ಕೂಳೂರು: ಮನೆ-ಮನೆ ಭಜನೆಯು ಕುಟುಂಬದಲ್ಲಿ ಧಾರ್ಮಿಕ ಶ್ರದ್ಧೆ ಮತ್ತು ಒಗ್ಗಟ್ಟನ್ನು ಹೆಚ್ಚಿಸುತ್ತದೆ. ಯುವವಾಹಿನಿಯ ಇಂತಹ ಸತ್ಕಾರ್ಯಗಳು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲಿ ಎಂದು ಸದಸ್ಯರು ಆಶಿಸಿದರು. ಸುಮಂಗಲ ಸಿ. ಕೋಟ್ಯಾನ್ ಅವರ ಮನೆಯಲ್ಲಿ ನಡೆದ ಭಜನಾ ಸಂಕೀರ್ತನೆಯಲ್ಲಿ ಘಟಕದ ಮಾಜಿ ಅಧ್ಯಕ್ಷರು, ನಿರ್ದೇಶಕರು ಹಾಗೂ ಸದಸ್ಯರು ಭಕ್ತಿಯಿಂದ ಪಾಲ್ಗೊಂಡಿದ್ದರು.

ಯುವವಾಹಿನಿ ಕೂಳೂರು ಘಟಕದ ವತಿಯಿಂದ 2026-27ನೇ ಸಾಲಿನ ಪ್ರಥಮ ‘ಮನೆ-ಮನೆ ಭಜನೆ’ ಕಾರ್ಯಕ್ರದಲ್ಲಿ ಘಟಕದ ಅಧ್ಯಕ್ಷರು, ಮಾಜಿ ಅಧ್ಯಕ್ಷರು ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.
ಇದೇ ಸುಸಂದರ್ಭದಲ್ಲಿ ಘಟಕದ ಮುಖವಾಣಿ ‘ಮಾತೃಸ್ಪರ್ಶ’ದ ಸಂಪಾದಕಿ ಸುಮಂಗಲ ಸಿ. ಕೋಟ್ಯಾನ್ ಮತ್ತು ಚರಣ್ ಕೋಟ್ಯಾನ್ ದಂಪತಿಯನ್ನು ಘಟಕದ ವತಿಯಿಂದ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.


