ಕಡಬ : ಯುವವಾಹಿನಿ (ರಿ ) ಕಡಬ ಘಟಕದ ವತಿಯಿಂದ ದಿನಾಂಕ 09-11-2024 ನೇ ಶನಿವಾರ ಸಂಜೆ 5 ರಿಂದ ಉಮೇಶ್ ಪೂಜಾರಿ ಬುಡೆಂಗಿ ಬಳ್ಪ ಮನೆಯಲ್ಲಿ ಗುರು ಸ್ಫೂರ್ತಿ, ಭಜನೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮದಲ್ಲಿ ನಾಟಿ ವೈದ್ಯರಾದ ಶ್ರೀಮತಿ ಬಾಲಕ್ಕ ಕೊರಪ್ಪಣೆ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರು ಸುಂದರ ಪೂಜಾರಿ ಅಂಗಣ ವಹಿಸಿದ್ದರು.
ವೇದಿಕೆಯಲ್ಲಿ ಕೇಂದ್ರ ಸಮಿತಿಯ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾದ ಶಿವಪ್ರಸಾದ್ ನೂಚಿಲ, ಗಣೇಶ್ ನಡವಾಲ್, ಉಮೇಶ್ ಪೂಜಾರಿ ಬುಡೆಂಗಿ ಬಲ್ಪ, ಘಟಕದ ಕಾರ್ಯದರ್ಶಿ ಜಯಪ್ರಕಾಶ್ ದೋಳ, ಹಿರಿಯರಾದ ಅಣ್ಣಿ ಪೂಜಾರಿ ಉಪಸ್ಥಿತರಿದ್ದರು.
ಗುರು ಸಂದೇಶವನ್ನು ಗಣೇಶ್ ನಡವಾಲ್ ನೀಡಿದರು. ನಾರಾಯಣ ಗುರು ಜಾತಿಗೆ ಸೀಮಿತರಲ್ಲ ಅವರು ವಿಶ್ವಕ್ಕೆ ಗುರು, ಅವರ ಆದರ್ಶಗಳನ್ನು ನಾವು ನಮ್ಮ ಮಕ್ಕಳಿಗೆ ತಿಳಿಸಬೇಕು ಎಂದರು.
ಸ್ವಾಗತವನ್ನು ಮಾಜಿ ಅಧ್ಯಕ್ಷರು, ಪ್ರವೀಣ್ ನೆರವೇರಿಸಿದರು.
ನಿರೂಪಣೆ ಮತ್ತು ಧನ್ಯವಾದವನ್ನು ನಿಕಟಪೂರ್ವ ಅಧ್ಯಕ್ಷರು ಕೃಷ್ಣಪ್ಪ ಅಮೈ ನಡೆಸಿಕೊಟ್ಟರು.