ಬಜಪೆ : ಶ್ರೀ ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜು ಸುಂಕದಕಟ್ಟೆ, ರಾಷ್ಟ್ರೀಯ ಸೇವಾ ಯೋಜನಾ ಘಟಕ, ಯುವ ರೆಡ್ ಕ್ರಾಸ್ ಘಟಕ, ರೆಡ್ ರಿಬ್ಬನ್ ಕ್ಲಬ್, ಕಾಲೇಜು ಅಭಿವೃದ್ಧಿ ಸಮಿತಿ, ಶಿಕ್ಷಕ ರಕ್ಷಕ ಸಂಘ, ಹಳೆ ವಿದ್ಯಾರ್ಥಿ ಸಂಘ, ಸುಂಕದಕಟ್ಟೆ ಬಜ್ಪೆ, ಶ್ರೀ ನಿರಂಜನ ಸ್ವಾಮಿ ಅನಿದಾನಿತ ತಾಂತ್ರಿಕ ವಿದ್ಯಾಲಯ ಸುಂಕದಕಟ್ಟೆ ಹಾಗೂ ರೋಟರಿ ಕ್ಲಬ್ ಬಜ್ಪೆ ಇವರೆಲ್ಲರ ಸಹಭಾಗಿತ್ವದಲ್ಲಿ ಯುವವಾಹಿನಿ (ರಿ.) ಬಜ್ಪೆ ಘಟಕ ಇವರ ಆಶ್ರಯದಲ್ಲಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ ‘ಸ್ವಯಂ ಪ್ರೇರಿತ ರಕ್ತದಾನ ಶಿಬಿರ’ ವು ದಿನಾಂಕ 15.09.2018 ರಂದು ಬೆಳಿಗ್ಗೆ 09.00ರಿಂದ ಮಧ್ಯಾಹ್ನ 12.00ರತನಕ ನಡೆಯಿತು. ಯುವವಾಹಿನಿ (ರಿ.) ಬಜ್ಪೆ ಘಟಕದ ಅಧ್ಯಕ್ಷರಾದ ದೇವರಾಜ್ ಅಮೀನ್ ಕಾರ್ಯಕ್ರಮ ಉದ್ಘಾಟಿಸಿ ರಕ್ತದಾನದ ಮಹತ್ವವನ್ನು ಸಭೆಗೆ ವಿವರಿಸಿದರು. ಡಾ. ಶರತ್, ವೆನ್ಲಾಕ್ ಆಸ್ಪತ್ರೆ ಬ್ಲಡ್ ಬ್ಯಾಂಕ್ ವಿಭಾಗದ ಮುಖ್ಯಸ್ಥರು ಈ ಸಂದರ್ಭದಲ್ಲಿ ರಕ್ತದಾನದ ಬಗ್ಗೆ ಸವಿವರ ಮಾಹಿತಿಯನ್ನು ನೀಡಿದರು. ರೋಟರಿ ಕ್ಲಬ್ ಬಜ್ಪೆ ಇದರ ಮಾಜಿ ಅಧ್ಯಕ್ಷರಾದ ಪಿ.ಎಚ್.ಎಫ್. ರೋಬರ್ಟ್ ಎಫ್. ರೇಗೊ ಇವರು ಸಾಂದರ್ಭಿಕವಾಗಿ ಮಾತನಾಡಿದರು. ಸದರಿ ಇವರು ಸೋದಾಹರಣವಾಗಿ ಮಾತನಾಡಿದರು. ವೇದಿಕೆಯಲ್ಲಿ ಶ್ರೀ ನಿರಂಜನ ಸ್ವಾಮಿ ಪಾಲಿಟೆಕ್ನಿಕ್‌ನ ರಾ.ಸೇ.ಯೋ. ಇದರ ಯೋಜನಾಧಿಕಾರಿ ದೇವರಾಜ್ ಎಸ್. ನಾಯ್ಕ್, ಪದವಿ ಕಾಲೇಜಿನ ರಾ.ಸೇ.ಯೋ. ಯೋಜನಾಧಿಕಾರಿ ಶಾಲಿನಿ ಕಾಲೇಜಿನ ಪ್ರಾಚಾರ್ಯರಾದ ಲತಾ. ಕೆ.ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಸ್.ಎನ್.ಎಸ್. ಶಿಕ್ಷಣ ಸಂಸ್ಥೆಯ ಟ್ರಸ್ಟಿ, ಹಾಗು ಶ್ರೀ ದೇವಳದ ಆಡಳಿತ ಮೊಕ್ತೇಸರರಾದ ಶ್ರೀ ನಾರಾಯಣ ಎನ್. ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸುಮಾರು 60 ಜನ ಈ ಶಿಬಿರದಲ್ಲಿ ರಕ್ತದಾನ ಮಾಡಿದರು.