
27-02-2026, 9:00 PM
ಶಕ್ತಿನಗರ : ಯುವವಾಹಿನಿ (ರಿ.) ಶಕ್ತಿನಗರ ಘಟಕದ ವತಿಯಿಂದ ದಿನಾಂಕ 27-02-2026 ರಂದು ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ಲ್ ನಡೆದ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನದ ಜಾತ್ರಾ ಮಹೋತ್ಸವದಲ್ಲಿ ವಿಶೇಷ ಸ್ವಯಂಸೇವಕ ಸೇವೆಯನ್ನು ಸಲ್ಲಿಸಲಾಯಿತು.ಗೆಜ್ಜೆಗಿರಿ ಕ್ಷೇತ್ರದಲ್ಲಿ ನಡೆದ ಭವ್ಯ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಘಟಕದ ಸದಸ್ಯರು ಶಿಸ್ತಿನಿಂದ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಪ್ರತಿ ವರ್ಷದ ಸಂಪ್ರದಾಯದಂತೆ ಈ ಬಾರಿಯೂ ಕ್ಷೇತ್ರದ ಅನ್ನದಾನ ಸೇವೆಗೆ ಶಕ್ತಿನಗರ ಘಟಕದ ವತಿಯಿಂದ ಆರ್ಥಿಕ ದೇಣಿಗೆಯನ್ನು ಹಸ್ತಾಂತರಿಸಲಾಯಿತು. ಈ […]
Read More

27-02-2026, 10:00 AM
ಸುಳ್ಯ: ಶ್ರೀಕ್ಷೇತ್ರ ಗೆಜ್ಜೆಗಿರಿ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಯುವವಾಹಿನಿ (ರಿ.) ಸುಳ್ಯ ಘಟಕದ ವತಿಯಿಂದ ದಿನಾಂಕ 27-02-2026 ಹಾಗೂ 28-02-2026 ರಂದು ಎರಡು ದಿನಗಳ ಕಾಲ ಹಗಲು–ರಾತ್ರಿ ನಿರಂತರವಾಗಿ ವಿವಿಧ ಸೇವಾ ಕಾರ್ಯಗಳಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಘಟಕದ ವತಿಯಿಂದ ಶ್ರೀಕ್ಷೇತ್ರಕ್ಕೆ ಅನ್ನದಾನದ ಸಲುವಾಗಿ ರೂ. 5,500/- ದೇಣಿಗೆಯನ್ನು ಸಮರ್ಪಿಸಲಾಯಿತು.ಈ ಪುಣ್ಯ ಕಾರ್ಯದಲ್ಲಿ ಘಟಕದ ಅಧ್ಯಕ್ಷರು, ಪೂರ್ವಾಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.
Read More

25-02-2026, 7:00 PM
ಕೊಲ್ಯ: ದಿನಾಂಕ 25-02-2026ರಂದು TMG ಸುನಿಧಿ ಫೌಂಡೇಶನ್ ಟ್ರಸ್ಟ್, ಭಾರತೀಯ ವಿಕಾಸ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಕೊಲ್ಯ ಘಟಕದ ಸಹಕಾರದಲ್ಲಿ ಆರ್ಥಿಕ ಸಾಕ್ಷರತೆ, ಬ್ಯಾಂಕಿಂಗ್ ಸೌಲಭ್ಯಗಳು ಹಾಗೂ ಸೌರ ಶಕ್ತಿ ಆಧಾರಿತ ಜೀವನೋಪಾಯ ಯಂತ್ರಗಳ ಕುರಿತು ಮಾಹಿತಿ ಕಾರ್ಯಕ್ರಮವು ಬಿಲ್ಲವ ಸೇವಾ ಸಮಾಜ, ಕೊಲ್ಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ) ಕೊಲ್ಯ ಘಟಕದ ಪ್ರಥಮ ಉಪಾಧ್ಯಕ್ಷರಾದ ಜೀವನ್ ಕೊಲ್ಯ ಮಾತನಾಡಿ, ಪ್ರತಿಯೊಬ್ಬ ನಾಗರಿಕರೂ ಹಣಕಾಸು ಸಾಕ್ಷರತೆ, ಬ್ಯಾಂಕಿಂಗ್ ಸೌಲಭ್ಯಗಳು, ಕೌಶಲ್ಯ […]
Read More

24-02-2026, 9:00 PM
ಕೂಳೂರು: ಮನೆ-ಮನೆ ಭಜನೆಯು ಕುಟುಂಬದಲ್ಲಿ ಧಾರ್ಮಿಕ ಶ್ರದ್ಧೆ ಮತ್ತು ಒಗ್ಗಟ್ಟನ್ನು ಹೆಚ್ಚಿಸುತ್ತದೆ. ಯುವವಾಹಿನಿಯ ಇಂತಹ ಸತ್ಕಾರ್ಯಗಳು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲಿ ಎಂದು ಸದಸ್ಯರು ಆಶಿಸಿದರು. ಸುಮಂಗಲ ಸಿ. ಕೋಟ್ಯಾನ್ ಅವರ ಮನೆಯಲ್ಲಿ ನಡೆದ ಭಜನಾ ಸಂಕೀರ್ತನೆಯಲ್ಲಿ ಘಟಕದ ಮಾಜಿ ಅಧ್ಯಕ್ಷರು, ನಿರ್ದೇಶಕರು ಹಾಗೂ ಸದಸ್ಯರು ಭಕ್ತಿಯಿಂದ ಪಾಲ್ಗೊಂಡಿದ್ದರು. ಯುವವಾಹಿನಿ ಕೂಳೂರು ಘಟಕದ ವತಿಯಿಂದ 2026-27ನೇ ಸಾಲಿನ ಪ್ರಥಮ ‘ಮನೆ-ಮನೆ ಭಜನೆ’ ಕಾರ್ಯಕ್ರದಲ್ಲಿ ಘಟಕದ ಅಧ್ಯಕ್ಷರು, ಮಾಜಿ ಅಧ್ಯಕ್ಷರು ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.ಇದೇ ಸುಸಂದರ್ಭದಲ್ಲಿ ಘಟಕದ ಮುಖವಾಣಿ […]
Read More

20-02-2026, 9:00 PM
ಕಡಬ: ಯುವವಾಹಿನಿ (ರಿ.) ಕಡಬ ಘಟಕದ ವತಿಯಿಂದ ಧಾರ್ಮಿಕ ಜಾಗೃತಿ ಮತ್ತು ಸದಸ್ಯರ ನಡುವಿನ ಬಾಂಧವ್ಯ ವೃದ್ಧಿಸುವ ನಿಟ್ಟಿನಲ್ಲಿ ಐವತ್ತೊಕ್ಲು ಗ್ರಾಮದ ಪೊಳೆಂಜದಲ್ಲಿ ಭಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ದಿನಾಂಕ 20.02.2026ರ ಶುಕ್ರವಾರ ಸಂಜೆ ಶ್ರೀಮತಿ ಮತ್ತು ಶ್ರೀ ನಾಗೇಶ್ ಪೂಜಾರಿಯವರ ಗೃಹದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಘಟಕದ ಸದಸ್ಯರು ಅತ್ಯಂತ ಭಕ್ತಿ ಮತ್ತು ಉತ್ಸಾಹದಿಂದ ಪಾಲ್ಗೊಂಡರು. ಸಂಜೆ 7.15 ರಿಂದ 9.00 ಗಂಟೆಯವರೆಗೆ ನಡೆದ ಭಜನೆಯಲ್ಲಿ ಸುಶ್ರಾವ್ಯವಾಗಿ ನಾಮಸಂಕೀರ್ತನೆ ಮಾಡುವ ಮೂಲಕ ಭಕ್ತಿ ಸೇವೆಯನ್ನು ಸಮರ್ಪಿಸಲಾಯಿತು. ಧಾರ್ಮಿಕ ಬದ್ಧತೆ: […]
Read More

17-02-2026, 9:11 PM
ಮಂಗಳೂರು : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಕೊಲ್ಯ ಘಟಕದ ಆತಿಥ್ಯದಲ್ಲಿ ಮಾರ್ಚ್ 14ರಂದು ಮಂಗಳೂರು ಪುರಭವನದಲ್ಲಿ ನಡೆಯಲಿರುವ ವಿಶ್ವ ಮಹಿಳಾ ದಿನಾಚರಣೆಯ ವಿಶೇಷ ಕಾರ್ಯಕ್ರಮ “ಸಖೀ ಸಂವಾದ”ಕಾರ್ಯಾಗಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಐಎಎಸ್ . ಹಾಗೂ ಅಪರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ರಾಜು ಕೆ KAS ಅವರನ್ನು ಗೌರವಪೂರ್ವಕವಾಗಿ ಆಹ್ವಾನಿಸಲಾಯಿತು ಈ ಸಂದರ್ಭದಲ್ಲಿ ಯುವವಾಹಿನಿ ಸಂಸ್ಥೆಯ ವತಿಯಿಂದ ನಡೆಯುತ್ತಿರುವ ವಿವಿಧ ಸಮಾಜಮುಖಿ ಕಾರ್ಯಕ್ರಮಗಳು, ಯುವಜನತೆ ಹಾಗೂ ಮಹಿಳಾ ಸಬಲೀಕರಣಕ್ಕಾಗಿ […]
Read More

15-02-2026, 10:30 AM
ಉಪ್ಪಿನಂಗಡಿ : ಯುವಜನರ ನಿರ್ಲಕ್ಷ್ಯ ಮನೋಭಾವದಿಂದ ರಸ್ತೆ ಅಪಘಾತಗಳು ಹೆಚ್ಚುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಮತ್ತು ಎಚ್ಚರಿಕೆಯಿಂದ ವಾಹನ ಚಲಾಯಿಸುವುದು ನಮ್ಮನ್ನು ಮಾತ್ರವಲ್ಲದೆ ನಮ್ಮನ್ನು ನಿರೀಕ್ಷಿಸುತ್ತಿರುವ ಮನೆಯವರನ್ನೂ ರಕ್ಷಿಸುತ್ತದೆ. ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು ಯುವಜನತೆ ತಮ್ಮ ಹೆತ್ತವರಿಗೆ ನೀಡುವ ಅತಿ ದೊಡ್ಡ ಕೊಡುಗೆ ಎಂದು ಬಂಟ್ವಾಳ ಪ್ರಾದೇಶಿಕ ಸಾರಿಗೆ ಕಚೇರಿಯ ಹಿರಿಯ ಅಧಿಕಾರಿ ಚರಣ್ ಕೆ.ಎಸ್ ಅಭಿಪ್ರಾಯಪಟ್ಟರು. ಅವರು ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕದ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ 15.02.2026 […]
Read More

13-02-2026, 8:24 PM
ಮಂಗಳೂರು : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಕೊಲ್ಯ ಘಟಕದ ಆತಿಥ್ಯದಲ್ಲಿ, ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಮಾರ್ಚ್ 14ರಂದು ಮಂಗಳೂರು ಪುರಭವನದಲ್ಲಿ ನಡೆಯಲಿರುವ ವಿಶ್ವ ಮಹಿಳಾ ದಿನಾಚರಣೆಯ ವಿಶೇಷ ಕಾರ್ಯಕ್ರಮ “ಸಖೀ ಸಂವಾದ”ಕಾರ್ಯಾಗಾರಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರನ್ನು ಗೌರವಪೂರ್ವಕವಾಗಿ ಆಹ್ವಾನಿಸಲಾಯಿತು. ಈ ಸಂದರ್ಭದಲ್ಲಿ ಯುವವಾಹಿನಿ ಸಂಸ್ಥೆಯ ವತಿಯಿಂದ ನಡೆಯುತ್ತಿರುವ ವಿವಿಧ ಸಮಾಜಮುಖಿ ಕಾರ್ಯಕ್ರಮಗಳು, ಯುವಜನತೆ ಹಾಗೂ ಮಹಿಳಾ ಸಬಲೀಕರಣಕ್ಕಾಗಿ ಕೈಗೊಳ್ಳಲಾಗುತ್ತಿರುವ ಚಟುವಟಿಕೆಗಳ ಕುರಿತು ಕಮಿಷನರ್ ಅವರಿಗೆ ವಿವರಿಸಲಾಯಿತು. […]
Read More

10-02-2026, 4:00 PM
ಮಂಗಳೂರು : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ 2026ನೇ ಎಪ್ರಿಲ್ 19ರಂದು ನಡೆಯುವ ಯುವವಾಹಿನಿ ಅಂತರ್ ಘಟಕ ಸಾಂಸ್ಕೃತಿಕ ಸ್ಪರ್ಧೆ ಡೆನ್ನಾನ ಡೆನ್ನನ 2026 ಇದರ ನಿಯಮಾವಳಿಗಳನ್ನು ಕೇಂದ್ರ ಸಮಿತಿಯು ಬಿಡುಗಡೆಗೊಳಿಸಿದೆ. ನಿಯಮಾವಳಿಗಳು ಅರ್ಹತೆ ಮತ್ತು ಸದಸ್ಯತ್ವ : 1) ಈ ಸ್ಪರ್ಧೆಯು ಯುವವಾಹಿನಿಯ ಅರ್ಹ ಸದಸ್ಯರಿಗೆ ಮಾತ್ರ ಸೀಮಿತವಾಗಿರುವ ಅಂತರ್ಘಟಕ ಸಾಂಸ್ಕೃತಿಕ ಸ್ಪರ್ಧೆಯಾಗಿರುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಸದಸ್ಯರು ನಿಗದಿತ ಅವಧಿಯೊಳಗೆ […]
Read More

08-02-2026, 6:00 PM
ಬೆಂಗಳೂರು: ಯುವಕರು ಸಮಾಜವನ್ನು ಬಲಿಷ್ಠ ಮತ್ತು ಆರೋಗ್ಯಕರ ದಿಕ್ಕಿನಲ್ಲಿ ಮುನ್ನಡೆಸುವ ಶಕ್ತಿ ಹೊಂದಿದ್ದಾರೆ; ಇಂತಹ ಕ್ರೀಡಾ ವೇದಿಕೆಗಳು ಅವರಲ್ಲಿ ಶಿಸ್ತು, ಏಕತೆ ಮತ್ತು ಆತ್ಮವಿಶ್ವಾಸವನ್ನು ಬೆಳೆಸುತ್ತವೆ ಎಂದು ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷರು ಹಾಗೂ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ನ ಚೇರ್ಮೆನ್ ಸೂರ್ಯಕಾಂತ್ ಜೆ. ಸುವರ್ಣ ಅಭಿಪ್ರಾಯಪಟ್ಟರು.ಅವರು ಯುವವಾಹಿನಿ (ರಿ.) ಬೆಂಗಳೂರು ಘಟಕದ ವತಿಯಿಂದ ಚಿಕ್ಕಬಾಣಾವರ ಸಮೀಪದ ಗೋಲ್ಡನ್ ರೇ ಕ್ರೀಡಾಂಗಣದಲ್ಲಿ ಫೆಬ್ರವರಿ 8ರಂದು ಆಯೋಜಿಸಲಾದ “ಬ್ರಹ್ಮಶ್ರೀ ಕ್ರೀಡಾಕೂಟ 2026” ನ್ನು ಉದ್ಘಾಟಿಸಿ ಮಾತನಾಡಿ ಯುವಕರು ಸಮಾಜದ […]
Read More