ಕೂಳೂರು : ಯುವವಾಹಿನಿ(ರಿ) ಕೂಳೂರು ಘಟಕದ ವತಿಯಿಂದ ದಿನಾಂಕ 07/10/2018 ರವಿವಾರ ಸoಜೆ 4 ಗoಟೆಗೆ ಮಹಿಳೆ ಮತ್ತು ಆರೋಗ್ಯ ಮಾಹಿತಿ ಕಾರ್ಯಕ್ರಮವನ್ನು ಕೂಳೂರು ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಸಭಾಭವನದಲ್ಲಿ ಘಟಕದ ಮಹಿಳಾ ಸದಸ್ಯರಿಗಾಗಿ ಹಮ್ಮಿಕೊಳ್ಳಲಾಯಿತು . ಸಂಪನ್ಮೂಲ ವ್ಯಕ್ತಿಯಾಗಿ ಸ್ತ್ರೀರೋಗ ತಜ್ಞೆ ಹಾಗೂ ಪ್ರಸೂತಿ ಶಾಸ್ತ್ರಜ್ಞರಾದ ಡಾ.ಲತಾ ಶರ್ಮಾ ಇವರು ಆಗಮಿಸಿದ್ದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಇವರು ವಹಿಸಿದ್ದರು .ಮುಖ್ಯ ಅತಿಥಿಯಾಗಿ ಘಟಕದ ಸಲಹೆಗಾರರಾದ ನೇಮಿರಾಜ್, ಕೂಳೂರು ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಉಪಾಧ್ಯಕ್ಷರಾದ ಸುಕುಮಾರ್ ಸುವರ್ಣ, ಸಂಪನ್ಮೂಲ ವ್ಯಕ್ತಿ ಡಾ.ಲತಾ ಶರ್ಮ, ಕಾರ್ಯದರ್ಶಿ ಪವಿತ್ರಾ ಅಂಚನ್, ಕಾರ್ಯಕ್ರಮದ ಸಂಚಾಲಕರಾದ ಘಟಕದ ಮಹಿಳಾ ನಿರ್ದೇಶಕಿ ಮಮತಾ ಪುಷ್ಪರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು .ಕಾರ್ಯದರ್ಶಿ ಎಲ್ಲರನ್ನು ಸ್ವಾಗತಿಸಿದರು .ಅಧ್ಯಕ್ಷರು ಲೋಕೇಶ್ ಕೋಟ್ಯಾನ್ ಹಾಗೂ ಸಲಹೆಗಾರರಾದ ನೇಮಿರಾಜ್ ,ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಉಪಾಧ್ಯಕ್ಷರಾದ ಸುಕುಮಾರ್ ಸುವರ್ಣ ಕಾರ್ಯಕ್ರಮದ ಕುರಿತು ತಮ್ಮ ಶುಭ ನುಡಿಯನ್ನು ಸಭೆಯ ಮುಂದಿಟ್ಟರು .ಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್ ಹಾಗೂ ಯುವವಾಹಿನಿ(ರಿ) ಮಂಗಳೂರು ಮಹಿಳಾ ಘಟಕದ ಅಧ್ಯಕ್ಷರಾದ ರಶ್ಮಿ ಕರ್ಕೇರಾ ಉಪಸ್ಥಿತರಿದ್ದರು . ನಂತರ ಸಂಪನ್ಮೂಲ ವ್ಯಕ್ತಿಯಾದ ಡಾ.ಲತಾ ಶರ್ಮಾ ಇವರು ಮಹಿಳೆಯರ ಆರೋಗ್ಯದ ಕುರಿತು ಮಾತನಾಡಿ ಆರೋಗ್ಯವಂತ ಹೆಣ್ಣು ಇರುವ ಕುಟುಂಬವೇ ಆರೋಗ್ಯವಂತವಾಗಿರುತ್ತವೆ’ ಎಂದು ತಿಳಿಸಿ ಮಹಿಳೆಯ ಆರೋಗ್ಯದ ಸಮಸ್ಯೆ, ರೋಗದ ಲಕ್ಷಣಗಳು, ತಡೆಗಟ್ಟುವಿಕೆಯ ವಿಧಾನದ ಬಗ್ಗೆ ತಿಳಿಸಿ ಹದಿಹರೆಯದ ಸಮಸ್ಯೆಗಳು, ಗರ್ಭಿಣಿ ಸ್ತ್ರೀ ಆರೋಗ್ಯ, ಗರ್ಭಕೋಶದ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಮುಟ್ಟಿನ ಸಮಸ್ಯೆಗಳು, ಹಾರ್ಮೋನ್ ಸಮಸ್ಯೆ, ರಕ್ತಹೀನತೆ ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ತಿಳಿಸಿ ಮಹಿಳೆಯರು ಯಾವ ರೀತಿ ಮುಂಜಾಗ್ರತೆಯನ್ನು ತೆಗೆದುಕೊಳ್ಳಬಹುದು ಎಂದು ವಿವರವಾಗಿ ತಿಳಿಸಿದರು. ಒಟ್ಟಾಗಿ 60 ಮಂದಿ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ವೈದ್ಯರಿಗೆ ತಿಳಿಸಿ ಅವರಿಂದ ಸಲಹೆಯನ್ನು ಪಡೆದುಕೊಂಡರು. ಕೋಶಾಧಿಕಾರಿ ಮಧುಶ್ರೀ ಕಾರ್ಯಕ್ರಮ ನಿರೂಪಿಸಿದರು .ಕಾರ್ಯಕ್ರಮದ ಸಂಚಾಲಕರಾದ ಮಮತಾ ಪುಷ್ಪರಾಜ್ ಧನ್ಯವಾದ ಸಲ್ಲಿಸಿದರು .