ಉಪ್ಪಿನಂಗಡಿ : ಯುವವಾಹಿನಿ ಉಪ್ಪಿನಂಗಡಿ ಘಟಕದ ಆಶ್ರಯದಲ್ಲಿ ಯುವತುಡರ್ -2018 ಕಾರ್ಯಕ್ರಮವು ಘಟಕದ ಉಪಾಧ್ಯಕ್ಷರಾದ ಚಂದ್ರಶೇಖರ ಕೆ. ಸನಿಲ್ ಇವರ ಮನೆ “ಯಮುನಾ” ಇಲ್ಲಿ ದಿನಾಂಕ ೦೭. ೧೧. ೨೦೧೮ ರಂದು ನಡೆಯಿತು. ಘಟಕದ ಅಧ್ಯಕ್ಷರಾದ ಅಜಿತ್ ಕುಮಾರ್ ಪಾಲೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ ನಡುಬೈಲು ಭಾಗವಹಿಸಿ ಮಾತನಾಡಿ ದೀಪಾವಳಿಯು ತುಳುನಾಡಿನ ವಿಶಿಷ್ಟ ಹಬ್ಬವಾಗಿದ್ದು, ಕತ್ತಲೆಯನ್ನು ಹೋಗಲಾಡಿಸಿ ಬೆಳಕನ್ನು ಪಸರಿಸುವ ಸಂಸ್ಕೃತಿಗಳ ಪ್ರತೀಕವಾದ ದೀಪಾವಳಿಯು ಎಲ್ಲರ ಬದುಕಿನಲ್ಲಿ ದೀಪದಂತೆ ಬೆಳಗಲಿ ಎಂದು ಶುಭ ಹಾರೈಸಿದರು.
ಉಪ್ಪಿನಂಗಡಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶಯನಾ ಜಯಾನಂದ, ಬಾಲಕೃಷ್ಣ ಪೂಜಾರಿ, ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಡಾ.ರಾಜರಾಮ್ ಕೆ.ಬಿ, ಸಲಹೆಗಾರರಾದ ವರದ್ರಾಜ್. ಎಂ, ಡಾ.ಸದಾನಂದ ಕುಂದರ್, ಚಂದ್ರ ಶೇಖರ ಕೆ ಸನಿಲ್ ಶುಭ ಹಾರೈಸಿದರು.
ತುಡರ್ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಶಯಾನ ಜಯಾನಂದ್ ಮತ್ತು ರೂಪಲತಾ ಚಂದ್ರಶೇಖರ್ ಇವರು ನೆರವೇರಿಸಿದರು. ನಂತರ ಎಲ್ಲಾ ಯುವವಾಹಿನಿ ಸದಸ್ಯರು ಹಣತೆಯೊಂದಿಗೆ ದೀಪ ಹಚ್ಚುವ ಮೂಲಕ ದೀಪಗಳನ್ನು ಬೆಳಗಿಸಿದರು.
ಈ ಕಾರ್ಯಕ್ರಮದಲ್ಲಿ ಮರ ಹಾಕುವ ಬಲೀಯೇಂದ್ರ ಪೂಜೆಯನ್ನು ಮಾಡಲಾಯಿತು. ಇದನ್ನು ಹಿರಿಯರಾದ ಶೇಖರ ಪೂಜಾರಿ ಶಿಬಾರ್ಲ ಇವರು ನೇರವರಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸದಸ್ಯರಿಗೆ ಲೋಕೇಶ್ ಬೆತ್ತೊಡಿ ರಸಪ್ರಶ್ನೆಗಳನ್ನು ನಡೆಸಿಕೊಟ್ಟರು. ಡಾ.ರಾಜರಾಮ್ ಇವರ ಮಗ ಮಾಸ್ಟರ್ ರಿತೇಶ್ ಇವರು ಕೀ ಬೋರ್ಡ್ ಮೂಲಕ ಹಲವು ಹಾಡುಗಳನ್ನು ನುಡಿಸಿ ಮನರಂಜನೆ ನೀಡಿದರು. ಯುವ ತುಡರ್ ಕಾರ್ಯಕ್ರಮ ಆಯೋಜನೆ ಮಾಡಿದ ಚಂದ್ರಶೇಖರ ಸನಿಲ್ ದಂಪತಿಗಳನ್ನು ಈ ಸಂದರ್ಭದಲ್ಲಿ ಗೌರವಿಸಿ ಅಭಿನಂದಿಸಲಾಯಿತು. ಪೂರ್ವಾಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಸ್ವಾಗತಿಸಿ, ಘಟಕದ ಕಾರ್ಯದರ್ಶಿ ಅನಿಲ್ ಕುಮಾರ್ ದಡ್ಡು ಧನ್ಯವಾದಗೈದರು. ಘಟಕದ ವ್ಯಕ್ತಿತ್ವ ವಿಕಸನ ನಿರ್ದೇಶಕರಾದ ನಾಣ್ಯಪ್ಪ ಪೂಜಾರಿ ಇವರು ಕಾರ್ಯಕ್ರಮ ನಿರೂಪಿಸಿದರು. ಸುಮಾರು 150 ಮಂದಿ ಸದಸ್ಯರು ಭಾಗವಹಿಸಿದ್ದರು.