Yuvavahini

FEB 10, 2026 4.00 PM IST

ಯುವವಾಹಿನಿ ಅಂತರ್ ಘಟಕ ಸಾಂಸ್ಕೃತಿಕ ಸ್ಪರ್ಧೆ

ಡೆನ್ನಾನ ಡೆನ್ನನ 2026 : ನಿಯಮಾವಳಿ

ಮಂಗಳೂರು : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ 2026ನೇ ಎಪ್ರಿಲ್ 19ರಂದು ನಡೆಯುವ ಯುವವಾಹಿನಿ ಅಂತರ್ ಘಟಕ ಸಾಂಸ್ಕೃತಿಕ ಸ್ಪರ್ಧೆ ಡೆನ್ನಾನ ಡೆನ್ನನ 2026 ಇದರ ನಿಯಮಾವಳಿಗಳನ್ನು ಕೇಂದ್ರ ಸಮಿತಿಯು ಬಿಡುಗಡೆಗೊಳಿಸಿದೆ.

ನಿಯಮಾವಳಿಗಳು

ಅರ್ಹತೆ ಮತ್ತು ಸದಸ್ಯತ್ವ :

1) ಈ ಸ್ಪರ್ಧೆಯು ಯುವವಾಹಿನಿಯ ಅರ್ಹ ಸದಸ್ಯರಿಗೆ ಮಾತ್ರ ಸೀಮಿತವಾಗಿರುವ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆಯಾಗಿರುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಸದಸ್ಯರು ನಿಗದಿತ ಅವಧಿಯೊಳಗೆ ವಾರ್ಷಿಕ ಸದಸ್ಯತ್ವ ಶುಲ್ಕ ಪಾವತಿಸಿರುವ ಅರ್ಹ ಸದಸ್ಯರಾಗಿರಬೇಕು.

2) ಘಟಕದಲ್ಲಿ ಸದಸ್ಯತ್ವ ಶುಲ್ಕ ಪಾವತಿಸಿದ್ದರೂ, ಕೇಂದ್ರ ಸಮಿತಿಯಿಂದ ಅನುಮೋದನೆಗೊಂಡು ಸದಸ್ಯತ್ವ ಸಂಖ್ಯೆ ಪಡೆದ ಅರ್ಹ ಸದಸ್ಯರಿಗೆ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಈ ಕುರಿತು ಕೇಂದ್ರ ಸಮಿತಿ ಘಟಕಗಳಿಗೆ ನೀಡಿರುವ ಅರ್ಹ ಸದಸ್ಯರ ಪಟ್ಟಿಯಲ್ಲಿ ಹೆಸರು ಇರುವವರಿಗೆ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಕಟ್ಟುನಿಟ್ಟಾಗಿ ಸೂಚಿಸಲಾಗುತ್ತದೆ. ಸದಸ್ಯರು www.samparka.yuvavahini.in ಸಂಪರ್ಕ ವೆಬ್‌ಸೈಟ್‌ನಲ್ಲಿ ತಮ್ಮ ಮೊಬೈಲ್ ಸಂಖ್ಯೆ ಹಾಗೂ OTP ಬಳಸಿ ತಮ್ಮ ಅರ್ಹ ಸದಸ್ಯತ್ವದ ಸ್ಥಿತಿ ಹಾಗೂ ಸಂಬಂಧಿತ ಮಾಹಿತಿಯನ್ನು ಸ್ವತಃ ಪರಿಶೀಲಿಸಿಕೊಳ್ಳಬಹುದು.

3) ತಾವು ಸದಸ್ಯತ್ವ ಹೊಂದಿರುವ ಘಟಕದ ಮೂಲಕ ಮಾತ್ರ ಸ್ಪರ್ಧಿಸಲು ಅವಕಾಶವಿರುತ್ತದೆ.

4) ಕೇಂದ್ರ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.

ತಂಡದ ಸಂರಚನೆ ಮತ್ತು ಭಾಗವಹಿಸುವವರು

5) ಸ್ಪರ್ಧಿಸುವ ಘಟಕದ ಕಲಾ ಪ್ರದರ್ಶನದಲ್ಲಿ ಕನಿಷ್ಠ 10 ಮಂದಿ ಸ್ಪರ್ಧಾಳುಗಳು ಕಡ್ಡಾಯ. ಗರಿಷ್ಠ ಸಂಖ್ಯೆಗೆ ಯಾವುದೇ ಮಿತಿ ಇರುವುದಿಲ್ಲ.

6) ಸ್ಪರ್ಧೆಯ ಪರಿಕಲ್ಪನೆಗೆ ಪೂರಕವಾಗಿ ಮಕ್ಕಳ ಅಗತ್ಯವಿದ್ದಲ್ಲಿ, 0 ರಿಂದ 18 ವರ್ಷದೊಳಗಿನ ಗರಿಷ್ಠ ಇಬ್ಬರು ಮಕ್ಕಳನ್ನು ಮಾತ್ರ ಬಳಸಿಕೊಳ್ಳಬಹುದು. ಆ ಮಕ್ಕಳ ಹೆತ್ತವರು/ಸಹೋದರ/ಸಹೋದರಿ ಯುವವಾಹಿನಿಯ ಅರ್ಹ ಸದಸ್ಯರಾಗಿರಬೇಕು. ಮಕ್ಕಳ ಆಧಾರ್ ಕಾರ್ಡ್ ಪ್ರದರ್ಶನ ಕಡ್ಡಾಯ, ಮಕ್ಕಳ ವಯಸ್ಸು 19.04.2026ಕ್ಕೆ ಅನ್ವಯವಾಗುವಂತೆ 18 ವರ್ಷ ಮೀರಿರಬಾರದು

ವಿಷಯ, ಪರಿಕಲ್ಪನೆ ಮತ್ತು ಮೌಲ್ಯಾಧಾರ

7) ಕಲಾ ಪ್ರದರ್ಶನದ ವಿಷಯಗಳು

a) ಬಿಲ್ಲವ ಸಮುದಾಯ ಅಂದು, ಇಂದು, ಮುಂದೆ : ಬಿಲ್ಲವ ಸಮಾಜದ ಅಂದಿನ ವೈಭವ ನೋವು-ನಲಿವುಗಳ ಪಯಣ ಇಂದಿನ ಸಾಮಾಜಿಕ ಸ್ಥಾನಮಾನ ಮುಂದಿನ ದಿನಗಳಲ್ಲಿ ಅಗತ್ಯವಿರುವ ವಿಚಾರಧಾರೆಗಳು

b) ಬಿಲ್ಲವ ಸಂಸ್ಕೃತಿ – ಸಂಪ್ರದಾಯ : ಆರಾಧನಾ ಪರಂಪರೆ ದೈವ-ದೇವರ ಆರಾಧನೆಯಲ್ಲಿ ಬಿಲ್ಲವರ ಪಾತ್ರ ದೈವಗಳ ಹಾಗೂ ಹಿರಿಯರೊಂದಿಗೆ ಇರುವ ಸಂಬಂಧ ಸ್ಥಳಪುರಾಣ ಮತ್ತು ವ್ಯಕ್ತಿಗತ ಹಿನ್ನೆಲೆಯ ಕಥೆಗಳು

c) ಬಿಲ್ಲವರ ವೃತ್ತಿ ಬದುಕು : ನಾಟಿ ವೈದ್ಯರು ಕುಲಕಸುಬು ಕೃಷಿ ಬದುಕು ಮತ್ತು ಜೀವನ ಶೈಲಿಯ ವರ್ಣನೆ

d) ಸ್ವಾತಂತ್ರ್ಯ ಹೋರಾಟದಲ್ಲಿ ಬಿಲ್ಲವರು : ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಬಿಲ್ಲವ ನಾಯಕರ ಪಾತ್ರ ಹೋರಾಟದಲ್ಲಿ ಮಡಿದ ಬಿಲ್ಲವ ಹೋರಾಟಗಾರರ ಕಥನ

e) ಬಿಲ್ಲವ ವೀರ ಪುರುಷರು, ವೀರ ವನಿತೆಯರು, ಸಾಮಾಜಿಕ-ಧಾರ್ಮಿಕ ಸುಧಾರಕರು, ಕಲಾವಿದರು ಹಾಗೂ ಸಾಧಕರು

ವಿಶೇಷ ಸೂಚನೆ: ಬಿಲ್ಲವ ಸಮಾಜಕ್ಕೆ ಸಂಬಂಧಿಸಿದ ಮೇಲ್ಕಂಡ ವಿಷಯಗಳನ್ನು ಒಳಗೊಂಡ ಪಾರಂಪರಿಕ, ಆಧುನಿಕ ಹಾಗೂ ನೈಜ ಚಿತ್ರಣವಿರುವ ವೈವಿಧ್ಯಮಯ ಪರಿಕಲ್ಪನೆಗಳಿಗೆ ತೀರ್ಪುಗಾರರು ಪ್ರಾಶಸ್ತ್ಯ ನೀಡುತ್ತಾರೆ

ಸಮಯ ಮತ್ತು ಪ್ರದರ್ಶನ ನಿಯಮಗಳು

8) ದುಂದು ವೆಚ್ಚ, ಅತಿಯಾದ ಅಲಂಕಾರ ಮತ್ತು ಅದ್ದೂರಿ ರಂಗಸಜ್ಜಿಕೆಗಳಿಗೆ ಅಂಕ ಕಡಿತಗೊಳಿಸಲಾಗುವುದು, ಸರಳತೆ, ವಿಷಯದ ತಿರುಳು ಹಾಗೂ ಕಲಾತ್ಮಕತೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ.

9) ಪ್ರತಿಯೊಂದು ತಂಡಕ್ಕೆ ಗರಿಷ್ಠ 10 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ನಿಗದಿತ ಸಮಯ ಮೀರಿದಲ್ಲಿ ಅಂಕ ಕಡಿತಗೊಳ್ಳುತ್ತದೆ.

10) 10 ನಿಮಿಷಗಳ ಅವಧಿಯಲ್ಲಿ ಲೈವ್ ಅಥವಾ ಸ್ವರಮುದ್ರಿಕೆ (Audio Track) ಬಳಸಿ ಹಾಡು, ನೃತ್ಯ, ನಾಟಕ, ಸ್ಕಿಟ್, ಮಿಮಿಕ್ರಿ, ಮೈಮ್ ಮುಂತಾದ ಯಾವುದೇ ಕಲಾಪ್ರದರ್ಶನ ನೀಡಬಹುದು.

11) ಧರ್ಮ, ಜಾತಿ ಅಥವಾ ವ್ಯಕ್ತಿಯ ಅವಹೇಳನ, ಅಶ್ಲೀಲತೆ ಅಥವಾ ಅಸಭ್ಯತೆ ಒಳಗೊಂಡ ಕಾರ್ಯಕ್ರಮಗಳಿಗೆ ಕಟ್ಟುನಿಟ್ಟಾಗಿ ಅವಕಾಶವಿಲ್ಲ.

12) ನೀರು, ಬೆಂಕಿ ಹಾಗೂ ಸ್ಫೋಟಕ ವಸ್ತುಗಳ ಬಳಕೆ ಸಂಪೂರ್ಣ ನಿಷೇಧ. ದೀಪ ಬಳಸಲು ಮಾತ್ರ ಅನುಮತಿ ಇದೆ.

ವೇದಿಕೆ ಮತ್ತು ತಾಂತ್ರಿಕ ವ್ಯವಸ್ಥೆ

13) ಪ್ರತಿ ತಂಡಕ್ಕೆ, ವೇದಿಕೆ ಸಿದ್ಧತೆಗೆ :4 ನಿಮಿಷ, ರಂಗಸಜ್ಜಿಕೆ ತೆರವುಗೆ : 3 ನಿಮಿಷ, ಸೂಚನಾ ಗಂಟೆ ಬಾರಿಸಿದ ನಂತರ ಸಿದ್ಧತೆ ಆರಂಭಿಸಬೇಕು., ಪರದೆ ತೆರೆಯುವ ಕ್ಷಣದಿಂದಲೇ 10 ನಿಮಿಷಗಳ ಪ್ರದರ್ಶನ ಅವಧಿ ಆರಂಭವಾಗುತ್ತದೆ.

14) ಪ್ರದರ್ಶನದ ಮಧ್ಯೆ ತಾಂತ್ರಿಕ ಅಡಚಣೆ ಉಂಟಾದಲ್ಲಿ, ಸ್ಥಗಿತಗೊಂಡ ಸ್ಥಳದಿಂದಲೇ ಪ್ರದರ್ಶನ ಮುಂದುವರಿಸಲು ಅವಕಾಶವಿರುತ್ತದೆ. ತಾಂತ್ರಿಕ ದೋಷಕ್ಕೆ ಅಂಕ ಕಡಿತಗೊಳ್ಳುವುದಿಲ್ಲ.

15) ತಂಡದ ಸಿದ್ಧತೆಗೆ ಗ್ರೀನ್ ರೂಮ್ ವ್ಯವಸ್ಥೆ ಮಾಡಲಾಗುತ್ತದೆ.

16) ತಂಡದ ಸದಸ್ಯರು ಪ್ರದರ್ಶನಕ್ಕೆ 10 ನಿಮಿಷಗಳ ಮುಂಚಿತವಾಗಿ ವೇದಿಕೆಯ ಎಡಭಾಗದಲ್ಲಿ ಸಿದ್ಧರಾಗಿರಬೇಕು. ಪ್ರದರ್ಶನ ಮುಗಿದ ಬಳಿಕ ವೇದಿಕೆಯ ಬಲಭಾಗದಿಂದಲೇ ನಿರ್ಗಮಿಸಬೇಕು.

17) ಸ್ಪರ್ಶ ಕಲಾ ಮಂದಿರದ ವೇದಿಕೆಯ ಗಾತ್ರ: ಉದ್ದ – 36 ಅಡಿ, ಅಗಲ – 20 ಅಡಿ, ಎತ್ತರ – 11 ಅಡಿ

18) ಕಲಾಮಂದಿರದ ವೇದಿಕೆಯ ಬಾಗಿಲುಗಳು ಚಿಕ್ಕದಾಗಿರುವುದರಿಂದ ದೊಡ್ಡ ರಂಗಪರಿಕರಗಳ ಬಳಕೆ ಕಷ್ಟಸಾಧ್ಯ. ಆದ್ದರಿಂದ ಸರಳ ರಂಗಪರಿಕರ ಬಳಕೆಗೆ ಒತ್ತು ನೀಡಬೇಕು.

ಶಿಸ್ತು, ಸಮಯಪಾಲನೆ ಮತ್ತು ದಾಖಲೆಗಳು

19) ಘಟಕಗಳಿಗೆ ನಿಗದಿಪಡಿಸಿದ ಸಮಯದಲ್ಲಿಯೇ ಸ್ಪರ್ಧೆ ನೀಡಬೇಕು. ಯಾವುದೇ ಕಾರಣಕ್ಕೂ ಸಮಯ ಬದಲಾವಣೆಗೆ ಅವಕಾಶ ಇರುವುದಿಲ್ಲ. ನಿಗದಿತ ಸಮಯದಲ್ಲಿ ತಂಡ ಹಾಜರಾಗದಿದ್ದಲ್ಲಿ ತಂಡವನ್ನು ಅನರ್ಹಗೊಳಿಸಲಾಗುತ್ತದೆ.

20) ಬೆಳಿಗ್ಗೆ ನಿಗದಿಪಡಿಸಿದ ಸಮಯದಲ್ಲಿಯೇ ಸ್ಪರ್ಧೆ ಆರಂಭವಾಗುತ್ತದೆ (ಪ್ರೇಕ್ಷಕರ ಸಂಖ್ಯೆ ಕಡಿಮೆ ಇದ್ದರೂ).

21) ಪೆನ್‌ಡ್ರೈವ್‌ನಲ್ಲಿ ನಿಮ್ಮ ಪ್ರದರ್ಶನಕ್ಕೆ ಸಂಬಂಧಿಸಿದ ಅಡಿಯೋ ಮಾತ್ರ ಇರಬೇಕು.

22) ಪ್ರದರ್ಶನದ ದಿನ ನೋಂದಣಿ ಕೌಂಟರ್‌ನಲ್ಲಿ ಐಡಿ ಪರಿಶೀಲನೆ ಹಾಗೂ ಗುಂಪು ಛಾಯಚಿತ್ರದ ನಂತರ ಗ್ರೀನ್ ರೂಮ್ ಪ್ರವೇಶ. ಪ್ರದರ್ಶನ ಸಮಯದಲ್ಲಿ ಐಡಿ ಧರಿಸುವುದು ಕಡ್ಡಾಯವಲ್ಲ.

23) ಸ್ಪರ್ಧೆಯ ದಿನ ತಂಡ ಆಗಮಿಸುವ ವಾಹನದಲ್ಲಿ ಘಟಕದ ಬ್ಯಾನರ್ ಕಡ್ಡಾಯ.

ನೋಂದಣಿ ಮತ್ತು ವೇಳಾಪಟ್ಟಿ

24) ಸ್ಪರ್ಧೆಯಲ್ಲಿ ಭಾಗವಹಿಸುವ ಘಟಕಗಳ ಹೆಸರು ನೋಂದಾವಣೆಗೆ ಕೊನೆಯ ದಿನಾಂಕ 19-03-2026. ನಿಗದಿತ ದಿನಾಂಕದ ನಂತರ ಯಾವುದೇ ಕಾರಣಕ್ಕೂ ಘಟಕಗಳ ಹೆಸರುಗಳನ್ನು ಸ್ವೀಕರಿಸಲಾಗುವುದಿಲ್ಲ. ಸ್ಪರ್ಧಿಸುವ ಎಲ್ಲಾ ಘಟಕಗಳು 28-03-2026ರೊಳಗೆ, ಕೇಂದ್ರ ಸಮಿತಿಯು ನೀಡುವ ಗೂಗಲ್ ಶೀಟ್ ಮೂಲಕ, ಭಾಗವಹಿಸುವ ಅರ್ಹ ಸದಸ್ಯರ ಸದಸ್ಯತ್ವ ಸಂಖ್ಯೆಯೊಂದಿಗೆ ಸಂಪೂರ್ಣ ಮಾಹಿತಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಸುಳ್ಳು ಅಥವಾ ತಪ್ಪು ಮಾಹಿತಿ ಪತ್ತೆಯಾದಲ್ಲಿ, ಅಂತಹ ತಂಡವನ್ನು ಯಾವುದೇ ಪೂರ್ವ ಸೂಚನೆ ಇಲ್ಲದೆ ಅನರ್ಹಗೊಳಿಸಲಾಗುತ್ತದೆ.

25) ದಿನಾಂಕ 29-03-2026ರಂದು ನಡೆಯುವ ಕೇಂದ್ರ ಸಮಿತಿಯ ಮಾಸಿಕ ಸಭೆಯಲ್ಲಿ ಸ್ಪರ್ಧೆಯ ಕ್ರಮಾಂಕ ಚೀಟಿ ಎತ್ತಲಾಗುತ್ತದೆ.

ತಾಂತ್ರಿಕ ಸಹಾಯ ಮತ್ತು ಮೌಲ್ಯಮಾಪನ

26) ಕನಿಷ್ಠ ಬೆಳಕು ವ್ಯವಸ್ಥೆ, ಧ್ವನಿವರ್ಧಕ ಮತ್ತು ಲ್ಯಾಪ್‌ಟಾಪ್ ಒದಗಿಸಲಾಗುತ್ತದೆ. ಪ್ರದರ್ಶನದ ವೇಳೆ ಘಟಕದ ಒಬ್ಬ ಸದಸ್ಯರು ಲೈಟಿಂಗ್ ಮತ್ತು ಸೌಂಡ್ ಆಪರೇಟರ್ ಬಳಿ ಇದ್ದು ಸಹಕರಿಸಬೇಕು.

27) ಮೌಲ್ಯಮಾಪನ ಕ್ರಮ : ವಿಷಯದ ತಿರುಳು : 20 ಅಂಕ, ಹೊಂದಾಣಿಕೆ : 20 ಅಂಕ, ಪ್ರಸ್ತುತಿ : 20 ಅಂಕ, ಸೃಜನಶೀಲತೆ : 20 ಅಂಕ, ಒಟ್ಟು ಪರಿಣಾಮ : 20 ಅಂಕ ಒಟ್ಟು : 100 ಅಂಕ

28) ಸಮಾರಂಭದ ದಿನ ಶಿಸ್ತಿನಿಂದ ಭಾಗವಹಿಸುವ ಘಟಕಕ್ಕೆ ವಿಶೇಷ ಪುರಸ್ಕಾರ ನೀಡಲಾಗುತ್ತದೆ. ಈ ಕುರಿತು ಕೇಂದ್ರ ಸಮಿತಿಯ ತಂಡವು ಗೌಪ್ಯವಾಗಿ ದಿನವಿಡೀ ಮೌಲ್ಯಮಾಪನ ಮಾಡುತ್ತದೆ.

ಅಂತಿಮ ನಿಯಮಗಳು

29) ಕಾಲರ್ ಮೈಕ್ ಬಳಕೆಗೆ ಅವಕಾಶವಿಲ್ಲ.

30) ಸ್ಪರ್ಧೆಯ ಸುಸೂತ್ರ ನಿರ್ವಹಣೆಗೆ ರಚಿಸಲಾದ ಕೇಂದ್ರ ಸಮಿತಿಯ ನಿರ್ವಹಣಾ ಸಮಿತಿಯ ಸೂಚನೆಗಳನ್ನು ಎಲ್ಲ ಘಟಕಗಳು ಕಡ್ಡಾಯವಾಗಿ ಪಾಲಿಸಬೇಕು.

31) ಸಂಘಟಕರು ಮತ್ತು ತೀರ್ಪುಗಾರರ ತೀರ್ಮಾನವೇ ಅಂತಿಮ. ಎಲ್ಲರೂ ಅದನ್ನು ಗೌರವಿಸಬೇಕು.

32) ಮಾಹಿತಿಗಾಗಿ ಸಂಪರ್ಕಿಸಿ :
ಅಶೋಕ್ ಕುಮಾರ್ ಪಡ್ಪು : 9449538751
ರೇಖಾ ಗೋಪಾಲ್ : 9620013221
ದಿನೇಶ್ ಸುವರ್ಣ ರಾಯಿ : 9164800648
ನಾಗೇಶ್ ಪೂಜಾರಿ ನೈಬೇಲು : 81979 67376

ಮನವಿ : ನಿಯಮಗಳನ್ನು ಪಾಲಿಸುವ ಮೂಲಕ ಬಂಟ್ವಾಳ ಘಟಕದ ಪ್ರೀತಿಯ ಅತಿಥ್ಯವನ್ನು ಸ್ವೀಕರಿಸಿ, ಸ್ಪರ್ಧೆಯ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕೆಂದು ಕೇಂದ್ರ ಸಮಿತಿಯ ಕಳಕಳಿಯ ಮನವಿ.

✍️ ಪ್ರಧಾನ ಕಾರ್ಯದರ್ಶಿ
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

One thought on “ಡೆನ್ನಾನ ಡೆನ್ನನ 2026 : ನಿಯಮಾವಳಿ

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 2026ನೇ ಮಾರ್ಚ್ 01, ಭಾನುವಾರ
ಸ್ಥಳ : ಸಣ್ಣ ಕೈಗಾರಿಕಾ ಸಂಘದ ಸಭಾಂಗಣ, ಯೆಯ್ಯಾಡಿ ಮಂಗಳೂರು

ಯುವವಾಹಿನಿ ಪದಾಧಿಕಾರಿಗಳು ಹಾಗೂ ಅರ್ಹ ಸದಸ್ಯರಿಗೆ ತರಬೇತಿ ಕಾರ್ಯಾಗಾರ

ದಿನಾಂಕ : 2026, ಮಾರ್ಚ್ 14
ಸ್ಥಳ : ಮಂಗಳೂರು ಪುರಭವನ

ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಕೊಲ್ಯ ಘಟಕದ ಆತಿಥ್ಯದಲ್ಲಿ, “ಸಖೀ ಸಂವಾದ”ಕಾರ್ಯಾಗಾರ

ದಿನಾಂಕ : 2026ನೇ ಫೆಬ್ರವರಿ 28, ಶನಿವಾರ
ಸ್ಥಳ : ನಾರಾಯಣಗುರು ಆಡಿಟೋರಿಯಂ ಬನ್ನಂಜೆ

ಯುವವಾಹಿನಿ (ರಿ) ಉಡುಪಿ ಘಟಕದ ರಜತ ಸಡಗರದ ಸಲುವಾಗಿ ಉಡುಪಿ ಜಿಲ್ಲಾ ವ್ಯಾಪ್ತಿಯ ಬಿಲ್ಲವ ಬಂಧುಗಳ ಪ್ರತಿಭಾನ್ವೇಷಣೆ

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
error: Content is protected !!