ಉಡುಪಿ : ಯುವವಾಹಿನಿ (ರಿ) ಉಡುಪಿ ಘಟಕದ ಪದಗ್ರಹಣ ಸಮಾರಂಭವು 24-11-2024 ರಂದು ಘಟಕದ ಸಭಾಂಗಣದಲ್ಲಿ ನೆರವೇರಿತು.
ನೂತನ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಪಟ್ಟಿಯನ್ನು ಚುನಾವಣಾಧಿಕಾರಿ ಆದ ಶ್ರೀ ಮಹಾಬಲ ಅಮೀನ್ವಾಚಿಸಿದರು.
ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಹರೀಶ್ ಕೆ ಪೂಜಾರಿಯವರು ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ದಯಾನಂದ ಕರ್ಕೇರಾ ಹಾಗೂತಂಡದವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಹೆಚ್ ಹೊಳೆಯಪ್ಪ. ವಾಣಿಜ್ಯ ತೆರಿಗೆಗಳ ಉಪ ಆಯುಕ್ತರು, ಉಡುಪಿ, ಇವರು ಶುಭ ಹಾರೈಸಿದರು.
ಬಿಲ್ಲವ ಸೇವಾ ಸಂಘ (ರಿ), ಬನ್ನಂಜೆ ಇದರ ಅಧ್ಯಕ್ಷರಾದ ಶ್ರೀ ಮಾಧವ ಬನ್ನಂಜೆಯವರು ಬಿಲ್ಲವ ಸಂಘ ಸಂಸ್ಥೆಗಳು ಬಿಲ್ಲವರ ಜಾತಿ ಗಣತಿ ಮಾಡಿ ಬಿಲ್ಲವ ಸಮಾಜದ ಕುಟುಂಬಗಳ ಸ್ಥಿತಿ ಗತಿಗಳನ್ನು ಅವಲೋಕನ ಮಾಡುವಂತೆ ಸಲಹೆ ನೀಡಿದರು.
ಎಸ್.ಡಿ.ಎಂ ಆಯುರ್ವೇದಿಕ್ ಕಾಲೇಜಿನ ಡಾ. ಶ್ರೇಯಾಶ್ರೀ ಎನ್ ಸುವರ್ಣ ಇವರು ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಡುವ ಕುರಿತು ಮಾತನಾಡಿದರು.
ಈ ಬಾರಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಘಟಕದ ಸಕ್ರಿಯ ಸದಸ್ಯ ಶ್ರೀ ವಿನೋದ್ ಮಂಚಿ ಅವರನ್ನು , ಔದ್ಯಮಿಕ ಕ್ಷೇತ್ರದಲ್ಲಿ ಸಾಧನೆಗೈದ ಘಟಕದ ಮಾಜಿ ಅಧ್ಯಕ್ಷರಾದ ಶ್ರೀ ರಘುನಾಥ್ ಮಾಬಿಯನ್ಹಾಗೂ ಬಿ.ಎ.ಎಂ.ಎಸ್ ಮುಗಿಸಿ ಆಯುರ್ವೇದಿಕ್ ವೈದ್ಯೆಯಾದಪ್ರತಿಭಾನ್ವಿತಡಾ. ಸ್ಪರ್ಶ ಇವರನ್ನು ಸನ್ಮಾನಿಸಲಾಯಿತು.
ನಿರ್ಗಮನ ಅಧ್ಯಕ್ಷೆ ಶ್ರೀಮತಿ ಅಮಿತಾಂಜಲಿ.ಕೆ ಇವರನ್ನು ಸನ್ಮಾನಿಸಲಾಯಿತು.
ಅತಿಥಿಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು. ಘಟಕದಮಾಜಿ ಅಧ್ಯಕ್ಷರಾದ ಶಂಕರ್ ಪೂಜಾರಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಘಟಕದ ನೂತನ ಕಾರ್ಯದರ್ಶಿ ಮಹೇಶ್ ಮಲ್ಪೆರವರು ಧನ್ಯವಾದವನ್ನುಸಮರ್ಪಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಘಟಕದ ಮಾಜಿ ಅಧ್ಯಕ್ಷರಾದ ಅಶೋಕ್ಕೋಟ್ಯಾನ್ ನೆರವೇರಿಸಿದರು.