27-05-2018, 5:15 PM
ಮಂಗಳೂರು : ತಾಯಿ ಮನುಕುಲದ ಶಾಲೆಗೆ ಗುರುವಾಗಿದ್ದಾಳೆ, ಮನೆ ಎಂಬ ಪಾಠಶಾಲೆ ಹಾಗೂ ಪಾಕಶಾಲೆಗೆ ಶೋಧನೆ, ಸಂಶೋಧನೆಯ ಜ್ಞಾನಿ ವಿಜ್ಞಾನಿಯಾಗಿರುತ್ತಾಳೆ, ಪ್ರೀತಿಯ ಮುತ್ತಿಟ್ಟು, ಅನ್ನದ ತುತ್ತಿಟ್ಟು ಉಣಿಸಿ ತಣಿಸುವ ಅನ್ನಪೂರ್ಣೆ, ನಿದ್ದೆಗೆ ಲಾಲಿ ಜೋಗುಳ ಹಾಡಿ ಮಲಗಿಸುವ ಸಂಗೀತಗಾರ್ತಿ ಅಮ್ಮ, ಹೀಗೆ ಸಮಗ್ರ ಶಕ್ತಿಗೆ ಚೇತನದ ಅಮೃತದ ಸೆಲೆಯಾಗಿ ಸರ್ವರ ಹೃದಯದ ಆರಾಧನಾ ಮೂರ್ತಿಯಾಗಿರುತ್ತಾಳೆ ಎಂದು ಮುಲ್ಕಿ ನಾರಾಯಣಗುರು ಕಾಲೇಜಿನ ಉಪನ್ಯಾಸಕರಾದ ಕೇಶವ ಎಚ್ ತಿಳಿಸಿದರು. ಅವರು ದಿನಾಂಕ 27.05.2018 ರಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ […]
Read More
10-05-2018, 3:17 AM
ಕೂಳೂರು : ಎಲ್ಲಾ ಬಾಂಧವ್ಯ ಸಂಬಂಧಗಳನ್ನು ಮೀರಿದವಳು ತಾಯಿ, ತಾನು ಎಲ್ಲಾ ಕಡೆ ಇರಲಾರೆ ಎಂಬ ಕಾರಣಕ್ಕಾಗಿ ದೇವರು ತಾಯಿಯನ್ನು ಸೃಷ್ಟಿಸಿದ ಎಂಬ ಮಾತನ್ನು ಅಕ್ಷರಶಃ ರುಜುವಾತು ಮಾಡಿಕೊಟ್ಟವಳು. ಹೆಜ್ಜೆಯಿಡಲು ಕಲಿಸಿದವಳು, ಕೈ ತುತ್ತು ನೀಡಿದವಳು, ಕರುಳಕುಡಿಯ ಜೀವನಕ್ಕಾಗಿ ತನ್ನ ಜೀವವನ್ನು ಸವೆಸಿದವಳು, ಕಂದನ ಪ್ರತಿ ಯಶಸ್ಸಿನಲ್ಲೂ ಆಕೆಯ ಪಾಲಿದೆ ಪ್ರತಿ ಕಷ್ಟದಲ್ಲೂ ಆಕೆಯ ಸಾಂತ್ವನವಿದೆ ಎಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ ತಿಳಿಸಿದರು. ಅವರು ದಿನಾಂಕ 10.05.2018 ರಂದು ಯುವವಾಹಿನಿ (ರಿ) […]
Read More
15-04-2018, 3:30 PM
ಬಜ್ಪೆ : ಜಾಗತೀಕರಣದ ಭರಾಟೆಯಲ್ಲಿ ನಮ್ಮ ಸಂಸ್ಕೃತಿ ಸಂಪ್ರದಾಯಗಳು ನಶಿಸಿಹೋಗುವ ಕಾಲಘಟ್ಟದಲ್ಲಿ ಯುವವಾಹಿನಿಯು ಹಬ್ಬಗಳನ್ನು ಸಾಮೂಹಿಕವಾಗಿ ಆಚರಿಸುವ ಮೂಲಕ ಮುಂದಿನ ಯುವಜನತೆಗೆ ಸಂಸ್ಕೃತಿ, ಸಂಸ್ಕಾರದ ಅರಿವು ಮೂಡಿಸಿದೆ. ಸಮಾಜದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ, ಶಾಂತಿಯನ್ನು ಬಲಪಡಿಸುವಲ್ಲಿ ಹಬ್ಬಗಳು ದಾರಿದೀಪವಾಗಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ ತಿಳಿಸಿದರು. ಅವರು ದಿನಾಂಕ 15.04.2018 ರಂದು ಬಜ್ಪೆ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ಯುವವಾಹಿನಿ (ರಿ) ಬಜ್ಪೆ ಘಟಕದ ಆಶ್ರಯದಲ್ಲಿ ಜರುಗಿದ ಬಿಸು ಪರ್ಬ ಕಾರ್ಯಕ್ರಮದಲ್ಲಿ ಮುಖ್ಯ […]
Read More
01-11-2017, 7:49 AM
ಯಶಸ್ಸು ಗಳಿಸಲು ಐಶ್ವರ್ಯ, ವಿದ್ಯಾರ್ಹತೆ, ಅಥವಾ ವ್ಯಕ್ತಿಯ ಹಿನ್ನಲೆ ಮುಖ್ಯವಾಗುವುದಿಲ್ಲ . ಆತನ ಕನಸು, ಸಾಧಿಸುವ ಛಲ, ಪರಿಶ್ರಮ ಮುಖ್ಯವಾಗುತ್ತದೆ. ಇದರೊಂದಿಗೆ ತಾವು ತೊಡಗಿಸಿಕೊಂಡು ವ್ಯಕ್ತಿಯನ್ನು ಪ್ರೀತಿಸಿ ಅದನ್ನೇ ಪ್ರವೃತ್ತಿಯನ್ನಾಗಿಸಿದಾಗ ಯಶಸ್ಸು ಸಾಧ್ಯ. ಯುವವಾಹಿನಿಯ ರಾಜ್ಯೋತ್ಸವ ಪ್ರಶಸ್ತಿಯ ಹಿಂದೆ ಮೂವತ್ತು ವರುಷಗಳ ಸಾಧನೆಯ ಶ್ರಮವಿದೆ, ಪ್ರತಿಯೊಬ್ಬ ಯುವವಾಹಿನಿ ಸದಸ್ಯನ ಬೆವರ ಹನಿ ಇದೆ. ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ ಅಭಿಪ್ರಾಯ ಪಟ್ಟರು. ಅವರು ದಿನಾಂಕ 01.11.2017 ರಂದು ಯುವವಾಹಿನಿ (ರಿ) ಹೆಜಮಾಡಿ ಘಟಕದ […]
Read More
18-10-2017, 5:13 PM
ಪರಿಶುದ್ಧ ಮನಸ್ಸಿನೊಂದಿಗೆ ಸತ್ಕಾರ್ಯಗಳಿಗೆ ವಿನಿಯೋಗಿಸುವಾಗ ಮಾನವ ಜನ್ಮ ಸಾರ್ಥಕವಾಗುತ್ತದೆ. ಸಮಾಜದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ, ಶಾಂತಿಯನ್ನು ಬಲಪಡಿಸುವಲ್ಲಿ ಆರಾಧನಾ ಕೇಂದ್ರಗಳು ದಾರಿದೀಪವಾಗಬೇಕು ಹಾಗೂ ಮಾನವ ಬದುಕಿನ ವಿಕಸನಕ್ಕೆ ಸಂಸ್ಕಾರ ,ಸಂಸ್ಕೃತಿಯ ಮಾರ್ಗದರ್ಶನ ನೀಡುವ ಕೇಂದ್ರಗಳಾಗಬೇಕು ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಬಿ.ಎ.ಮಹಮ್ಮದ್ ಹನೀಫ್ ತಿಳಿಸಿದರು. ಅವರು ದಿನಾಂಕ 18.10.2017 ರಂದು ಯುವವಾಹಿನಿ (ರಿ) ಮುಲ್ಕಿ ಘಟಕದ ಆಶ್ರಯದಲ್ಲಿ ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಜರುಗಿದ ತುಳುವೆರೆ ತುಡಾರ ಪರ್ಬ ಸಮಾರಂಭದ ಮುಖ್ಯ […]
Read More
18-10-2017, 4:48 PM
ಪುರಾಣ ಕಾಲದ ಬಲಿ ಚಕ್ರವರ್ತಿಯು ಭರತ ಭೂಮಿಯ ಕೃಷಿ ಕ್ಷೇತ್ರದ ಯಜಮಾನನಾಗಿದ್ದನು. “ಕೃಷಿತೋ ನಾಸ್ತಿ ದುರ್ಭಿಕ್ಷಂ” ಎಂಬುದು ಎರಡನೇ ಮನುವಾದ ಸ್ವಾರೋಚಿಷನ ಕಾಲದಲ್ಲಿ ವಿಶ್ವದ ಪ್ರಥಮ ಕೃಷಿಕನಾದ ಆದಿಮನಿಂದ ಹುಟ್ಟಿಕೊಂಡು ಬಲಿರಾಜನ ಕಾಲದಲ್ಲಿ ಸಂಪೂರ್ಣ ಪ್ರಗತಿಯನ್ನು ಕಂಡಿತು. ಇದರ ನಿಮಿತ್ತವಾಗಿಯೇ ಒಂದು ಕಾಲದ ತುಳುನಾಡಿನ ರೈತರು ತಮ್ಮ ಬೇಸಾಯದ ಗದ್ದೆಗಳ ಹುಣಿಗಳಲ್ಲಿ ಸಾಲು ಸಾಲಾಗಿ ದೀಪಗಳನ್ನುರಿಸಿ, ಬಲಿರಾಜನನ್ನು ಸಾಂಕೇತಿಕವಾಗಿ ಪ್ರತಿಷ್ಠಾಪಿಸಿ ದೀಪಾವಳಿಯನ್ನು ಆಚರಿಸುತ್ತಿದ್ದರು ಎಂದು ಖ್ಯಾತ ಸಂಶೋಧಕ ಹಾಗೂ ಹಿರಿಯ ಸಾಹಿತಿ ಡಾ|| ದೇಜಪ್ಪ ದಲ್ಲೋಡಿ ತಿಳಿಸಿದರು […]
Read More
18-10-2017, 2:22 PM
ಪರಸ್ಪರ ದೀಪಗಳಿಂದ ಬೆಸೆದುಕೊಂಡು ಕತ್ತಲೆಯಿಂದ ಬೆಳಕಿನೆಡೆಗೆ ಒಂದು ಅಲೌಕಿಕ ಬೆಳಕಿನ ಚಿತ್ತಾರವನ್ನು ಪೂರ್ತಿ ಬಿಡಿಸಿದಂತೆ ಕಾಣುವ ಅಥವಾ ಅದನ್ನು ಅನುಭವಿಸುವ ಅವಕಾಶವಿರುವುದು ದೀಪಗಳ ಹಬ್ಬಕ್ಕೆ ಮಾತ್ರ, ತುಳುನಾಡಿನಲ್ಲಿ ತುಡಾರ ಪರ್ಬಕ್ಕೆ ವಿಶೇಷ ಮಹತ್ವ ಇದೆ. ಕುಟುಂಬದಲ್ಲಿ ಬಾಂಧವ್ಯವನ್ನು ಗಟ್ಟಿಗೊಳಿಸುವ ಶಕ್ತಿ ಹಬ್ಬಗಳಿಗಿದೆ. ಎಂದು ಯುವವಾಹಿನಿ ಕೇಂದ್ರ ಸಮಿತಿಯ ಸಲಹೆಗಾರರಾದ ಬಿ.ತಮ್ಮಯ ತಿಳಿಸಿದರು. ಅವರು ದಿನಾಂಕ 18.10.2017 ರಂದು ಉಪ್ಪಿನಂಗಡಿ ರಾಜ್ ಮಹಲ್ ಪೆದಮ್ಮಲೆ ( ವರದ್ರಾಜ್ ನಿವಾಸ) ಇಲ್ಲಿ ಯುವವಾಹಿನಿ ಉಪ್ಪಿನಂಗಡಿ ಘಟಕದ ಆಶ್ರಯದಲ್ಲಿ ಜರುಗಿದ ತುಡಾರ […]
Read More
09-09-2017, 1:56 PM
ಕೃಷಿಕರಿಗೆ ಸೋಣ ತಿಂಗಳು ಸಂಭ್ರಮದ ತಿಂಗಳು ಆಗಿರುವುದರಿಂದ ಈ ಕಾರ್ಯಕ್ರಮದ ಶೀರ್ಷಿಕೆ ಅರ್ಥಪೂರ್ಣವಾಗಿದೆ.ತಂತ್ರಜ್ಞಾನದಿಂದ ಮನಸ್ಸಿನ ಬದಲಾವಣೆ ಆಗಬಹುದೇ ಹೊರತು ಸಂಸ್ಕೃತಿ, ಸಂಸ್ಕಾರ ಹಾಗೂ ಜೀವನ ಪಾಠವನ್ನು ಕಲಿಸುವುದಿಲ್ಲ ಹಾಗಾಗಿ ಸಂಸ್ಕಾರದ ಜತೆಗೆ ಜೀವನ ಮೌಲ್ಯವನ್ನು ಅಳವಡಿಸುವುದು ಇಂದು ತೀರಾ ಅಗತ್ಯವಾಗಿದೆ ಎಂದು ಮಂಗಳೂರು ಮಹಿಳಾ ಮಂಡಲಗಳ ಒಕ್ಕೂಟದ ಸ್ಥಾಪಕ ಅಧ್ಯಕ್ಷರಾದ ಕೆ.ಎ.ರೋಹಿಣಿ ಅಭಿಪ್ರಾಯ ಪಟ್ಟರು.ಅವರು ದಿನಾಂಕ 09.09.2017 ರಂದು ಮಂಗಳೂರು ಯುವವಾಹಿನಿ ಸಭಾಂಗಣದಲ್ಲಿ ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ಜರುಗಿದ ಸೋಣ ಸಂಭ್ರಮ ಕಾರ್ಯಕ್ರಮದಲ್ಲಿ […]
Read More
06-09-2017, 9:24 AM
ಯುವವಾಹಿನಿ (ರಿ) ಅಡ್ವೆ ಘಟಕದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 163ನೇ ಜಯಂತಿ ಪ್ರಯುಕ್ತ ದಿನಾಂಕ 06.09.2017 ರಂದು ಅಡ್ವೆ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. ತದನಂತರ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಹಿರಿಯ ಕೃಷಿಕರು ಹಾಗೂ ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಬಹಳ ಹಿಂದಿನಿಂದಲೂ ಸೇವೆ ಮಾಡಿಕೊಂಡು ಬಂದಿರುವ ಶ್ರೀ ಸಂಕಪ್ಪ ಪೂಜಾರಿಯವರನ್ನು ಗೌರವಿಸಲಾಯಿತು.
Read More
13-08-2017, 7:34 AM
ತುಳುನಾಡಿನಾದ್ಯಂತ ನಡೆಯುತ್ತಿರುವ ಆಟಿಡೊಂಜಿ ದಿನ,ಕೆಸರ್ ಡ್ ಒಂಜಿ ದಿನ ಮುಂತಾದ ಕಾರ್ಯಕ್ರಮಗಳನ್ನು ಸಡಗರ, ಸಂಭ್ರಮದಿಂದ ಮಾಡುತ್ತಿದ್ದೇವೆ.. ಈ ಸಂಭ್ರಮ ಒಂದು ದಿನಕ್ಕೆ ಸೀಮಿತವಾಗಿರದೆ, ನಮ್ಮ ವಿರಾಮದ ವೇಳೆಯಲ್ಲಿ ನಿತ್ಯ ನಿರಂತರವಾಗಿ ನಡೆಯಬೇಕಾಗಿದೆ. ಕೃಷಿ ಚಟುವಟಿಕೆಗಳಿಗೆ ನಾವು ಮೈಯೊಡ್ಡಿದರೆ, ನಮ್ಮ ಆರೋಗ್ಯವೃದ್ಧಿಯಾಗುವುದು.ಕೃಷಿಕರಾಗಿ ಬದುಕಿದ ನಮ್ಮ ಗುರುಹಿರಿಯರ ಆರೋಗ್ಯದ ಗುಟ್ಟು ಇದೇ ಎಂದು ಅಡ್ವೆ ರವೀಂದ್ರ ಪೂಜಾರಿಯವರು ತಿಳಿಸಿದರು. ಅವರು ದಿನಾಂಕ 13-08-2017 ಆದಿತ್ಯವಾರದಂದು ಅಡ್ವೆ ಆನಂದಿ ಸಭಾಭವನದಲ್ಲಿ ಯುವವಾಹಿನಿ(ರಿ.) ಅಡ್ವೆ ಘಟಕದ ವತಿಯಿಂದ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ […]
Read More