಗ ದಿನಾಚರಣೆಯ ಅಂಗವಾಗಿ ಒಮೇಗಾ ಅಸ್ಪತ್ರೆ ಮಂಗಳೂರು, ಯುವವಾಹಿನಿ (ರಿ) ಮಂಗಳೂರು ಘಟಕ, ಲಯನ್ಸ್ ಕ್ಲಬ್ ಮಂಗಳೂರು ಮಂಗಳಾದೇವಿ, ಅಶೋಕನಗರ ಲಯನ್ಸ್ ಕ್ಲಬ್, ಲಯನ್ಸ್ ಕ್ಲಬ್ ಕುಡ್ಲ. ಇವರ ಸಂಯುಕ್ತ ಆಶ್ರಯದಲ್ಲಿ ಖ್ಯಾತ ಹೃದ್ರೋಗ ತಜ್ಞರಾದ ಡಾ. ಕೆ.ಮುಕುಂದ್ ಇವರ ನೇತೃತ್ವದಲ್ಲಿ “ಉಚಿತ ಹೃದಯರೋಗ ಮತ್ತು ಮಧುಮೇಹ ತಪಾಸಣಾ ಶಿಬಿರ” ದಿನಾಂಕ 29.09.2018 ರಂದು ಯುವವಾಹಿನಿ ಸಭಾಂಗಣ ಉರ್ವಸ್ಟೋರ್ ಇಲ್ಲಿ ನಡೆಯಿತು.
ಶಿಬಿರಾರ್ಥಿಗಳ ವೈದ್ಯಕೀಯ ತಪಾಸಣೆಯ ಪೂರ್ವದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಘಟಕದ ಅಧ್ಯಕ್ಷ ನವೀನ್ ಚಂದ್ರ ವಹಿಸಿದ್ದರು. ಒಮೇಗಾ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಕೆ. ಮುಕುಂದ್ , ಲಯನ್ಸ್ ಕ್ಲಬ್ ಮಂಗಳೂರು ಮಂಗಳಾದೇವಿ ಇದರ ಅಧ್ಯಕ್ಷ ಯಶವಂತ ಪೂಜಾರಿ, ಅಶೋಕನಗರ ಲಯನ್ಸ್ ಕ್ಲಬ್ ಅಧ್ಯಕ್ಷ ಮಿತ್ರ ಹೆರಾಜೆ, ಲಯನ್ಸ್ ಕ್ಲಬ್ ಕುಡ್ಲ. ಅಧ್ಯಕ್ಷರ ಸಚ್ಚಿದಾನಂದ ಉಪಸ್ಥಿತರಿದ್ದರು. ಸಭಾಕಾರ್ಯಕ್ರಮದ ನಿರೂಪಣೆಯನ್ನು ಯುವವಾಹಿನಿ ಸದಸ್ಯ ಮನೋಹರ್ ಕದ್ರಿ ನಿರ್ವಹಿಸಿದರು. ಡಾ.ಕೆ. ಮುಕುಂದ್ ಶಿಬಿರಾರ್ಥಿಗಳಿಗೆ ವೈದ್ಯಕೀಯ ಹಾಗೂ ಆಹಾರ ಪದ್ದತಿಗಳ ಸಲಹೆ ನೀಡಿದರು, ನಂತರ ನಡೆದ ವೈದ್ಯಕೀಯ ತಪಾಸಣೆ ಶಿಬಿರದಲ್ಲಿ ಒಟ್ಟು 158 ಶಿಬಿರಾರ್ಥಿಗಳ ವೈದ್ಯಕೀಯ ತಪಾಸಣೆ ನಡೆಸಿ ತಜ್ಞ ವೈದ್ಯರು ಅವರಿಗೆ ಅಗತ್ಯ ಸಲಹೆ ಸೊಚನೆಗಳನ್ನು ನೀಡಿದರು. ಶಿಬಿರಾರ್ಥಿಗಳು ವೈದ್ಯಕೀಯ ಶಿಬಿರದ ಪೂರ್ಣ ಪ್ರಯೋಜನ ಪಡೆಯುವ ಮೂಲಕ ಶಿಬಿರ ಯಶಸ್ವಿಯಾಗಿ ಸಮಾಪನಗೊಂಡಿತು.