ಬಂಟ್ವಾಳ: ಸಾಮಾಜಿಕ ಹಾಗೂ ದೈಹಿಕ ಆರೋಗ್ಯ ಇವೆರಡೂ ಕೂಡ ಬಹಳ ಪ್ರಾಮುಖ್ಯವಾದುದು. ಈ ನಿಟ್ಟಿನಲ್ಲಿ ಯುವ ಸಂಘಟನೆಗಳು ಹೆಚ್ಚು ಕ್ರೀಯಾಶೀಲರಾಗಿ ಕಾರ್ಯಕ್ರಮ ರೂಪಿಸಬೇಕು. ಯುವವಾಹಿನಿ(ರಿ) ನಂತಹ ಸಂಘಟನೆಗಳು ಈ ಕುರಿತು ಹೆಚ್ಚು ಸಕಾರಾತ್ಮಕವಾಗಿ ಆಲೋಚಿಸುತ್ತಿರುವುದು ಶ್ಲಾಘನೀಯ ಎಂಬುದಾಗಿ ಮಾಜಿ ಸಚಿವರಾದ ಬಿ. ರಾಮನಾಥ ರೈ ತಿಳಿಸಿದರು. ಅವರು ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ಬಿ.ಸಿ. ರೋಡಿ ನ ಬೆಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 25-11-2018 ರಂದು ಜರುಗಿದ ರಕ್ತದಾನ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ (ರಿ), ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ದ.ಕ. ಜಿಲ್ಲಾ ರಕ್ತ ನಿಧಿ ಘಟಕ ಲೇಡಿಗೋಷನ್ ಆಸ್ಪತ್ರೆ ಮಂಗಳೂರು, ಎ. ಜೆ. ಆಸ್ಪತ್ರೆ ಮಂಗಳೂರು, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಇದರ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾದ ಶಿವಾನಂದ ಎಂ. ವಹಿಸಿದ್ದರು. ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಮುಖ್ಯಸ್ಥರಾದ ಎಡ್ವರ್ಡ್ ವಾಸ್, ಬ್ಲಡ್ ಡೋನರ್ ಕ್ಲಬ್ ಕೈಕಂಬ ಇದರ ಮುಖ್ಯಸ್ಥ ಅಬ್ದುಲ್ ಖಾದರ್, ಯುವವಾಹಿನಿ (ರಿ) ಬಂಟ್ವಾಳ ದ ಆರೋಗ್ಯ ನಿರ್ದೇಶಕರಾದ ನಾರಾಯಣ ಪಲ್ಲಿಕಂಡ, ಬೆಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಪ್ರೌಢಶಾಲಾ ಮುಖ್ಯಸ್ಥೆ ವಿದ್ಯಾ ನಾಯ್ಕ್ ಹಾಗೂ ಪ್ರಾಥಮಿಕ ಶಾಲಾ ಮುಖ್ಯಸ್ಥೆ ಸುನಿತಾ, ಶಿಬಿರ ಸಂಚಾಲಕಿ ಸ್ನೇಹಾ ಸುರೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಬಿರ ಸಂಚಾಲಕರಾದ ಲೋಕೇಶ್ ಸುವರ್ಣ ಸ್ವಾಗತಿಸಿದರು. ಯುವವಾಹಿನಿ (ರಿ) ಬಂಟ್ವಾಳ ಘಟಕದ ಜತೆ ಕಾರ್ಯದರ್ಶಿ ರಚನಾ ಕರ್ಕೇರ ವಂದಸಿದರು. ಬಿ. ಶ್ರೀಧರ್ ಅಮಿನ್ ಕಾರ್ಯಕ್ರಮ ನಿರೂಪಿಸಿದರು.
ಈ ಶಿಬಿರದಲ್ಲಿ ಒಟ್ಟು 30 ಮಂದಿ ರಕ್ತದಾನ ಮಾಡಿದರು ಹಾಗೂ 75 ಮಂದಿ ಶಿಬಿರಾರ್ಥಿಗಳು ಶಿಬಿರದ ಪ್ರಯೋಜನ ಪಡೆದರು.