ಮೂಲ್ಕಿ ಯುವವಾಹಿನಿಯಿಂದ 16ನೇ ವರ್ಷದ ತುಳುವೆರೆ ತುಡರ ಪರ್ಬ

ನಾರಾಯಣಗುರುಗಳ ತತ್ವ ಜೀವನದಲ್ಲಿ ಅಳವಡಿಸಿಕೊಳ್ಳಿರಿ : ಮುಮ್ತಾಜ್

ಮೂಲ್ಕಿ ಯುವವಾಹಿನಿ ಘಟಕದ ವತಿಯಿಂದ ನಡೆದ 16ನೇ ವರ್ಷದ ತುಳುವೆರೆ ತುಡಾರ ಪರ್ಬವನ್ನು ಮೂರೂ ಧರ್ಮದ ಪ್ರಮುಖರು ವಿಶೇಷವಾಗಿ ಮಂಗಳವಾರ ಉದ್ಘಾಟಿಸಿದರು.

ಮೂಲ್ಕಿ: ನಾರಾಯಣಗುರುಗಳ ತತ್ವ ಆದರ್ಶದಂತೆ ಇಂದು ಬಿಲ್ಲವ ಸಮಾಜವು ಸಂಘಟನತ್ಮಕವಾಗಿ ಬೆಳೆಯುವುದರೊಂದಿಗೆ ಸಮಾಜದಲ್ಲಿ ಕರಾವಳಿಯ ಸಂಪ್ರದಾಯವನ್ನು ಸಂಸ್ಥೆಯ ಮೂಲಕ ಉಳಿಸುವ ಪ್ರಯತ್ನ ಶ್ಲಾಘನೀಯವಾಗಿದೆ. ಯುವ ಸಮಾಜವನ್ನು ಕಟ್ಟಿ ಬೆಳೆಸುವ ಜವಬ್ದಾರಿಯನ್ನು ನಾರಾಯಣಗುರುಗಳ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿರಿ ಎಂದು ಉಡುಪಿಯ ಕಿರಿಯ ಕಾನೂನು ಅಧಿಕಾರಿ ಮುಮ್ತಾಜ್ ಹೇಳಿದರು.
ಅವರು ಮೂಲ್ಕಿ ಯುವವಾಹಿನಿ ಘಟಕದ ವತಿಯಿಂದ ದಿನಾಂಕ 06.11.2018 ರಂದು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ನಡೆದ 16ನೇ ವರ್ಷದ ತುಳುವೆರೆ ತುಡಾರ ಪರ್ಬವನ್ನು ಉದ್ಘಾಟಿಸಿ ಮಾತನಾಡಿದರು.
ಮೂಲ್ಕಿ ಕೊಸೆಸಾಂ ಅಮ್ಮನವರ ಚರ್ಚ್‌ನ ಧರ್ಮಗುರು ಸಿಲ್ವೆಸ್ಟರ್ ಡಿಕೋಸ್ಟಾ ಮಾತನಾಡಿ, “ದೀಪಾವಳಿ ಬೆಳಕಿನ ಹಾಗೂ ಕೊಡುಗೆಗಳ ಹಬ್ಬ,ಧಾರ್ಮಿಕ ಹಬ್ಬಗಳು ನಮ್ಮ ಹೃದಯದ ಕತ್ತಲೆ ದೂರ ಮಾಡುವ ಮೂಲಕ ಸಾಮರಸ್ಯದ ಬೆಳಕನ್ನು ಕಾಣಬೇಕು, ಭಗವಾನ್ ಏಸು ಕ್ರಿಸ್ತರೂ ಇದನ್ನೇ ಸಾರಿದ್ದಾರೆ. ನಾರಾಯಣ ಗುರುಗಳೂ ಇದೇ ತತ್ವವನ್ನು ತಿಳಿಸಿದ್ದಾರೆ” ಎಂದರು.
ಎಲ್‌ಐಸಿಯ ನಿವೃತ್ತ ಅಧಿಕಾರಿ ಕೊಲ್ನಾಡುಗುತ್ತು ವಿದ್ಯಾಧರ ಶೆಟ್ಟಿ ಮಾತನಾಡಿ, “ಹಬ್ಬ ಹರಿದಿನಗಳು ನಮ್ಮನ್ನು ಸಂಘಟಿತರನ್ನಾಗಿಸಿ ಸಂತೋಷ ಪಡುವುದರೊಂದಿಗೆ ಸಂತಸ ಹಂಚುವ ಹಬ್ಬಗಳಾಗಿವೆ ನಮ್ಮ ಪೂರ್ವಿಕರು ಬಿಟ್ಟುಹೊಂದ ಈ ಸಂಪ್ರದಾಯಗಳನ್ನು ಯುವ ಜನತೆಗೆ ತಿಳಿಸಿ ಬೆಳೆಸುವ ಹೊಣೆ ನಮ್ಮದಾಗಿದೆ” ಎಂದರು.

ದಕ್ಷಿಣಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ನಾನಿಲ್ ಹಳೆಯಂಗಡಿ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.

ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ್ ನಡುಬೈಲ್ ಶುಭ ಹಾರೈಸಿ, ತುಳುನಾಡಿನ ಪರಂಪರೆಯನ್ನು ಉಳಿಸಿ, ಬೆಳೆಸುವ ಕಾಯಕದಲ್ಲಿ ಯುವವಾಹಿನಿ ಮುನ್ನುಡಿ ಬರೆದಿದೆ, ಇಂದು ಎಲ್ಲಾ ಕಡೆಗಳಲ್ಲಿಯೂ ಸಂಸ್ಕೃತಿ ಮತ್ತು ಸಂಸ್ಕಾರದ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಇದಕ್ಕೆ ಪರೋಕ್ಷವಾಗಿ ಯುವವಾಹಿನಿ ಮೂಲ್ಕಿ ಕಾರಣವಾಗಿರುವುದು ಸಂತಸ ತಂದಿದೆ ಎಂದರು.
ಯುವವಾಹಿನಿ ಮೂಲ್ಕಿ ಘಟಕದ ಅಧ್ಯಕ್ಷೆ ಕುಶಲ ಎಸ್. ಕುಕ್ಯಾನ್ ಅಧ್ಯಕ್ಷತೆಯನ್ನು ವಹಿಸಿ ಸ್ವಾಗತಿಸಿದರು.
ಹಿರಿಯ ಕೃಷಿಕೆ ರಾಜೀವಿ ಮಾಧವ ಬಂಗೇರ ಕೊಕ್ಕರಕಲ್ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಚಂದ್ರಶೇಖರ ನಾನಿಲ್‌ರನ್ನು ಸನ್ಮಾನಿಸಲಾಯಿತು.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪೀನಾಥ ಪಡಂಗ ಅವರು ಯುವವಾಹಿನಿಯಿಂದ ನೀಡಿದ ವಿಶೇಷ ರಂಗಲಂಕಾರವನ್ನು ಅನಾವರಣಗೊಳಿಸಿದರು.
ಯುವವಾಹಿನಿ ಮೂಲ್ಕಿ ಘಟಕದ ಕೋಶಾಧಿಕಾರಿ ದಿವಾಕರ ಕೋಟ್ಯಾನ್, ಕಾರ್ಯಕ್ರಮ ಸಂಘಟಕರಾದ ಕಮಲಾಕ್ಷ ಬಡಗುಹಿತ್ಲು, ವೇದಾವತಿ ಜಯಕುಮಾರ್ ಉಪಸ್ಥಿತರಿದ್ದರು.
ಮಾಜಿ ಅಧ್ಯಕ್ಷ ಯೋಗೀಶ್ ಕೋಟ್ಯಾನ್ ಚಿತ್ರಾಪು ಪ್ರಸ್ತಾವನೆಗೈದರು, ಮಾಜಿ ಅಧ್ಯಕ್ಷ ಮೋಹನ್ ಸುವರ್ಣ ಮತ್ತು ರಿತೇಶ್ ಸನ್ಮಾನ ಪತ್ರ ವಾಚಿಸಿದರು, ಕಾರ್ಯದರ್ಶಿ ಚರಿಷ್ಠಾ ಶ್ರೀನಿವಾಸ್ ವಂದಿಸಿದರು, ಮಾಜಿ ಅಧ್ಯಕ್ಷರುಗಳಾದ ನರೇಂದ್ರ ಕೆರೆಕಾಡು ಮತ್ತು ಉದಯ ಅಮೀನ್ ಮಟ್ಟು ಕಾರ್ಯಕ್ರಮ ನಿರೂಪಿಸಿದರು.

ಹಿರಿಯ ಕೃಷಿಕೆ ರಾಜೀವಿ ಕೊಕ್ಕರ್‌ಕಲ್ ಅವರನ್ನು ತುಳುವೆರೆ ತುಡರ ಪರ್ಬದ ವಿಶೇಷ ತಮ್ಮನದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ವೈಶಿಷ್ಟ :
* ಮೂರು ಧರ್ಮದ ಪ್ರಮುಖರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
* ರಂಗೋಲಿ/ಗೂಡುದೀಪ ಸ್ಪರ್ಧೆಗಳು ನಡೆದವು.
* ಬಂದವರಿಗೆ ಗಟ್ಟಿ ಬಜೀಲ್ದ್ ಔತಣ.
* ಸಾಧಕರಿಗೆ ಸನ್ಮಾನ.
ಸ್ಪರ್ಧಾ ಫಲಿತಾಂಶ:
ರಂಗೋಲಿ ಸ್ಪರ್ಧೆ : ಶರತ್ ಅಡ್ವೆ ಯುವವಾಹಿನಿ ಘಟಕ (ಪ್ರಥಮ), ರಿತೇಶ್ ಕಂಕನಾಡಿ ಯುವವಾಹಿನಿ ಘಟಕ (ದ್ವೀತಿಯ), ಸಹನಾ ಕರ್ಕೇರಾ ಬಂಟ್ವಾಳ ಯುವವಾಹಿನಿ ಘಟಕ (ತೃತೀಯ).
ಗೂಡುದೀಪ ಸ್ಪರ್ಧೆ: ಆದಿತ್ಯ ಭಟ್ ಮಂಗಳೂರು (ಪ್ರಥಮ), ವಿಖ್ಯಾತ್ ಭಟ್ ಮಂಗಳೂರು (ದ್ವೀತೀಯ), ದೀಕ್ಷಿತ್ ಮತ್ತು ತಂಡ ಯುವವಾಹಿನಿ ಶಕ್ತಿ ನಗರ ಮತ್ತು ಯೋಗೀಶ್ ಯುವವಾಹಿನಿ ಬಜ್ಪೆ (ತೃತೀಯ).

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ

ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆ

ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆಯನ್ನು ದಿನಾಂಕ 11-03-2025 ಮಂಗಳವಾರದಂದು ನಗರದ ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಬಹಳ ಅರ್ಥಪೂರ್ಣಾವಾಗಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ...

Sunday, 06-04-2025

ಯುವವಾಹಿನಿ (ರಿ) ಮಂಗಳೂರು ಘಟಕದ ಪದಗ್ರಹಣ ಸಮಾರಂಭ

ಸಮಾಜ ಸೇವೆ ಹಾಗೂ ವೈಯಕ್ತಿಕ ಬದುಕಿನಲ್ಲಿ ಸಮನ್ವಯ ಇದ್ದರೆ ಮಾತ್ರ ಯಶಸ್ಸು ಸಾಧ್ಯ ದಿನಾಂಕ 25-2-2025 : ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಯುವವಾಹಿನಿ (ರಿ) ಮಂಗಳೂರು ಘಟಕದ 2025-26 ನೇ ಸಾಲಿನ ನೂತನ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾದ ಶ್ರೀ...

Sunday, 06-04-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
error: Content is protected !!