ಕಡಬ : ಕಡಬ ಶ್ರೀ ಮಹಾವಿಷ್ಣು ದೇವಸ್ಥಾನ, ಪಿಜಕ್ಕಳದಲ್ಲಿ ದಿನಾಂಕ 11.01.2026 ನೇ ಬೆಳಿಗ್ಗೆ ಧನುಪೂಜೆ ಪ್ರಯುಕ್ತ ಯುವವಾಹಿನಿ (ರಿ.) ಕಡಬ ಘಟಕದ ಸದಸ್ಯರು ಭಕ್ತಿಭಾವಪೂರ್ಣ ಭಜನಾ ಸೇವೆಯನ್ನು ಸಲ್ಲಿಸಿದರು.

ಬೆಳಿಗ್ಗೆ 4.00 ಗಂಟೆಯಿಂದ 5.15 ಗಂಟೆಯವರೆಗೆ ನಡೆದ ಭಜನಾ ಸೇವೆಯಲ್ಲಿ ಭಕ್ತಿಗೀತೆಗಳು ಹಾಗೂ ನಾಮಸಂಕೀರ್ತನೆಯ ಮೂಲಕ ದೇವರ ಸ್ಮರಣೆಯಲ್ಲಿ ತೊಡಗಿಸಿಕೊಂಡರು. ಯುವವಾಹಿನಿ ಕಡಬ ಘಟಕದ ಈ ಸೇವೆಗೆ ದೇವಾಲಯದ ಆಡಳಿತ ಮಂಡಳಿ ಹಾಗೂ ಭಕ್ತಾದಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.


