
08-12-2024, 9:17 AM
ಪುತ್ತೂರು : ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷರಾದ ಸತೀಶ್ ಕೆಡೆಂಜಿ ದಿನಾಂಕ 08-12-2024 ರಂದು ಅವಿಭಜಿತ ಪುತ್ತೂರು ತಾಲೂಕಿನ ಸಮಾಜ ಬಾಂಧವರಿಗಾಗಿ ನಡೆದ ಕ್ರೀಡಾಕೂಟವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಆಶೀರ್ವಾದದಿಂದ ಹಲವಾರು ವರ್ಷಗಳ ಬಳಿಕ ಯುವವಾಹಿನಿ ಪುತ್ತೂರು ಘಟಕವು ದೊಡ್ಡ ಮಟ್ಟದಲ್ಲಿ ಕ್ರೀಡಾ ಕೂಟವನ್ನು ಯಶಸ್ವಿಯಾಗಿ ಆಯೋಜಿಸುತ್ತಿದೆ. ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ. ಸೋಲು ಗೆಲುವು ಮುಖ್ಯವಲ್ಲ. ಬಿಲ್ಲವ ಸಮಾಜ ಬಾಂಧವರು ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿ ಎಂದರು. […]
Read More

29-11-2024, 2:58 PM
ಉಡುಪಿ : ಯುವವಾಹಿನಿ (ರಿ) ಉಡುಪಿ ಘಟಕದ ಪದಗ್ರಹಣ ಸಮಾರಂಭವು 24-11-2024 ರಂದು ಘಟಕದ ಸಭಾಂಗಣದಲ್ಲಿ ನೆರವೇರಿತು. ನೂತನ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಪಟ್ಟಿಯನ್ನು ಚುನಾವಣಾಧಿಕಾರಿ ಆದ ಶ್ರೀ ಮಹಾಬಲ ಅಮೀನ್ವಾಚಿಸಿದರು. ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಹರೀಶ್ ಕೆ ಪೂಜಾರಿಯವರು ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ದಯಾನಂದ ಕರ್ಕೇರಾ ಹಾಗೂತಂಡದವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಹೆಚ್ ಹೊಳೆಯಪ್ಪ. ವಾಣಿಜ್ಯ ತೆರಿಗೆಗಳ ಉಪ ಆಯುಕ್ತರು, ಉಡುಪಿ, ಇವರು ಶುಭ ಹಾರೈಸಿದರು. ಬಿಲ್ಲವ ಸೇವಾ […]
Read More

26-11-2024, 6:16 AM
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋರ್ ತುಳುಭವನದಲ್ಲಿ ಜರುಗಿದ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ ದೃಶ್ಯವಳಿ.
Read More

16-11-2024, 6:23 PM
ಮಂಗಳೂರು : ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಪದಗ್ರಹಣ ಕಾರ್ಯಕ್ರಮ ದಿ. 16-11-2024 ರಂದು ಯುವವಾಹಿನಿ ಸಭಾಂಗಣದಲ್ಲಿ ನಡೆಯಿತು. ಗುರು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಜಯಾನಂದ ಎಮ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಬಿಲ್ಲವ ಸಮಾಜದ ಪ್ರತಿಷ್ಟಿತ ಸಂಘಟನೆಯಾದ ಯುವವಾಹಿನಿ ಉತ್ತಮ ಸಮಾಜ ಮುಖಿ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿದ್ದು, ಮಹಿಳಾ ಘಟಕದ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದರು. ಶ್ರೀ ಬಪ್ಪನಾಡು ಕ್ಷೇತ್ರ ಮೂಲ್ಕಿಯ ಕಾರ್ಯನಿರ್ವಹಣಾ ಅಧಿಕಾರಿ ಶ್ವೇತಾ ಪಳ್ಳಿ ಮಾತನಾಡಿ, ನಮ್ಮ ಸಮಾಜದ ಹೆಚ್ಚು ಹೆಚ್ಚು […]
Read More

15-11-2024, 3:59 PM
ಹೆಜಮಾಡಿ : ಯುವವಾಹಿನಿ (ರಿ) ಹೆಜಮಾಡಿ ಘಟಕದ ಆಶ್ರಯದಲ್ಲಿ ಹೆಜಮಾಡಿ ಬಿಲ್ಲವ ಸಂಘದ ವಠಾರದಲ್ಲಿ ನವೆಂಬರ್ 13 ರಂದು ತುಳುವೆರೆ ತುಳಸಿ ಪರ್ಬ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ) ಹೆಜಮಾಡಿ ಘಟಕದ ಅಧ್ಯಕ್ಷೆ ದೀಪಾ ದಿನೇಶ್ ವಹಿಸಿದರು. ಮುಖ್ಯ ಅತಿಥಿಯಾಗಿ ಯುವವಾಹಿನಿ (ರಿ ) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು ಉದಯ ಅಮೀನ್ ಮಟ್ಟು, ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷರು ಮೋಹನ್ ದಾಸ್ ಹೆಜಮಾಡಿ, ಹೆಜಮಾಡಿ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೆಸರರು ದಯಾನಂದ ಹೆಜಮಾಡಿ, […]
Read More

13-11-2024, 5:42 PM
ಮೂಡುಬಿದಿರೆ: ಹಣತೆಯು ತಾನು ಬೆಳಕು ಚೆಲ್ಲುವ ಜೊತೆಗೆ ಇತರ ಹಣತೆಗಳನ್ನೂ ಬೆಳಗಿಸಿ ಬೆಳಕನ್ನು ಆಚರಿಸುವ ಪ್ರಕ್ರಿಯೆಯಲ್ಲಿ ಜೀವನ ಸಾರ್ಥಕ್ಯ ಸಾರುತ್ತದೆ. ನಾವೂ ಲೋಕದ ಅಭ್ಯುದಯಕ್ಕಾಗಿ ಕೊಡುಗೆ ನೀಡುವ ದೀಪಗಳಾಗಬೇಕಾಗಿದೆ. ಗಂಧದಂತೆ ಸವೆಸಿಕೊಂಡು ತ್ಯಾಗಿಯಾಗಿ ಪರಿಮಳಿಸಬೇಕಾಗಿದೆ ಎಂದು ಎಸ್.ಎನ್.ಎಂ ಪಾಲಿಟೆಕ್ನಿಕ್ ಉಪನ್ಯಾಸಕ ಡಾ. ಎಸ್.ಪಿ.ಗುರುದಾಸ್ ಅಭಿಪ್ರಾಯಪಟ್ಟರು. ಸಮಾಜ ಮಂದಿರ ಸಭಾ (ರಿ) ಮೂಡುಬಿದಿರೆ ಮತ್ತು ಯುವವಾಹಿನಿ (ರಿ) ಮೂಡುಬಿದಿರೆ ಘಟಕ ಇವರ ಜಂಟಿ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗಾಗಿ 3ನೇ ವರ್ಷದ ಬೆದ್ರ ಗೂಡುದೀಪ ಮತ್ತು ರಂಗೋಲಿ […]
Read More

09-11-2024, 9:19 AM
ಕಡಬ : ಯುವವಾಹಿನಿ (ರಿ ) ಕಡಬ ಘಟಕದ ವತಿಯಿಂದ ದಿನಾಂಕ 09-11-2024 ನೇ ಶನಿವಾರ ಸಂಜೆ 5 ರಿಂದ ಉಮೇಶ್ ಪೂಜಾರಿ ಬುಡೆಂಗಿ ಬಳ್ಪ ಮನೆಯಲ್ಲಿ ಗುರು ಸ್ಫೂರ್ತಿ, ಭಜನೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮದಲ್ಲಿ ನಾಟಿ ವೈದ್ಯರಾದ ಶ್ರೀಮತಿ ಬಾಲಕ್ಕ ಕೊರಪ್ಪಣೆ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರು ಸುಂದರ ಪೂಜಾರಿ ಅಂಗಣ ವಹಿಸಿದ್ದರು. ವೇದಿಕೆಯಲ್ಲಿ ಕೇಂದ್ರ ಸಮಿತಿಯ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾದ ಶಿವಪ್ರಸಾದ್ ನೂಚಿಲ, ಗಣೇಶ್ ನಡವಾಲ್, […]
Read More

28-10-2024, 5:24 AM
ಉಡುಪಿ : ಯುವವಾಹಿನಿ (ರಿ) ಉಡುಪಿ ಘಟಕದ ವತಿಯಿಂದ ವಿಜಿಲೆನ್ಸ್ ಜಾಗೃತಿ ದಿನದ ಅಂಗವಾಗಿ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಉಡುಪಿ ಟೆಂಪಲ್ ಸಿಟಿ ಲಿಜನ್ ಇವರ ಜಂಟಿ ಆಶ್ರಯದಲ್ಲಿ ದಿನಾಂಕ 28-10-2024 ರಂದು ಸೋಮವಾರ ಮಧ್ಯಾಹ್ನ 2.00 ಗಂಟೆಗೆ ಸ.ಪ.ಪೂ. ಕಾಲೇಜು ಉದ್ಯಾವರದಲ್ಲಿ ಸೈಬರ್ ಕ್ರೈಂ ಮತ್ತು ಲೋಕಾಯುಕ್ತ ಕಾಯಿದೆ ಮಾಹಿತಿ ಕಾರ್ಯಾಗಾರವು ನಡೆಯಿತು. ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮೂಕಾಂಬಿಕಾ ಎಲ್ಲರನ್ನೂ ಸ್ವಾಗತಿಸಿದರು. ಘಟಕದ ಅಧ್ಯಕ್ಷೆ ಶ್ರೀಮತಿ ಅಮಿತಾಂಜಲಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವವಾಹಿನಿ (ರಿ) […]
Read More

26-10-2024, 4:06 AM
ಮಂಗಳೂರು : ಜಗದ್ವಿಖ್ಯಾತ ಮಂಗಳೂರು ದಸರಾ ಮಹೋತ್ಸವದಲ್ಲಿ ಯುವವಾಹಿನಿಯ ವಿವಿಧ ಘಟಕಗಳು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಸಂತೋಷಿ ಕಲಾ ಮಂಟಪದಲ್ಲಿ ನೀಡಿದ ಸಾಂಸ್ಕೃತಿಕ ಕಾರ್ಯಕ್ರಮ ದಸರಾ ಡೆನ್ನಾನ ಪ್ರೇಕ್ಷಕರ ಮನಸೂರೆಗೊಂಡಿತು. ಬಂಟ್ವಾಳ, ಮೂಡಬಿದ್ರೆ, ಮಂಗಳೂರು, ಕೊಲ್ಯ, ಸುರತ್ಕಲ್, ಕೂಳೂರು, ಮತ್ತು ಕಟಪಾಡಿ ಘಟಕಗಳ ಸದಸ್ಯ ಕಲಾವಿದರು ಪ್ರೇಕ್ಷಕರಿಗೆ ಕಲಾ ರಸದೌತಣ ಉಣಬಡಿಸಿದರು. ಯುವವಾಹಿನಿ ಕಟಪಾಡಿ ಘಟಕದಿಂದ “ಯಾ ದೇವಿ ಸರ್ವ ಭೂತೇಷು” ನವದುರ್ಗೆಯರ ಕಥಾಮೃತ ಪ್ರದರ್ಶನ ನಡೆಯಿತು ಯುವವಾಹಿನಿ ಉಡುಪಿ ಘಟಕದ ಸಚೇಂದ್ರ ಅಂಬಾಗಿಲು ಹಾಗೂ ಯುವವಾಹಿನಿ […]
Read More

08-09-2024, 5:07 AM
ಮಂಗಳೂರು : ಯುವವಾಹಿನಿ (ರಿ) ಕಂಕನಾಡಿ ಘಟಕದ ಸಹಯೋಗದಲ್ಲಿ ದಿನಾಂಕ 08-09-2024 ಗರೋಡಿ ಸಮೃದ್ಧಿ ಸಭಾಭವನದಲ್ಲಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿದ ಲೋಕೇಶ್ ಪೂಜಾರಿ, ಸಂಘಟನೆಗಳ ಸಮಾಜಮುಖಿ ಕಾರ್ಯಗಳು ಸರ್ವರನ್ನೂ ಒಳಗೊಳ್ಳುವ ಒಲವು ಹೊಂದಿರಬೇಕು. ಈ ನಿಟ್ಟಿನಲ್ಲಿ ಯುವವಾಹಿನಿ ಕಂಕನಾಡಿ ಘಟಕವು ಹಮ್ಮಿಕೊಂಡಿರುವ ಸಮಾಜಮುಖಿ ಹತ್ತು ಹಲವು ಕಾರ್ಯಕ್ರಮವು ಸರ್ವಸ್ಪರ್ಶಿ ಉದ್ದೇಶವನ್ನು ಹೊಂದಿದ್ದು, ನಾರಾಯಣ ಗುರುಗಳ ತತ್ವಾದರ್ಶಗಳಿಗೆ ಪೂರಕವಾಗಿವೆ ಎಂದು ನುಡಿದರು. ಯುವವಾಹಿನಿ (ರಿ) ಕಂಕನಾಡಿ ಘಟಕ ಅಧ್ಯಕ್ಷ ಲೋಕೇಶ್ ಅಮೀನ್ ಅಧ್ಯಕ್ಷತೆ ವಹಿಸಿ, […]
Read More