ಮೂಡುಬಿದಿರೆ: ಹಣತೆಯು ತಾನು ಬೆಳಕು ಚೆಲ್ಲುವ ಜೊತೆಗೆ ಇತರ ಹಣತೆಗಳನ್ನೂ ಬೆಳಗಿಸಿ ಬೆಳಕನ್ನು ಆಚರಿಸುವ ಪ್ರಕ್ರಿಯೆಯಲ್ಲಿ ಜೀವನ ಸಾರ್ಥಕ್ಯ ಸಾರುತ್ತದೆ. ನಾವೂ ಲೋಕದ ಅಭ್ಯುದಯಕ್ಕಾಗಿ ಕೊಡುಗೆ ನೀಡುವ ದೀಪಗಳಾಗಬೇಕಾಗಿದೆ. ಗಂಧದಂತೆ ಸವೆಸಿಕೊಂಡು ತ್ಯಾಗಿಯಾಗಿ ಪರಿಮಳಿಸಬೇಕಾಗಿದೆ ಎಂದು ಎಸ್.ಎನ್.ಎಂ ಪಾಲಿಟೆಕ್ನಿಕ್ ಉಪನ್ಯಾಸಕ ಡಾ. ಎಸ್.ಪಿ.ಗುರುದಾಸ್ ಅಭಿಪ್ರಾಯಪಟ್ಟರು.
ಸಮಾಜ ಮಂದಿರ ಸಭಾ (ರಿ) ಮೂಡುಬಿದಿರೆ ಮತ್ತು ಯುವವಾಹಿನಿ (ರಿ) ಮೂಡುಬಿದಿರೆ ಘಟಕ ಇವರ ಜಂಟಿ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗಾಗಿ 3ನೇ ವರ್ಷದ ಬೆದ್ರ ಗೂಡುದೀಪ ಮತ್ತು ರಂಗೋಲಿ ಸ್ಪರ್ಧೆ – 2024ರ ಸಭಾ ಕಾರ್ಯಕ್ರಮದಲ್ಲಿ ಅವರು ದೀಪಾವಳಿ ಸಂದೇಶ ನೀಡಿ, ಕತ್ತಲ ಭ್ರಮೆ ನೀಗಲು ಸೂರ್ಯ, ಚಂದ್ರ, ನಕ್ಷತ್ರ, ಅಗ್ನಿ ಎಲ್ಲದರ ಬಳಿಕ ಪ್ರಜ್ವಲಿಸುವುದೆಂದರೆ ನಮ್ಮ ಮಾತು. ಕೊನೆಗೆ ಬೆಳಕಾಗಿ ಉಳಿಯುವುದೆಂದರೆ ನಮ್ಮೊಳಗೆ ಜ್ಯೋತಿ, ಸ್ವರೂಪದಲ್ಲಿರುವ ಆತ್ಮಶಕ್ತಿ, ಅದು ಶುದ್ದವಾಗಿರಲಿ ಎಂದರು.
ಸಮಾಜ ಮಂದಿರ ಸಭಾ ಅಧ್ಯಕ್ಷ ಹಾಗೂ ಮಾಜಿ ಸಚಿವ ಕೆ. ಅಭಯ ಚಂದ್ರ ಜೈನ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಮಾಜ ಮಂದಿರ ಮತ್ತು ಯುವವಾಹಿನಿ ಘಟಕವು ಗೂಡುದೀಪ ಮತ್ತು ರಂಗೋಲಿ ಸ್ಪರ್ಧೆಯನ್ನು ಆಯೋಜಿಸಿ ಉತ್ತಮ ಸಂದೇಶವನ್ನು ನೀಡುತ್ತಿದೆ ಎಂದು ಹೇಳಿ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್.ಆರ್ ಕಾರ್ಯಕ್ರಮದ ಆಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮೂಡುಬಿದಿರೆ ರೋಟರಿ ಟೆಂಪಲ್ ಟೌನ್ ಅಧ್ಯಕ್ಷ ಪೂರ್ಣಚಂದ್ರ ಜೈನ್, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಬಿಂದಿಯಾ ಶರತ್ ಡಿ ಶೆಟ್ಟಿ, ಪವರ್ ಫ್ರೆಂಡ್ಸ್ ಬೆದ್ರದ ಅಧ್ಯಕ್ಷ ವಿನಯಕುಮಾರ್, ಉದ್ಯಮಿ ನಾಗರಾಜ್ ಹೆಗ್ಗಡೆ ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಬಹುಮುಖ ಪ್ರತಿಭೆ ಆಧ್ಯಾ.ವಿ. ಕೋಟ್ಯಾನ್ ಅಲಂಗಾರು ಇವರನ್ನು ಸನ್ಮಾನಿಸಲಾಯಿತು.
ಮೂಡುಬಿದಿರೆ ಘಟಕದ ಮಾಜಿ ಅಧ್ಯಕ್ಷ ಹಾಗೂ ಪ್ರಸ್ತುತ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಜಗದೀಶ್ಚಂದ್ರ ಡಿ.ಕೆ, ಸಮಾಜ ಮಂದಿರ ಸಭಾ ಕಾರ್ಯದರ್ಶಿ ಸುರೇಶ್ ಪ್ರಭು, ಸಮಾಜ ಮಂದಿರ ಹಾಗೂ ಯುವವಾಹಿನಿಯ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.
ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷ ಶಂಕರ್ ಎ ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಮಾಜ ಮಂದಿರದ ಜೊತೆ ಕಾರ್ಯದರ್ಶಿ ಗಣೇಶ್ ಕಾಮತ್ ಎಂ ಸ್ವಾಗತಿಸಿದರು.
ಯುವವಾಹಿನಿ ಮೂಡುಬಿದಿರೆ ಘಟಕದ ಮಾಜಿ ಅಧ್ಯಕ್ಷ ನವಾನಂದ ಗೂಡು ದೀಪ ಹಾಗೂ ರಂಗೋಲಿ ಸ್ಪರ್ಧೆಯ ವಿಜೇತರ ಪಟ್ಟಿಯನ್ನು ವಾಚಿಸಿದರು.
ಸಂಪತ್ ಬಂಗೇರ ನಿರೂಪಿಸಿದರು. ಯುವವಾಹಿನಿ ಘಟಕದ ಕಾರ್ಯದರ್ಶಿ ಗಿರೀಶ್ ಕೋಟ್ಯಾನ್ ಧನ್ಯವಾದ ಸಲ್ಲಿಸಿದರು.
ಗೂಡುದೀಪ ಸ್ಪರ್ಧೆಯ ಫಲಿತಾಂಶ:
1. ಸಾಂಪ್ರದಾಯಿಕ ವಿಭಾಗ:
ರಕ್ಷಿತ್ ಕುಮಾರ್ ಮಂಗಳೂರು (ಪ್ರಥಮ)
ಆದಿತ್ಯ ಗುರುಪುರ (ದ್ವಿತೀಯ)
ಸುತೀಂದ್ರ ಕುಮಾರ್ (ತೃತೀಯ)
2. ಆಧುನಿಕ ವಿಭಾಗ
ವಿಠ್ಠಲ್ ಭಟ್ ಕಾರ್ ಸ್ಟ್ರೀಟ್ ಮಂಗಳೂರು (ಪ್ರಥಮ)
ಜಗದೀಶ್ ಅಮೀನ್ ಸುಂಕದಕಟ್ಟೆ (ದ್ವಿತೀಯ)
ಭೋಜ ಮಾರ್ನಾಡು (ತೃತೀಯ)
3. ಮಾದರಿ ವಿಭಾಗ
ರಂಜಿತ್ ಹಾಗೂ ಅನಿರುದ್ದ್ ಮೂಡುಬಿದಿರೆ (ಪ್ರಥಮ)
ಕಿಶೋರ್ ಪಡುಮಾರ್ನಾಡು (ದ್ವಿತೀಯ)
ಯತೀಶ್ ಆಚಾರ್ಯ ಮಾಸ್ತಿಕಟ್ಟೆ (ತೃತೀಯ)
ರಂಗೋಲಿ ಸ್ಪರ್ಧೆ
ಶ್ರಾವ್ಯ ಎಸ್ ಆಚಾರ್ಯ ಜೈನ್ ಪಿಯು ಕಾಲೇಜ್ (ಪ್ರಥಮ)
ಕೋಕಿಲ ಮಹಾವೀರ ಕಾಲೇಜ್ (ದ್ವಿತೀಯ)
ವಿದ್ಯಾಶ್ರೀ ಸುರೇಶ್ (ತೃತೀಯ
ಸಮಾಧಾನಕರ ಬಹುಮಾನ:
ಸೌಮ್ಯ ಯು, ಶ್ರೇಯ ಮತ್ತು ಅನುಷಾ ನಾಯಕ್ ಮಹಾವೀರ ಕಾಲೇಜ್.
ಕಾರ್ಯಕ್ರಮದಲ್ಲಿ 55 ಮಂದಿ ಗೂಡುದೀಪವನ್ನು ತಯಾರಿಸಿ, ಪ್ರದರ್ಶಿಸಿರುವರು. 30 ಮಂದಿ ಸ್ಪರ್ಧಾಳುಗಳು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗನ್ನು ತಂದು ಕೊಟ್ಟಿರುವರು.